India vs Australia 2020 ಹಿಂದಿನ ಪ್ರವಾಸದ ಮೆಲ್ಬೋರ್ನ್ ಟೆಸ್ಟ್ ಗೆಲುವು ಈಗ ಸೋತು ಸುಣ್ಣವಾಗಿರುವ ಭಾರತ ತಂಡಕ್ಕೆ ಪಾಠವಾಗಬೇಕಿದೆ!
ಒಂದು ವಿಶೇಷ ಸಂಗತಿಯೆಂದರೆ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯಕ್ಕೂ ಮೊದಲು, ಭಾರತ ತಂಡ ಕಳಪೆ ಓಪನಿಂಗ್ ಪಡೆದುಕೊಂಡಿತ್ತು. ಕೆ.ಎಲ್. ರಾಹುಲ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕೈಬಿಟ್ಟು ಮಾಯಾಂಕ್ ಅಗರ್ವಾಲ್ ಅವರಿಗೆ ಅವಕಾಶ ನೀಡಲಾಯಿತು.
ಮೆಲ್ಬೋರ್ನ್: ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡವು ಡಿಸೆಂಬರ್ 26 ರ ಶನಿವಾರದಂದು ಆಸ್ಟ್ರೇಲಿಯಾ ಎದುರು ತನ್ನ 2ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಹೀಗಾಗಿ ತಂಡವು ಅಡಿಲೇಡ್‌ನ ಕಳಪೆ ಪ್ರದರ್ಶನವನ್ನು ಮರೆತು.. ಮುಂದಿನ ಪಂದ್ಯಗಳಿಗೆ ಸಿದ್ದವಾಗುವುದು ಬಲು ಅವಶ್ಯಕವಾಗಿದೆ.
2018-19 ರಂದು ಮೆಲ್ಬೋರ್ನ್‌ನಲ್ಲಿ ಸ್ಮರಣೀಯ ಜಯ ಸಾಧಿಸಿತ್ತು.. ಇದಕ್ಕಾಗಿ ಭಾರತೀಯ ತಂಡ ತಮ್ಮ ಹಿಂದಿನ ಆಸ್ಟ್ರೇಲಿಯಾ ಪ್ರವಾಸದ ಗೆಲುವನ್ನ ಸ್ಫೂರ್ತಿಯಾಗಿ ತೆಗೆದುಕೊಳ್ಳಬಹುದಾಗಿದೆ. 2018-19ರ ಆ ಐತಿಹಾಸಿಕ ಪ್ರವಾಸದಲ್ಲಿ ಭಾರತ ತಂಡವು ಮೆಲ್ಬೋರ್ನ್‌ನಲ್ಲಿ ಸ್ಮರಣೀಯ ಜಯ ಸಾಧಿಸಿತು. ಆ ವಿಜಯದಲ್ಲಿನ ದೊಡ್ಡ ಸೋಜಿಗವೆಂದರೆ, ಮೆಲ್ಬೋರ್ನ್ ಗೆಲುವಿಗೂ ಮುಂಚೆ ಪರ್ತ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಸೋಲು ಕಂಡಿತ್ತು. ನಂತರ ಟೀಮ್ ಇಂಡಿಯಾದ ಸಾಂಘಿಕ ಹೊರಾಟದಿಂದ ಗೆಲುವಿನ ಲಯಕ್ಕೆ ಮರಳಿ ಬಂದದ್ದಲ್ಲದೆ ಸರಣಿಯಲ್ಲಿ 2-1ರ ನಿರ್ಣಾಯಕ ಮುನ್ನಡೆ ಸಾಧಿಸಿತು.
ಹಾಗಾಗಿ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳ ಹೀನಾಯ ಸೋಲನುಭವಿಸಿದೆ. ಆದರೆ 8 ವಿಕೆಟ್‌ಗಳನ್ನು ತಂಡ ಕಳೆದುಕೊಂಡ ರೀತಿ ಕ್ರಿಕೆಟ್ ಪ್ರೇಮಿಗಳಿಗೆ ಭಾರಿ ನಿರಾಸೆ ಮೂಡಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ತಂಡ ಕೇವಲ 36 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ತಂಡದ ಯಾವುದೇ ಬ್ಯಾಟ್ಸ್‌ಮನ್ ಡಬಲ್ ಅಂಕಿ ದಾಟಿಲ್ಲ.
