ಟಿ ಟ್ವೆಂಟಿ ಗೆದ್ದೋರು ಮೊದಲ ಒನ್‌ಡೆಯಲ್ಲೇ ಜಾರಿ ಬಿದ್ರು, ಕಪ್ಪುಕುದರೆಗಳ ವಿರುದ್ಧ ಸೋತ ಭಾರತ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಕಪ್ಪುಕುದರೆಗಳು ಚೊಚ್ಚಲ ಪಂದ್ಯವನ್ನ ತನ್ನದಾಗಿಸಿಕೊಂಡಿವೆ.ಹಾಗಾದ್ರೆ, ಪ್ರಥಮ ಪಂದ್ಯದಲ್ಲಿ ಕಿವೀಸ್ ಗೆದ್ದು ಸಂಭ್ರಮಿಸಿದ್ದೇಗೆ..? ಅಷ್ಟಕ್ಕೂ ಕೊಹ್ಲಿ ಸೈನ್ಯ ಎಡವಿದ್ದೆಲ್ಲಿ? ನ್ಯೂಜಿಲೆಂಡ್ ಗೆಲ್ಲೋಕೆ ತಿರುವು ಸಿಕ್ಕಿದ್ದೇಗೆ..? ಭಾರತ ಸೋಲೋಕೆ ಕಾರಣವಾಗಿದ್ಯಾರು? ಪಂದ್ಯದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿ ಓದಿ. ಅಯ್ಯರ್ ಶತಕದ ಆರ್ಭಟ. ವಿರಾಟ್ ಅರ್ಧಶತಕದಾಟ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ […]

ಟಿ ಟ್ವೆಂಟಿ ಗೆದ್ದೋರು ಮೊದಲ ಒನ್‌ಡೆಯಲ್ಲೇ ಜಾರಿ ಬಿದ್ರು, ಕಪ್ಪುಕುದರೆಗಳ ವಿರುದ್ಧ ಸೋತ ಭಾರತ
Follow us
ಸಾಧು ಶ್ರೀನಾಥ್​
|

Updated on: Feb 06, 2020 | 8:48 AM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ ಕಪ್ಪುಕುದರೆಗಳು ಚೊಚ್ಚಲ ಪಂದ್ಯವನ್ನ ತನ್ನದಾಗಿಸಿಕೊಂಡಿವೆ.ಹಾಗಾದ್ರೆ, ಪ್ರಥಮ ಪಂದ್ಯದಲ್ಲಿ ಕಿವೀಸ್ ಗೆದ್ದು ಸಂಭ್ರಮಿಸಿದ್ದೇಗೆ..? ಅಷ್ಟಕ್ಕೂ ಕೊಹ್ಲಿ ಸೈನ್ಯ ಎಡವಿದ್ದೆಲ್ಲಿ? ನ್ಯೂಜಿಲೆಂಡ್ ಗೆಲ್ಲೋಕೆ ತಿರುವು ಸಿಕ್ಕಿದ್ದೇಗೆ..? ಭಾರತ ಸೋಲೋಕೆ ಕಾರಣವಾಗಿದ್ಯಾರು? ಪಂದ್ಯದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿ ಓದಿ.

ಅಯ್ಯರ್ ಶತಕದ ಆರ್ಭಟ. ವಿರಾಟ್ ಅರ್ಧಶತಕದಾಟ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ಇದ್ರಿಂದ ಯುವ ಓಪನರ್​ಗಳಿಗೆ ಕ್ಯಾಪ್ಟನ್ ಕೊಹ್ಲಿ ಅವಕಾಶ ಮಾಡಿಕೊಡ್ತಾರೆ. ಮರಿ ಸಚಿನ್ ಪೃಥ್ವಿ ಶಾ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಒಟ್ಟಿಗೆ ಏಕದಿನ ಕ್ರಿಕೆಟ್​ಗೆ ಹ್ಯಾಮಿಲ್ಟನ್​ನಲ್ಲಿ ಪದಾರ್ಪಣೆ ಮಾಡಿದ್ರು.

ಪೃಥ್ವಿ ಶಾ 20ರನ್​ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಆದ್ರೆ ಕನ್ನಡಿಗ ಮಯಾಂಕ್ ಅಗರ್ವಾಲ್ ತಮ್ಮ ಹೊಡಿಬಡಿ ಆಟದ ಮೂಲಕ 4 ಬೌಂಡ್ರಿ ಸಹಿತ 32ರನ್​ಗಳಿಸಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಾಯಕ ವಿರಾಟ್ ಕೊಹ್ಲಿ, 6 ಬೌಂಡ್ರಿ ಸಹಿತ 51ರನ್​ಗಳಿಸಿದ್ರು. ಈ ಮೂಲಕ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್​ನಲ್ಲಿ 58ನೇ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ರು.

4ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದಿದ್ದ ಯುವ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿದ್ರು. ಕಿವೀಸ್ ಬೌಲರ್​ಗಳನ್ನ ಚಾಣಾಕ್ಷತೆಯಿಂದ ಎದುರಿಸಿದ ಅಯ್ಯರ್, ಭಾರತದ ರನ್​ವೇಗವನ್ನ ಹೆಚ್ಚಿಸಿದ್ರು. ಆರಂಭಿಕರು ಬೇಗನೇ ಔಟಾಗಿ ಕೊಹ್ಲಿಗೆ ಕೈಕೊಟ್ಟಾಗ ತಂಡಕ್ಕೆ ಆಸರೆಯಾಗಿದ್ದೇ ಮುಂಬೈಕರ್ ಶ್ರೇಯಸ್ ಅಯ್ಯರ್.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್, ರನ್ ದರ್ಬಾರ್ ನಡೆಸಿದ್ರು. ಈ ಮೂಲಕ ಅಯ್ಯರ್ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಾಧನೆ ಮಾಡಿದ.

5ನೇ ಕ್ರಮಾಂಕದಲ್ಲಿ ಸಿಕ್ಸರ್ ಸುರಿಮಳೆ ಸುರಿಸಿದ ರಾಹುಲ್: ಯಂಗ್​ಸ್ಟರ್​ಗಳಿಗೆ ಓಪನಿಂಗ್ ಸ್ಲಾಟ್ ನೀಡಿದ್ರಿಂದ ಕನ್ನಡಿಗ ಕೆ.ಎಲ್.ರಾಹುಲ್ 5ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದಿದ್ರು. ಆಡೋ ಆಟ ಗೊತ್ತಿದ್ರೆ ಯಾವ ಕ್ರಮಾಂಕ ಆದ್ರೆನು ಅನ್ನೋ ಹಾಗೇ ನಮ್ಮ ರಾಹುಲ್ ಮಿಡಲ್ ಆರ್ಡರ್​ನಲ್ಲೂ ಅಬ್ಬರಿಸಿದ. 64 ಬಾಲ್​ನಲ್ಲಿ 3 ಬೌಂಡ್ರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 88ರನ್​ಗಳಿಸಿದ ರಾಹುಲ್ ಸಿಕ್ಸರ್ ಕಿಂಗ್ ಆಗಿ ಮೆರೆದ್ರು.

ಇನ್ನು ಕೇದಾರ್ ಜಾಧವ್ ಅಜೇಯ 26ರನ್ ಗಳಿಸಿದ್ರು. ಈ ಮೂಲಕ ಟೀಮ್ ಇಂಡಿಯಾ ನಿಗಧಿತ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 347ರನ್​ಗಳನ್ನ ಗಳಿಸುತ್ತೆ. ನ್ಯೂಜಿಲೆಂಡ್ ಪರ ಅದ್ಭುತ ಸ್ಪೆಲ್ ಮಾಡಿದ ಟಿಮ್ ಸೌಥಿ 2 ವಿಕೆಟ್ ಪಡೆದ್ರೆ, ಕಾಲಿನ್ ಗ್ರ್ಯಾಂಡ್​ಹೋಮ್ ಮತ್ತು ಇಶ್ ಸೋದಿ ತಲಾ ಒಂದೊಂದು ವಿಕೆಟ್ ಪಡೀತಾರೆ.

ರಾಸ್ ಟೇಲರ್ ಸ್ಫೋಟಕ ಶತಕದಿಂದ ಸಿಕ್ತು ಗೆಲುವು: ಟೀಮ್ ಇಂಡಿಯಾ ನೀಡಿದ್ದ 348ರನ್​ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡದ ಪರ ಮಾರ್ಟಿನ್ ಗಪ್ಟಿಲ್ ಮತ್ತು ಹೆನ್ರಿ ನಿಕೋಲ್ಸ್ ಕಣಕ್ಕಿಳಿದಿದ್ರು. ಗಪ್ಟಿಲ್ 32ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದು, ಕೊಹ್ಲಿ ಸೈನ್ಯದ ಸಂಭ್ರಮಕ್ಕೆ ಪಾರವೇ ಇಲ್ಲದಂತೆ ಮಾಡ್ತು.

