
ಚೆನ್ನೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 17ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 9 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಪಂಜಾಬ್ ಈ ಸರಣಿಯ 2ನೇ ಗೆಲುವು ದಾಖಲಿಸಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ 52 ಬಾಲ್ ಗೆ 60 ಹಾಗೂ ಕ್ರಿಸ್ ಗೈಲ್ 35 ಬಾಲ್ಗೆ 43 ರನ್ ಗಳಿಸಿ ಔಟ್ ಆಗದೆ ಉಳಿದಿದ್ದಾರೆ. ಮಯಾಂಕ್ ಅಗರ್ವಾಲ್ 25 ರನ್ ಪೇರಿಸಿದ್ದಾರೆ. ಮುಂಬೈ ಪರ ಚಹರ್ 1 ವಿಕೆಟ್ ಪಡೆದು, ರನ್ ನಿಯಂತ್ರಿಸಿದ್ದು ಹೊರತಾಗಿ ಉಳಿದ ಬೌಲರ್ಗಳು ಯಶಸ್ವಿ ಪ್ರದರ್ಶನ ತೋರಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 131 ರನ್ ಕಲೆಹಾಕಿತ್ತು. ಪಂಜಾಬ್ ಕಿಂಗ್ಸ್ಗೆ 132 ರನ್ ಗುರಿ ನೀಡಿತ್ತು. ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಆಸರೆಯಾಗಿದ್ದರು. 52 ಬಾಲ್ಗೆ 63 ರನ್ ಗಳಿಸಿ ತಂಡ 100 ರನ್ ಗಡಿ ದಾಟುವಂತೆ ಮಾಡಿದ್ದರು. ಸೂರ್ಯಕುಮಾರ್ ಯಾದವ್ 33 ಹಾಗೂ ಪೊಲಾರ್ಡ್ ಔಟ್ ಆಗದೆ 16 ರನ್ ಗಳಿಸಿದ್ದರು. ಉಳಿದ ಆಟಗಾರರು ಒಂದಂಕಿ ದಾಟಿರಲಿಲ್ಲ. ಪಂಜಾಬ್ ಕಿಂಗ್ಸ್ ಪರ ಮೊದಲ ಪಂದ್ಯ ಆಡುತ್ತಿರುವ ರವಿ ಬಿಶ್ನೊಯ್ 2 ವಿಕೆಟ್ ಕಬಳಿಸಿದ್ದರು. ಶಮಿ ಕೂಡ 2 ವಿಕೆಟ್ ಪಡೆದಿದ್ದರು. ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗೆ ಲಭ್ಯವಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 9 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಕ್ರಿಸ್ ಗೈಲ್ ಹಾಗೂ ಕೆ.ಎಲ್. ರಾಹುಲ್ ನಿರಾಯಾಸವಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. 17.4 ಓವರ್ಗೆ 1 ವಿಕೆಟ್ ಕಳೆದುಕೊಂಡು 132 ರನ್ ದಾಖಲಿಸಿ ಗೆಲುವು ಕಂಡಿದೆ.
ಕ್ರಿಸ್ ಗೈಲ್ ಹಾಗೂ ಕೆ.ಎಲ್. ರಾಹುಲ್ ನಿಧಾನವಾಗಿ ಆಟ ಆರಂಭಿಸಿದರೂ ಪಂದ್ಯದ ಅಂತಿಮ ಹಂತದಲ್ಲಿ ಅಬ್ಬರಿಸಿದ್ದಾರೆ. ಬೋಲ್ಟ್ ಬೌಲಿಂಗ್ಗೆ ರಾಹುಲ್ ಹಾಗೂ ಗೈಲ್ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ತಂಡವನ್ನು ಗೆಲ್ಲಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಪರ ನಾಯಕ ಕೆ.ಎಲ್. ರಾಹುಲ್ ಅರ್ಧಶತಕ ಪೂರೈಸಿದ್ದಾರೆ. 2 ಬೌಂಡರಿ ಮತ್ತು ಸಿಕ್ಸರ್ ಸಹಿತ 50 ಬಾಲ್ಗೆ 50 ರನ್ ಗಳಿಸಿದ್ದಾರೆ. ಪಂಜಾಬ್ ಕಿಂಗ್ಸ್ 17 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿದೆ. ಗೆಲ್ಲಲು 18 ಬಾಲ್ಗೆ 17 ರನ್ ಬೇಕಿದೆ.
