ಟೋಕಿಯೋ ಒಲಿಂಪಿಕ್ಸ್ನ (Tokyo Olympics 2020) ನಾಲ್ಕನೇ ದಿನ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಮಂಗಳವಾರ ಮುಂಜಾನೆ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರಿತ ಗುಂಪು ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಮನು ಭಾಕರ್ ಹಾಗೂ ಸೌರಭ್ ಚೌಧರಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. 10 ಮೀ. ಏರ್ ಪಿಸ್ತೂಲ್ನ ಅರ್ಹತಾ ಸುತ್ತಿನಲ್ಲಿ ಈ ಜೋಡಿ ಟಾಪ್ 1ನೇ ಸ್ಥಾನ ಪಡೆದುಕೊಂಡಿದೆ.
ಮೊದಲ ಸುತ್ತಿನಲ್ಲೇ ಪಾಲ್ಗೊಂಡಿದ್ದ ಭಾರತದ ಮತ್ತೊಂದು ಜೋಡಿ ಅಭಿಷೇಕ್ ಶರ್ಮಾ ಮತ್ತು ಯಶಸ್ವಿನಿ ದೆಸ್ವಾಲ್ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ. ಮನು ಭಾಕರ್ ಮತ್ತು ಸೌರಭ್ ಚೌಧರಿ ಜೋಡಿ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ 582 ಅಂಕಗಳನ್ನು ಗಳಿಸಿ ಟಾಪ್ 1ನೇ ಸ್ಥಾನವನ್ನು ಪಡೆದುಕೊಂಡರು. ಈ ಮೂಲಕ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
? Saurabh Chaudhary appreciation tweet ?
Total shots – 3️⃣0️⃣
10s – 2️⃣6️⃣
9s – 0️⃣4️⃣An almost perfect display by the 19-YO in QS 1 of the 10m Air Pistol Mixed Team event where he scored 296/300 ?#Tokyo2020 | #StrongerTogether | #UnitedByEmotion @SChaudhary2002 pic.twitter.com/BK0UUedkhT
— #Tokyo2020 for India (@Tokyo2020hi) July 27, 2021
ಇತ್ತ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೆಸ್ವಾಲ್ 564 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನಿಯಮದ ಪ್ರಕಾರ ಅರ್ಹತಾ ಸುತ್ತಿನಲ್ಲಿ ಟಾಪ್ 8 ಸ್ಥಾನಗಳನ್ನು ಪಡೆದ ಜೋಡಿಗಳಿಗೆ ಮಾತ್ರ ಎರಡನೇ ಸುತ್ತಿಗೆ ಪ್ರವೇಶ ಪಡೆಯುವ ಅವಕಾಶ ಸಿಗುತ್ತದೆ. ಹೀಗಾಗಿ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೆಸ್ವಾಲ್ ಜೋಡಿ ಸ್ಪರ್ಧೆಯಿಂದ ಹೊರಬಿದ್ದಿದೆ.
ಇನ್ನೊಂದೆಡೆ ಭಾರತ ತಂಡ ಹಾಕಿ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೆಣೆಸಾಡುತ್ತಿದೆ. ಒಲಿಂಪಿಕ್ಸ್ನ ಚೊಚ್ಚಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಅಂತರದ ಪ್ರಯಾಸಕರ ಗೆಲುವು ದಾಖಲಿಸಿದ್ದ ಮನ್ಪ್ರೀತ್ ಸಿಂಗ್ ಪಡೆ ಎರಡನೇ ಪಂದ್ಯದಲ್ಲಿ ಆಸ್ಸೀಗಳ ವಿರುದ್ಧ 1-7 ಅಂತರದ ಹೀನಾಯ ಸೋಲು ಅನುಭವಿಸಿತ್ತು. ಹೀಗಾಗಿ ಈ ಪಂದ್ಯ ಭಾರತಕ್ಕೆ ಮುಖ್ಯವಾಗಿದೆ.
ಟೊಕಿಯೋ ಒಲಂಪಿಕ್ಸ್ 2020: ಕ್ವಾರ್ಟರ್ ಫೈನಲ್ ಹಂತ ತಲುಪಬೇಕಾದರೆ ಮಂಗಳವಾರ ಸ್ಪೇನನ್ನು ಭಾರತ ಮಣಿಸಲೇಬೇಕು.
Tokyo Olympics 2020: ಸೋತು ಹತಾಷತರಾದ ಭವಾನಿ ದೇವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಸಾಂತ್ವನ
(Tokyo Olympics Saurabh Chaudhary and Manu Bhaker storm pistol mixed team qualifying stage 2)