ಬಳಿಕ ಹೆನ್ರಿ ನಿಕೋಲ್ಸ್ ತಾಳ್ಮೆ ಮತ್ತು ಜಾಣ್ಮೆಯಿಂದ ಬ್ಯಾಟ್ ಬೀಸ ತೊಡಗಿದ್ರು. ಈ ನಡುವೆಯೇ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಟಾಮ್ ಬ್ಲಂಡೆಲ್ 9ರನ್​ಗೆ ವಿಕೆಟ್ ಒಪ್ಪಿಸಿದ್ರು. ಇದ್ರಿಂದ ಇನ್ನು ಎಚ್ಚೆತ್ತ ನಿಕೋಲ್ಸ್ ಭಾರತದ ಬೌಲರ್​ಗಳ ದಾಳಿಗೆ ಪ್ರತಿಯೊಡ್ಡಿ ನಿಲ್ತಾರೆ. ನಿಕೋಲ್ಸ್ ಅದ್ಧೂರಿ ಆಟಕ್ಕೆ ಕೈಜೋಡಿಸಿದ್ದೇ ಸ್ಫೋಟಕ ಬ್ಯಾಟ್ಸ್​ಮನ್ ರಾಸ್ ಟೇಲರ್.

ಹೀಗೆ ಕ್ರೀಸ್​ಗಂಟಿ ನಿಂತಿದ್ದ ನಿಕೋಲ್ಸ್​ನನ್ನ ಕ್ಯಾಪ್ಟನ್ ಕೊಹ್ಲಿ ತಮ್ಮ ಚಾಣಾಕ್ಷ ಫೀಲ್ಡಿಂಗ್​ನಿಂದ ಡೈವ್ ಹೊಡೆದು ರನೌಟ್ ಮಾಡ್ತಾರೆ. ಈ ರನೌಟ್ ಆಗ್ತಿದ್ದಂತೆ ಟೀಮ್ ಇಂಡಿಯಾ ಗೆಲ್ಲೋ ಲಕ್ಷಣಗಳು ಎಲ್ಲಾ ಇತ್ತು. ಆದ್ರೆ ಮುಂದೆ ಆಗಿದ್ದೇ ಬೇರೇ.

ಕೇನ್ ವಿಲಿಯಮ್ಸನ್ ಗಾಯಗೊಂಡು ಹೊರಗುಳಿದಿದ್ರಿಂದ, ಹ್ಯಾಮಿಲ್ಟನ್ ಏಕದಿನ ಪಂದ್ಯವನ್ನ ನಾಯಕನಾಗಿ ಮುನ್ನಡೆಸಿದ್ದು, ಟಾಮ್ ಲಾಥಮ್. 4ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದಿದ್ದ ಲಾಥಮ್, ಟೇಲರ್ ಜೊತೆಗೂಡಿ ಹೊಡಿಬಡಿ ಆಟಕ್ಕೆ ಮುಂದಾಗ್ತಾರೆ. 48 ಬಾಲ್​ನಲ್ಲಿ 8 ಬೌಂಡ್ರಿ ಹಾಗೂ 2 ಸಿಕ್ಸರ್ ಸಹಿತ 69ರನ್​ಗಳಿಸ್ತಾರೆ. ಇದು ಕಿವೀಸ್ ಗೆಲುವಿಗೆ ದಾರಿ ತೋರಿಸುತ್ತೆ.

ಲಾಥಮ್ ವಿಕೆಟ್ ಒಪ್ಪಿಸಿದ್ಮೇಲೆ ನಿಶಾಮ್ ಮತ್ತು ಗ್ರ್ಯಾಂಡ್​ಹೋಮ್ ಬ್ಯಾಕ್ ಟು ಬ್ಯಾಕ್ ಔಟಾಗ್ತಾರೆ. ಗ್ರ್ಯಾಂಡ್​ ಹೋಮ್​ಕೂಡ ಅಯ್ಯರ್ ಸಹಾಯದಿಂದ ಕೊಹ್ಲಿ ರನೌಟ್ ಮಾಡಿದ್ರು. ಇದಾದ್ಮೇಲೆ ಪಂದ್ಯ ಇಬ್ಬರ ಕಡೆಯೂ ಇತ್ತು. ಕಿವೀಸ್​ಗೆ 24 ಬಾಲ್​ನಲ್ಲಿ 17ರನ್​ಗಳ ಬೇಕಿರುತ್ತೆ. ಆದ್ರೆ ಶಾರ್ದೂಲ್ ಮಾಡಿದ 47.2 ಓವರ್​ನಲ್ಲಿ ಸ್ಯಾಂಟ್ನರ್ ಭರ್ಜರಿ ಸಿಕ್ಸರ್​ಗಟ್ಟಿದ್ರು. ಇದ್ರ ಜೊತೆಗೆ 4ನೇ ಬಾಲ್ ಅನ್ನ ಬೌಂಡ್ರಿಗಟ್ಟೋ ಮೂಲಕ ಒತ್ತಡವನ್ನ ಹ್ಯಾಂಡಲ್ ಮಾಡಿದ್ರು. ಈ ಮೂಲಕ ಕಿವೀಸ್ 11 ಬಾಲ್ ಇರುವಂತೆ 4 ವಿಕೆಟ್​ಗಳ ಅಂತರದಿಂದ ಪಂದ್ಯವನ್ನ ಗೆದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆಯನ್ನ ಕಂಡುಕೊಂಡಿದೆ.

