AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Games: 100ನೇ ಪದಕ: ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ನಿರ್ಮಿಸಿದ ಭಾರತ: ಕಬಡ್ಡಿಯಲ್ಲಿ ಚಿನ್ನ

India have clinched medal no. 100 in Asian Games: ಏಷ್ಯನ್ ಗೇಮ್ಸ್​ನಲ್ಲಿ ಇದುವರೆಗೆ ಭಾರತ 100 ಪದಕಗಳನ್ನು ಬಾಚಿಕೊಂಡಿರಲಿಲ್ಲ. ಇದೀಗ ಮಹಿಳೆಯರ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನಲಭಿಸಿದೆ. ಈ ರಣರೋಚಕ ಪಂದ್ಯದಲ್ಲಿ ಭಾರತ 26-25 ಅಂಕಗಳಿಂದ ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನವನ್ನು ಗೆದ್ದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿತು.

Asian Games: 100ನೇ ಪದಕ: ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ನಿರ್ಮಿಸಿದ ಭಾರತ: ಕಬಡ್ಡಿಯಲ್ಲಿ ಚಿನ್ನ
Asian Games Kabaddi Team
Vinay Bhat
|

Updated on:Oct 07, 2023 | 8:47 AM

Share

ಏಷ್ಯನ್ ಗೇಮ್ಸ್‌ನ (Asian Games) 14 ನೇ ದಿನವನ್ನು ಭಾರತವು ಅತ್ಯುತ್ತಮವಾಗಿ ಆರಂಭಿಸಿದೆ. ಬಿಲ್ಲುಗಾರಿಕೆಯಲ್ಲಿ ಭಾರತ ನಾಲ್ಕು ಪದಕಗಳನ್ನು ಬಾಚಿಕೊಂಡ ಬೆನ್ನಲ್ಲೇ ಇದೀಗ ಮಹಿಳೆಯರ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನಲಭಿಸಿದೆ. ಇದರ ಮೂಲಕ ಭಾರತ ಏಷ್ಯನ್ ಗೇಮ್ಸ್​ನಲ್ಲಿ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಏಷ್ಯನ್ ಗೇಮ್ಸ್​ನಲ್ಲಿ ಇದುವರೆಗೆ ಭಾರತ 100 ಪದಕಗಳನ್ನು ಬಾಚಿಕೊಂಡಿರಲಿಲ್ಲ. 2018 ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್​ನಲ್ಲಿ ದಾಖಲೆಯ 70 ಪದಕಗಳನ್ನು ಗೆದ್ದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ತನ್ನ ಎಲ್ಲ ಹಳೆಯ ದಾಖಲೆ ಪುಡುಗಟ್ಟಿ ಇತಿಹಾಸ ನಿರ್ಮಿಸಿದೆ.

ಇಂದು ದಿನದ ಆರಂಭದಲ್ಲಿ ಜ್ಯೋತಿ ವೆನ್ನಮ್ ಅವರು ಮಹಿಳೆಯರ ಕಾಂಪೌಂಡ್‌ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅಂತೆಯೆ ಅದಿತಿ ಸ್ವಾಮಿ ಅವರು ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಜ್ಯೋತಿ ಅವರ ಮೂರನೇ ಚಿನ್ನದ ಪದಕವಾಗಿದೆ. ಈ ಹಿಂದೆ ಮಹಿಳಾ ಕಾಂಪೌಂಡ್ ಮತ್ತು ಮಿಶ್ರ ಸಂಯುಕ್ತ ತಂಡಗಳ ಈವೆಂಟ್‌ಗಳಲ್ಲಿ ಪದಕ ಬಾಚಿಕೊಂಡಿದ್ದರು.

ಇದನ್ನೂ ಓದಿ
Image
ವಿಶ್ವಕಪ್​ನಲ್ಲಿಂದು ಡಬಲ್ ಹೆಡ್ಡರ್: ಬಾಂಗ್ಲಾ-ಅಫ್ಘಾನ್, ಆಫ್ರಿಕಾ-ಲಂಕಾ ಕದನ
Image
ಡಚ್ಚರ ಮುಂದೆ ಒಂದಂಕಿಗೆ ಸುಸ್ತಾದ ಪಾಕ್ ನಾಯಕ ಬಾಬರ್!
Image
ಚಿನ್ನಕ್ಕಾಗಿ ಭಾರತ- ಅಫ್ಘಾನ್ ನಡುವೆ ಫೈನಲ್ ಫೈಟ್
Image
ಬಲಿಷ್ಠ ಪಾಕ್ ಬೌಲರ್​ಗಳ ಎದುರು ಗೆಲುವಿಗಾಗಿ ಹೋರಾಡಿ ಸೋತ ಡಚ್ಚರು..!

