500 ವಿಕೆಟ್ ಸರದಾರನಾದ ಇಂಗ್ಲೆಂಡ್ನ Stuart Broad
ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500ನೇ ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಓಲ್ಡ್ ಟ್ರ್ಯಾಫರ್ಡ್ನಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದ ಆಟದಲ್ಲಿ ಸ್ಟುವರ್ಟ್ ಬ್ರಾಡ್, ಕ್ರೇಗ್ ಬ್ರಾಥ್ವೇಟ್ನ ವಿಕೆಟ್ ಪಡೆಯೋ ಮೂಲಕ ಈ ಮೈಲಿಗಲ್ಲು ತಲುಪಿದ್ದಾರೆ. ಇಂಗ್ಲೆಂಡ್ನ ಮತ್ತೊಬ್ಬ ಹಿರಿಯ ವೇಗಿ ಜೇಮ್ಸ್ ಌಂಡರ್ಸನ್ ಬಳಿಕ […]
ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500ನೇ ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಓಲ್ಡ್ ಟ್ರ್ಯಾಫರ್ಡ್ನಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದ ಆಟದಲ್ಲಿ ಸ್ಟುವರ್ಟ್ ಬ್ರಾಡ್, ಕ್ರೇಗ್ ಬ್ರಾಥ್ವೇಟ್ನ ವಿಕೆಟ್ ಪಡೆಯೋ ಮೂಲಕ ಈ ಮೈಲಿಗಲ್ಲು ತಲುಪಿದ್ದಾರೆ. ಇಂಗ್ಲೆಂಡ್ನ ಮತ್ತೊಬ್ಬ ಹಿರಿಯ ವೇಗಿ ಜೇಮ್ಸ್ ಌಂಡರ್ಸನ್ ಬಳಿಕ ಈ ಸಾಧನೆ ಮಾಡಿರುವ 2ನೇ ಬೌಲರ್ ಅನ್ನೋ ಕೀರ್ತಿಗೆ ಬ್ರಾಡ್ ಪಾತ್ರರಾಗಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ತನ್ನ 140ನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಕ್ರೇಗ್ ಬ್ರಾಥ್ವೇಟ್ ವಿಕೆಟ್ ಪಡೆದು ಈ ಸಾಧನೆ ಮಾಡಿದ್ರೆ, ಜೇಮ್ಸ್ ಌಂಡರ್ಸನ್ 500ನೇ ವಿಕೆಟ್ ಕೂಡಾ ಇದೇ ಕ್ರೇಗ್ ಬ್ರಾಥ್ವೇಟ್ ಅವರದ್ದೇ ಆಗಿತ್ತು.
ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಮುತ್ತಯ್ಯ ಮುರಳೀಧರನ್ (800). ನಂತರ ಶೇನ್ ವಾರ್ನ್ (708), ಅನಿಲ್ ಕುಂಬ್ಳೆ ( 619) ಌಂಡರ್ಸನ್ (619), ಗ್ಲೆನ್ ಮೆಕ್ ಗ್ರಾಥ್ ( 563) ಹಾಗೂ ಕೋರ್ಟ್ನಿ ವಾಲ್ಶ್ (519) ಇದ್ದಾರೆ. ಇದೀಗ ಈ ಗುಂಪಿಗೆ ಸ್ಟುವರ್ಟ್ ಬ್ರಾಡ್ ಕೂಡ ಸೇರ್ಪಡೆಯಾಗಿದ್ದಾರೆ.
Published On - 1:48 pm, Wed, 29 July 20