ಪೀಲೆ ತಂಡದ ವಿರುದ್ಧ ಗೋಲು ಬಾರಿಸಿದ್ದ ಭಾರತದ ಮಾಜಿ ಫುಟ್ಬಾಲ್ ಆಟಗಾರ ನಿಧನ

Mohammed Habib: 1970ರಂದು ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ಫುಟ್‌ಬಾಲ್ ತಂಡದ ಭಾಗವಾಗಿದ್ದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಮೊಹಮ್ಮದ್ ಹಬೀಬ್ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ವಿಸ್ಮೃತಿ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 74 ವರ್ಷ ವಯಸ್ಸಿನ ಹಬೀಬ್ ಅವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಪೀಲೆ ತಂಡದ ವಿರುದ್ಧ ಗೋಲು ಬಾರಿಸಿದ್ದ ಭಾರತದ ಮಾಜಿ ಫುಟ್ಬಾಲ್ ಆಟಗಾರ ನಿಧನ
ಮೊಹಮ್ಮದ್ ಹಬೀಬ್
Follow us
|

Updated on: Aug 16, 2023 | 6:52 AM

1970ರಂದು ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ (1970 Asian Games) ಕಂಚಿನ ಪದಕ ಗೆದ್ದ ಭಾರತ ಫುಟ್‌ಬಾಲ್ ತಂಡದ (Indian football) ಭಾಗವಾಗಿದ್ದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಮೊಹಮ್ಮದ್ ಹಬೀಬ್ (Mohammed Habib) ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ವಿಸ್ಮೃತಿ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 74 ವರ್ಷ ವಯಸ್ಸಿನ ಹಬೀಬ್ ಅವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಭಾರತದ ಲೆಜೆಂಡರಿ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್ (Mohun Bagan) ಮತ್ತು ಈಸ್ಟ್ ಬೆಂಗಾಲ್ ಅಲ್ಲದೆ, ಅವರು ಮೊಹಮ್ಮದ್ ಸ್ಪೋರ್ಟಿಂಗ್‌ ಪರವೂ ಆಡಿದ್ದರು.

70ರ ದಶಕದಲ್ಲಿ ಮೋಹನ್ ಬಗಾನ್ ಪರ ಆಡುತ್ತಿದ್ದಾಗ ಶ್ರೇಷ್ಠ ಫುಟ್ಬಾಲ್ ಆಟಗಾರ ಬ್ರೆಜಿಲಿಯನ್ ಪೀಲೆ ಪ್ರತಿನಿಧಿಸಿದ್ದ ನ್ಯೂಯಾರ್ಕ್ ಕಾಸ್ಮೊಸ್ ತಂಡದ ವಿರುದ್ಧ ಗೋಲು ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಹಬೀಬ್ ಪಾತ್ರರಾಗಿದ್ದರು. ವೃತ್ತಿಯಿಂದ ನಿವೃತ್ತಿಯಾದ ನಂತರ ಅವರು ಟಾಟಾ ಫುಟ್ಬಾಲ್ ಅಕಾಡೆಮಿಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಭಾರತಕ್ಕಾಗಿ 35 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 11 ಗೋಲುಗಳನ್ನು ದಾಖಲಿಸಿದ್ದರು.

ಹೊಗಳಿದ್ದ ಪೀಲೆ

ವಾಸ್ತವವಾಗಿ ಪೀಲೆ ನೇತೃತ್ವದ ಕಾಸ್ಮಾಸ್ ಕ್ಲಬ್ 1977 ರಲ್ಲಿ ಭಾರತಕ್ಕೆ ಬಂದಿತ್ತು. ಈಡನ್ ಗಾರ್ಡನ್‌ನಲ್ಲಿ ಭಾರತದ ಮೋಹನ್ ಬಗಾನ್ ಮತ್ತು ಕಾಸ್ಮಾಸ್ ಕ್ಲಬ್ ತಂಡದ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಪೀಲೆ ಜತೆಗೆ ಕಾರ್ಲೋಸ್ ಅಲ್ಬರ್ಟೊ, ಜಾರ್ಜಿಯಾ ಅವರಂಥ ಆಟಗಾರರೂ ಕಾಸ್ಮಾಸ್ ಕ್ಲಬ್ ತಂಡದಲ್ಲಿ ಇದ್ದರು. ಆ ಪಂದ್ಯದಲ್ಲಿ ಹಬೀಬ್ ಅವರ ಗೋಲಿನ ಆಧಾರದ ಮೇಲೆ ಮೋಹನ್ ಬಗಾನ್ ತಂಡ ಪಂದ್ಯವನ್ನು 2-2 ರಿಂದ ಡ್ರಾ ಮಾಡಿಕೊಳ್ಳಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಹಬೀಬ್ ಅವರ ಪ್ರದರ್ಶನ ಹೇಗಿತ್ತು ಎಂದರೆ ಪೀಲೆ ಕೂಡ ಅವರನ್ನು ಮನಸ್ಸಾರೆ ಹೊಗಳಿದ್ದರು. 975 ರವರೆಗೆ ಅಂತರರಾಷ್ಟ್ರೀಯ ಫುಟ್ಬಾಲ್ ಆಡಿದ್ದ ಹಬೀಬ್ ಅವರು ಆ ನಂತರ ಕೋಚಿಂಗ್ ಹುದ್ದೆಯನ್ನು ನಿರ್ವಹಿಸಿದ್ದರು.

ಸಂತಾಪ ಸೂಚಿಸಿದ ಎಐಎಫ್‌ಎಫ್

ಹಬೀಬ್ ನಿಧನಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಸಂತಾಪ ವ್ಯಕ್ತಪಡಿಸಿದೆ. ಸಂತಾಪ ಸೂಚಿಸಿ ಮಾತನಾಡಿದ ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ, ಹಬೀಬ್ ಮೋಹನ್ ಬಗಾನ್‌ನಲ್ಲಿ ಫುಟ್‌ಬಾಲ್ ದಿಗ್ಗಜರಾಗಿದ್ದರು ಮತ್ತು ಟಿಎಫ್‌ಎಯಲ್ಲಿ ಅವರ ತರಬೇತುದಾರರಾಗಿದ್ದರು. 1970ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪದಕ ಗೆಲ್ಲುವಲ್ಲಿ ಹಬೀಬ್ ಅವರ ಕೊಡುಗೆ ಸದಾ ಸ್ಮರಣೀಯ ಎಂದಿದ್ದಾರೆ. ಅದೇ ಸಮಯದಲ್ಲಿ, ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರು ಹಬೀಬ್ ಅವರ ಕಾಲದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಮತ್ತು ಅವರ ಜೀವನದುದ್ದಕ್ಕೂ ಫುಟ್‌ಬಾಲ್‌ಗೆ ಮೀಸಲಾಗಿದ್ದರು ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