AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಟಾಪ್ 2 ಸ್ಥಾನಕ್ಕಾಗಿ 6 ತಂಡಗಳ ನಡುವೆ ಪೈಪೋಟಿ; ಯಾವ ತಂಡಕ್ಕೆ ಎಷ್ಟು ಗೆಲುವು ಬೇಕು?

IPL 2026 Top 2 Race: ಐಪಿಎಲ್ 2026 ರ ಲೀಗ್ ಹಂತ ಮುಕ್ತಾಯದ ಹಾದಿಯಲ್ಲಿದ್ದು, ಟಾಪ್-2 ಸ್ಥಾನಕ್ಕಾಗಿ ಆರು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ, ರಾಜಸ್ಥಾನ್, ಗುಜರಾತ್ ಮತ್ತು ಸಿಎಸ್‌ಕೆ ತಂಡಗಳು ಪ್ಲೇಆಫ್‌ನಲ್ಲಿ ನಿರ್ಣಾಯಕ ಎರಡನೇ ಅವಕಾಶಕ್ಕಾಗಿ ಸೆಣಸುತ್ತಿವೆ. ಪ್ರತಿ ಪಂದ್ಯವೂ ನಿರ್ಣಾಯಕವಾಗಿದ್ದು, ವಿಶೇಷವಾಗಿ ಸಿಎಸ್‌ಕೆಗೆ ಅಗ್ರ ಎರಡು ಸ್ಥಾನಕ್ಕೇರುವುದು ಸವಾಲಿನ ಕೆಲಸವಾಗಿದೆ.

IPL 2026: ಟಾಪ್ 2 ಸ್ಥಾನಕ್ಕಾಗಿ 6 ತಂಡಗಳ ನಡುವೆ ಪೈಪೋಟಿ; ಯಾವ ತಂಡಕ್ಕೆ ಎಷ್ಟು ಗೆಲುವು ಬೇಕು?
Ipl 2026
ಪೃಥ್ವಿಶಂಕರ
|

Updated on:May 08, 2026 | 6:42 PM

Share

ಐಪಿಎಲ್ 2026 (IPL 2026) ರ ಲೀಗ್ ಹಂತವು ಇನ್ನೇನು ಮುಗಿಯುವುದಕ್ಕೆ ಬಂತು. ಈಗಾಗಲೇ ಎಲ್ಲಾ ತಂಡಗಳು ತಲಾ 10 ಪಂದ್ಯಗಳನ್ನಾಡಿದ್ದು, ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಕ್ಕೇ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ಜೊತೆಗೆ, ಟಾಪ್-2 ಸ್ಥಾನಕ್ಕಾಗಿನ ಹೋರಾಟವು ಕೂಡ ಇನ್ನಷ್ಟು ಕುತೂಹಲಕಾರಿಯಾಗಿದೆ. ಟಾಪ್-2 ರಲ್ಲಿ ಸ್ಥಾನ ಪಡೆಯುವ ತಂಡಗಳಿಗೆ ಫೈನಲ್ ತಲುಪಲು ಎರಡು ಅವಕಾಶಗಳು ಸಿಗಲಿವೆ. ಅದಕ್ಕಾಗಿಯೇ ಪ್ರತಿ ತಂಡವು ಟಾಪ್ 2ರಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿವೆ. ಪ್ರಸ್ತುತ, ಆರು ತಂಡಗಳು ಟಾಪ್-2 ಸ್ಥಾನಕ್ಕಾಗಿ ಸ್ಪರ್ಧಿಗಳಾಗಿವೆ. ಆದರೆ ಈ ತಂಡಗಳ ನಡುವಿನ ಪ್ರತಿಯೊಂದು ಪಂದ್ಯವು ನಿರ್ಣಾಯಕವಾಗಿರುತ್ತದೆ.

