AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sultan Fazel: ಪ್ರೊ ಕಬಡ್ಡಿ ಲೀಗ್​ ಹರಾಜಿಗೆ ದಿನಗಣನೆ: ಹೊಸ ಪ್ರೋಮೋದಲ್ಲಿ ಮಿಂಚುತ್ತಿರುವ ಫಾಜೆಲ್ ಅತ್ರಾಚಲಿ

Pro Kabaddi League 2022 Auction: ಪ್ರೊ ಕಬಡ್ಡಿ ಲೀಗ್ ಹರಾಜಿಗೆ ಕೆಲವೇ ದಿನಗಳಿರುವಾಗ ಪ್ರಸಿದ್ಧ ಸಾಮಾಜಿಕ ತಾಣ ಕೂ ಆ್ಯಪ್‌ನಲ್ಲಿ ಒಂದು ಪ್ರತ್ಯೇಕ ಪ್ರೋಮೋ ಬಿಡುಗಡೆ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ' ಸುಲ್ತಾನ್' ಫಜಲ್ ಘರ್ಜನೆಯನ್ನು ಬಿತ್ತರಿಸಿದೆ.

Sultan Fazel: ಪ್ರೊ ಕಬಡ್ಡಿ ಲೀಗ್​ ಹರಾಜಿಗೆ ದಿನಗಣನೆ: ಹೊಸ ಪ್ರೋಮೋದಲ್ಲಿ ಮಿಂಚುತ್ತಿರುವ ಫಾಜೆಲ್ ಅತ್ರಾಚಲಿ
Fazel Atrachali PKL 2022
TV9 Web
| Edited By: |

Updated on: Aug 02, 2022 | 3:11 PM

Share

ಮುಂಬೈ: ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ (Pro Kabaddi League) ಆಟಗಾರರ ಹರಾಜು ಪ್ರಕ್ರಿಯೆಯ ಮುಂಬೈನಲ್ಲಿ ಇದೇ ಆಗಸ್ಟ್ 5 ಮತ್ತು 6 ರಂದು ನಡೆಯಲಿದೆ. ಇದರಲ್ಲಿ ಸಾಗರೋತ್ತರ ವಿಭಾಗದಲ್ಲಿ ಇರಾನಿ ಕಬಡ್ಡಿ ಆಟಗಾರ ಫಾಜೆಲ್ ಅತ್ರಾಚಲಿ (Sultan Fazel) ಭಾಗವಹಿಸಲಿದ್ದು, ಅವರನ್ನು ಯಾರು ಬಿಡ್ ಮಾಡುವರು ಎಂಬ ಕುತೂಹಲ ಈಗ ಶುರುವಾಗಿದೆ. 9ನೇ ಆವೃತ್ತಿಯ ಹರಾಜು (Auction) ಪ್ರಕ್ರಿಯಲ್ಲಿ ಸಾಗರೋತ್ತರ ವಿಭಾಗದಲ್ಲಿ ‘ಸುಲ್ತಾನ್‘ ಎಂದೇ ಖ್ಯಾತರಾಗಿರುವ ಫಾಜೆಲ್ ಅತ್ರಾಚಲಿ ಗಮನ ಸೆಳೆಯುತಿದ್ದಾರೆ. ಅವರು ಯಾವ ತಂಡಕ್ಕೆ ಸೇರಲಿದ್ದಾರೆ, ಅವರನ್ನು ಯಾರು ಬಿಡ್ ಮಾಡಲಿದ್ದಾರೆ ಎನ್ನುವ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಇದೀಗ ಹರಾಜಿಗೆ ಕೆಲವೇ ದಿನಗಳಿರುವಾಗ ಪ್ರಸಿದ್ಧ ಸಾಮಾಜಿಕ ತಾಣ ಕೂ ಆ್ಯಪ್‌ನಲ್ಲಿ ಒಂದು ಪ್ರತ್ಯೇಕ ಪ್ರೋಮೋ ಬಿಡುಗಡೆ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ‘ ಸುಲ್ತಾನ್‘ ಫಜಲ್ ಘರ್ಜನೆಯನ್ನು ಬಿತ್ತರಿಸಿದೆ. ‘#vivoPKLPlayerAuction 2022 ರಂತೆ ಸುಲ್ತಾನ್ ಫಜಲ್ ಘರ್ಜಿಸುತ್ತಾನೆ!. ನೀವು ಯಾವ #vivoProKabaddi ತಂಡದಲ್ಲಿ ಈ ಡಿಫೆಂಡರ್ ಅನ್ನು ನೋಡಲು ಬಯಸುತ್ತೀರಿ?’, ಎಂದು ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಪೋಸ್ಟ್ ಮಾಡಿದೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ‘ಸುಲ್ತಾನ್‘ ಫಜಲ್ ಅನ್ನು ಟೈಗರ್ ಎಂದು ಕರೆಯಲಾಗುತ್ತದೆ. ಅವರು ಈ ಆವೃತ್ತಿಯಲ್ಲಿ ಹರಾಜಿನಲ್ಲಿ ಭಾಗವಹಿಸುತ್ತಿರುವ ಎರಡನೇ ಡಿಫೆಂಡರ್‌ ಆಗಿದ್ದಾರೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯೂನಿವರ್ಸಿಟಿ 2021 ಗೇಮ್ಸ್‌ನ ಟಾಪ್ 2 ರಲ್ಲಿರುವ 24 ಆಟಗಾರರನ್ನು ಹರಾಜಿಗೆ ಸೇರಿಸಲಾಗಿದೆ. ಈ ಆವೃತ್ತಿಯಲ್ಲಿ ಒಟ್ಟು 12 ಫ್ರಾಂಚೈಸಿಗಳು ಬಿಡ್ಡಿಂಗ್ ಮಾಡಲಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಫ್ರಾಂಚೈಸಿ ಕನಿಷ್ಠ 18 ಆಟಗಾರರು ಮತ್ತು ಗರಿಷ್ಠ 25 ಆಟಗಾರರ ಮೇಲೆ ಬಿಡ್ಡಿಂಗ್ ನಡೆಸಬಹುದು.

