
ಮುಂಬೈ: ಇಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ವಿರುದ್ದ 18 ರನ್ಗಳ ಜಯ ಸಾಧಿಸಿದೆ. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಕಮಿನ್ಸ್ ಕೇವಲ 34 ಬಾಲ್ಗಳಲ್ಲಿ ಅಜೇಯ 66 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಇತರ ಆಟಗಾರರ ನೆರವು ಸರಿಯಾಗಿ ದೊರಕದ ಕಾರಣ ಕೋಲ್ಕತ್ತಾ ಸೋಲಬೇಕಾಯಿತು.
ಚೆನ್ನೈ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾದ ಆರಂಭ ಉತ್ತಮವಾಗಿರಲಿಲ್ಲ. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೆಡ್ ನಡೆಸಿದರು. ಪರಿಣಾಮವಾಗಿ ಕೋಲ್ಕತ್ತಾ 100 ರನ್ ದಾಟುವುದರೊಳಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಚೆನ್ನೈಗೆ ಬಾರಿ ಗೆಲುವಿನ ನಿರೀಕ್ಷೆ ಮಾಡಲಾಗಿತ್ತು. ಆದರೆ ಆಲ್ರೌಂಡರ್ ರಸೆಲ್ ಹಾಗೂ ಕಮಿನ್ಸ್ ಚೆನ್ನೈ ನಿರೀಕ್ಷೆಯನ್ನು ಉಸಿಗೊಳಿಸಿದರು. ಈ ಇಬ್ಬರು ಆಟಗಾರರು ಅಬ್ಬರದ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ಸನಿಹಕ್ಕೆ ತರುತ್ತಿದ್ದರು. ಆದರೆ 54 ರನ್ ಗಳಿಸಿದ್ದ ರಸೆಲ್ ಔಟಾಗುತ್ತಲೆ ಕೋಲ್ಕತ್ತಾದ ಸೋಲು ಖಚಿತವಾಯಿತು. ಆದರೂ ವೀರಾವೇಶದ ಬ್ಯಾಟಿಂಗ್ ಮಾಡಿದ ಕಮಿನ್ಸ್ ಕೊನೆಯವರೆಗೂ ಏಕಾಂಗಿ ಹೋರಾಟ ಮಾಡಿದರೂ ಸಹ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ ಕೋಲ್ಕತ್ತಾ 202 ರನ್ಗಳಿಗೆ ತನ್ನೇಲ್ಲಾ ವಿಕೆಟ್ ಕಳೆದುಕೊಂಡು ಆಲ್ಔಟ್ ಆಯಿತು.
ಚೆನ್ನೈ ಬ್ಯಾಟಿಂಗ್
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ನಿಗದಿತ 20 ಓವರ್ಗಳ ಅಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 220 ರನ್ ಪೇರಿಸಿತ್ತು. ಚೆನ್ನೈ ಪರ ಡುಪ್ಲೆಸಿಸ್ 60 ಬಾಲ್ಗೆ 9 ಬೌಂಡರಿ, 4 ಸಿಕ್ಸರ್ ಸಹಿತ 95* ರನ್ ಕಲೆಹಾಕಿದ್ದರು. ಆರಂಭಿಕ ಗಾಯಕ್ವಾಡ್ 64 (42) ರನ್, ಧೋನಿ 17 (8), ಮೊಯೀನ್ ಅಲಿ 25 (12) ಹಾಗೂ ಜಡೇಜಾ 6 (1) ರನ್ ಗಳಿಸಿ ಕೋಲ್ಕತ್ತಾಗೆ ಬೃಹತ್ ಟಾರ್ಗೆಟ್ ನೀಡಿದ್ದರು.
