Updated on:Oct 12, 2022 | 2:57 PM
ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಸೂಪರ್-12 ಪಂದ್ಯಗಳು ಅಕ್ಟೋಬರ್ 22 ರಿಂದ ನಡೆಯಲಿದೆ. ಈ ಬಾರಿ, ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ T20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬೌಲಿಂಗ್ ವಿಷಯದಲ್ಲಿ, ಈ ಬಾರಿ ಟೀಂ ಇಂಡಿಯಾ ಸ್ವಲ್ಪ ದುರ್ಬಲವಾಗಿದ್ದು, ತಂಡಕ್ಕೆ ಯುವ ಬೌಲರ್‌ಗಳೇ ಆಸರೆಯಾಗಿದ್ದಾರೆ. ಟೀಂ ಇಂಡಿಯಾ ಮಾತ್ರವಲ್ಲದೆ ಇತರೆ ತಂಡಗಳು ಕೂಡ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿವೆ. ಅಂತಹ ಕೆಲವು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.
2007 ರಲ್ಲಿ ಆಡಿದ ಟಿ20 ವಿಶ್ವಕಪ್‌ನಲ್ಲಿ ಭಾರತ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಮಾತ್ರ ಪಾಕಿಸ್ತಾನದ ಲೆಜೆಂಡರಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಪಾಲಾಗಿತ್ತು. ಅಫ್ರಿದಿ 91 ರನ್‌ಗಳೊಂದಿಗೆ ವಿಶ್ವಕಪ್‌ನಲ್ಲಿ ಅತ್ಯಧಿಕ 12 ವಿಕೆಟ್‌ಗಳನ್ನು ಪಡೆದಿದ್ದರು.
2009 ರ ಸೀಸನ್ನಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆದರೆ ಶ್ರೀಲಂಕಾದ ಬಲಿಷ್ಠ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು. ಫೈನಲ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ದಿಲ್ಶಾನ್, ಪಂದ್ಯಾವಳಿಯಲ್ಲಿ ಗರಿಷ್ಠ 317 ರನ್ ಗಳಿಸಿ್ದರು. ದಿಲ್ಶಾನ್ ಮಾಡಿದ್ದ ಈ ದಾಖಲೆಯನ್ನು 2014 ರಲ್ಲಿ ಕೊಹ್ಲಿ ಮುರಿದಿದ್ದರು.
2010ರಲ್ಲಿ ಇಂಗ್ಲೆಂಡ್‌ನ ದಿಗ್ಗಜ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾಗಿದ್ದು. ಅಲ್ಲದೆ ಚಾಂಪಿಯನ್ ಆದ ತಂಡದಿಂದ ಪಂದ್ಯಾವಳಿಯ ಆಟಗಾರನನ್ನು ಆಯ್ಕೆ ಮಾಡಿದ್ದು ಇದೇ ಮೊದಲು. ಅಂತಿಮ ಪಂದ್ಯದಲ್ಲಿ ಪೀಟರ್ಸನ್ 47 ರನ್‌ಗಳೊಂದಿಗೆ ಒಟ್ಟು 248 ರನ್ ಗಳಿಸಿದ್ದರು.
ವಾರ್ನರ್‌ಗಿಂತ ಮೊದಲು ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು. 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮಾಟ್ಸನ್,249 ರನ್ ಬಾರಿಸುವುದರೊಂದಿಗೆ 11 ವಿಕೆಟ್ ಸಹ ಪಡೆದಿದ್ದರು.
ಆ ಬಳಿಕ 2016ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದ್ದರು. ಈ ಆವೃತ್ತಿಯಲ್ಲಿ ಕೊಹ್ಲಿ 273 ರನ್ ಗಳಿಸುವುದರೊಂದಿಗೆ ಒಂದು ವಿಕೆಟ್ ಸಹ ಪಡೆದಿದ್ದರು. ಇದು ಅವರ ಸತತ ಎರಡನೇ ಪ್ರಶಸ್ತಿಯಾಗಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
2014 ರ ವಿಶ್ವಕಪ್‌ನಲ್ಲಿ ಕೊಹ್ಲಿ ಮೊದಲ ಬಾರಿಗೆ ಟೂರ್ನಿಯ ಆಟಗಾರ ಪ್ರಶಸ್ತಿ ಗೆದ್ದಿದ್ದರು. ಬಾಂಗ್ಲಾದೇಶದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ, ಕೊಹ್ಲಿ ಅತ್ಯಧಿಕ 319 ರನ್ ಗಳಿಸಿದರು. ಇದು ಒಂದೇ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.
ಕಳೆದ ವರ್ಷ ಅಂದರೆ 2021ರಲ್ಲಿ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯದ ಲೆಜೆಂಡರಿ ಓಪನರ್ ಡೇವಿಡ್ ವಾರ್ನರ್ ಈ ಪ್ರಶಸ್ತಿ ಗೆದ್ದಿದ್ದರು. ಈ ಪಂದ್ಯಾವಳಿಯಲ್ಲಿ ಅತ್ಯಧಿಕ 289 ರನ್ ಬಾರಿಸಿದ್ದ ವಾರ್ನರ್, ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯೂ ವಾರ್ನರ್ ಉತ್ತಮ ಫಾರ್ಮ್‌ನಲ್ಲಿದ್ದು, ಅವರಿಗೆ ವಿರಾಟ್ ಕೊಹ್ಲಿಯಂತೆ ಎರಡನೇ ಬಾರಿ ಈ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವಿದೆ.
Published On - 2:57 pm, Wed, 12 October 22