ಪಂಜಾಬ್ ಕಿಂಗ್ಸ್ ಶತಕ ಪೂರೈಸಿದೆ. ಗೆಲ್ಲಲು 24 ಬಾಲ್ಗೆ 24 ರನ್ ಬೇಕಿದೆ. 16 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡಿರುವ ಪಂಜಾಬ್ 108 ರನ್ ದಾಖಲಿಸಿದೆ. ರಾಹುಲ್ 49 ರನ್ ಗಳಿಸಿ ಅರ್ಧಶತಕಕ್ಕೆ 1 ರನ್ ಹಿಂದಿದ್ದಾರೆ. ಗೈಲ್ 30 ರನ್ ಗಳಿಸಿ ಕಣದಲ್ಲಿದ್ದಾರೆ.
ಪಂಜಾಬ್ ಕಿಂಗ್ಸ್ 15 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ. ಗೆಲ್ಲಲು 30 ಬಾಲ್ಗೆ 33 ರನ್ ಬೇಕಿದೆ. ರಾಹುಲ್ ಹಾಗೂ ಗೈಲ್ ಜೊತೆಯಾಟ ಮುಂದುವರಿದಿದೆ. ಪೂರನ್, ದೀಪಕ್ ಹೂಡಾ, ಹೆನ್ರಿಕ್ವೆಸ್, ಶಾರುಖ್ ಖಾನ್ ಇನ್ನೂ ಬ್ಯಾಟಿಂಗ್ಗೆ ಇಳಿಯಲು ಬಾಕಿ ಇದ್ದಾರೆ.
ಪಂಜಾಬ್ ಕಿಂಗ್ಸ್ ನಾಯಕ 45 ಬಾಲ್ಗೆ 48 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ. ಪಂಜಾಬ್ ಗೆಲ್ಲಲು 36 ಬಾಲ್ಗೆ 39 ರನ್ ಬೇಕಿದೆ. ಇನ್ನೂ 6 ಓವರ್ಗಳು ಹಾಗೂ 9 ವಿಕೆಟ್ ಉಳಿದಿದೆ.
ಪಂಜಾಬ್ ಕಿಂಗ್ಸ್ ಗೆಲ್ಲಲು 42 ಬಾಲ್ಗೆ 50 ರನ್ ಬೇಕಾಗಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ 41 ಬಾಲ್ಗೆ 39 ಹಾಗೂ ಗೈಲ್ 18 ಬಾಲ್ಗೆ 17 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಪಂಜಾಬ್ ಕಿಂಗ್ಸ್ ಗೆಲ್ಲಲು 54 ಬಾಲ್ಗೆ 69 ರನ್ ಬೇಕಾಗಿದೆ. ತಂಡದ ಪರ ನಾಯಕ ರಾಹುಲ್ 37 ಬಾಲ್ಗೆ 34 ಹಾಗೂ ಗೈಲ್ 10 ಬಾಲ್ಗೆ 3 ರನ್ ಗಳಿಸಿ ಆಟವಾಡುತ್ತಿದ್ದಾರೆ. 11 ಓವರ್ ಅಂತ್ಯಕ್ಕೆ 65 ರನ್ ಪೇರಿಸಿರುವ ಪಂಜಾಬ್ 1 ವಿಕೆಟ್ ಕಳೆದುಕೊಂಡಿದೆ.
ಹತ್ತು ಓವರ್ ಆಟವಾಡಿರುವ ಪಂಜಾಬ್ ಇಂಗ್ಸ್ 1 ವಿಕೆಟ್ ಕಳೆದುಕೊಂಡು 62 ರನ್ ದಾಖಲಿಸಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಹಾಗೂ ಯುನಿವರ್ಸಲ್ ಬಾಸ್ ಕ್ರಿಸ್ ಗೈಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
25 ರನ್ ಗಳಿಸಿದ್ದ ಕನ್ನಡಿಗ ಮಾಯಾಂಕ್ ರಾಹುಲ್ ಚಹರ್ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಮುಂಬೈಗೆ ಮೊದಲ ಯಶಸ್ಸು ಸಿಕ್ಕಿದೆ. ಔಟ್ ಆಗುವದಕ್ಕೂ ಮೊದಲು ರಾಹುಲ್ ಹಾಗೂ ಮಾಯಾಂಕ್ 50 ರನ್ಗಳ ಜೊತೆಯಾಟ ಆಡಿದ್ದರು.
ಕೇವಲ 6.2 ಓವರ್ಗಳಲ್ಲಿ ಪಂಜಾಬ್ 50 ರನ್ಗಳನ್ನು ಪೂರೈಸಿದೆ. ಮಾಯಾಂಕ್ ಬೌಂಡರಿ ಬಾರಿಸುವ ಮೂಲಕ 50 ರನ್ ಪೂರೈಸಿದ್ದಾರೆ. ರಾಹುಲ್ 25 ರನ್ ಗಳಿಸಿದ್ದರೆ, ಮಾಯಾಂಕ್ 25 ರನ್ ಗಳಿಸಿ ಆಡುತ್ತಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದಿರುವ ರಾಹುಲ್ ಹಾಗೂ ಮಾಯಾಂಕ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ. 4 ಓವರ್ಗಳನ್ನು ಎದುರಿಸಿರುವ ಈ ಜೋಡಿ 40 ರನ್ಗಳನ್ನು ಕಲೆ ಹಾಕಿದೆ. ಪವರ್ ಪ್ಲೇ ಮುಕ್ತಾಯಕ್ಕೆ ಇನ್ನೊಂದು ಓವರ್ ಬಾಕಿ ಇದ್ದು, ಪಂಜಾಬ್ ಆಟಗಾರರು ಏನು ಮಾಡಲಿದ್ದಾರೆ ಕಾದು ನೋಡಬೇಕಿದೆ.
ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ 2 ಓವರ್ ಅಂತ್ಯಕ್ಕೆ 16 ರನ್ ಗಳಿಸಿದೆ. ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ವೇಗದ ಆಟಕ್ಕೆ ಮುಂದಾಗಿದ್ದಾರೆ. ರಾಹುಲ್ 2 ಬೌಂಡರಿ ಹಾಗೂ ಮಯಾಂಕ್ ಅಗರ್ವಾಲ್ 1 ಬೌಂಡರಿ ಸಿಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 131 ರನ್ ದಾಖಲಿಸಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 132 ರನ್ಗಳ ಗುರಿ ನೀಡಿದೆ.
ಹಾರ್ದಿಕ್ ಪಾಂಡ್ಯ ಬೆನ್ನಲ್ಲೇ ಕೃನಾಲ್ ಪಾಂಡ್ಯ ವಿಕೆಟ್ ಒಪ್ಪಿಸಿದ್ದಾರೆ. 3 ಬಾಲ್ಗೆ 3 ರನ್ ಗಳಿಸಿ ಶಮಿ ಬಾಲ್ಗೆ ಔಟ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ 6ನೇ ವಿಕೆಟ್ ಕಳೆದುಕೊಂಡಿದ್ದು, 1 ಬಾಲ್ ಉಳಿದಿರುವಂತೆ ಜಯಂತ್ ಯಾದವ್ ಕಣಕ್ಕಿಳಿದಿದ್ದಾರೆ.
