ಒಲಿಂಪಿಕ್ಸ್​ನಲ್ಲಿ ಚೀನಾವನ್ನು ಹಿಂದಿಕ್ಕಿದ ಅಮೆರಿಕ: ಯಾವ ದೇಶ ನಂಬರ್ 1, ಇಲ್ಲಿದೆ ಸಂಪೂರ್ಣ ಮಾಹಿತಿ

2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ಒಟ್ಟು 104 ಪದಕ ಪಡೆದಿದ್ದ ಯುಎಸ್​ಎ, ಈ ಕಳೆದ ಬಾರಿ ರಿಯೋ ಒಲಿಂಪಿಕ್ಸ್-2016 ರಲ್ಲಿ 121 ಪದಕಗಳೊಂದಿಗೆ ಸರ್ವಶ್ರೇಷ್ಠ ಪ್ರದರ್ಶನ ನೀಡಿತ್ತು.

ಒಲಿಂಪಿಕ್ಸ್​ನಲ್ಲಿ ಚೀನಾವನ್ನು ಹಿಂದಿಕ್ಕಿದ ಅಮೆರಿಕ: ಯಾವ ದೇಶ ನಂಬರ್ 1, ಇಲ್ಲಿದೆ ಸಂಪೂರ್ಣ ಮಾಹಿತಿ
Tokyo olympics
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 09, 2021 | 3:19 PM

ಹಾಗೆ, 34ನೇ ಒಲಿಂಪಿಕ್ಸ್ (Olympic 2020) ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಈ ಬಾರಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಭಾರತ ಒಲಿಂಪಿಕ್ಸ್ ಅಂಗಳದಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಅದರಲ್ಲೂ 13 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿಸುವಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಯಶಸ್ವಿಯಾಗಿದ್ದಾರೆ. ಇದಾಗ್ಯೂ ಒಟ್ಟಾರೆ ಪ್ರದರ್ಶನದಲ್ಲಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನಗಳಿಸಲಷ್ಟೇ ಶಕ್ತವಾಯಿತು.

ಕೊರೋನಾಂತಕದ ನಡುವೆ ಜಪಾನ್​ನ ಟೋಕಿಯೋ ನಗರದಲ್ಲಿ ಜುಲೈ 23 ರಂದು ಒಲಿಂಪಿಕ್ಸ್ ಕ್ರೀಡಾಕೂಟ ಶುರುವಾಗಿತ್ತು. ಈ ಬಾರಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಕ್ರೀಡಾಕೂಟ ನಡೆದಿರುವುದು ವಿಶೇಷ. ಇದಾಗ್ಯೂ ಕ್ರೀಡಾಪಟುಗಳು ರೋಚಕ ಹೋರಾಟ ಮುಂದಿಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಹಲವು ಸ್ಪರ್ಧೆಗಳಲ್ಲಿ ಭಾರತ ಸೆಮಿಫೈನಲ್ ಹಂತಕ್ಕೇರಿದ್ದು ವಿಶೇಷವಾಗಿತ್ತು. ಹೀಗಾಗಿ ಮುಂದಿನ ಒಲಿಂಪಿಕ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳಿಂದ ಮತ್ತಷ್ಟು ಪದಕವನ್ನು ನಿರೀಕ್ಷಿಸಬಹುದು.

ಇನ್ನು ಈ ಬಾರಿ ಕೂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಅಮೆರಿಕ ಯಶಸ್ವಿಯಾಗಿದೆ. ಒಲಿಂಪಿಕ್ಸ್​ ಅಂಗಳದ ಬಲಿಷ್ಠರು ಎಂದೇ ಬಿಂಬಿತವಾಗಿರುವ ಚೀನಾವನ್ನು ಹಿಂದಿಕ್ಕಿರುವ ಅಮೆರಿಕ ಕ್ರೀಡಾಪಟುಗಳು ಸತತ ಮೂರನೇ ಬಾರಿ ಒಲಿಂಪಿಕ್ಸ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ಒಟ್ಟು 104 ಪದಕ ಪಡೆದಿದ್ದ ಯುಎಸ್​ಎ, ಈ ಕಳೆದ ಬಾರಿ ರಿಯೋ ಒಲಿಂಪಿಕ್ಸ್-2016 ರಲ್ಲಿ 121 ಪದಕಗಳೊಂದಿಗೆ ಸರ್ವಶ್ರೇಷ್ಠ ಪ್ರದರ್ಶನ ನೀಡಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್​ನಲ್ಲೂ ಪಾರುಪತ್ಯ ಮರೆಯುವ ಮೂಲಕ 113 ಪದಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇಲ್ಲಿ ವಿಶೇಷ ಎಂದರೆ ಅಮೆರಿಕ ಹೊರತಾಗಿ ಮತ್ಯಾವುದೇ ದೇಶ 100ಕ್ಕೂ ಅಧಿಕ ಪದಕ ಗೆಲ್ಲದಿರುವುದು. ಅಂದರೆ ಕಳೆದ ಮೂರು ಒಲಿಂಪಿಕ್ಸ್​ನಲ್ಲೂ ಅಮೆರಿಕ ನೂರಕ್ಕೂ ಅಧಿಕ ಪದಕಗಳನ್ನು ತನ್ನದಾಗಿಸಿಕೊಳ್ಳುವ ಒಲಿಂಪಿಕ್ಸ್ ಅಂಗಳದಲ್ಲಿ ನಂಬರ್ 1 ದೇಶವಾಗಿ ನಿಂತಿದೆ.

ಅಷ್ಟೇ ಅಲ್ಲದೆ ಈ ಬಾರಿ ಚಿನ್ನದ ಪದಕದ ವಿಷಯದಲ್ಲಿ ಚೀನಾವನ್ನು ಅಂತಿಮ ದಿನದಲ್ಲಿ ಹಿಂದಿಕ್ಕುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚೀನಾ 38 ಸ್ವರ್ಣ ಪದಕ ಗೆದ್ದರೆ, ಅಮೆರಿಕ 39 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ಟಾಪ್ 10 ದೇಶಗಳ ಪದಕ ಪಟ್ಟಿ ಹೀಗಿದೆ: (tokyo olympics medallist) 1-ಅಮೆರಿಕ- 113 ( ಚಿನ್ನ 39, ಬೆಳ್ಳಿ, ಕಂಚು) 2- ಚೀನಾ- 88 (38 ಚಿನ್ನ, 32 ಬೆಳ್ಳಿ, 18 ಕಂಚು) 3- ಜಪಾನ್- 58 (27 ಚಿನ್ನ, 14 ಬೆಳ್ಳಿ, 17 ಕಂಚು) 4- ಬ್ರಿಟನ್- 65 (22 ಚಿನ್ನ, 21 ಬೆಳ್ಳಿ, 22 ಕಂಚು) 5- ರಷ್ಯಾ- 71 (20 ಚಿನ್ನ, 28 ಬೆಳ್ಳಿ, 23 ಕಂಚು) 6- ಆಸ್ಟ್ರೇಲಿಯಾ- 46 (17 ಚಿನ್ನ, 7 ಬೆಳ್ಳಿ, 22 ಕಂಚು) 7- ನೆದರ್​ಲೆಂಡ್ಸ್- 36 (10 ಚಿನ್ನ, 12 ಬೆಳ್ಳಿ, 14 ಕಂಚು) 8- ಫ್ರಾನ್ಸ್- 33 (10 ಚಿನ್ನ, 12 ಬೆಳ್ಳಿ, 11 ಕಂಚು) 9- ಜರ್ಮನಿ- 37 (10 ಚಿನ್ನ, 11 ಬೆಳ್ಳಿ, 16 ಕಂಚು) 10- ಇಟಲಿ- 40 (10 ಚಿನ್ನ, 10 ಬೆಳ್ಳಿ, 20 ಕಂಚು) 48- ಭಾರತ- 7 (1 ಚಿನ್ನ, 2 ಬೆಳ್ಳಿ, 4 ಕಂಚು)

ಇದನ್ನೂ ಓದಿ: Airtel: ಏರ್​ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ

ಇದನ್ನೂ ಓದಿ: Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್​ ಹೋಸ್ಟೆಸ್: ಆಮೇನಾಯ್ತು?

ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