ಕೋಲ್ಕತ್ತಾ ಪರ ಯಾವೊಬ್ಬ ಬೌಲರ್ ಕೂಡ ರನ್ ವೇಗ ನಿಯಂತ್ರಿಸುವ ಪ್ರದರ್ಶನ ನೀಡಿರಲಿಲ್ಲ. ಚೆನ್ನೈ ಮೊದಲ ವಿಕೆಟ್ ಪಡೆಯಲು ಕೋಲ್ಕತ್ತಾ ಬೌಲರ್ಸ್ ಪರದಾಡಿದ್ದರು. ವರುಣ್ ಚಕ್ರವರ್ತಿ ಹೊರತಾಗಿ ಉಳಿದ ಬೌಲರ್ಗಳು ಯಥೇಚ್ಚವಾಗಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.
ಇಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ವಿರುದ್ದ 18 ರನ್ಗಳ ಜಯ ಸಾಧಿಸಿದೆ. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಕಮಿನ್ಸ್ ಕೇವಲ 34 ಬಾಲ್ಗಳಲ್ಲಿ ಅಜೇಯ 66 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.
ಕೊನೆಯ ಓವರ್ ಬಾಕಿ ಇದ್ದು ಕೋಲ್ಕತ್ತಾಕ್ಕೆ ಗೆಲ್ಲಲು 6 ಎಸೆತಗಳಲ್ಲಿ 20 ರನ್ಗಳ ಅವಶ್ಯಕತೆ ಇದೆ. ಕಮಿನ್ಸ್ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. 19ನೇ ಓವರ್ನಲ್ಲಿ ವರುಣ್ ಚಕ್ರವರ್ತಿ ರನ್ಔಟ್ಗೆ ಬಲಿಯಾಗಿದ್ದಾರೆ.
ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ರೋಚಕ ಹಂತಕ್ಕೆ ಬಂದು ನಿಂತಿದೆ. ಕಮಿನ್ಸ್ ಪಂದ್ಯವನ್ನು ಗೆಲ್ಲಿಸಲು ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಇನ್ನೇನೂ ಕೇವಲ 2 ಓವರ್ ಬಾಕಿ ಇದ್ದು ಕೋಲ್ಕತ್ತಾ ಗೆಲ್ಲಲು 12 ಬಾಲ್ಗಳಲ್ಲಿ 28 ರನ್ ಬೇಕಾಗಿದೆ.
ಕೋಲ್ಕತ್ತಾ ಪರ ಪಾಟ್ ಕಮ್ಮಿನ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಕಮ್ಮಿನ್ಸ್ 19 ಬಾಲ್ಗೆ 3 ಬೌಂಡರಿ 5 ಸಿಕ್ಸರ್ ಸಹಿತ 48 ರನ್ ಪೇರಿಸಿದ್ದಾರೆ. ಕೋಲ್ಕತ್ತಾ 16 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 176 ರನ್ ದಾಖಲಿಸಿದೆ. ಕೋಲ್ಕತ್ತಾ ಗೆಲ್ಲಲು 24 ಬಾಲ್ಗೆ 45 ರನ್ ಬೇಕಿದೆ.
ದಿನೇಶ್ ಕಾರ್ತಿಕ್ 40 ರನ್ ಗಳಿಸಿ ನಿರ್ಗಮಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ 15 ಓವರ್ಗೆ 7 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ. ಗೆಲ್ಲಲು 30 ಬಾಲ್ಗೆ 75 ರನ್ ಬೇಕಿದೆ. ಕಮ್ಮಿನ್ಸ್ ಹಾಗೂ ನಾಗರಕೋಟಿ ಬ್ಯಾಟಿಂಗ್ನಲ್ಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು 36 ಬಾಲ್ಗೆ 86 ರನ್ ಬೇಕಾಗಿದೆ. ಕೋಲ್ಕತ್ತಾ 14 ಓವರ್ಗೆ 138/6 ಸ್ಕೋರ್ ಮಾಡಿದೆ. ಕಮ್ಮಿನ್ಸ್ ವೇಗದ ಆಟ ಆಡುತ್ತಿದ್ದಾರೆ. ದಿನೇಶ್ ಕಾರ್ತಿಕ್ 40 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 13 ಓವರ್ಗೆ 127 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಕೋಲ್ಕತ್ತಾ ಪರ ದಿನೇಶ್ ಕಾರ್ತಿಕ್ ಹಾಗೂ ಪಾಟ್ ಕಮ್ಮಿನ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸ್ಯಾಮ್ ಕುರ್ರನ್ ಬೌಲಿಂಗ್ಗೆ ರಸ್ಸೆಲ್ ಬೌಲ್ಡ್ ಆಗಿದ್ದಾರೆ. 54 ರನ್ ಗಳಿಸಿ ಭರ್ಜರಿ ಆಡುತ್ತಿದ್ದ ರಸ್ಸೆಲ್ ಔಟ್ ಆಗಿರುವುದು ಕೋಲ್ಕತ್ತಾಗೆ ಮತ್ತೆ ಆಘಾತ ನೀಡಿದೆ.
