AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ

News9 CBC 2025: ಭಾರತದ ನಂ.1 ನೆಟ್‌ವರ್ಕ್ ಟಿವಿ9 ನೆಟ್‌ವರ್ಕ್ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಗೊತ್ತೇ ಇದೆ. ಇದು ವಿಶೇಷವಾಗಿ ದೇಶಾದ್ಯಂತ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಕಳೆದ ವರ್ಷ ಕಾರ್ಪೊರೇಟ್ ಫುಟ್​ಬಾಲ್ ಟೂರ್ನಮೆಂಟ್ ಆಯೋಜಿಸಿದ್ದ ಟಿವಿ9 ನೆಟ್​ವರ್ಕ್​, ಈ ಬಾರಿ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2025 ಅನ್ನು ಆಯೋಜಿಸುತ್ತಿದೆ.

ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ
News9 Cbc 2025
ಝಾಹಿರ್ ಯೂಸುಫ್
|

Updated on: May 08, 2025 | 9:32 AM

Share

ಟಿವಿ9 ನೆಟ್​ವರ್ಕ್​ ಪ್ರಸ್ತುತಪಡಿಸುವ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ (News9 CBC 2025) ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ದೇಶಾದ್ಯಂತದ ಕಾರ್ಪೊರೇಟ್ ಉದ್ಯೋಗಿಗಳನ್ನು ಜೊತೆಗೂಡಿಸಲಿರುವ ಬ್ಯಾಡ್ಮಿಂಟನ್ ಟೂರ್ನಮೆಂಟ್​ ಇದೇ ಮೇ 9 ರಿಂದ ಶುರುವಾಗಲಿದೆ. ಹೈದರಾಬಾದ್‌ನಲ್ಲಿರುವ ವಿಶ್ವ ಪ್ರಸಿದ್ಧ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆಯಲಿರುವ ಈ ಟೂರ್ನಿಯು 3 ದಿನಗಳ ಕಾಲ ಜರುಗಲಿದೆ.

ಕಳೆದ ವರ್ಷ ಟಿವಿ9 ನೆಟ್​ವರ್ಕ್,​ ಕಾರ್ಪೊರೇಟ್ ಫುಟ್​ಬಾಲ್ ಟೂರ್ನಿ ಮತ್ತು ಇಂಡಿಯನ್ ಟೈಗರ್ಸ್ ಮತ್ತು ಟೈಗ್ರೆಸ್ ಫುಟ್ಬಾಲ್ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದೀಗ ಕಾರ್ಪೊರೇಟ್ ಉದ್ಯೋಗಳಿಗಾಗಿ  ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2025 ಅನ್ನು ಆಯೋಜಿಸಲು ಮುಂದಾಗಿದೆ.

ಈಗಾಗಲೇ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ ನೋಂದಣಿಗಳು ಪೂರ್ಣಗೊಂಡಿದ್ದು, ಇದೀಗ ಟೂರ್ನಮೆಂಟ್​ಗೆ ದಿನಾಂಕವನ್ನು ಸಹ ನಿಗದಿ ಮಾಡಲಾಗಿದೆ. ಅದರಂತೆ ಮೇ 9 ರಿಂದ ದೇಶದ ಪ್ರಮುಖ ಕಾರ್ಪೊರೇಟ್ ಕಂಪನಿಗಳಾದ ಡಾ. ರೆಡ್ಡೀಸ್, ಮೈಕ್ರೋಸಾಫ್ಟ್, ಆಕ್ಸೆಂಚರ್, ಇನ್ಫೋಸಿಸ್, ವಿಪ್ರೋ, ಅಮೆಜಾನ್, ಜೆನ್‌ಪ್ಯಾಕ್ಟ್, ಕ್ಯಾಪ್‌ಜೆಮಿನಿ ಮತ್ತು ಇನ್ನೂ ಅನೇಕ ಕಂಪನಿಗಳ ಉದ್ಯೋಗಿಗಳು News9 CBC 2025 ಕಪ್​ಗಾಗಿ ಸೆಣಸಲಿದ್ದಾರೆ.

ಟಿವಿ9 ನೆಟ್​ವರ್ಕ್​, ಕಾರ್ಪೊರೇಟ್​ ಕ್ಷೇತ್ರಗಳಲ್ಲಿ ಫುಟ್​ಬಾಲ್ ಮತ್ತು ಬ್ಯಾಡ್ಮಿಂಟನ್ ಟೂರ್ನಿಗಳನ್ನು ಆಯೋಜಿಸುವ ಮೂಲಕ ದೇಶಾದ್ಯಂತ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಅದರಲ್ಲೂ ಈ ಹಿಂದೆ ಇಂಡಿಯನ್ ಟೈಗರ್ಸ್ ಮತ್ತು ಟೈಗ್ರೆಸ್ ಫುಟ್ಬಾಲ್ ಟೂರ್ನಮೆಂಟ್ ಅನ್ನು ಆಯೋಜಿಸಿ ಯುವ ಪ್ರತಿಭಾನ್ವೇಷಣೆಯನ್ನು ನಡೆಸಿತ್ತು. ಇದೀಗ ಕಾರ್ಪೊರೇಟ್ ಉದ್ಯೋಗಿಳಿಗೆ ಬ್ಯಾಡ್ಮಿಂಟನ್ ಟೂರ್ನಿ ಆಡಲು ಟಿವಿ9 ನೆಟ್​ವರ್ಕ್ ವೇದಿಕೆ ರೂಪಿಸಿದೆ.

ಈ ಕಾರ್ಯಕ್ರಮವು ಕೇವಲ ಸ್ಪರ್ಧೆಯನ್ನು ಮೀರಿ, ಸ್ನೇಹ ಬೆಳೆಸಲು, ಕಾರ್ಪೊರೇಟ್ ಸಂಬಂಧಗಳನ್ನು ಉತ್ತೇಜಿಸಲು ಮತ್ತು ವೃತ್ತಿಪರರಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಲು ಅವಕಾಶವನ್ನು ಒದಗಿಸುತ್ತದೆ. ಈ ಮೂಲಕ ಟಿವಿ9 ನೆಟ್​ವರ್ಕ್​ ಕ್ರೀಡಾಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯನ್ನು ರೂಪಿಸುತ್ತಿದೆ.

ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

News9 CBC 2025 ಸಂಕ್ಷಿಪ್ತ ಮಾಹಿತಿ:

  • ಟೂರ್ನಮೆಂಟ್ ಹೆಸರು: ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್
  • ಟೂರ್ನಿಯ ದಿನಾಂಕ: ಮೇ 9 ರಿಂದ ಮೇ 11
  • ಟೂರ್ನಿ ನಡೆಯುವ ಸ್ಥಳ: ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ, ಹೈದರಾಬಾದ್.

ಭಾರತದ ನಂ.1 ನೆಟ್‌ವರ್ಕ್ ಟಿವಿ9 ನೆಟ್‌ವರ್ಕ್ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಗೊತ್ತೇ ಇದೆ. ಇದು ವಿಶೇಷವಾಗಿ ದೇಶಾದ್ಯಂತ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಕಳೆದ ವರ್ಷ ಕಾರ್ಪೊರೇಟ್ ಫುಟ್​ಬಾಲ್ ಟೂರ್ನಮೆಂಟ್ ಆಯೋಜಿಸಿದ್ದ ಟಿವಿ9 ನೆಟ್​ವರ್ಕ್​, ಈ ಬಾರಿ ನ್ಯೂಸ್9 ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2025 ಅನ್ನು ಆಯೋಜಿಸುತ್ತಿದೆ.

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