ಬ್ಯಾಟ್ ಅಲ್ಲ, ಧೋನಿ ಕತ್ತಿ ಹಿಡ್ಕೊಂಡು ಬರುತ್ತಿದ್ದಾರೆ: ಇಂದೆಂತಹ ಹೊಗಳಿಕೆ..!
IPL 2025 PBKS vs CSK: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 219 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು 201 ರನ್ಗಳಿಸಿ 18 ರನ್ಗಳಿಂದ ಸೋಲೊಪ್ಪಿಕೊಂಡಿದೆ.

ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ಹೊಗಳುವ ಭರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಎಡವಟ್ಟು ಮಾಡಿಕೊಂಡಿದ್ದಾರೆ. ಅದು ಸಹ ಲೈವ್ನಲ್ಲಿ. ಮುಲ್ಲನ್ಪುರ್ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ಗೆ ಇಳಿಯುತ್ತಿದ್ದಂತೆ ರಾಯುಡು ಹೊಗಳಿಕೆ ಆರಂಭಿಸಿದ್ದರು.
ಇವತ್ತು ಧೋನಿ ಬ್ಯಾಟ್ ಇಟ್ಕೊಂಡು ಬರುತ್ತಿಲ್ಲ. ಕತ್ತಿಯೊಂದಿಗೆ ಆಗಮಿಸುತ್ತಿದ್ದಾರೆ ಎಂದು ಅಂಬಾಟಿ ರಾಯುಡು ವರ್ಣಿಸಿದ್ದಾರೆ. ಆದರೆ ಕ್ರಿಕೆಟ್ಗೂ ಕತ್ತಿಗೂ ಏನು ಸಂಬಂಧ ಎಂಬುದೇ ಈಗ ಅಭಿಮಾನಿಗಳ ಪ್ರಶ್ನೆ. ಹೊಗಳುವ ಭರದಲ್ಲಿ ಎದುರಾಳಿ ತಂಡದ ವಿರುದ್ಧ ಕತ್ತಿಯೊಂದಿಗೆ ಆಗಮಿಸುತ್ತಿದ್ದಾರೆ ಎನ್ನುವು ಎಷ್ಟು ಸರಿ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿಯನ್ನು ಮಾತ್ರ ಹೊಗಳುತ್ತಾ ಕೂರುವ ಅಂಬಾಟಿ ರಾಯುಡು ಅವರನ್ನು ಕಾಮೆಂಟ್ರಿಗಾಗಿ ಹೇಗೆ ಆಯ್ಕೆ ಮಾಡಿದ್ದೀರಿ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಕಾಮೆಂಟ್ರಿ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳುವವರು ನಿಷ್ಪಕ್ಷಪಾತರಾಗಿ ವರ್ತಿಸಬೇಕು.
ಆದರೆ ಅಂಬಾಟಿ ರಾಯುಡು ವಿಷಯದಲ್ಲಿ ಅದು ಕಂಡು ಬರುತ್ತಿಲ್ಲ. ಈ ಹಿಂದೆ ರಾಯುಡು ಆರ್ಸಿಬಿ ತಂಡವನ್ನು ಬಹಿರಂಗವಾಗಿ ಸೋಲಬೇಕೆಂದು ಆಗ್ರಹಿಸಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೇಲಿ ಮಾಡಿ ಹಲವು ಹೇಳಿಕೆಗಳನ್ನು ಸಹ ನೀಡಿದ್ದರು.
ಇದನ್ನೂ ಓದಿ: IPL 2025: ಗೆಲುವಿನ ಬೆನ್ನಲ್ಲೇ RCB ನಾಯಕ ರಜತ್ ಪಾಟಿದಾರ್ಗೆ ದಂಡ ವಿಧಿಸಿದ ಬಿಸಿಸಿಐ
ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬ್ಯಾಟ್ ಅಲ್ಲ, ಕತ್ತಿ ಹಿಡ್ಕೊಂಡು ಬರುತ್ತಿದ್ದಾರೆ ಎನ್ನುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಯುಡು ಅವರ ಈ ಹೇಳಿಕೆಗೆ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಆಕ್ರೋಶಗಳನ್ನು ಹೊರಹಾಕಿದ್ದಾರೆ.
ಇನ್ನು ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ 12 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 27 ರನ್ ಬಾರಿಸಿದ್ದರು.
ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್:
THALA! ™
In the slot & #MSDhoni wastes no time in dispatching it into the stands! 💛
Watch the LIVE action ➡ https://t.co/tDvWovyffE#IPLonJioStar 👉 #PBKSvCSK | LIVE NOW on Star Sports 1, Star Sports 1 Hindi & JioHotstar! pic.twitter.com/ojCO0jH1GN
— Star Sports (@StarSportsIndia) April 8, 2025
ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡದ ನೀಡಿ 220 ರನ್ಗಳ ಗುರಿ ಬೆನ್ನತ್ತಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಮೂಲಕ ಪಂಜಾಬ್ ಪಡೆ 18 ರನ್ಗಳ ಜಯ ಸಾಧಿಸಿದೆ.
Published On - 7:58 am, Wed, 9 April 25