ಅರ್ಶ್ದೀಪ್ ಸಿಂಗ್ ಬೌಲಿಂಗ್ಗೆ ದೀಪಕ್ ಹೂಡಾಗೆ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ 1 ರನ್ ಗಳಿಸಿ ನಿರ್ಗಮಿಸಿದ್ದಾರೆ. ಮುಂಬೈ ಇಂಡಿಯನ್ಸ್ 19 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿದೆ. ಕೃನಾಲ್ ಪಾಂಡ್ಯ ಹಾಗೂ ಪೊಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅರ್ಧಶತಕ ಪೂರೈಸಿ ಮುಂಬೈ ತಂಡಕ್ಕೆ ಆಸರೆಯಾಗಿದ್ದ ರೋಹಿತ್ ಶರ್ಮಾ 63 ರನ್ ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಶಮಿ ಬೌಲಿಂಗ್ಗೆ ಅಲೆನ್ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಕ್ರಿಸ್ನಲ್ಲಿದ್ದಾರೆ. ಮುಂಬೈ ತಂಡ 18 ಓವರ್ಗೆ 114 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡ 17 ಓವರ್ಗೆ 3 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿದೆ. ರೋಹಿತ್ ಶರ್ಮಾ ಹಾಗೂ ಪೊಲಾರ್ಡ್ ಕ್ರಿಸ್ ಕಾಯ್ದುಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಶತಕ ಪೂರೈಸುತ್ತಿದ್ದಂತೆ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದ್ದಾರೆ. 27 ಬಾಲ್ಗೆ 33 ರನ್ ಕಲೆಹಾಕಿ ರವಿ ಬಿಶ್ನೊಯ್ ಬಾಲ್ಗೆ ಗೈಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಬಳಿಕ ಕೀರನ್ ಪೊಲಾರ್ಡ್ ಕ್ರಿಸ್ಗೆ ಇಳಿದಿದ್ದಾರೆ.
ಮುಂಬೈ ಇಂಡಿಯನ್ಸ್ 16 ಓವರ್ಗಳ ಅಂತ್ಯಕ್ಕೆ 105 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಕೊನೆಯ 6 ಓವರ್ಗಳಲ್ಲಿ ಮುಂಬೈ ಇನ್ನಿಂಗ್ಸ್ ಕಟ್ಟುವ ಆಟವಾಡಿದೆ. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದ್ದಾರೆ. ರೋಹಿತ್ ಶರ್ಮಾ 48 ಬಾಲ್ಗೆ 62 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ 26 ಬಾಲ್ಗೆ 33 ರನ್ ಕಲೆಹಾಕಿ ಕ್ರೀಸ್ನಲ್ಲಿದ್ದಾರೆ.
ಮುಂಬೈ ಪರ ನಾಯಕ ರೋಹಿತ್ ಶರ್ಮಾ ಅರ್ಧಶತಕ ಪೂರೈಸಿದ್ದಾರೆ. ಎರಡು ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿದ್ದ ಮುಂಬೈಗೆ ರೋಹಿತ್ ಆಸರೆಯಗಿದ್ದಾರೆ. 42 ಬಾಲ್ನಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 53 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ 20 ಬಾಲ್ಗೆ 25 ರನ್ ಪೇರಿಸಿ ರೋಹಿತ್ಗೆ ಜೊತೆಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ಸ್ಕೋರ್ 14 ಓವರ್ ಅಂತ್ಯಕ್ಕೆ 88/2 ಆಗಿದೆ.
12 ಓವರ್ ಅಂತ್ಯಕ್ಕೆ 66 ರನ್ ಗಳಿಸಿರುವ ಮುಂಬೈ ಇಂಡಿಯನ್ಸ್ 2 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ 46 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ 11 ಓವರ್ಗಳ ಅಂತ್ಯಕ್ಕೆ 56 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಕಣದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್ ಇನ್ನು ಬ್ಯಾಟಿಂಗ್ ಮಾಡಲು ಬಾಕಿ ಇದ್ದಾರೆ.
ಹತ್ತನೇ ಓವರ್ನ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ 49 ರನ್ ಕಲೆಹಾಇದೆ. ರೋಹಿತ್ ಶರ್ಮ 32 ಬಾಲ್ಗೆ 36 ಹಾಗೂ ಸೂರ್ಯಕುಮಾರ್ ಯಾದವ್ 6 ಬಾಲ್ಗೆ 4 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 8 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ಎರಡನೇ ವಿಕೆಟ್ ಪತನವಾಗಿದೆ. ಇಶಾನ್ ಕಿಶನ್ 17 ಬಾಲ್ಗೆ 6 ರನ್ ಗಳಿಸಿ ಔಟ್ ಆಗಿದ್ದಾರೆ. ರವಿ ಬಿಶ್ನೊಯ್ ಬಾಲ್ಗೆ ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮುಂಬೈ ಇಂಡಿಯನ್ಸ್ 7 ಓವರ್ಗೆ 2 ವಿಕೆಟ್ ಕಳೆದುಕೊಂಡು 26 ರನ್ ದಾಖಲಿಸಿದೆ. ಮುಂಬೈ ಪರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಆಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 6 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 21 ರನ್ ದಾಖಲಿಸಿದೆ. ಪವರ್ಪ್ಲೇಯಲ್ಲಿ ಕೇವಲ 1 ಬೌಂಡರಿ ಬಂದಿದ್ದು, ರೋಹಿತ್ ಶರ್ಮಾ 13 ಹಾಗೂ ಇಶಾನ್ ಕಿಶನ್ 5 ರನ್ ಗಳಿಸಿ ಆಡುತ್ತಿದ್ದಾರೆ. ಹೆನ್ರಿಕ್ವೆಸ್ ಹಾಗೂ ಹೂಡಾ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ.
ಮೊದಲ ವಿಕೆಟ್ ಪತನದ ಬಳಿಕ ಮುಂಬೈ ಇಂಡಿಯನ್ಸ್ ನಿಧಾನ ಆಟ ಆಡುತ್ತಿದೆ. 4 ಓವರ್ ಅಂತ್ಯಕ್ಕೆ ಕೇವಲ 12 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ 11 ಬಾಲ್ 7 ಹಾಗೂ ಇಶಾನ್ ಕಿಶನ್ 9 ಬಾಲ್ಗೆ 2 ರನ್ ಗಳಿಸಿ ಆಡುತ್ತಿದ್ದಾರೆ.
3 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 1 ವಿಕೆಟ್ ಕಳೆದುಕೊಂಡು 10 ರನ್ ಗಳಿಸಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ನಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ದೀಪಕ್ ಹೂಡಾ ಎಸೆದ ಎರಡನೇ ಓವರ್ನ ಕೊನೆಯ ಬಾಲ್ನಲ್ಲಿ 5 ಬಾಲ್ಗೆ 3 ರನ್ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಔಟ್ ಆಗಿದ್ದಾರೆ. ಹೆನ್ರಿಕ್ವೆಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮುಂಬೈ 2 ಓವರ್ಗಳ ಅಂತ್ಯಕ್ಕೆ 7 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಕ್ರಿಸ್ಗೆ ಇಳಿದಿದ್ದಾರೆ. ಪಂಜಾಬ್ ಪರ ಹೆನ್ರಿಕ್ವೆಸ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ. ಮುಂಬೈ ತಂಡದ ಸ್ಕೋರ್ 1 ಓವರ್ಗೆ ವಿಕೆಟ್ ನಷ್ಟವಿಲ್ಲದೆ 4 ರನ್ ಆಗಿದೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಸ್ಪಿನ್ನರ್ ಎಮ್. ಅಶ್ವಿನ್ ಬದಲಾಗಿ ರವಿ ಬಿಶ್ನೋಯ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಜಯಂತ್ ಯಾದವ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ಮುಂಬೈ ಇಂಡಿಯನ್ಸ್ ಟಾಸ್ ಸೋತು ಬ್ಯಾಟಿಂಗ್ ಮಾಡಲಿದೆ. ಕಳೆದ ನಾಲ್ಕೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿರುವ ಮುಂಬೈ ಇಂದು ಕೂಡ ಬ್ಯಾಟಿಂಗ್ಗೆ ಇಳಿಯಲಿದೆ.
ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಲು ಪಂಜಾಬ್ ಕಿಂಗ್ಸ್ ಆಟಗಾರರು ತಯಾರಾಗುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಪಂಜಾಬ್ ತಂಡ ಕಂಡುಬಂದಿದ್ದು ಹೀಗೆ..
ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 11:04 pm, Fri, 23 April 21