2 ವರ್ಷಗಳ ಹಿಂದಿನ ಮೆಲ್ಬೋರ್ನ್ ಪ್ರವಾಸ ಸ್ಫೂರ್ತಿಯಾಗಬಹುದು.. ಇಂತಹ ಪರಿಸ್ಥಿತಿಯಲ್ಲಿ, ಭಾರತ ತಂಡ ಹಿಂದೆ ಮೆಲ್ಬೋರ್ನ್‌ನಲ್ಲೆ ನಡೆದಿದ್ದ ಟೆಸ್ಟ್ ಪಂದ್ಯದ ಗೆಲುವನ್ನ ಈಗಿನ ಪಂದ್ಯಕ್ಕೆ ಪಾಠವಾಗಿ ತೆಗೆದುಕೊಂಡರೆ ಸೋಲುವ ಮಾತೇ ಬಾರದು. ಕಳೆದ ಪ್ರವಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ನಂತರ ಸರಣಿ 1-1ರಲ್ಲಿ ಸಮವಾಗಿತ್ತು. ಭಾರತ ಮೊದಲ ಟೆಸ್ಟ್ ಗೆದ್ದಿದ್ದರೆ, ಎರಡನೇ ಟೆಸ್ಟ್‌ನಲ್ಲಿ ಸೋಲು ಕಂಡಿತ್ತು. ಪರ್ತ್‌ನಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 140 ರನ್‌ಗಳಿಗೆ ಕುಸಿದಿದ್ದಲ್ಲದೆ ಪಂದ್ಯವನ್ನು 146 ರನ್‌ಗಳಿಂದ ಕೈಚೆಲ್ಲಿತ್ತು.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿನ ಸಂಘಟಿತ ಪ್ರದರ್ಶನ ಗೆಲುವು ತಂದುಕೊಟ್ಟಿತ್ತು.. ಪರ್ತ್ ಸೋಲಿನ ನಂತರ ಟೀಂ ಇಂಡಿಯಾ ಮೆಲ್ಬೋರ್ನ್ನಲ್ಲಿ ಉತ್ತಮ ಲಯಕ್ಕೆ ಮರಳಿತು. ಮೊದಲ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ ಸಿಡಿಸಿದ (106) ಶತಕದ ಸಹಾಯದಿಂದ ಭಾರತ ತಂಡವು 443 ರನ್ ಗಳಿಸಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಇನ್ನಿಂಗ್ಸ್‌ನಲ್ಲಿ ತಂಡದ ಎಲ್ಲ ಪ್ರಮುಖ ಬ್ಯಾಟ್ಸ್‌ಮನ್‌ಗಳು ಉತ್ತಮ ಕೊಡುಗೆ ನೀಡಿದರು. ತಮ್ಮ ಮೊದಲ ಟೆಸ್ಟ್ ಆಡುವ ಮೂಲಕ ಮಾಯಾಂಕ್ ಅಗರ್ವಾಲ್ 76 ರನ್ ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ ಕೂಡ 82 ರನ್ ಗಳಿಸಿದರು. ಅಲ್ಲದೆ ರೋಹಿತ್ ಶರ್ಮಾ ಅಜೇಯ ಅರ್ಧಶತಕ (63) ಗಳಿಸಿದರು.
ಇದಕ್ಕೆ ಉತ್ತಮವಾಗಿ ಸ್ಪಂದಿಸಿದ ಭಾರತೀಯ ಬೌಲರ್‌ಗಳು ಸಹ ಆಸ್ಟ್ರೇಲಿಯಾದ ಬ್ಯಾಟಿಂಗ್ ಆರ್ಡರನ್ನು ಧೂಳೀಪಟ ಮಾಡಿದರು. ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆಯುವುದರ ಜೊತೆಗೆ ಆಸ್ಟ್ರೇಲಿಯಾ ತಂಡದ ದಾಂಡಿಗರು ಪೆವಿಲಿಯನ್ ಪೆರೆಡ್ ನಡೆಸುವಂತೆ ಮಾಡಿದರು.
