Pro kabaddi 2021-22: ಬೆಂಗಳೂರು ಬುಲ್ಸ್ಗೆ ಸೋಲುಣಿಸಿದ ಪಟ್ನಾ ಪೈರೇಟ್ಸ್
bengaluru bulls vs patna pirates: ಪವನ್ ಕುಮಾರ್ ಶೆಹ್ರಾವತ್ ಮೊದಲಾರ್ಧದಲ್ಲಿ 8 ನಿಮಿಷಕ್ಕೂ ಅಧಿಕ ಸಮಯ ಬೆಂಚ್ ಕಾಯಬೇಕಾಯಿತು. ಅಷ್ಟರಲ್ಲಾಗಲೇ ಮುನ್ನಡೆ ಸಾಧಿಸಿದ ಪಟ್ನಾ ಪೈರೇಟ್ಸ್ ತಂಡವು ಮೊದಲಾರ್ಧದಲ್ಲಿ 20 ಪಾಯಿಂಟ್ ಗಳಿಸಿತು.
ಪ್ರೋ ಕಬಡ್ಡಿ ಲೀಗ್ನ 59ನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ದ ಬೆಂಗಳೂರು ಬುಲ್ಸ್ ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಬೆಂಗಳೂರು ಬುಲ್ಸ್ ಮೊದಲಾರ್ಧವನ್ನು ಪೂರ್ಣಗೊಳಿಸಿದೆ. ಇದಾಗ್ಯೂ ಆಡಿರುವ 11 ಪಂದ್ಯಗಳಲ್ಲಿ 7 ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಬುಲ್ಸ್ ಅಗ್ರಸ್ಥಾನದಲ್ಲಿದೆ. ಇನ್ನು ಭಾರೀ ಕುತೂಹಲಕ್ಕೆ ಕಾರಣವಾಗಿ ಈ ಪಂದ್ಯದಲ್ಲಿ ಆರಂಭದಲ್ಲಿ ಬೆಂಗಳೂರು ಬುಲ್ಸ್ ಮೇಲುಗೈ ಸಾಧಿಸಿತ್ತು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಪಟ್ನಾ ಪೈರೇಟ್ಸ್ ಅತ್ಯುತ್ತಮ ಡಿಫೆನ್ಸ್ ಮೂಲಕ ಗಮನ ಸೆಳೆಯಿತು. ಇತ್ತ ಬೆಂಗಳೂರು ಬುಲ್ಸ್ ಸ್ಟಾರ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಆರಂಭದಲ್ಲೇ ಔಟ್ ಆಗಿದ್ದು ಬೆಂಗಳೂರು ತಂಡಕ್ಕೆ ಮುಳುವಾಯಿತು.
ಏಕೆಂದರೆ ಔಟ್ ಆಗಿದ್ದ ಪವನ್ ಕುಮಾರ್ ಶೆಹ್ರಾವತ್ ಮೊದಲಾರ್ಧದಲ್ಲಿ 8 ನಿಮಿಷಕ್ಕೂ ಅಧಿಕ ಸಮಯ ಬೆಂಚ್ ಕಾಯಬೇಕಾಯಿತು. ಅಷ್ಟರಲ್ಲಾಗಲೇ ಮುನ್ನಡೆ ಸಾಧಿಸಿದ ಪಟ್ನಾ ಪೈರೇಟ್ಸ್ ತಂಡವು ಮೊದಲಾರ್ಧದಲ್ಲಿ 20 ಪಾಯಿಂಟ್ ಗಳಿಸಿತು. ಆದರೆ ಬೆಂಗಳೂರು ಬುಲ್ಸ್ ಕಲೆಹಾಕಿದ್ದು ಕೇವಲ 16 ಪಾಯಿಂಟ್ ಮಾತ್ರ.
4 ಪಾಯಿಂಟ್ಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಪಟ್ನಾ ಪೈರೇಟ್ಸ್ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯಿತು. ಅದರಂತೆ ಪಟ್ನಾ ಪೈರೇಟ್ಸ್ ತಂಡವು ಬೆಂಗಳೂರು ಬುಲ್ಸ್ ಅನ್ನು ಆಲೌಟ್ ಮಾಡುವ ಮೂಲಕ 28-21 ಅಂತರವನ್ನು ಪಡೆದುಕೊಂಡರು. ಅಷ್ಟೇ ಅಲ್ಲದೆ ದ್ವಿತಿಯಾರ್ಧದಲ್ಲೂ ಅತ್ಯುತ್ತಮ ಡಿಫೆನ್ಸ್ ಆಟವನ್ನು ಪ್ರದರ್ಶಿಸಿದ ಪಟ್ನಾ ಪೈರೇಟ್ಸ್ ಟ್ಯಾಕಲ್ ಪಾಯಿಂಟ್ಗಳ ಮೂಲಕ ಗಮನ ಸೆಳೆದರು. ಈ ಮೂಲಕ ಪವನ್ ಕುಮಾರ್ ಶೆಹ್ರಾವತ್ ಅವರನ್ನು ಕಟ್ಟಿಹಾಕಿದ ಪಟ್ನಾ ಪೈರೇಟ್ಸ್ ಬಿಟ್ಟು ಕೊಟ್ಟಿದ್ದು ಕೇವಲ 10 ಪಾಯಿಂಟ್. ಅದರಲ್ಲಿ 5 ಪಾಯಿಂಟ್ ಬಂದಿದ್ದು ಬೋನಸ್ ಮೂಲಕ ಎಂಬುದು ವಿಶೇಷ.
ಅಂತಿಮವಾಗಿ 38-31 ಪಾಯಿಂಟ್ಗಳೊಂದಿಗೆ ಪಟ್ನಾ ಪೈರೇಟ್ಸ್ ತಂಡವು 7 ಪಾಯಿಂಟ್ಗಳ ಅಂತರದಿಂದ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಯುವ ಬೌಲರ್..!
ಇದನ್ನೂ ಓದಿ: ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!