AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs GT IPL 2025: ತವರಿನ ಮೊದಲ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ; ಪ್ಲೇಯಿಂಗ್ 11 ಹೀಗಿದೆ

RCB vs GT IPL 2025 Match 14: ಐಪಿಎಲ್ 2025ರ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ತಮ್ಮ ಆಡುವ ಹನ್ನೊಂದರ ಪಟ್ಟಿಯನ್ನು ಪ್ರಕಟಿಸಿದ್ದು, ಗುಜರಾತ್ ತಂಡದಲ್ಲಿ ಒಂದು ಬದಲಾವಣೆ ಕಂಡುಬಂದಿದೆ.

RCB vs GT IPL 2025: ತವರಿನ ಮೊದಲ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ; ಪ್ಲೇಯಿಂಗ್ 11 ಹೀಗಿದೆ
Rcb Vs Gt Toss
Follow us
ಪೃಥ್ವಿಶಂಕರ
|

Updated on:Apr 02, 2025 | 7:25 PM

ಇಂದು ಐಪಿಎಲ್ 2025 ರ (IPL 2025) 14 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ (RCB vs GT) ಮುಖಾಮುಖಿಯಾಗಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸೀಸನ್​ನ ಮೊದಲ ಪಂದ್ಯ ನಡೆಯುತ್ತಿದ್ದು, ತವರಿನ ಹೊರಗೆ ಸತತ ಎರಡು ಪಂದ್ಯಗಳನ್ನು ಆಡಿದ್ದ ಆರ್​ಸಿಬಿ (RCB) ಇದೀಗ ತವರಿನಲ್ಲಿ ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಹೊಸ ನಾಯಕ ರಜತ್ ಪಟಿದಾರ್ ನಾಯಕತ್ವದಲ್ಲಿ, ಬೆಂಗಳೂರು ತಂಡವು ಸತತ ಎರಡು ಗೆಲುವುಗಳೊಂದಿಗೆ ಈ ಆವೃತ್ತಿಯನ್ನು ಅದ್ಭುತವಾಗಿ ಆರಂಭಿಸಿದೆ. ಇತ್ತ ಶುಭ್​ಮನ್ ಗಿಲ್ ನೇತೃತ್ವದ ಗುಜರಾತ್ ತಂಡ ಮೊದಲ ಪಂದ್ಯದಲ್ಲಿ ಸೋತರೂ ಎರಡನೇ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಗುಜರಾತ್

ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರರ್ಥ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಗುಜರಾತ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಈ ಪಂದ್ಯದಲ್ಲಿ ಕಗಿಸೊ ರಬಾಡ ಬದಲಿಗೆ ಅರ್ಷದ್ ಖಾನ್‌ಗೆ ನಾಯಕ ಶುಭ್​ಮನ್ ಗಿಲ್ ಅವಕಾಶ ನೀಡಿದ್ದಾರೆ. ಇತ್ತ ತವರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ಆರ್​ಸಿಬಿ, ಈ ಮುಂಚೆ ನಿರೀಕ್ಷಿಸಿದಂತೆ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಕಣಕ್ಕಿಳಿಯುತ್ತಿದೆ.

ಎರಡೂ ತಂಡಗಳ ಪ್ಲೇಯಿಂಗ್-11

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಸುಯಾಶ್ ಶರ್ಮಾ, ರಸಿಖ್ ಸಲಾಂ, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಸ್ವಪ್ನಿಲ್ ಸಿಂಗ್.

ಗುಜರಾತ್ ಟೈಟನ್ಸ್: ಸಾಯಿ ಸುದರ್ಶನ್, ಶುಭ​​ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ.

ಇಂಪ್ಯಾಕ್ಟ್ ಪ್ಲೇಯರ್ಸ್​: ಶೆರ್ಫೇನ್ ರುದರ್ಫೋರ್ಡ್, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ವಾಷಿಂಗ್ಟನ್ ಸುಂದರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 pm, Wed, 2 April 25