ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೊ ಕಬಡ್ಡಿ ಲೀಗ್ ಸೀಸನ್ 8 (PKL Auction 2021) ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಿರೀಕ್ಷೆಯಂತೆ ಈ ಬಾರಿ ದುಬಾರಿ ಆಟಗಾರನಾಗಿ ಪ್ರದೀಪ್ ನರ್ವಾಲ್ (Pradeep narwal) ಹೊರಹೊಮ್ಮಿದ್ದಾರೆ. ಪಿಕೆಎಲ್ನ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ರನ್ನು 1 ಕೋಟಿ 65 ಲಕ್ಷ ರೂಪಾಯಿ ನೀಡಿ ಯುಪಿ ಯೋಧ ಫ್ರಾಂಚೈಸಿ ಖರೀದಿಸಿದೆ. ಇನ್ನು ಈ ಬಾರಿ ಬೆಂಗಳೂರು ಬುಲ್ಸ್ (Bengaluru Bulls) ತಂಡ ಮಾಡಿದ ದುಬಾರಿ ಬಿಡ್ ಅಂದರೆ 80 ಲಕ್ಷ ರೂ. ಅನುಭವಿ ರೈಡರ್ ಚಂದ್ರನ್ ರಂಜಿತ್ ಅವರನ್ನು ದುಬಾರಿ ಮೊತ್ತ ನೀಡಿ ಬುಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹಾಗೆಯೇ ಈ ಬಾರಿ ಬುಲ್ಸ್ ಒಟ್ಟು 10 ಹೊಸ ಆಟಗಾರರನ್ನು ಖರೀದಿಸಿರುವುದು ವಿಶೇಷ. ಅದರಂತೆ ಈ ಸಲ ಬೆಂಗಳೂರು ಬುಲ್ಸ್ ತಂಡ ಒಟ್ಟು 15 ಸದಸ್ಯರೊಂದಿಗೆ ಕಾಣಿಸಿಕೊಳ್ಳಲಿದೆ.
ಬೆಂಗಳೂರು ಬುಲ್ಸ್ ತಂಡ ಹೀಗಿದೆ:
ಪವನ್ ಕುಮಾರ್ ಸೆಹ್ರಾವತ್ – ರೈಡರ್
ಅಮಿತ್ ಶಿಯೋರನ್ – ಡಿಫೆಂಡರ್
ಮೋಹಿತ್ ಸೆಹ್ರಾವತ್ – ಡಿಫೆಂಡರ್
ಬಂಟಿ – ರೈಡರ್
ಸೌರಭ್ ನಂದಾಲ್ – ಡಿಫೆಂಡರ್
ಜಿಯೌರ್ ರೆಹಮಾನ್ – 12.2 ಲಕ್ಷ ರೂ. (ಡಿಫೆಂಡರ್)
ಡಾಂಗ್ ಜಿಯಾನ್ ಲೀ – 12.5 ಲಕ್ಷ ರೂ. (ರೈಡರ್)
ಅಬೊಲ್ಫಜಲ್ ಮಘಸೌದ್ – 13 ಲಕ್ಷ ರೂ. (ರೈಡರ್)
ಮಹೇಂದರ್ ಸಿಂಗ್ – 50 ಲಕ್ಷ ರೂ. (ಡಿಫೆಂಡರ್)
ಚಂದ್ರನ್ ರಂಜಿತ್ – 80 ಲಕ್ಷ ರೂ. (ರೈಡರ್)
ಜಿಬಿ ಮೋರೆ – 25 ಲಕ್ಷ ರೂ. (ರೈಡರ್)
ದೀಪಕ್ ನರ್ವಾಲ್ – 26.50 ಲಕ್ಷ ರೂ. (ರೈಡರ್)
ಮಯೂರ್ ಜಗನ್ನಾಥ ಕದಮ್ – 15 ಲಕ್ಷ ರೂ. (ಡಿಫೆಂಡರ್)
ಅಂಕಿತ್ – 10 ಲಕ್ಷ ರೂ. (ಡಿಫೆಂಡರ್)
ವಿಕಾಸ್ – 10 ಲಕ್ಷ ರೂ. (ಡಿಫೆಂಡರ್)
ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?
ಇದನ್ನೂ ಓದಿ: Pradeep Narwal: ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್
ಇದನ್ನೂ ಓದಿ: ವಿಶ್ವದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