ನಾನು ಇಂಗ್ಲೆಂಡ್​ನಲ್ಲಿ ಹುಟ್ಟಿದ್ದರೆ ಜೀವಂತವಾಗಿರುತ್ತಿರಲಿಲ್ಲ ಎಂದ ‘ವ್ಹಿಸ್ಪರಿಂಗ್ ಡೆತ್’ ಮೈಕೆಲ್ ಹೋಲ್ಡಿಂಗ್

ಕಳೆದ ವರ್ಷ ಅಮೇರಿಕದಲ್ಲಿ ಜಾರ್ಜ್ ಫ್ಲಾಯ್ಟ್​ರನ್ನು ಒಬ್ಬ ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿ ನಡು ರಸ್ತೆಯಲ್ಲಿ ಕೊಂದ ನಂತರ, ಕ್ರೀಡಾ ಕ್ಷೇತ್ರದಲ್ಲಿ ರೇಸಿಸಂ ವಿರುದ್ಧ ಧ್ವನಿ ಎತ್ತಿದ್ದು ಮೈಕೆಲ್ ಹೋಲ್ಡಿಂಗ್ ಮತ್ತು ಅಲ್ಲಿಂದ ಈ ಅತ್ಯಂತ ಸೂಕ್ಷ್ಮ ವಿಷಯಯದ ಬಗ್ಗೆ ಮಾತಾಡುತ್ತಲೇ ಇದ್ದಾರೆ.

ನಾನು ಇಂಗ್ಲೆಂಡ್​ನಲ್ಲಿ ಹುಟ್ಟಿದ್ದರೆ ಜೀವಂತವಾಗಿರುತ್ತಿರಲಿಲ್ಲ ಎಂದ ‘ವ್ಹಿಸ್ಪರಿಂಗ್ ಡೆತ್’ ಮೈಕೆಲ್ ಹೋಲ್ಡಿಂಗ್
ಮೈಕೆಲ್ ಹೋಲ್ಡಿಂಗ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jun 22, 2021 | 6:35 PM

ಎಪ್ಪತ್ತು ಮತ್ತು ಎಂಭತ್ತರ ದಶಕದ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯ ಬಗ್ಗೆ ನೀವು ಕೇಳಿರುತ್ತೀರಿ. ಮೈಕೆಲ್ ಹೋಲ್ಡಿಂಗ್, ಌಂಡಿ ರಾಬರ್ಟ್ಸ್, ಜೋಯೆಲ್ ಗಾರ್ನರ್, ಮಾಲ್ಕಂ ಮಾರ್ಷಲ್, ವೇನ್ ಡೇನಿಯಲ್ ಮತ್ತು ಕಾಲಿನ್ ಕ್ರಾಫ್ಟ್ ಅವರೊನ್ನಳಗೊಂಡ ದಾಳಿಯು ಕೆರೀಬಿಯನ್ ತಂಡವನ್ನು ಒಂದು ದಿನ ಪಂದ್ಯಗಳಲ್ಲಿ ಅಧಿಕೃತ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಅನಧಿಕೃತ ವಿಶ್ವ ಚಾಂಪಿಯನ್​ಗಳಾಗಿ ಮೆರೆಯುವಲ್ಲಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ನಿರ್ವಹಿಸಿತ್ತು. ಕ್ಲೈವ್ ಲಾಯ್ಡ್​ ನೇತೃತ್ವದ ತಂಡದಲ್ಲಿ ವಿಶ್ವ ದರ್ಜೆಯ ಬ್ಯಾಟ್ಸ್​ಮನ್​ಗಳಿದ್ದರು ಎನ್ನುವುದು ಸತ್ಯವೇ, ಆದರೆ ಈ ಬೌಲರ್​ಗಳ ದಾಳಿಯು ಎದುರಾಳಿ ಬ್ಯಾಟ್ಸ್​ಮನ್​ಗಳ ಎದೆಯಲ್ಲಿ ನಡುಕ ಹುಟ್ಟಿಸುತಿತ್ತು ಎನ್ನುವುದು ಸಹ ಅಷ್ಟೇ ಸತ್ಯ. ಇದಲ್ಲೆದ ಬಗ್ಗೆ ಮಾತಾಡುವ ಪ್ರಸಂಗ ಈಗ ಯಾಕೆ ಎದುರಾಗಿದೆಯೆಂದರೆ, ‘ವ್ಹಿಸ್ಪರಿಂಗ್ ಡೆತ್’ ಎಂದ ಕರೆಸಿಕೊಳ್ಳುತ್ತಿದ್ದ ಹೋಲ್ಡಿಂಗ್ ತಾವು ಆಡುತ್ತಿದ ದಿನಗಳಲ್ಲಿ ಎದುರಿಸಿದ ಜನಾಂಗೀಯ ನಿಂದನೆ ಬಗ್ಗೆ ಮಾತಾಡಿದ್ದಾರೆ. ತಾನೊಂದು ವೇಳೆ ಇಂಗ್ಲೆಂಡ್​ನಲ್ಲಿ ಹುಟ್ಟಿದ್ದರೆ ಯೌವನದ ದಿನಗಳಲ್ಲಿದ್ದ ಆವೇಶ ತನ್ನ ಬದುಕಿಗೆ ಕುತ್ತು ತರುತಿತ್ತು ಅಂತ ಮೈಕೀ ಹೇಳಿದ್ದಾರೆ. ಅಸಲಿಗೆ, ಅವರು ಕ್ರೀಡೆ ಮಾತು ಸಮಾಜದಲ್ಲಿ ಜನಾಂಗೀಯ ನಿಂದನೆ ವಿರುದ್ಧ ಎದ್ದಿರುವ ಪ್ರಮುಖ ಧ್ವನಿಯಾಗಿದ್ದಾರೆ.

