RCB vs CSK ಪಂದ್ಯಕ್ಕೆ ಹೀಗಿರಲಿದೆ ಬೆಂಗಳೂರಿನ ಹವಾಮಾನ; ಇಲ್ಲಿದೆ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟ್ಸಮನ್​ಗಳಿಗೆ ಸಹಕಾರಿ ಆಗಿದೆ. ಹೀಗಾಗಿ ದೊಡ್ಡ ಸ್ಕೋರ್ ನಿರೀಕ್ಷೆ ಮಾಡಬಹುದು. ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

RCB vs CSK ಪಂದ್ಯಕ್ಕೆ ಹೀಗಿರಲಿದೆ ಬೆಂಗಳೂರಿನ ಹವಾಮಾನ; ಇಲ್ಲಿದೆ ರಿಪೋರ್ಟ್​
ವಿರಾಟ್-ಡುಪ್ಲೆಸಿ

Updated on: Apr 17, 2023 | 12:48 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ ಪಂದ್ಯ ಯಾವಾಗಲೂ ಹೈವೋಲ್ಟೇಜ್​ನಿಂದ ಕೂಡಿರುತ್ತದೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಆರ್​ಸಿಬಿಗೆ ಹಾಗೂ ಎಂ.ಎಸ್​. ಧೋನಿ ಅಭಿಮಾನಿಗಳು ಸಿಎಸ್​ಕೆಗೆ ಬೆಂಬಲ ಸೂಚಿಸುತ್ತಾರೆ. ಇಂದು (ಏಪ್ರಿಲ್ 17) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ (RCB) ಹಾಗೂ ಸಿಎಸ್​ಕೆ ಸೆಣೆಸಲಿವೆ. ಆರ್​ಸಿಬಿಗೆ ಹೋಂ ಪಿಚ್ ಆಗಿರುವುದರಿಂದ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿದೆ. ಇನ್ನು, ಹೋಂ ಗ್ರೌಂಡ್​ನಲ್ಲಿ ಬೆಂಗಳೂರು ತಂಡವನ್ನು ಸೋಲಿಸಬೇಕು ಎಂಬ ನಿರೀಕ್ಷೆಯಲ್ಲಿ ಚೆನ್ನೈ ತಂಡ ಇದೆ. ಅಂತಿಮವಾಗಿ ಯಾರಿಗೆ ಗೆಲುವಿನ ಮಾಲೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಪಿಚ್ ರಿಪೋರ್ಟ್

ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟ್ಸಮನ್​ಗಳಿಗೆ ಸಹಕಾರಿ ಆಗಿದೆ. ಹೀಗಾಗಿ ದೊಡ್ಡ ಸ್ಕೋರ್ ನಿರೀಕ್ಷೆ ಮಾಡಬಹುದು. ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಇಂದಿನ ಪಂದ್ಯದಲ್ಲಿ ಟಾಸ್ ಗೆಲ್ಲೋದು ಕೂಡ ತುಂಬಾನೇ ಮುಖ್ಯ.

ಇದನ್ನೂ ಓದಿ: IPL 2023: RCB ಪಾಲಿಗೆ ಕಂಟಕವಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ಸ್..!

ಹವಾಮಾನ ಹೇಗಿರಲಿದೆ?

ಬೆಂಗಳೂರಿನಲ್ಲಿ ನಡೆದ ಸಾಕಷ್ಟು ಐಪಿಎಲ್ ಮ್ಯಾಚ್​​ಗೆ ವರುಣ ಅಡ್ಡಿ ಮಾಡಿದ್ದಾನೆ. ಆದರೆ, ಈ ವರ್ಷ ಬೆಂಗಳೂರಿನಲ್ಲಿ ನಡೆದ ಪಂದ್ಯಗಳಿಗೆ ಮಳೆ ಅಡ್ಡಿ ಆಗಿಲ್ಲ. ಇಂದಿನ ಪಂದ್ಯಕ್ಕೂ ಮಳೆಯ ಅಡ್ಡಿ ಉಂಟಾಗುವುದಿಲ್ಲ. ಹವಾಮಾನ ವರದಿ ಪ್ರಕಾರ ಇಂದು ಆಗಸ ಸ್ವಚ್ಛವಾಗಿರಲಿದೆ. 7 ಗಂಟೆ ಸುಮಾರಿಗೆ ಬೆಂಗಳೂರಿನ ಟೆಂಪ್ರೇಚರ್ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ರಾತ್ರಿ 11ರ ವೇಳೆಗೆ 26 ಡಿಗ್ರಿಗೆ ಇಳಿಯಲಿದೆ.

ಅಂಕಿ ಅಂಶ

ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಐಪಿಎಲ್​ನಲ್ಲಿ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್​ಸಿಬಿ ಗೆದ್ದಿರುವುದು ಕೇವಲ 10 ಬಾರಿ ಮಾತ್ರ. 19 ಬಾರಿ ಸಿಎಸ್​ಕೆ ತಂಡ ಗೆದ್ದಿದೆ. ಇನ್ನು ಒಂದು ಪಂದ್ಯ ರದ್ದಾಗಿತ್ತು. ಈ ಸೀಸನ್​ನಲ್ಲಿ ಸಿಎಸ್​ಕೆ ಹಾಗೂ ಆರ್​ಸಿಬಿ ತಲಾ 4 ಪಂದ್ಯಗಳನ್ನಾಡಿ ಎರಡು ಗೆದ್ದಿವೆ. ಈ ಮೂಲಕ ನಾಲ್ಕು ಅಂಕ ಗಳಿಸಿ ಅನುಕ್ರಮವಾಗಿ ಆರು ಹಾಗೂ ಏಳನೇ ಸ್ಥಾನದಲ್ಲಿವೆ.

ಎಲ್ಲಿ ವೀಕ್ಷಿಸಬಹುದು?

ಟಾಸ್ ರಾತ್ರಿ 7 ಗಂಟೆಗೆ ನಡೆಯಲಿದೆ. ಪಂದ್ಯ 7.30ಕ್ಕೆ ಆರಂಭ ಆಗಲಿದೆ. ಜಿಯೋ ಸಿನಿಮಾಸ್ ಒಟಿಟಿ ಹಾಗೂ ಸ್ಟಾರ್ಸ್ ಸ್ಪೋರ್ಟ್ಸ್​ನಲ್ಲಿ ಪಂದ್ಯ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:01 pm, Mon, 17 April 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us