ಭಾರತದ ಹಿರಿಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮತ್ತೊಮ್ಮೆ ಸೋಲು ಕಂಡಿದ್ದಾರೆ. ಮಲೇಷ್ಯಾ ಓಪನ್ 2022 (Malaysia Open 2022) ಪಂದ್ಯಾವಳಿಯಲ್ಲಿ, ಪಿವಿ ಸಿಂಧು (PV Sindhu) ತಮ್ಮ ಪ್ರತಿಸ್ಪರ್ಧಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಎದುರು ಮಲೇಷ್ಯಾ ಓಪನ್ನ ಕ್ವಾರ್ಟರ್ ಫೈನಲ್‌ನಲ್ಲಿ 21-13, 15-21, 13-21 ರಿಂದ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದರೂ ಚೀನಾ ತೈಪೆಯ ತೈ ತ್ಸು ಯಿಂಗ್ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ.
ಯಿಂಗ್ ವಿರುದ್ಧ ಇದು ಪಿವಿ ಸಿಂಧು ಅವರ ಸತತ ಆರನೇ ಸೋಲು. ಪಿವಿ ಸಿಂಧು ವಿರುದ್ಧದ ಈ ಗೆಲುವಿನ ನಂತರ, ಚೈನೀಸ್ ತೈಪೆಯ ತೈ ತ್ಸು ಯಿಂಗ್ ಈ ಅಗ್ರ ಭಾರತೀಯ ಆಟಗಾರ್ತಿಯ ಮೇಲೆ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಗೆಲುವು ಮತ್ತು ಸೋಲುಗಳೆರಡರ ದಾಖಲೆಯು 5-16 ರ ದೊಡ್ಡ ಅಂತರದೊಂದಿಗೆ ಯಿಂಗ್ ಪರವಾಗಿದೆ.
ಪಿವಿ ಸಿಂಧು ಮತ್ತು ತೈ ತ್ಸು ಯಿಂಗ್ ನಡುವಿನ ಪಂದ್ಯದ ಆರಂಭಿಕ ಗೇಮ್‌ನಲ್ಲಿ 2-5 ರಿಂದ ಹಿನ್ನಡೆ ಸಾಧಿಸಿದ ನಂತರ, ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿವಿ ಸಿಂಧು ಸತತ 11 ಪಾಯಿಂಟ್‌ಗಳೊಂದಿಗೆ ಅದ್ಭುತ ಪುನರಾಗಮನ ಮಾಡಿದರು. ಆದರೆ, ಚೈನೀಸ್ ತೈಪೆ ಆಟಗಾರ್ತಿ ಸುದೀರ್ಘ ರ್ಯಾಲಿಗಳನ್ನು ಆಡುವ ಮೂಲಕ ಸ್ಪರ್ಧೆಗೆ ಮರಳಲು ಪ್ರಯತ್ನಿಸಿದರು. ಆದರೆ ಪಿವಿ ಸಿಂಧು ಅವರಿಗೆ ಹೆಚ್ಚು ಅವಕಾಶಗಳನ್ನು ನೀಡಲಿಲ್ಲ.
ವಿಶ್ವ ರ ್ಯಾಂಕಿಂಗ್ನಲ್ಲಿ ಏಳನೇ ಸ್ಥಾನದಲ್ಲಿರುವ ಭಾರತದ ಪಿವಿ ಸಿಂಧು ಎರಡನೇ ಗೇಮ್ನಲ್ಲೂ ಉತ್ತಮ ಆರಂಭ ಪಡೆದರು. ಆದರೆ ಎರಡನೇ ಶ್ರೇಯಾಂಕದ ಯಿಂಗ್ ಪಂದ್ಯದಲ್ಲಿ ಅಮೋಘ ಪುನರಾಗಮನವನ್ನು ಮಾಡಿದರು ಮತ್ತು ವಿರಾಮದ ವೇಳೆಗೆ ತಮ್ಮ ಮುನ್ನಡೆಯನ್ನು 11-3 ಕ್ಕೆ ವಿಸ್ತರಿಸಿದರು. ಚೈನೀಸ್ ತೈಪೆ ತೈ ತ್ಸು ಯಿಂಗ್ ಮುನ್ನಡೆಯನ್ನು 14-3ಕ್ಕೆ ವಿಸ್ತರಿಸಿದರು. ಆದರೆ ಪಿವಿ ಸಿಂಧು 17-15 ಅಂಕಗಳೊಂದಿಗೆ ಪುಟಿದೇಳುವ ಮೂಲಕ ಎದುರಾಳಿಯ ಮುನ್ನಡೆಯನ್ನು ಎರಡು ಅಂಕಗಳಿಗೆ ಸೀಮಿತಗೊಳಿಸಿದರು.
ಅಂತಿಮ ಸುತ್ತಿನಲ್ಲಿ ಪಿವಿ ಸಿಂಧುಗೆ ಸೋಲು
ನಂತರ ಚೈನೀಸ್ ತೈಪೆ ಆಟಗಾರ್ತಿ ತೈ ತ್ಸು ಯಿಂಗ್ ಅವರು ಪಿವಿ ಸಿಂಧುಗೆ ಯಾವುದೇ ಅವಕಾಶ ನೀಡದೆ ಪಂದ್ಯವನ್ನು ನಿರ್ಣಾಯಕ ಗೇಮ್‌ಗೆ ಕೊಂಡೊಯ್ದರು. ಮೂರನೇ ಗೇಮ್‌ನ ಆರಂಭದಲ್ಲಿ ಇಬ್ಬರ ನಡುವೆ 12 ಪಾಯಿಂಟ್‌ಗಳ ರೋಚಕ ಹಣಾಹಣಿ ಕಂಡುಬಂತು. ಆದರೆ ಪಿವಿ ಸಿಂಧು ನಂತರ ಆವೇಗವನ್ನು ಕಳೆದುಕೊಂಡಿದರಿಂದ ತೈ ತ್ಸು ಯಿಂಗ್ ಸೆಮಿಫೈನಲ್ ತಲುಪುವ ಮೂಲಕ ಪ್ರಶಸ್ತಿಯನ್ನು ಗೆಲ್ಲುವತ್ತ ತಮ್ಮ ಓಟವನ್ನು ಮುಂದುವರೆಸಿದ್ದಾರೆ.
Published On - 9:45 pm, Fri, 1 July 22