ಕೋಲ್ಕತ್ತಾ ಪರ ಆಂಡ್ರ್ಯೂ ರಸ್ಸೆಲ್ ಅಬ್ಬರಿಸುತ್ತಿದ್ದಾರೆ. ಕೇವಲ 21 ಬಾಲ್ಗೆ 54 ರನ್ ಗಳಿಸಿ ಅರ್ಧಶತಕ ಪೂರೈಸಿದ್ದಾರೆ. 11 ಓವರ್ಗೆ ಕೋಲ್ಕತ್ತಾ 5 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ. ಗೆಲ್ಲಲು 54 ಬಾಲ್ಗೆ 110 ರನ್ ಬೇಕಿದೆ.
ಕೋಲ್ಕತ್ತಾ 5 ವಿಕೆಟ್ ಕಳೆದುಕೊಂಡ ನಡುವೆಯೂ ಆಂಡ್ರ್ಯೂ ರಸ್ಸೆಲ್ ಅಬ್ಬರಿಸುತ್ತಿದ್ದಾರೆ. ರಸ್ಸೆಲ್ 17 ಬಾಲ್ಗೆ 3 ಬೌಂಡರಿ 5 ಸಿಕ್ಸರ್ ಸಹಿತ 47 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಿನೇಶ್ ಕಾರ್ತಿಕ್ 17 (11) ಕೂಡ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೋಲ್ಕತ್ತಾ 10 ಓವರ್ಗೆ 5 ವಿಕೆಟ್ ಕಳೆದುಕೊಂಡು 97 ರನ್ ದಾಖಲಿಸಿದೆ. ಗೆಲ್ಲಲು 60 ಬಾಲ್ಗೆ 124 ರನ್ ಬೇಕಿದೆ.
8 ಓವರ್ಗಳ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ ಕಳೆದುಕೊಂಡು 66 ರನ್ ದಾಖಲಿಸಿದೆ. ಕೋಲ್ಕತ್ತಾ ಪರ ರಸ್ಸೆಲ್ 8 ಬಾಲ್ಗೆ 23 ರನ್ ಗಳಿಸಿ ವೇಗದ ಆಟ ಆಡುತ್ತಿದ್ದಾರೆ. ಕೆಕೆಆರ್ ಗೆಲ್ಲಲು 72 ಬಾಲ್ಗೆ 155 ರನ್ ಬೇಕಿದೆ.
6 ಓವರ್ಗಳ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ 45 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ತಂಡ ಗೆಲ್ಲಲು 84 ಬಾಲ್ಗೆ 176 ರನ್ ಬೇಕಾಗಿದೆ. ರಸ್ಸೆಲ್ ವೇಗವಾಗಿ ಆಡುತ್ತಿದ್ದಾರೆ. ಜೊತೆಗೆ, ವಿಕೆಟ್ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕೆಕೆಆರ್ಗೆ ಇದೆ.