4 ವಿಭಾಗಗಳಲ್ಲಿ ಆಟಗಾರರ ಹರಾಜು

ಹರಾಜಿಗೆ ಆಟಗಾರರನ್ನು ಸ್ಥೂಲವಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೇಶೀಯ, ಸಾಗರೋತ್ತರ ಮತ್ತು ಹೊಸ ಯುವ ಆಟಗಾರರು (NYP) ಸೇರಿದ್ದಾರೆ. ಇದಾದ ನಂತರ, ನಾಲ್ಕು ಉಪ–ವರ್ಗಗಳನ್ನು ರಚಿಸಲಾಗುತ್ತದೆ – A, B, C ಮತ್ತು D ಮತ್ತು ಪ್ರತಿ ವಿಭಾಗದಲ್ಲಿ ಆಟಗಾರರನ್ನು ‘ಆಲ್–ರೌಂಡರ್‌ಗಳು‘, ‘ಡಿಫೆಂಡರ್‌ಗಳು‘ ಮತ್ತು ‘ರೈಡರ್‌ಗಳು‘ ಎಂದು ಉಪ ವಿಂಗಡಣೆ ಮಾಡಲಾಗುತ್ತದೆ.

ಪ್ರತಿ ವರ್ಗದ ಮೂಲ ಬೆಲೆ

ಎ ವರ್ಗ – 30 ಲಕ್ಷ ರೂ.

ಬಿ ವರ್ಗ – 20 ಲಕ್ಷ ರೂ.

ಸಿ ವರ್ಗ – 10 ಲಕ್ಷ ರೂ.

ಡಿ ವರ್ಗ – 6 ಲಕ್ಷ ರೂ.

Follow Us
TV9 Web
TV9 Web

TV9 Kannada

Read More
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್