ದುಬಾರಿಯಾದ ಕುಲ್​ದೀಪ್.. ಶಾರ್ದೂಲ್ ಠಾಕೂರ್! ನಿನ್ನೆಯ ಪಂದ್ಯದಲ್ಲಿ ಭಾರತ ತಂಡ ರನ್​ಸುನಾಮಿ ಎಬ್ಬಿಸಿದ್ದಾದ್ರೂ ಬೌಲರ್​ಗಳು ನಿರಾಸೆ ಪ್ರದರ್ಶನ ನೀಡಿದ್ರು. ಕುಲ್​ದೀಪ್ ಯಾದವ್, 10 ಓವರ್​ನಲ್ಲಿ 2 ವಿಕೆಟ್ ಪಡೆದು, ಬರೋಬ್ಬರಿ 84ರನ್​ಗಳನ್ನ ನೀಡಿದ್ರು. ಈ ಮೂಲಕ ಪಂದ್ಯವೊಂದ್ರಲ್ಲಿ ಗರಿಷ್ಟ ರನ್ ನೀಡಿದ ಭಾರತದ 3ನೇ ಸ್ಪಿನ್ನರ್ ಅನ್ನೋ ಅಪ ಖ್ಯಾತಿಗೆ ಪಾತ್ರರಾದ್ರು.

ಇನ್ನು ಶಾರ್ದೂಲ್ ಠಾಕೂರ್ 9 ಓವರ್​ನಲ್ಲಿ, 1 ವಿಕೆಟ್ ಪಡೆದು ಬರೋಬ್ಬರಿ 80ರನ್​ಗಳನ್ನ ನೀಡಿ ದುಬಾರಿ ಬೌಲರ್ ಎನಿಸಿಕೊಂಡ. ಕೊನೆ ಕೊನೆಗೆ ಕಪ್ಪುಕುದುರೆಗಳನ್ನ ಕಟ್ಟಿಹಾಕೋಕೆ ಹೆಣಗಾಡಿದ ಕುಲ್​ದೀಪ್ ಮತ್ತು ಶಾರ್ದೂಲ್, ಭಾರತದಿಂದ ಪಂದ್ಯ ಕೈಜಾರುವಂತೆ ಮಾಡಿದ್ರು. ಇದ್ರ ಜೊತೆ ಇಂಡಿಯನ್ ಬೌಲರ್​ಗಳು ನಿನ್ನೆ 24 ವೈಡ್​ಗಳನ್ನ ಎಸೆದಿದ್ರು. ಇದ್ರಲ್ಲಿ ಯಾರ್ಕರ್ ಕಿಂಗ್ ಜಸ್ಪ್ರೀತ್ ಬೂಮ್ರಾನೆ ಬರೋಬ್ಬರಿ 13 ವೈಡ್​ಗಳನ್ನ ಎಸೆದು ಭಾರತದ ಸೋಲಿಗೆ ಕಾರಣರಾಗಿದ್ರು.

348ರನ್​ಗಳ ಚೇಸ್ ಮಾಡೋ ಮೂಲಕ ಭಾರತದದ ವಿರುದ್ಧ ಗರಿಷ್ಟ ರನ್ ಚೇಸ್ ಮಾಡಿದ 2ನೇ ತಂಡ ಅನ್ನೋ ಖ್ಯಾತಿಗೆ ನ್ಯೂಜಿಲೆಂಡ್ ಪಾತ್ರವಾಯ್ತು. ಒಟ್ನಲ್ಲಿ ಭಾರತದ ವಿರುದ್ಧ ಚೊಚ್ಚಲ ಏಕದಿನ ಪಂದ್ಯದಲ್ಲಿ ಸ್ಫೋಟಕ ಅಜೇಯ ಶತಕ ಸಿಡಿಸಿದ ರಾಸ್ ಟೇಲರ್ ಹ್ಯಾಮಿಲ್ಟನ್ ಪಂದ್ಯವನ್ನ ಗೆಲ್ಲಿಸಿಕೊಟ್ಟು, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM