ಕ್ರಿಕೆಟ್ ಮೈದಾನಕ್ಕೆ ಎಂಟ್ರಿಕೊಟ್ಟ ಬುಸ್ ಬುಸ್ ನಾಗರಾಜ
ಹೈದರಾಬಾದ್: ನಿನ್ನೆ ರಣಜಿ ಟ್ರೋಫಿಯ ಮೊದಲ ದಿನದ ಪಂದ್ಯ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೀತಿತ್ತು. ಆಂಧ್ರ ಪ್ರದೇಶ ಮತ್ತು ವಿದರ್ಭ ತಂಡಗಳ ನಡುವಿನ ಪಂದ್ಯದಲ್ಲಿ ಇದ್ದಕ್ಕಿದ್ದಂತೆ ಮೈದಾನಕ್ಕೆ ವಿಶೇಷ ಅತಿಥಿ ಎಂಟ್ರಿಯಾಗಿತ್ತು. ಅಯ್ಯಯ್ಯೋ.. ಮೈದಾನಕ್ಕೆ ಎಂಟ್ರಿಕೊಡ್ತು ಬುಸ್ ಬುಸ್: ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ. ಮೈದಾನದಲ್ಲಿ ಹಾವನ್ನು ಕಂಡ ಆಟಗಾರರು ಒಂದು ಕ್ಷಣ ದಿಗ್ಬ್ರಮೆಗೊಳಗಾಗಿದ್ರು. ಹಾವು ಮೈದಾನಕ್ಕೆ ಬಂದ ವೀಡಿಯೋವನ್ನ ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ವಿಶೇಷ ಅತಿಥಿಯೊಬ್ರು ಮೈದಾನಕ್ಕೆ ಎಂಟ್ರಿಕೊಟ್ಟಿದ್ದಾರೆ ಎಂದು ಬರೆದುಕೊಂಡಿರುವ […]
ಹೈದರಾಬಾದ್: ನಿನ್ನೆ ರಣಜಿ ಟ್ರೋಫಿಯ ಮೊದಲ ದಿನದ ಪಂದ್ಯ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೀತಿತ್ತು. ಆಂಧ್ರ ಪ್ರದೇಶ ಮತ್ತು ವಿದರ್ಭ ತಂಡಗಳ ನಡುವಿನ ಪಂದ್ಯದಲ್ಲಿ ಇದ್ದಕ್ಕಿದ್ದಂತೆ ಮೈದಾನಕ್ಕೆ ವಿಶೇಷ ಅತಿಥಿ ಎಂಟ್ರಿಯಾಗಿತ್ತು.
ಅಯ್ಯಯ್ಯೋ.. ಮೈದಾನಕ್ಕೆ ಎಂಟ್ರಿಕೊಡ್ತು ಬುಸ್ ಬುಸ್: ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ. ಮೈದಾನದಲ್ಲಿ ಹಾವನ್ನು ಕಂಡ ಆಟಗಾರರು ಒಂದು ಕ್ಷಣ ದಿಗ್ಬ್ರಮೆಗೊಳಗಾಗಿದ್ರು. ಹಾವು ಮೈದಾನಕ್ಕೆ ಬಂದ ವೀಡಿಯೋವನ್ನ ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ವಿಶೇಷ ಅತಿಥಿಯೊಬ್ರು ಮೈದಾನಕ್ಕೆ ಎಂಟ್ರಿಕೊಟ್ಟಿದ್ದಾರೆ ಎಂದು ಬರೆದುಕೊಂಡಿರುವ ಬಿಸಿಸಿಐ, ವೀಡಿಯೋವನ್ನ ಶೇರ್ ಮಾಡಿದೆ.
ಇನ್ನು ಪಂದ್ಯದ ವೇಳೆ ಆಕಸ್ಮಿಕವಾಗಿ ಹಾವು ಎಂಟ್ರಿಕೊಟ್ಟಿದ್ರಿಂದ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಕೊನೆಗೆ ಮೈದಾನದ ಸಿಬ್ಬಂದಿ ಹಾವನ್ನ ಹೊರಗಟ್ಟುವಲ್ಲಿ ಯಶಸ್ವಿಯಾದ್ರು. ಮೈದಾನಕ್ಕೆ ಹೀಗೆ ವಿಶೇಷ ಅತಿಥಿಗಳು ಎಂಟ್ರಿಕೊಡ್ತಿರೋದು ಇದೇ ಮೊದಲೇನಲ್ಲ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಜೇನು ನೊಣಗಳು ಎಂಟ್ರಿಕೊಟ್ಟು, ಪಂದ್ಯವನ್ನೇ ಕೆಲಕಾಲ ನಿಲ್ಲಿಸುವಂತೆ ಮಾಡಿದ್ವು. ಜೇನುನೊಣಗಳಿಂದ ಪಾರಾಗಲು ಆಟಗಾರರ ಮೈದಾನದಲ್ಲಿ ಮಾಡಿದ ಸರ್ಕಸ್ ಒಂದೆರಡಲ್ಲಾ.
ಇನ್ನು ಕ್ರಿಕೆಟ್ ಮೈದಾನಕ್ಕೆ ನಾಯಿ, ಕೋತಿ, ಹಂದಿ, ಬೆಕ್ಕು ಹೀಗೆ ಅನೇಕ ಪ್ರಾಣಿಗಳು ಎಂಟ್ರಿಕೊಟ್ಟಿವೆ. ಮೈದಾನಕ್ಕೆ ಹೀಗೆ ಇದ್ದಕ್ಕಿದ್ದಂತೆ ಬುಸ್ ಬುಸ್ ನಾಗರಾಜ ಎಂಟ್ರಿಕೊಟ್ಟಿದ್ದನ್ನ ಕಂಡ ಆಟಗಾರರು ಒಂದು ಕ್ಷಣ ದಂಗಾಗಿ ಹೋಗಿದ್ರು.
Going by this start to the #RanjiTrophy, we can expect a lot of twists and turns this season ?
Who’s your pick to be crowned champions?#PlayBold https://t.co/SJZzSOXXmD
— Royal Challengers Bangalore (@RCBTweets) December 9, 2019