AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs IRE: ಸೊನ್ನೆಗೆ ಔಟ್; ವೈಭವ್ ಪಾದಾರ್ಪಣೆಗೆ ದಾರಿ ಮಾಡಿಕೊಟ್ಟ ಸಂಜು ಸ್ಯಾಮ್ಸನ್

Sanju Samson's Ireland T20 Nightmare: ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಜು ಸ್ಯಾಮ್ಸನ್‌ಗೆ ಐರ್ಲೆಂಡ್ ಪ್ರವಾಸ ದುಃಸ್ವಪ್ನವಾಗಿದೆ. ಸರಣಿಯ ಎರಡೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬರಾದ ಜೈ ಮುಂಧ್ರಾಗೆ ಎರಡು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಈ ವೈಫಲ್ಯದಿಂದಾಗಿ ಸಂಜುಗೆ ಟಿ20 ತಂಡದ ಬಾಗಿಲು ಮುಚ್ಚುವ ಸಾಧ್ಯತೆಯಿದೆ. ಮುಂಬರುವ ಇಂಗ್ಲೆಂಡ್ ಸರಣಿಗೆ ವೈಭವ್ ಸೂರ್ಯವಂಶಿ ಆಯ್ಕೆಯಾಗುವ ಅವಕಾಶ ಹೆಚ್ಚಿದೆ.

ಪೃಥ್ವಿಶಂಕರ
|

Updated on: Jun 28, 2026 | 8:42 PM

Share
ಭಾರತಕ್ಕೆ ಸತತ ಎರಡನೇ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್​ಗೆ ಐರ್ಲೆಂಡ್ ಪ್ರವಾಸ ದುಃಸ್ವಪ್ನವಾಗಿ ಕಾಡಿದೆ. ಅತ್ಯಂತ ಅನುಭವಿ ಆಟಗಾರನಾಗಿ ತಂಡದಲ್ಲಿದ್ದ ಸಂಜು ಸ್ಯಾಮ್ಸನ್, ಈ ಸರಣಿಯಲ್ಲಿ ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬರಲಿಲ್ಲ. ಈ ಮೂಲಕ ತಂಡದಿಂದ ಹೊರಹೋಗುವ ದಾರಿಯನ್ನು ತಾವೇ ನೋಡಿಕೊಂಡಿದ್ದಾರೆ ಎನ್ನಬಹುದು (PC-PTI).

1 / 5
ಐರ್ಲೆಂಡ್​ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ನಡೆದ ಸರಣಿಯ ಎರಡೂ ಪಂದ್ಯಗಳಲ್ಲೂ ಸಂಜು ಸ್ಯಾಮ್ಸನ್ ಆಟ ಅತ್ಯಂತ ಕಳಪೆಯಾಗಿತ್ತು. ಮೊದಲ ಪಂದ್ಯದಲ್ಲಿ 4 ಎಸೆತಗಳನ್ನು ಎದುರಿಸಿ ಕೇವಲ 5 ರನ್ ಬಾರಿಸಿ ಭಾರತ ಮೂಲದ ಬೌಲರ್ ಜೈ ಮುಂಧ್ರಾಗೆ ವಿಕೆಟ್ ಒಪ್ಪಿಸಿದ್ದ ಸಂಜು, ಎರಡನೇ ಪಂದ್ಯದಲ್ಲೂ ಅವರಿಗೆ ಬಲಿಯಾದರು. ಈ ಪಂದ್ಯದಲ್ಲಿ ಸಂಜುಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ (PC-PTI).

2 / 5
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಅಪಾರ ಅನುಭವವಿರುವ ಸಂಜು, ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಈಗಷ್ಟೇ ಕಾಲಿಟ್ಟಿರುವ ಜೈ ಮುಂಧ್ರಾಗೆ ಎರಡು ಪಂದ್ಯಗಳಲ್ಲೂ ಬಲಿಯಾಗಿದ್ದು. ವಾಸ್ತವವಾಗಿ ಐಪಿಎಲ್‌ನಲ್ಲೂ ಸಂಜು ಅವರ ಪ್ರದರ್ಶನ ಸ್ಥಿರವಾಗಿರಲಿಲ್ಲ. ಈ ಸೀಸನ್​ನಲ್ಲಿ ಶತಕ ಬಾರಿಸಿದರಾದರೂ ಉಳಿದ ಪಂದ್ಯಗಳಲ್ಲಿ ಅವರ ಆಟ ಅಷ್ಟಕಷ್ಟೆ ಆಗಿತ್ತು (PC-PTI).

3 / 5
ಐರ್ಲೆಂಡ್‌ನಂತಹ ದುರ್ಬಲ ತಂಡದ ವಿರುದ್ಧವೇ ಎಡವಿದ ಸಂಜು ಸ್ಯಾಮ್ಸನ್​ಗೆ ಟಿ20 ತಂಡದ ಬಾಗಿಲು ಭಾಗಶಃ ಮುಚ್ಚಿದಂತೆ ಕಾಣುತ್ತಿದೆ. ಸಂಜು ಟಿ20 ವಿಶ್ವಕಪ್‌ನಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಸಲುವಾಗಿ ಅವರನ್ನು ಐರ್ಲೆಂಡ್ ಸರಣಿಯಲ್ಲೂ ಮುಂದುವರೆಸಲಾಯಿತು. ಆದರೆ ಐರ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿರುವ ಸಂಜು ತಂಡದಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ (PC-PTI).

4 / 5
ಈ ಐರ್ಲೆಂಡ್ ಪ್ರವಾಸ ಮುಗಿದ ಬಳಿಕ ಟೀಂ ಇಂಡಿಯಾ, ಇಂಗ್ಲೆಂಡ್​ಗೆ ತೆರಳಲಿದೆ. ಅಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿಯನ್ನು ಆಡಿಸುವ ಸಾಧ್ಯತೆಗಳು ಹೆಚ್ಚಿವೆ. ಸಂಜು ವಿಫಲರಾಗಿರುವ ಕಾರಣ, ವೈಭವ್​ರನ್ನು ತಂಡಕ್ಕೆ ಆಯ್ಕೆ ಮಾಡುವುದಕ್ಕೂ ಆಯ್ಕೆ ಮಂಡಳಿಗೆ ಹೆಚ್ಚಿನ ಒತ್ತಡವಿರುವುದಿಲ್ಲ (PC-PTI).

5 / 5
Follow Us
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ

ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ

ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ

ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ

ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್

ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು

ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!

RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​

ಸಿಎಂ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ

ಕಾಂಗ್ರೆಸ್​​ ಸೇರ್ತಾರ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ?