Viral Video: ತನ್ನದೇ ತಂಡದ ಆಟಗಾರನಿಗೆ ಪಂದ್ಯದ ಮಧ್ಯೆಯೇ ಹಿಗ್ಗಾಮುಗ್ಗ ಥಳಿಸಿದ ಗೋಲ್ ಕೀಪರ್: ಏತಕ್ಕಾಗಿ ಗೊತ್ತೇ?

Viral Video: ತನ್ನದೇ ತಂಡದ ಆಟಗಾರನಿಗೆ ಪಂದ್ಯದ ಮಧ್ಯೆಯೇ ಹಿಗ್ಗಾಮುಗ್ಗ ಥಳಿಸಿದ ಗೋಲ್ ಕೀಪರ್: ಏತಕ್ಕಾಗಿ ಗೊತ್ತೇ?
Goalkeeper Hitting His Teammate

Goalkeeper Hitting His Teammate: ಐರಿಶ್ ಪ್ರೀಮಿಯರ್​ಶಿಪ್ ಟೀಮ್ ಗ್ಲೆಂಟೊರೆನ್​ನ ಗೋಲ್​ ಕೀಪರ್ ಆ್ಯರೋನ್ ಮ್ಯಾಕೆರೆ ತಮ್ಮದೇ ತಂಡದ ಆಟಗಾರ ಬಾಬಿ ಬರ್ನ್ಸ್​ಗೆ ಮೈದಾನದಲ್ಲಿ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

TV9kannada Web Team

| Edited By: Vinay Bhat

Oct 18, 2021 | 12:08 PM

ಕ್ರೀಡೆ (Sports) ಎಂದ ಮೇಲೆ  ಅಲ್ಲಿ ಗಲಾಟೆ, ಜಗಳ, ಮಾತಿಗೆ ಮಾತು ಬೆಳೆಯುವುದು ಮಾಮೂಲಿ. ಆದರೆ, ಅದು ಅತಿರೇಕಕ್ಕೆ ಹೋಗಬಾರದು ಅಷ್ಟೆ. ಆದರೆ, ಇಲ್ಲೊಂದು ಘಟನೆ ನಡೆದಿದೆ. ಫುಟ್ಬಾಲ್ (FootBall) ಪಂದ್ಯವೊಂದರಲ್ಲಿ ಗೋಲ್​ ಕೀಪರ್ (Goalkeeper) ತನ್ನದೇ ತಂಡದ ಆಟಗಾರನಿಗೆ ಅದುಕೂಡ ಪಂದ್ಯದ ಮಧ್ಯೆಯೇ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ (Viral Video) ಆಗುತ್ತಿದೆ.

ಐರಿಶ್ ಪ್ರೀಮಿಯರ್​ಶಿಪ್ ಟೀಮ್ ಗ್ಲೆಂಟೊರೆನ್​ನ ಗೋಲ್​ ಕೀಪರ್ ಆ್ಯರೋನ್ ಮ್ಯಾಕೆರೆ ತಮ್ಮದೇ ತಂಡದ ಆಟಗಾರ ಬಾಬಿ ಬರ್ನ್ಸ್​ಗೆ ಮೈದಾನದಲ್ಲಿ ಹೊಡೆದಿದ್ದಾರೆ. ಪಂದ್ಯ ಆರಂಭವಾಗಿ 80 ನಿಮಿಷ ಕಳೆದ ಬಳಿಕ ಕೊಲೆರೈನ್ ತಂಡದ ಕ್ಯಾಥಿರ್ ಫ್ರೈಲ್ ಗೋಲು ಬಾರಿಸುವ ಮೂಲಕ ಪಂದ್ಯವನ್ನು 2-2 ಅಂತರದಿಂದ ಸಮಬಲ ಸಾಧಿಸಿದರು.

ಈ ಸಂದರ್ಭ ಕೋಪಗೊಂಡ ಗ್ಲೆಂಟೊರೆನ್​ನ 29 ವರ್ಷ ಪ್ರಾಯದ ಗೋಲ್​ ಕೀಪರ್ ಆ್ಯರೋನ್ ಮ್ಯಾಕೆರೆ ಓಡಿ ಬಂದು ತಮ್ಮ ತಂಡದ ಆಟಗಾರ ಬಾಬಿ ಬರ್ನ್ಸ್ ಅವರ ಕೊರಳಪಟ್ಟಿ ಹಿಡಿದು ನೆಲಕ್ಕೆ ಬೀಳಿಸಿದ್ದಾರೆ. ಅಲ್ಲದೆ ಮನಬಂದಂತೆ ಥಳಿಸಿದ್ದಾರೆ. ಇದಕ್ಕಾಗಿ ಗೋಲ್ ಕೀಪರ್​ಗೆ ರೆಡ್ ಕಾರ್ಡ್ ನೀಡಲಾಯಿತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪಂದ್ಯ 2-2 ಗೋಲುಗಳ ಅಂತರದಿಂದ ಸಮಬಲ ಸಾಧಿಸಿ ಡ್ರಾ ಆಯಿತು.

MS Dhoni: ಟೀಮ್ ಇಂಡಿಯಾ ಸೇರಿಕೊಂಡ ಎಂ. ಎಸ್ ಧೋನಿ: ಗ್ರೌಂಡ್​ನಲ್ಲಿ ಆಟಗಾರರಿಗೆ ತರಬೇತಿ ಶುರು

T20 World cup: ಅಭ್ಯಾಸ ಪಂದ್ಯವನ್ನೂ ಕಡೆಗಣಿಸದ ಕೊಹ್ಲಿ: ಇಂಗ್ಲೆಂಡ್ ವಿರುದ್ಧದ ಮ್ಯಾಚ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

(Goalkeeper McCarey lashed out and raced towards His Teammate and received a red card Viral Video)

Follow us on

Related Stories

Most Read Stories

Click on your DTH Provider to Add TV9 Kannada