6 ತಂಡಗಳ ನಡುವೆ ಪೈಪೋಟಿ

ಪ್ರಸ್ತುತ, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಟಾಪ್-2 ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ. ಟಾಪ್-2 ತಲುಪಲು ತಂಡಗಳಿಗೆ ಕನಿಷ್ಠ 18 ಅಂಕಗಳು ಬೇಕಾಗುತ್ತವೆ. ಈ ತಂಡಗಳಲ್ಲಿ ಸನ್‌ರೈಸರ್ಸ್ ಟಾಪ್ 2 ರಲ್ಲಿ ಸ್ಥಾ ಪಡೆಯುವ ಸನಿಹದಲ್ಲಿದೆ. ಹಾಗೆಯೇ ಪಂಜಾಬ್ ಮತ್ತು ಆರ್​​ಸಿಬಿ ಕೂಡ ಈ ಸ್ಥಾನಕ್ಕಾಗಿ ಪ್ರಮುಖ ಸ್ಪರ್ಧಿಗಳಾಗಿವೆ. ಏತನ್ಮಧ್ಯೆ, ಗುಜರಾತ್ ಮತ್ತು ರಾಜಸ್ಥಾನ್ ಕೂಡ ಟಾಪ್-2 ರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿವೆ. ಈ ಐದು ತಂಡಗಳಿಗೆ ಹೋಲಿಸಿದರೆ ಟಾಪ್ 2 ರಲ್ಲಿ ಸ್ಥಾನ ಪಡೆಯಲು ಸಿಎಸ್​ಕೆಗೆ ಕೊಂಚ ಕಠಿಣವಾದರೂ ಅವಕಾಶವಂತೂ ಇದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಸ್ತುತ 11 ಪಂದ್ಯಗಳಿಂದ 7 ಗೆಲುವುಗಳೊಂದಿಗೆ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸನ್‌ರೈಸರ್ಸ್ ತಂಡವು ಉಳಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆಲ್ಲುವ ಮೂಲಕ 18 ಅಂಕಗಳನ್ನು ತಲುಪಬಹುದು. ಏತನ್ಮಧ್ಯೆ, ಪಂಜಾಬ್ ಕಿಂಗ್ಸ್ 10 ಪಂದ್ಯಗಳಿಂದ 13 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದ ನಾಲ್ಕು ಪಂದ್ಯಗಳಿಂದ ಮೂರು ಪಂದ್ಯಗಳನ್ನು ಗೆದ್ದರೆ ಅದರ ಅಂಕ 19 ಆಗುತ್ತದೆ. ಇದು ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಸಾಕು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು 18 ಅಂಕಗಳನ್ನು ತಲುಪಲು ಉಳಿದ ನಾಲ್ಕು ಪಂದ್ಯಗಳಿಂದ ತಲಾ ಮೂರು ಪಂದ್ಯಗಳನ್ನು ಗೆಲ್ಲುವುದು ಅಗತ್ಯವಾಗಿದೆ.

ಸಿಎಸ್​ಕೆಗೆ ದೊಡ್ಡ ಸವಾಲು

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಗ್ರ ಎರಡು ಸ್ಥಾನಗಳ ರೇಸ್‌ನಲ್ಲಿ ಉಳಿದಿದ್ದರೂ, ಅಲ್ಲಿಗೆ ತಲುಪುವುದು ಕಷ್ಟಕರವಾದ ಕೆಲಸ. ಪ್ರಸ್ತುತ, ಆಡಿರುವ 10 ಪಂದ್ಯಗಳಿಂದ ಐದು ಗೆಲುವುಗಳೊಂದಿಗೆ 10 ಅಂಕಗಳನ್ನು ಹೊಂದಿದೆ. ಆದ್ದರಿಂದ, ಸಿಎಸ್​ಕೆ ತಂಡ 18 ಅಂಕಗಳನ್ನು ತಲುಪಲು ಉಳಿದಿರುವ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಅದೃಷ್ಟವಶಾತ್, ಸಿಎಸ್​ಕೆ ತಮ್ಮ ಕೊನೆಯ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಸಿಎಸ್​ಕೆ ತನ್ನ ಉತ್ತಮ ಫಾರ್ಮ್ ಅನ್ನು ಹೀಗೆಯೇ ಮುಂದುವರಿಸಿದರೆ, ಅದು ಕೂಡ ಅಗ್ರ ಎರಡು ಸ್ಥಾನಗಳನ್ನು ತಲುಪಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Fri, 8 May 26

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