‘ಇವತ್ತು ನಾನು ಜೀವಂತವಾಗಿರುವುದು ಸಾಧ್ಯವಿರಲಿಲ್ಲ. ಯುವಕನಾಗಿದ್ದಾಗ ನಾನು ಸ್ವಲ್ಪ ಹೆಚ್ಚು ಅನ್ನುವಷ್ಟು ಆವೇಶವುಳ್ಳವನಾಗಿದ್ದೆ. 1980ರಲ್ಲಿ ನ್ಯೂಜಿಲೆಂಡ್​ ವಿರುದ್ಧ ಸರಣಿ ಆಡುತ್ತಿದ್ದಾಗ ನಾನು ಅಂಪೈರ್ ನಿರ್ಣಯವೊಂದನ್ನು ಪ್ರತಿಭಟಿಸಿ ವಿಕೆಟ್​ಗಳನ್ನು ಜೋರಾಗಿ ಒದ್ದಿದ್ದೆ. ಆ ಪ್ರಕರಣವನ್ನು ನೆನಸಿಕೊಂಡಾಗ ಎಬೊನಿ ಯಾವ ಮಟ್ಟಿಗೆ ಯಾತನೆ ಅನುಭವಿಸರಬಹುದು ಅಂತ ಮನಸ್ಸು ವ್ಯಾಕುಲಗೊಳ್ಳುತ್ತದೆ,’ ಎಂದು ಟೆಲಿಗ್ರಾಫ್​ ಪತ್ರಿಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಇಂಗ್ಲೆಂಡ್ ಮಹಿಳಾ ಕ್ರಿಕೆಟ್​ ಆಟಗಾರ್ತಿ ಮತ್ತು ಈಗ ಕಾಮೆಂಟೇಟರ್​ ಆಗಿ ಕೆಲಸ ಮಾಡುತ್ತಿರರುವ ಎಬೊನಿ ರೇನ್​ಫೋರ್ಟ್​-ಬ್ರೆಂಟ್ ಅವರು ತಮ್ಮ ಬಾಲ್ಯ ಮತ್ತು ಬೆಳೆಯುತ್ತಿದ್ದ ದಿನಗಳಲ್ಲಿ ಅನುಭವಿಸಿದ ಅವಮಾನ ತನ್ನಿಂದ ಸಹಿಸಿಕೊಳ್ಳುವುದು ಸಾಧ್ಯವಿರಲಿಲ್ಲ ಎಂದು ಮೈಕೀ ಹೇಳಿದ್ದಾರೆ.

37 ವರ್ಷ ವಯಸ್ಸಿನ ಎಬೊನಿ-ಜೆವೆಲ್ ಕೊರಾ-ಲೀ ಕೆಮೆಲ್ಲಿಯಾ ರೋಸಮಂಡ್ ರೇನ್​ಫೋರ್ಟ್​-ಬ್ರೆಂಟ್, ಏಮ್​ಬಿಈ ಅವರು ಇಂಗ್ಲೆಂಡನ್ನು ಪ್ರತಿನಿಧಿಸಿದ ಪ್ರಥಮ ಕಪ್ಪು ಮಹಿಳೆಯಾಗಿದ್ದು, ಈಗ ಕಾಮೆಂಟೇಟರ್​ ಆಗಿ ಕೆಲಸ ಮಾಡುತ್ತಿರುವ ಜೊತೆಗೆ ಸರ್ರೇಯಲ್ಲಿ ಮಹಿಳಾ ಕ್ರಿಕೆಟ್​ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಸರ್ರೆ ಕ್ರಿಕೆಟ್ ತಂಡದ ನಾಯಕಿ ಸಹ ಆಗಿದ್ದರು. ತಾವು ಬೆಳೆಯುತ್ತಿದ್ದ ದಿನಗಳಲ್ಲಿ ಜನಾಂಗೀಯ ನಿಂದನೆಗೊಳಗಾದ ಬಗ್ಗೆ ಅವರು ಹೇಳಿಕೊಂಡಿದ್ದರು.

ಕಳೆದ ವರ್ಷ ಅಮೇರಿಕದಲ್ಲಿ ಜಾರ್ಜ್ ಫ್ಲಾಯ್ಟ್​ರನ್ನು ಒಬ್ಬ ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿ ನಡು ರಸ್ತೆಯಲ್ಲಿ ಕೊಂದ ನಂತರ, ಕ್ರೀಡಾ ಕ್ಷೇತ್ರದಲ್ಲಿ ರೇಸಿಸಂ ವಿರುದ್ಧ ಧ್ವನಿ ಎತ್ತಿದ್ದು ಮೈಕೆಲ್ ಹೋಲ್ಡಿಂಗ್ ಮತ್ತು ಅಲ್ಲಿಂದ ಈ ಅತ್ಯಂತ ಸೂಕ್ಷ್ಮ ವಿಷಯಯದ ಬಗ್ಗೆ ಮಾತಾಡುತ್ತಲೇ ಇದ್ದಾರೆ.

‘ನಾನು ಹುಟ್ಟಿ ಬೆಳೆದ ಜಮೈಕಾದಲ್ಲಿ ರೇಸಿಸಂ ಅನುಭವ ನನಗೆ ಆಗಲೇ ಇಲ್ಲ, ಆದರೆ, ಜಮೈಕಾ ಬಿಟ್ಟು ಆಚೆ ಹೋದಾಗಲೆಲ್ಲ ನಾನು ಅದನ್ನು ಅನುಭವಿಸಿದ್ದೇನೆ. ಅಂಥ ಪ್ರಸಂಗ ಎದುರಾದಾಗಲೆಲ್ಲ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತಿದ್ದೆ; ಇಲ್ಲಿ ನಾನು ಬದುಕುವುದು ಸಾಧ್ಯವಿಲ್ಲ, ನಾನು ಆದಷ್ಟು ಬೇಗ ಜಮೈಕಾಗೆ ಹಿಂತಿರುಗಬೇಕಿದೆ,’ ಎಂದು ಮೈಕಿ ಟೆಲಿಗ್ರಾಪ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಆ ದಿನಗಳಲ್ಲೇ ನಾನು ಪ್ರತಿಭಟಿಸುವ ನಿಲುವು ತೆಗೆದುಕೊಂಡಿದ್ದರೆ, ನನ್ನ ವೃತ್ತಿಬದುಕು ಬೇಗ ಕೊನೆಗೊಳ್ಳುತಿತ್ತು ಮತ್ತು ಕಾಮೆಂಟೇಟರ್ ಅಗಿಯೂ ನನ್ನ ಕರೀಯರ್​ ಆರಂಭಗೊಳ್ಳುತ್ತಿರಲಿಲ್ಲ. ನಾನು ಹೀಗೆ ಹೇಳುತ್ತಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಮತ್ತು ಜನಾಂಗೀಯ ನಿಂದನೆಯನ್ನು ತಪ್ಪು ಎಂದ ಕಪ್ಪು ಜನರು ತೊಂದರೆಗೊಳಗಾಗಿದ್ದಾರೆ, ಎಂದು ಮೈಕೀ ಹೇಳಿದ್ದಾರೆ.

‘ನಾನೇದರೂ ರೇಸಿಸಂ ವಿರುದ್ಧ ಪ್ರತಿಭಟಿಸಿದ್ದರೆ, ಮತ್ತೊಬ್ಬ ಆವೇಷಭರಿತ ಕಪ್ಪು ವರ್ಣೀಯ ಯುವಕ ನನ್ನನ್ನು ಕೊಂದು ಹಾಕಿದ ಎಂದು ಅವರು ಹೇಳುತ್ತಿದ್ದರು. ಸೆಗಣಿಯಲ್ಲಿ ಹೂತು ಹೋದ ಮತ್ತೊಬ್ಬ ವ್ಯಕ್ತಿ ನಾನಾಗಿರುತ್ತಿದ್ದೆ,’ ಎಂದು ಅವರು ಹೇಳಿದ್ದಾರೆ.

ಜನಾಂಗೀಯ ನಿಂದನೆ ಮೇಲೆ ಹೋಲ್ಡಿಂಗ್ ಬರೆದಿರುವ ‘ವೈ ವಿ ನೀಲ್, ಹೌ ವಿ ರೈಸ್’ ಇಷ್ಟರಲ್ಲೇ ಬಿಡುಗಡೆಯಾಗಲಿದೆ.

ಈ ಪುಸ್ತಕದಲ್ಲಿರುವ ಒಂದು ಆಧ್ಯಾಯವನ್ನು ಓದುವುದು ಬಹಳ ಕಷ್ಟ ಎಂದು ತಮ್ಮ ಸಹೋದರಿ ಹೇಳಿದರು ಎಂದಿರುವ ಮೈಕೀ, ಸದರಿ ಅಧ್ಯಾಯವನ್ನು ಓದುವಾಗ ಭಾವನೆಗಳನ್ನು ಹತ್ತಿಕ್ಕುವದು ಕಷ್ಟವಾಗುತ್ತದೆ ಅಂತ ಆಕೆ ಹೇಳಿದರು ಅಂತ ಟೆಲಿಗ್ರಾಫ್​ ಜೊತೆ ಮಾತಾಡುವಾಗ ಮೈಕಿ ಹೇಳಿದ್ದಾರೆ.

‘ಪುಸ್ತಕದ ಒಂದು ಅಧ್ಯಾಯವನ್ನು ನನ್ನ ಸಹೋದರಿಗೆ ಓದಲು ಕಳಿಸಿದ್ದೆ. ಅದನ್ನು ಓದು ಸಾಧ್ಯವಾಗಲಿಲ್ಲ ಎಂದು ಆಕೆ ಹೇಳಿದಳು. ಅದು ಕಪ್ಪು ವರ್ಣೀಯರ ಹತ್ಯೆ ಮತ್ತು ಅವರಿಗೆ ನ್ಯಾಯಬದ್ಧ ಮತ್ತು ಮೂಲಭೂತ ಹಕ್ಕುಗಳು ದೊರಕದಂತೆ ಮಾಡಿರುವ ಬಗ್ಗೆ ಇದೆ. ಪೋಸ್ಟಕಾರ್ಡ್​ ಆಗಿ ಪರಿವರ್ತನೆಗೊಂಡ ಮೂರು ಕಪ್ಪುಜನರ ನೇತಾಡುತ್ತಿದ್ದ ದೇಹಗಳ ಬಗ್ಗೆಯೂ ಅದರಲ್ಲಿ ಉಲ್ಲೇಖವಿದೆ ಎಂದು ಮೈಕಿ ಹೇಳಿದ್ದಾರೆ.

67 ವರ್ಷ ವಯಸ್ಸಿನ ಮೈಕೆಲ್ ಹೋಲ್ಟಿಂಗ್ 1975 ರಿಂದ 1987ರವರಗೆ ವೆಸ್ಟ್ ಇಂಡೀಸ್ ಪರ 60 ಟೆಸ್ಟ್​ಗಳನ್ನಾಡಿ, 23.7 ಸರಾಸರಿಯಲ್ಲಿ 249 ವಿಕೆಟ್ ಪಡೆದರು. 8/92 ಇನ್ನಿಂಗ್ಸೊಂದರಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಹಾಗೆಯೇ 102 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರು 21.4 ಸರಾಸರಿಯಲ್ಲಿ 142 ವಿಕೆಟ್​ ಪಡೆದರು. 5/ 26 ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.

ಇದನ್ನೂ ಓದಿ: WTC Final | ಮೊಹಮ್ಮದ್ ಶಮಿ ಇಂಗ್ಲೆಂಡ್​ನಲ್ಲಿ ಬೌಲ್​ ಮಾಡುವಾಗ ಅದೃಷ್ಟಹೀನ ಎನ್ನುವುದನ್ನು ಅಂಕಿ-ಅಂಶಗಳು ಸಾಬೀತು ಮಾಡುತ್ತವೆ.

Published On - 6:34 pm, Tue, 22 June 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು