ಕ್ರಿಕೆಟ್​ನಿಂದ ದೂರ ಉಳಿದ ಎಂ.ಎಸ್.ಧೋನಿ ಮುಂದೇನ್ಮಾಡ್ತಾರೆ?

ಟೀಂ ಇಂಡಿಯಾ ಆಟಗಾರನಾಗಿ, ನಾಯಕನಾಗಿ ಒಂದೂವರೆ ದಶಕಗಳ ಕಾಲ ಎಂ.ಎಸ್.ಧೋನಿ, ಭಾರತೀಯ ಕ್ರಿಕೆಟ್​ಗೆ ಮರೆಯಲಾಗದಷ್ಟು ಕೊಡುಗೆ ನೀಡಿದ್ದಾರೆ. ಟೀಂ ಇಂಡಿಯಾ ಸದ್ಯ ದೂರವಿರುವ ಧೋನಿ, ಇದೀಗ ಹೊಸ ಅಧ್ಯಾಯ ಆರಂಭಿಸುವ ಸೂಚನೆಯನ್ನ ನೀಡಿದ್ದಾರೆ. ಧೋನಿ ನಿವೃತ್ತಿ ನಂತ್ರ ಮುಂದೆ ಏನ್ ಮಾಡ್ಬೇಕು ಅನ್ನೋದ್ರ ಕುರಿತು ಈಗಿನಿಂದ್ಲೇ, ಪ್ಲಾನ್ ಮಾಡ್ತಿದ್ದಾರೆ. ಇದ್ರ ಮಧ್ಯೆ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ನಂತ್ರ ಮಾಹಿ ರಂಗು ರಂಗಿನ ಸಿನಿಮಾ ಲೋಕಕ್ಕೆ ಎಂಟ್ರಿಕೊಡೋ ಸೂಚನೆಯನ್ನ ನೀಡಿದ್ದಾರೆ. ಟಿವಿ ಸೀರಿಯಲ್ ಶುರುಮಾಡಲು ಮಾಹಿ ಉತ್ಸುಕ! ಚಿತ್ರರಂಗದ […]

ಕ್ರಿಕೆಟ್​ನಿಂದ ದೂರ ಉಳಿದ ಎಂ.ಎಸ್.ಧೋನಿ ಮುಂದೇನ್ಮಾಡ್ತಾರೆ?
Follow us
ಸಾಧು ಶ್ರೀನಾಥ್​
|

Updated on: Dec 12, 2019 | 1:41 PM

ಟೀಂ ಇಂಡಿಯಾ ಆಟಗಾರನಾಗಿ, ನಾಯಕನಾಗಿ ಒಂದೂವರೆ ದಶಕಗಳ ಕಾಲ ಎಂ.ಎಸ್.ಧೋನಿ, ಭಾರತೀಯ ಕ್ರಿಕೆಟ್​ಗೆ ಮರೆಯಲಾಗದಷ್ಟು ಕೊಡುಗೆ ನೀಡಿದ್ದಾರೆ. ಟೀಂ ಇಂಡಿಯಾ ಸದ್ಯ ದೂರವಿರುವ ಧೋನಿ, ಇದೀಗ ಹೊಸ ಅಧ್ಯಾಯ ಆರಂಭಿಸುವ ಸೂಚನೆಯನ್ನ ನೀಡಿದ್ದಾರೆ.

ಧೋನಿ ನಿವೃತ್ತಿ ನಂತ್ರ ಮುಂದೆ ಏನ್ ಮಾಡ್ಬೇಕು ಅನ್ನೋದ್ರ ಕುರಿತು ಈಗಿನಿಂದ್ಲೇ, ಪ್ಲಾನ್ ಮಾಡ್ತಿದ್ದಾರೆ. ಇದ್ರ ಮಧ್ಯೆ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ನಂತ್ರ ಮಾಹಿ ರಂಗು ರಂಗಿನ ಸಿನಿಮಾ ಲೋಕಕ್ಕೆ ಎಂಟ್ರಿಕೊಡೋ ಸೂಚನೆಯನ್ನ ನೀಡಿದ್ದಾರೆ.

ಟಿವಿ ಸೀರಿಯಲ್ ಶುರುಮಾಡಲು ಮಾಹಿ ಉತ್ಸುಕ! ಚಿತ್ರರಂಗದ ಮೇಲೆ ಅತೀವ ಆಸಕ್ತಿ ಹೊಂದಿರೋ ಮಾಹಿ, ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ತನ್ನ ಜೀವನಧಾರಿತ ಎಂ.ಎಸ್. ಧೋನಿ ಅನ್​ಟೋಲ್ಡ್ ಸ್ಟೋರಿ ಸಿನಿಮಾ ಬಂದಾಗ, ಮಹೇಂದ್ರನಿಗೆ ಸಹಜವಾಗೇ ಚಿತ್ರೋದ್ಯಮದ ಬಗ್ಗೆ ಆಸಕ್ತಿ ಮೂಡಿತ್ತು.

ಈ ಚಿತ್ರದ ಸಮಯದಲ್ಲಿ ಧೋನಿ ಚಿತ್ರೋದ್ಯಮವನ್ನ ತುಂಬಾನೇ ಹತ್ತಿರದಿಂದ ನೋಡಿದ್ದಾರೆ. ಇದೇ ಇದೀಗ ಧೋನಿಗೆ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಮೂಡುವಂತೆ ಮಾಡಿರೋದು. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಕೂಲ್ ಮಾಸ್ಟರ್ ಧೋನಿ, ನೇರವಾಗಿ ಬಿಟೌನ್ ಲೋಕಕ್ಕೆ ಎಂಟ್ರಿಕೊಡೋದಕ್ಕೂ ಮುನ್ನ, ಕಿರುತರೆಯಲ್ಲಿ ಬಣ್ಣ ಹಚ್ಚೋದಕ್ಕೆ ಮುಂದಾಗಿದ್ದಾರೆ.

ವೀರಯೋಧರ ಯಶೋಗಾಥೆ ಹೇಳಲು ಬರ್ತಾರೆ ಮಹೇಂದ್ರ! ಮಹೇಂದ್ರ ಸಿಂಗ್ ಧೋನಿ ಚಿಕ್ಕ ವಯಸ್ಸಿನಿಂದ್ಲೂ ಭಾರತೀಯ ಸೇನೆಯ ಬಗ್ಗೆ ಸಾಕಷ್ಟು ಅಭಿಮಾನವನ್ನ ಹೊಂದಿದ್ದಾರೆ. ಅದೇ ಕಾರಣಕ್ಕೆ ಭಾರತೀಯ ಅರೆಸೇನಾ ಪಡೆಯಲ್ಲಿ ಲೆಫ್ಟಿನಂಟ್ ಗೌರವ ಕರ್ನಲ್ ಆಗಿ ಧೋನಿ, 15ದಿನ ಕಾಶ್ಮೀರ ಗಡಿಯಲ್ಲಿ ದೇಶ ಸೇವೆ ಸಲ್ಲಿಸಿದ್ರು.

ಭಾರತೀಯ ಸೇನೆಯ ಮೇಲಿನ ಅಭಿಮಾನವನ್ನ ಮುಂದುವರೆಸಿರೋ ಮಹೇಂದ್ರ, ಈಗ ಕಿರುತೆರೆಯಲ್ಲಿ ವೀರಯೋಧ ಯಶೋಗಾಥೆಯನ್ನ ತೋರಿಸೋದಕ್ಕೆ ಮುಂದಾಗಿದ್ದಾರೆ. ಈ ಶೋನಲ್ಲಿ ಪರಮವೀರಚಕ್ರ, ಅಶೋಕಚಕ್ರ ಗೌರವಕ್ಕೆ ಪಾತ್ರರಾದ ವೀರಯೋಧ ಜೀವನ ಕಥೆಯನ್ನ ಹೇಳಲಾಗುತ್ತೆ..

2020ರಲ್ಲಿ ತೆರೆ ಮೇಲೆ ಬರಲಿದೆ ವೀರಯೋಧರ ಯಶೋಗಾಥೆ! ಧೋನಿ ಅಂದುಕೊಂಡಂತೆ ಎಲ್ಲವೂ ನಡೆದ್ರೆ 2020ರಲ್ಲಿ ವೀರಯೋಧರ ಯಶೋಗಾಥೆಯ ಕುರಿತ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಈ ಪ್ರಾಜೆಕ್ಟ್​ಗೆ ಸಂಬಂಧಿಸಿದಂತೆ, ಎಲ್ಲ ತಯಾರಿಯನ್ನ ಮಾಡಿಕೊಳ್ಳಲಾಗ್ತಿದೆ. ಅದಕ್ಕಾಗಿ ಎಂ.ಎಸ್.ಧೋನಿ, ಸೈಲೆಂಟ್ ಆಗಿಯೇ ಎಲ್ಲ ರೂಪುರೇಷಗಳನ್ನ ಮಾಡಿಕೊಳ್ತಿದ್ದಾರೆ.

ಮೊದಲಿನಿಂದ್ಲೂ ಬಾಲಿವುಡ್ ಜೊತೆ ಉತ್ತಮ ಸಂಬಂಧವನ್ನ ಹೊಂದಿರೋದ್ರಿಂದ ಧೋನಿ ಪ್ರಾಜೆಕ್ಟ್ ಸಕ್ಸಸ್ ಕಾಣೋದ್ರಲ್ಲಿ ಅನುಮಾನವೇ ಇಲ್ಲ. ಬಿಡುವು ಸಿಕ್ಕಾಗಲೆಲ್ಲ ಬಿಟೌನ್ ಡೈರೆಕ್ಟರ್ಸ್, ನಟ, ನಟಿಯೊಂದಿಗೆ ಟೈಮ್ ಸ್ಪೆಂಡ್ ಮಾಡ್ತಾರೆ. ಅಲ್ಲದೇ, ಧೋನಿ ನೇಮು-ಫೇಮು ಚೆನ್ನಾಗಿರೋದ್ರಿಂದ, ಸಹಜವಾಗೇ ಸೀರಿಯಲ್ ಸಕ್ಸಸ್ ಕಾಣಲಿದೆ.

ಕೈಯಲ್ಲಿ ಮೈಕ್ ಹಿಡಿದು ರಂಜಿಸೋ ಮಲ್ಟಿಟ್ಯಾಲೆಂಟೆಡ್ ಮಹೇಂದ್ರ! ಧೋನಿ ಕೇವಲ ಒಬ್ಬ ಕ್ರಿಕೆಟಿಗ ಮಾತ್ರವಲ್ಲ, ಮಲ್ಟಿಟ್ಯಾಲೆಂಟೆಡ್ ಮ್ಯಾನ್. ಬಿಡುವಿನ ಸಮಯವನ್ನ ಮನೆಯಲ್ಲಿ ಸಖತ್ ಎಂಜಾಯ್ ಮಾಡ್ತಿರೋ ಧೋನಿ, ಇತ್ತೀಚೆಗೆ ಹಾಡೊಂದನ್ನ ಹಾಡಿ ರಂಜಿಸಿದ್ರು.

1990ರಲ್ಲಿ ತೆರೆಕಂಡ ಜುರ್ಮ್ ಸಿನಿಮಾದಲ್ಲಿ ಕುಮಾರ್ ಸಾನು ಹಾಡಿರೋ, ಜಬ್ ಕೋಯಿ ಬಾತ್ ಬಿಗಡ್ ಜಾಯೆ ಹಾಡನ್ನ ಜಾಸ್ಸಿ ಗಿಲ್ ಹಾಡೋದಕ್ಕೆ ಶುರುಮಾಡಿದ್ರು. ಇದೇ ವೇಳೆ ಜಾಸ್ಸಿ ಗಿಲ್ ಜೊತೆ ಧೋನಿ ಕೂಡ, ಹಾಡಿಗೆ ತಮ್ಮ ಸುಮಧುರ ಕಂಠವನ್ನ ಕೂಡಿಸಿದ್ದಾರೆ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