ಪ್ರೋ ಕಬಡ್ಡಿ ಲೀಗ್ನ 83ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈಗಾಗಲೇ 15 ಪಂದ್ಯಗಳನ್ನು ಆಡಿರುವ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ತಮಿಳ್ ತಲೈವಾಸ್ ತಂಡವು 10ನೇ ಸ್ಥಾನದಲ್ಲಿದೆ. ಇದಾಗ್ಯೂ ತಮಿಳ್ ತಲೈವಾಸ್ ತಂಡ ಆಡಿರುವುದು 13 ಪಂದ್ಯಗಳನ್ನು ಮಾತ್ರ. ಅಂದರೆ ಇನ್ನೂ ಕೂಡ 9 ಪಂದ್ಯಗಳಿದ್ದು, ಹೀಗಾಗಿ ಬೆಂಗಳೂರು ಬುಲ್ಸ್ ವಿರುದ್ದ ಗೆಲ್ಲುವ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.
ಏಕೆಂದರೆ ಮೊದಲಾರ್ಧದಲ್ಲಿ ನಡೆದ ಬೆಂಗಳೂರು ಬುಲ್ಸ್ ವಿರುದ್ದದ ಪಂದ್ಯದಲ್ಲಿ ತಮಿಳ್ ತಲೈವಾಸ್ ಕಠಿಣ ಪೈಪೋಟಿ ನೀಡಿತ್ತು. ಇದಾಗ್ಯೂ ಅಂತಿಮವಾಗಿ ಬೆಂಗಳೂರು ಬುಲ್ಸ್ 8 ಪಾಯಿಂಟ್ಗಳಿಂದ (30-38) ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಪ್ರೋ ಕಬಡ್ಡಿ ಲೀಗ್ನ ಒಟ್ಟಾರೆ ಅಂಕಿ ಅಂಶಗಳನ್ನು ನೋಡುವುದಾದರೆ ಉಭಯ ತಂಡಗಳು ಇದುವರೆಗೆ 9 ಬಾರಿ ಮುಖಾಮುಖಿಯಾಗಿದೆ.
ಈ ವೇಳೆ 8 ಬಾರಿ ಜಯ ಸಾಧಿಸುವ ಮೂಲಕ ಬೆಂಗಳೂರು ಬುಲ್ಸ್ ತಂಡವು ತಮಿಳ್ ತಲೈವಾಸ್ ವಿರುದ್ದ ಪಾರುಪತ್ಯ ಮೆರೆದಿದೆ. ಇನ್ನು ಉಭಯ ತಂಡಗಳ ನಡುವಣ ಮುಖಾಮುಖಿಯಲ್ಲಿ ಮೂಡಿಬಂದ ಗರಿಷ್ಠ ಪಾಯಿಂಟ್ 48. ಇದನ್ನು ಕಲೆಹಾಕಿದ್ದು ಬೆಂಗಳೂರು ಬುಲ್ಸ್ ಎಂಬುದು ವಿಶೇಷ. ಹಾಗೆಯೇ ತಮಿಳ್ ತಲೈವಾಸ್ ಬೆಂಗಳೂರು ಬುಲ್ಸ್ ವಿರುದ್ದ ಕಲೆಹಾಕಿದ ಅತೀ ಹೆಚ್ಚು ಪಾಯಿಂಟ್ ಅಂದರೆ 37. ಅಂದರೆ ಕಳೆದ 9 ಪಂದ್ಯಗಳಲ್ಲಿ ತಮಿಳ್ ತಲೈವಾಸ್ಗೆ ಬೆಂಗಳುರು ಬುಲ್ಸ್ ವಿರುದ್ದ 40 ಅಥವಾ ಅದಕ್ಕಿಂತ ಹೆಚ್ಚಿನ ಪಾಯಿಂಟ್ ಕಲೆಹಾಕಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
ಅಷ್ಟೇ ಅಲ್ಲದೆ ತಮಿಳ್ ತಲೈವಾಸ್, ಬೆಂಗಳೂರು ಬುಲ್ಸ್ ವಿರುದ್ದ ಇದುವರೆಗೆ ಗೆದ್ದಿರುವುದು ಕೇವಲ 1 ಪಂದ್ಯದಲ್ಲಿ ಮಾತ್ರ. ಇಲ್ಲಿ ಒಟ್ಟಾರೆ ಅಂಕಿ ಅಂಶಗಳನ್ನು ನೋಡುವುದಾದರೆ ಬೆಂಗಳೂರು ಬುಲ್ಸ್ ತಂಡವು ತಮಿಳ್ ತಲೈವಾಸ್ ವಿರುದ್ದ ಎಲ್ಲಾ ಸೀಸನ್ಗಳಲ್ಲೂ ಮೇಲುಗೈ ಸಾಧಿಸುತ್ತಾ ಬಂದಿದೆ. ಅದು ಈ ಬಾರಿ ಮೊದಲಾರ್ಧದ ಪಂದ್ಯದಲ್ಲೂ ಮುಂದುವರೆದಿದೆ. ಹೀಗಾಗಿ ತಮಿಳ್ ತಲೈವಾಸ್ಗಿಂತ ಎಲ್ಲಾ ರೀತಿಯಲ್ಲೂ ಬೆಂಗಳೂರು ಬುಲ್ಸ್ ತಂಡವು ಬಲಿಷ್ಠವಾಗಿದೆ ಎಂದೇ ಹೇಳಬಹುದು.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(Pro Kabaddi 2022: Bengaluru Bulls take on Tamil Thalaivas)