‘ಪಂದ್ಯದಿಂದ ಹೊರಗುಳಿದಿಲ್ಲ’: ಗಿಲ್ ಆರೋಗ್ಯದ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ಕೋಚ್ ದ್ರಾವಿಡ್

ಅಂತೆಯೆ ಓಜಸ್ ಪ್ರವೀಣ್ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದರು. ಅಭಿಷೇಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಜ್ಯೋತಿ ತನ್ನ ಮೊದಲ ಪ್ರಯತ್ನದಲ್ಲಿ ಒಂಬತ್ತು ರನ್ ಬಾರಿಸಿದ ನಂತರ ಕೊರಿಯಾದ ಚೈವಾನ್ ಸೋ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. ಅಂತಿಮವಾಗಿ 149-145 ಅಂಕಗಳೊಂದಿಗೆ ಗೆದ್ದುಕೊಂಡರು.

ಭಾರತ 100 ಪದಕ ಗೆದ್ದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್:

ಇದಕ್ಕೂ ಮುನ್ನ ಮಹಿಳೆಯರ ಕಾಂಪೌಂಡ್ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ಝಿಲಿಜಾಟಿ ಫಧ್ಲಿ ವಿರುದ್ಧ ಅದಿತಿ ಕಂಚಿನ ಪದಕ ಗೆದ್ದಿದ್ದರು. ಅಂತಿಮ ಎರಡು ಪಂದ್ಯಗಳು ಕ್ರಮವಾಗಿ 30 ಮತ್ತು 29 ಸ್ಕೋರ್​ಗಳೊಂದಿಗೆ ಕೊನೆಗೊಂಡು ಅದಿತಿ 146-140 ಅಂಕಗಳೊಂದಿಗೆ ಸ್ಪರ್ಧೆಯಲ್ಲಿ ಜಯಗಳಿಸಿದರು.

ಇನ್ನು ಭಾರತಕ್ಕೆ ನೂರನೇ ಪದಕ ಬಂದಿದ್ದು ಮಹಿಳೆಯರ ಕಬಡ್ಡಿಯಿಂದ. ಈ ರಣರೋಚಕ ಪಂದ್ಯದಲ್ಲಿ ಭಾರತ 26-25 ಅಂಕಗಳಿಂದ ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನವನ್ನು ಗೆದ್ದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿತು. 2018 ರ ಆವೃತ್ತಿಯಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದ ಭಾರತೀಯ ಮಹಿಳಾ ಕಬಡ್ಡಿ ತಂಡವು ಇದೀಗ ಚಿನ್ನದ ಪದಕವನ್ನು ಪಡೆದರು.

ಭಾರತ ವನಿತೆಯರ ತಂಡ ಮೊದಲಾರ್ಧದಲ್ಲಿ 5 ಅಂಕಗಳ ಮುನ್ನಡೆ ಸಾಧಿಸಿತು (14-9). ಚೈನೀಸ್ ತೈಪೆ ಪಂದ್ಯದ ದ್ವಿತೀಯಾರ್ಧದಲ್ಲಿ ಅದ್ಭುತ ಕಮ್​ಬ್ಯಾಕ್ ಮಾಡಿದ ಪರಿಣಾಮ ಪಂದ್ಯ ಕೊನೆಯವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ತೈಪೆ ತಂಡವು ಒಂದು ಹಂತದಲ್ಲಿ ಎಲ್ಲಾ ಭಾರತೀಯ ಆಟಗಾರರನ್ನು ಅಂಗಳದಿಂದ ಹೊರಗಟ್ಟಿ 2 ಹೆಚ್ಚುವರಿ ಅಂಕಗಳನ್ನು ಗೆದ್ದಿತು. ಆದಾಗ್ಯೂ, ಕೊನೇ ಕ್ಷಣದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿ 26-25 ರಿಂದ ಗೆದ್ದಿತು. ಇದರೊಂದಿಗೆ ಭಾರತ 25 ಚಿನ್ನದ ಪದಕ ಗೆದ್ದಿದೆ. ಭಾರತದ ಕೈಯಲ್ಲಿ ಒಟ್ಟು 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚಿನ ಪದಕವಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:12 am, Sat, 7 October 23

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?