ಕೋಲ್ಕತ್ತಾ ನೈಟ್ ರೈಡರ್ಸ್ 31 ರನ್ಗೆ 5 ವಿಕೆಟ್ ಕಳೆದುಕೊಂಡಿದೆ. ಚೆನ್ನೈ ಪರ ಚಹರ್ 4 ಹಾಗೂ ಎಂಗ್ಡಿ 1 ವಿಕೆಟ್ ಕಬಳಿಸಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಆಂಡ್ರ್ಯೂ ರಸ್ಸೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೊನೆಯದಾಗಿ ರಾಹುಲ್ ತ್ರಿಪಾಠಿ 9 ಬಾಲ್ಗೆ 8 ರನ್ ಗಳಿಸಿ ನಿರ್ಗಮಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ದೀಪಕ್ ಚಹರ್ ಮತ್ತೊಂದು ವಿಕೆಟ್ ಪಡೆದಿದ್ದಾರೆ. ಕೋಲ್ಕತ್ತಾ 5 ಓವರ್ಗೆ 31/4 ಆಗಿದ್ದು, 4 ವಿಕೆಟ್ಗಳನ್ನೂ ಚಹರ್ ಪಡೆದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಇಯಾನ್ ಮೋರ್ಗನ್ 7 ಬಾಲ್ಗೆ 7 ರನ್ ಗಳಿಸಿ ನಿರ್ಗಮಿಸಿದ್ದಾರೆ. ಈ ಮೂಲಕ ಕೋಲ್ಕತ್ತಾದ ಮೂರು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿದೆ. ಕೆಕೆರ್ ಪರ ತ್ರಿಪಾಠಿ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್ಗೆ ಇಳಿದಿದ್ದಾರೆ.
ನಿತೀಶ್ ರಾಣಾ 12 ಬಾಲ್ಗೆ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಕೋಲ್ಕತ್ತಾ 3 ಓವರ್ಗಳ ಅಂತ್ಯಕ್ಕೆ 2 ಮುಖ್ಯ ವಿಕೆಟ್ ಕಳೆದುಕೊಂಡು 17 ರನ್ ದಾಖಲಿಸಿದೆ. ತ್ರಿಪಾಠಿ ಜೊತೆಗೆ ಇಯಾನ್ ಮೋರ್ಗನ್ ಬ್ಯಾಟಿಂಗ್ಗೆ ಆಗಮಿಸಿದ್ದಾರೆ. ಕೋಲ್ಕತ್ತಾ ಗೆಲ್ಲಲು 204 ರನ್ ಬೇಕಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ 2 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿದೆ. ಸ್ಯಾಮ್ ಕುರ್ರನ್ ಬೌಲಿಂಗ್ನ ಎರಡನೇ ಓವರ್ನಲ್ಲಿ 9 ರನ್ ಬಿಟ್ಟುಕೊಟ್ಟಿದ್ದಾರೆ. ಕೋಲ್ಕತ್ತಾ ಪರ ನಿತೀಶ್ ರಾಣಾ ಹಾಗೂ ತ್ರಿಪಾಠಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಆಘಾತ ಎದುರಿಸಿದೆ. ಆರಂಭಿಕರಾಗಿ ಕ್ರೀಸ್ಗೆ ಇಳಿದಿದ್ದ ಶುಬ್ಮನ್ ಗಿಲ್ ಚಹರ್ಗೆ ವಿಕೆಟ್ ಒಪ್ಪಿಸುವ ಮೂಲಕ ಡಕ್ ಔಟ್ ಆಗಿದ್ದಾರೆ. ಕೋಲ್ಕತ್ತಾ 1 ಓವರ್ ಅಂತ್ಯಕ್ಕೆ 5 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ನಿಗದಿತ 20 ಓವರ್ಗೆ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 3 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್ಗೆ ಗೆಲ್ಲಲು 221 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ವಿಕೆಟ್ ಕಳೆದುಕೊಂಡಿದೆ. 8 ಬಾಲ್ಗೆ 17 ರನ್ ಗಳಿಸಿ ಧೋನಿ ರಸ್ಸೆಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 19 ಓವರ್ಗೆ 201/3 ಆಗಿದೆ. ಡುಪ್ಲೆಸಿಸ್ ಜೊತೆಗೆ ಜಡೇಜಾ ಕ್ರೀಸ್ಗೆ ಇಳಿದಿದ್ದಾರೆ.