ರವೀಂದ್ರ ಜಡೇಜಾ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಕೂಡ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಇದರ ಪ್ರತಿಫಲವಾಗಿ ಆಸ್ಟ್ರೇಲಿಯಾ ತಂಡ ಕೇವಲ 151 ರನ್ ಗಳಿಸಲಷ್ಟೇ ಸಾಧ್ಯವಾಯಿತು ಮತ್ತು ಭಾರತವು ಸುಮಾರು 300 ರನ್‌ಗಳ ಲೀಡ್ ಪಡೆಯಿತು.
ಇದರ ಹೊರತಾಗಿಯೂ, ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಫಾಲೋ-ಆನ್ ನೀಡುವ ಬದಲು ಮತ್ತೊಮ್ಮೆ ಬ್ಯಾಟಿಂಗ್ ಮಾಡಿತು. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ತಂಡವು ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿ ಕೇವಲ 108 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ 399 ರನ್‌ಗಳ ಗುರಿ ಬೆನ್ನು ಹತ್ತಬೇಕಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಭಾರತೀಯ ಬೌಲರ್‌ಗಳು ಒಟ್ಟಾಗಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಆಸ್ಟ್ರೇಲಿಯಾ ತಂಡವನ್ನು ಕೇವಲ 261 ರನ್‌ಗಳಿಗೆ ಕಟ್ಟಿಹಾಕಿದರು. ಇದರ ಫಲವಾಗಿ ಭಾರತ 137 ರನ್‌ಗಳಿಂದ ಜಯಗಳಿಸಿತು.
ಆಗ ಮಾಯಾಂಕ್, ಈಗ ಶುಭ್ ಮನ್! ಒಂದು ವಿಶೇಷ ಸಂಗತಿಯೆಂದರೆ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯಕ್ಕೂ ಮೊದಲು, ಭಾರತ ತಂಡ ಕಳಪೆ ಓಪನಿಂಗ್ ಪಡೆದುಕೊಂಡಿತ್ತು. ಕೆ.ಎಲ್. ರಾಹುಲ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕೈಬಿಟ್ಟು ಮಾಯಾಂಕ್ ಅಗರ್ವಾಲ್ ಅವರಿಗೆ ಅವಕಾಶ ನೀಡಲಾಯಿತು. ಮಾಯಾಂಕ್ ಚೊಚ್ಚಲ ಪಂದ್ಯವನ್ನು ಆಡುವುದರೊಂದಿಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರು.
ಈಗ ಮಯಾಂಕ್ ಎರಡು ವರ್ಷಗಳ ನಂತರ ಮತ್ತೆ ಅದೇ ಮೈದಾನಕ್ಕೆ ಮರಳಲಿದ್ದಾರೆ ಮತ್ತು ಶುಭ್ ಮನ್ ಅವರೊಂದಿಗೆ ಓಪನಿಂಗ್‌ಗೆ ಬರುವ ಸಾಧ್ಯತೆಗಳಿವೆ. ಅಲ್ಲದೆ ಈ ಪಂದ್ಯ ಗಿಲ್ ಅವರ ಚೊಚ್ಚಲ ಪಂದ್ಯವಾಗಿದೆ. ಈ ಸಂದರ್ಭದಲ್ಲಿ, ಮಾಯಾಂಕ್ ತನ್ನ ಹಿಂದಿನ ಅನುಭವವನ್ನು ಗಿಲ್ ಜೊತೆ ಹಂಚಿಕೊಳ್ಳುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಬಹುದಾಗಿದೆ.
ರೂಪಾಂತರ ಕೊರೊನಾದ ಕರಾಳಛಾಯೆ; ಇಂಡೋ-ಆಸಿಸ್ 2ನೇ ಟೆಸ್ಟ್ನಿಂದ ವಾರ್ನರ್, ಅಬಾಟ್ ಔಟ್