AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

33 ಎಸೆತಗಳಲ್ಲಿ ಪಂದ್ಯ ಮುಗಿಸಿದ ಪಾಕಿಸ್ತಾನ್

ಟಿ20 ಕ್ರಿಕೆಟ್​​ನಲ್ಲಿ ಝಿಂಬಾಬ್ವೆ ತಂಡವು ಅತ್ಯಲ್ಪ ಮೊತ್ತ ಕಲೆಹಾಕಿದೆ. ಈ ಹಿಂದೆ ಶ್ರೀಲಂಕಾ ವಿರುದ್ಧ 82 ರನ್​​ಗಳಿಗೆ ಆಲೌಟ್ ಆಗಿ ಕಳಪೆ ದಾಖಲೆ ಬರೆದಿದ್ದ ಝಿಂಬಾಬ್ವೆ ಈ ಬಾರಿ ಕೇವಲ 57 ರನ್​​ಗಳಿಗೆ ಸರ್ವಪತನ ಕಂಡು ಹೀನಾಯ ದಾಖಲೆ ನಿರ್ಮಿಸಿದೆ.

33 ಎಸೆತಗಳಲ್ಲಿ ಪಂದ್ಯ ಮುಗಿಸಿದ ಪಾಕಿಸ್ತಾನ್
Pakistan
TV9 Web
| Edited By: |

Updated on: Dec 04, 2024 | 7:14 AM

Share

ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆಗೆ ಆರಂಭಿಕರಾದ ಬ್ರಿಯಾನ್ ಬೆನೆಟ್ ಹಾಗೂ ಮರುಮಾಣಿ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ ಗೆ 37 ರನ್ ಗಳ ಜೊತೆಯಾಟವಾಡಿದ ಬಳಿಕ ಮರುಮಾಣಿ (16) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬೆನೆಟ್ (21) ಕೂಡ ಔಟಾದರು. ಆರಂಭಿಕರಿಬ್ಬರು ಔಟಾಗುತ್ತಿದ್ದಂತೆ ಪೆವಿಲಿಯನ್ ಪರೇಡ್ ಆರಂಭಿಸಿದ ಝಿಂಬಾಬ್ವೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು.

ಸುಫಿಯಾನ್ ಮುಖೀಮ್ ಸ್ಪಿನ್ ಮೋಡಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಝಿಂಬಾಬ್ವೆ ಬ್ಯಾಟರ್​ಗಳು 12.4 ಓವರ್‌ಗಳಲ್ಲಿ ಕೇವಲ 57 ರನ್ ಗಳಿಸಿ ಆಲೌಟ್ ಆದರು. ಪಾಕ್ ಪರ ಸುಫಿಯಾನ್ ಮುಖೀಮ್ 5 ವಿಕೆಟ್ ಕಬಳಿಸಿದರೆ, ಅಬ್ಬಾಸ್ ಅಫ್ರಿದಿ 2 ವಿಕೆಟ್ ಉರುಳಿಸಿದರು.

58 ರನ್ ಗಳ ಸುಲಭ ಗುರಿ:

ಕಡಿಮೆ ಮೊತ್ತದ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಸೈಮ್ ಅಯ್ಯೂಬ್ ಹಾಗೂ ಒಮೈರ್ ಯೂಸುಫ್ ಸ್ಪೋಟಕ ಆರಂಭ ಒದಗಿಸಿದರು. 18 ಎಸೆತಗಳನ್ನು ಎದುರಿಸಿದ ಅಯ್ಯೂಬ್ 1 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ ಅಜೇಯ 36 ರನ್ ಬಾರಿಸಿದರೆ, ಒಮೈರ್ 15 ಎಸೆತಗಳಲ್ಲಿ 22 ರನ್ ಚಚ್ಚಿದರು.

ಈ ಮೂಲಕ 5.3 ಓವರ್‌ಗಳಲ್ಲಿ 61 ರನ್ ಬಾರಿಸಿ ಪಾಕಿಸ್ತಾನ್ ತಂಡವು 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಝಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಪಾಕಿಸ್ತಾನ್ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ.

ಝಿಂಬಾಬ್ವೆ ಪ್ಲೇಯಿಂಗ್ 11: ಬ್ರಿಯಾನ್ ಬೆನೆಟ್ , ತಡಿವಾನಾಶೆ ಮರುಮಾಣಿ (ವಿಕೆಟ್ ಕೀಪರ್) , ಡಿಯೋನ್ ಮೈಯರ್ಸ್ , ಸಿಕಂದರ್ ರಾಝ (ನಾಯಕ) , ರಿಯಾನ್ ಬರ್ಲ್ , ಕ್ಲೈವ್ ಮದಂಡೆ , ತಶಿಂಗಾ ಮುಸೆಕಿವಾ , ವೆಲ್ಲಿಂಗ್ಟನ್ ಮಸಕಡ್ಜಾ , ರಿಚರ್ಡ್ ನಾಗರವಾ , ಬ್ಲೆಸ್ಸಿಂಗ್ ಮುಜರಬಾನಿ , ಟ್ರೆವರ್ ಗ್ವಾಂಡು.

ಇದನ್ನೂ ಓದಿ: 15.5 ಓವರ್​​ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ

ಪಾಕಿಸ್ತಾನ್ ಪ್ಲೇಯಿಂಗ್ 11: ಒಮೈರ್ ಯೂಸುಫ್ , ಸೈಮ್ ಅಯೂಬ್ , ಉಸ್ಮಾನ್ ಖಾನ್ (ವಿಕೆಟ್ ಕೀಪರ್) , ಸಲ್ಮಾನ್ ಅಘಾ (ನಾಯಕ) , ತಯ್ಯಬ್ ತಾಹಿರ್ , ಇರ್ಫಾನ್ ಖಾನ್ , ಜಹಂದಾದ್ ಖಾನ್ , ಅಬ್ಬಾಸ್ ಅಫ್ರಿದಿ , ಅಬ್ರಾರ್ ಅಹ್ಮದ್ , ಹರಿಸ್ ರೌಫ್ , ಸುಫಿಯಾನ್ ಮುಖೀಮ್.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