ರಸ್ಸೆಲ್ ಬೌಲಿಂಗ್ಗೆ ಡುಪ್ಲೆಸಿಸ್ ಹ್ಯಾಟ್ರಿಕ್ ಬೌಂಡರಿ ಸಿಡಿಸಿದ್ದಾರೆ. ಚೆನ್ನೈ ತಂಡದ ಮೊತ್ತ 19 ಓವರ್ಗೆ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ 18 ಓವರ್ಗಳ ಅಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿದೆ. ಧೋನಿ ಕೂಡ ಅಬ್ಬರಿಸಿದ್ದಾರೆ. 7 ಬಾಲ್ಗೆ 1 ಸಿಕ್ಸರ್, 2 ಬೌಂಡರಿ ಸಹಿತ 17 ರನ್ ದಾಖಲಿಸಿದ್ದಾರೆ.
17 ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿದೆ. ಚೆನ್ನೈ ಪರ ಧೋನಿ- ಡುಪ್ಲೆಸಿಸ್ ಆಡುತ್ತಿದ್ದಾರೆ. ಓವರ್ಗೆ ಸುಮಾರು 10 ರನ್ ಸರಾಸರಿಯಲ್ಲಿ ರನ್ ಪೇರಿಸುತ್ತಿರುವ ಚೆನ್ನೈ, ವಿಕೆಟ್ ಕೂಡ ಉಳಿಸಿಕೊಂಡಿದೆ. ಬೃಹತ್ ಮೊತ್ತ ಕಲೆಹಾಕುವುದು ಖಚಿತವಾಗಿದೆ.
ಸುನಿಲ್ ನರೈನ್ ಬೌಲಿಂಗ್ಗೆ ವೇಗದ ಆಟ ಆಡುತ್ತಿದ್ದ ಮೊಯೀನ್ ಅಲಿ, ಮತ್ತೊಂದು ಸಿಕ್ಸರ್ಗೆ ಮುಂದಾಗಿ ಸ್ಟಂಪ್ ಔಟ್ ಆಗಿದ್ದಾರೆ. 12 ಬಾಲ್ಗೆ 25 ರನ್ ಗಳಿಸಿ ನಿರ್ಗಮಿಸಿದ್ದಾರೆ. ಚೆನ್ನೈ ಪರ ಡುಪ್ಲೆಸಿಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಡುಪ್ಲೆಸಿಸ್ ಜೊತೆಯಾಗಿದ್ದಾರೆ.
ಮೊಯೀನ್ ಅಲಿ ಸುನಿಲ್ ನರೈನ್ ಬೌಲಿಂಗ್ಗೆ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಆಟವಾಡುತ್ತಿದ್ದಾರೆ.
ಅಂತಿಮ ಓವರ್ಗಳು ಸಮೀಪಿಸುತ್ತಿರುವಂತೆ ಡುಪ್ಲೆಸಿಸ್ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಪ್ರಸಿದ್ಧ್ ಕೃಷ್ಣ ಓವರ್ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದಾರೆ. ಡುಪ್ಲೆಸಿಸ್ 47 ಬಾಲ್ಗೆ 67 ರನ್ ಗಳಿಸಿ ಆಡುತ್ತಿದ್ದಾರೆ. ಚೆನ್ನೈ ಮೊತ್ತ 16 ಓವರ್ ಅಂತ್ಯಕ್ಕೆ 155/1 ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 144 ರನ್ ದಾಖಲಿಸಿದೆ. ಸುರೇಶ್ ರೈನಾ, ಅಂಬಟಿ ರಾಯುಡು, ಜಡೇಜಾ, ಧೋನಿ, ಸ್ಯಾಮ್ ಕುರ್ರನ್ ವಿಕೆಟ್ಗಳು ಉಳಿದುಕೊಂಡಿದೆ. ಕೋಲ್ಕತ್ತಾ ಬೌಲರ್ಗಳು ವಿಕೆಟ್ ಪಡೆಯಲಾರದೆ ರನ್ ನೀಡಿ ಸುಸ್ತಾಗಿದ್ದಾರೆ.
14 ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಕಳೆದುಕೊಂಡು 130 ರನ್ ದಾಖಲಿಸಿದೆ. ಚೆನ್ನೈ ಪರ ಮೊಯೀನ್ ಅಲಿ 6 (5) ಹಾಗೂ ಡುಪ್ಲೆಸಿಸ್ 62 (41) ಆಡುತ್ತಿದ್ದಾರೆ. ಚೆನ್ನೈ ಬೃಹತ್ ಮೊತ್ತ ಪೇರಿಸುವತ್ತ ಹೆಜ್ಜೆಹಾಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಡುಪ್ಲೆಸಿಸ್ ಅರ್ಧಶತಕ ಪೂರೈಸಿದ್ದಾರೆ. 36 ಬಾಲ್ಗೆ 2 ಸಿಕ್ಸರ್, 4 ಬೌಂಡರಿ ಸಹಿತ 52 ರನ್ ದಾಖಲಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 13 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 121 ರನ್ ಕಲೆಹಾಕಿದೆ. ಮೊದಲ ವಿಕೆಟ್ ಬಳಿಕ ಮೊಯೀನ್ ಅಲಿ ಕಣಕ್ಕಿಳಿದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಆಕರ್ಷಕ ಆರಂಭ ಒದಗಿಸಿದ್ದ ಋತುರಾಜ್ ಗಾಯಕ್ವಾಡ್ ಹಾಗೂ ಡುಪ್ಲೆಸಿಸ್ ಜೋಡಿ ಬೇರ್ಪಟ್ಟಿದೆ. 42 ಬಾಲ್ಗೆ 64 ರನ್ ಗಳಿಸಿ ಋತುರಾಜ್ ಔಟ್ ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 115 ರನ್ಗೆ ಮೊದಲನೇ ವಿಕೆಟ್ ಕಳೆದುಕೊಂಡಿದೆ.
ಋತುರಾಜ್ ಗಾಯಕ್ವಾಡ್ ಕೋಲ್ಕತ್ತಾ ವಿರುದ್ಧ ಅಬ್ಬರಿಸುತ್ತಿದ್ದಾರೆ. ಪ್ರಸಿದ್ಧ್ ಕೃಷ್ಣ ಬೌಲಿಂಗ್ನ ಕೊನೆಯ ಓವರ್ಗೆ ಒಂದು ಬೌಂಡರಿ, ಒಂದು ಸಿಕ್ಸರ್ ಸಿಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 12 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಭರ್ಜರಿ 115 ರನ್ ದಾಖಲಿಸಿದೆ. ಗಾಯಕ್ವಾಡ್ 63 ಹಾಗೂ ಡುಪ್ಲೆಸಿಸ್ 48 ರನ್ ಪೇರಿಸಿದ್ದಾರೆ.
11 ಓವರ್ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 98 ರನ್ ಗಳಿಸಿದೆ. ಋತುರಾಜ್ ಗಾಯಕ್ವಾಡ್ ಅರ್ಧಶತಕ ಪೂರೈಸಿದ್ದರೆ, ಡುಪ್ಲೆಸಿಸ್ 32 ಬಾಲ್ಗೆ 46 ರನ್ ಗಳಿಸಿ ಕಣದಲ್ಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಅರ್ಧಶತಕ ಪೂರೈಸಿದ್ದಾರೆ. 33 ಬಾಲ್ಗೆ 3 ಸಿಕ್ಸರ್, 5 ಬೌಂಡರಿ ಸಹಿತ 50 ರನ್ ಕಲೆಹಾಕಿದ್ದಾರೆ. ಮತ್ತೊಂದಡೆ ಡುಪ್ಲೆಸಿಸ್ ಬ್ಯಾಟಿಂಗ್ ಮಾಡುತ್ತಿದ್ದು ಚೆನ್ನೈ ಯವುದೇ ವಿಕೆಟ್ ಕಳೆದುಕೊಂಡಿಲ್ಲ.
ಡು ಪ್ಲೆಸಿಸ್ ಹಾಗೂ ರುತುರಾಜ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಚೆನ್ನೈ ಅರ್ಧ ಶತಕ ಪೂರೈಸಿದೆ. 6 ಓವರ್ ಎದುರಿಸಿರುವ ಈ ದಾಂಡಿಗರು ಬೌಂಡರಿ ಹಾಗೂ ಸಿಕ್ಸರ್ಗಳ ಅಬ್ಬರ ಶುರು ಮಾಡಿದ್ದಾರೆ. ಡುಪ್ಲೆಸಿಸ್ 30 ರನ್ ಗಳಿಸಿದ್ದರೆ, ರುತುರಾಜ್ 23 ರನ್ ಗಳಿಸಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದಿರುವ ರುತುರಾಜ್ ಹಾಗೂ ಡುಪ್ಲೆಸಿಸ್ ಉತ್ತಮ ಆಟದ ಮೂಲಕ ತಂಡಕ್ಕೆ ಅವಶ್ಯಕವಾದ ರನ್ ಕಲೆಹಾಕುತ್ತಿದ್ದಾರೆ.ಈಗಾಗಲೇ 4 ಓವರ್ ಆಡಿರುವ ಈ ಜೋಡಿ 37 ರನ್ ಗಳಿಸಿದೆ ಇದರಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳು ಸೇರಿವೆ.
ಮೊದಲ ಓವರ್ನಲ್ಲಿ ಯಾವುದೇ ಬೌಂಡರಿ ಗಳಿಸಿದ ಚೆನ್ನೈ ದಾಂಡಿಗರು 2ನೇ ಓವರ್ನ ಮೊದಲ ಎಸೆತದಲ್ಲೇ ಬೌಂಡರಿ ಗಳಿಸಿದ್ದಾರೆ. ಕೋಲ್ಕತ್ತಾ ತಂಡದ ಪ್ಯಾಟ್ ಕಮಿನ್ಸ್ ಎಸೆತವನ್ನು ಡುಪ್ಲೆಸಿಸ್ ಸೀದಾ ಬೌಂಡರಿಗಟ್ಟಿ 4 ರನ್ ಗಳಿಸಿದರು.
ಟಾಸ್ ಗೆದ್ದ ಕೋಲ್ಕತ್ತ ಬೌಲಿಂಗ್ ಆಯ್ದುಕೊಂಡಿದೆ. ಪರಿಣಾಮವಾಗಿ ಚೆನ್ನೈನ ರುತುರಾಜ್ ಹಾಗೂ ಡುಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಕೋಲ್ಕತ್ತಾ ಪರ ಬೌಲಿಂಗ್ ಆರಂಭಿಸಿದ ವರುಣ್ ಚಕ್ರವರ್ತಿ ಮೊದಲ ಓವರ್ನಲ್ಲಿ ಯಾವುದೇ ಬೌಂಡರಿ ಸಿಕ್ಸರ್ ನೀಡದೆ ಕೇವಲ 4 ರನ್ ನೀಡಿ ಓವರ್ ಮುಕ್ತಾಯಗೊಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ..
ರುತುರಾಜ್ ಗೈಕ್ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ (ನಾಯಕ/ ವಿಕೆಟ್ ಕೀಪರ್), ಸ್ಯಾಮ್ ಕುರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್ಜಿಡಿ, ದೀಪಕ್ ಚಹರ್
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್ ಈ ರೀತಿ ಇದೆ..
ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯೊನ್ ಮೋರ್ಗಾನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 11:22 pm, Wed, 21 April 21