AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

US ಓಪನ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಥಮ ಸುತ್ತಿನಲ್ಲೇ ಹೊರಬಿದ್ದ ಜೊಕೊವಿಚ್!

ಟೆನಿಸ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರ, 24 ಗ್ರ್ಯಾಂಡ್ ಸ್ಲಾಮ್‌ಗಳ ಸರದಾರ ಮತ್ತು ಅಪ್ರತಿಮ ಫಿಟ್‌ನೆಸ್‌ಗೆ ಹೆಸರಾಗಿದ್ದ ನೊವಾಕ್ ಜೊಕೊವಿಚ್ ಈ ಬಾರಿಯ ಯುಎಸ್ ಓಪನ್​ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಅದು ಕೂಡ 49ನೇ ಶ್ರೇಯಾಂಕದ  ಮಾರಿಯಾನೊ ನವೋನ್ ವಿರುದ್ಧ ಎಂಬುದು ಅಚ್ಚರಿ.

US ಓಪನ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಥಮ ಸುತ್ತಿನಲ್ಲೇ ಹೊರಬಿದ್ದ ಜೊಕೊವಿಚ್!
Novak Djokovic Image Credit source: GettyImages
ಝಾಹಿರ್ ಯೂಸುಫ್
|

Updated on: Aug 31, 2026 | 1:15 PM

Share

ಟೆನಿಸ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ನೊವಾಕ್ ಜೊಕೊವಿಚ್, ನ್ಯೂಯಾರ್ಕ್‌ನ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ನಡೆದ ಯುಎಸ್ ಓಪನ್ 2026ರ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಅರ್ಜೆಂಟೀನಾದ ಅನ್‌ಸೀಡೆಡ್ ಆಟಗಾರ ಮಾರಿಯಾನೊ ನವೋನ್ ವಿರುದ್ಧ ಕಣಕ್ಕಿಳಿದ ಜೊಕೊವಿಚ್, ಮೊದಲ ಸುತ್ತಿನ ಪಂದ್ಯದಲ್ಲೇ ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

4 ಗಂಟೆ 36 ನಿಮಿಷಗಳ ಕಾಲ ನಡೆದ ಐದು ಸೆಟ್‌ಗಳ ಮಹಾ ಮ್ಯಾರಥಾನ್ ಹೋರಾಟದಲ್ಲಿ 7-6 (7-5), 5-7, 4-6, 6-2, 6-1 ಸೆಟ್‌ಗಳಿಂದ ಜೊಕೊವಿಚ್ ಅವರನ್ನು ಸೋಲಿಸುವಲ್ಲಿ ವಿಶ್ವದ 49ನೇ ಶ್ರೇಯಾಂಕದ ಮಾರಿಯಾನೊ ನವೋನ್ ಯಶಸ್ವಿಯಾಗಿದ್ದಾರೆ.

20 ವರ್ಷಗಳ ಐತಿಹಾಸಿಕ ರೆಕಾರ್ಡ್ ಬ್ರೇಕ್!

  • ನೊವಾಕ್ ಜೊಕೊವಿಚ್ ತಮ್ಮ 20 ವರ್ಷಗಳ ಯುಎಸ್ ಓಪನ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಸುತ್ತಿನಲ್ಲಿ ಪರಾಭವಗೊಂಡಿದ್ದಾರೆ
  • ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜೊಕೊವಿಚ್ ಹೊಂದಿದ್ದ ಸತತ 77 ಪಂದ್ಯಗಳ ಗೆಲುವಿನ ನಾಗಾಲೋಟ ಕೂಡ ಇದರೊಂದಿಗೆ ಅಂತ್ಯವಾಗಿದೆ.
  • 2006ರ ಆಸ್ಟ್ರೇಲಿಯನ್ ಓಪನ್ ಬಳಿಕ ಗ್ರ್ಯಾಂಡ್ ಸ್ಲಾಮ್ ಟೂರ್ನಿಯೊಂದರಲ್ಲಿ ಜೊಕೊವಿಚ್ ಅನುಭವಿಸಿದ ಅತ್ಯಂತ ಆಘಾತಕಾರಿ ಸೋಲು ಇದಾದಗಿದೆ.

ಆಘಾತಕಾರಿ ಸೋಲಿಗೆ ಕಾರಣವೇನು?

39 ವರ್ಷದ ನೊವಾಕ್ ಜೊಕೊವಿಚ್ ಪಂದ್ಯದ ವೇಳೆ ತೀವ್ರವಾದ ತೇವಾಂಶ ಮತ್ತು ಹವಾಮಾನದಿಂದಾಗಿ ಪರದಾಡಿದ್ದರು. ಮೂರನೇ ಸೆಟ್‌ನ ಮಧ್ಯದಲ್ಲಿ ಅವರು ಕೋರ್ಟ್‌ನಲ್ಲೇ ಹಲವು ಬಾರಿ ವಾಂತಿ ಮಾಡಿಕೊಂಡರು.

ನಾಲ್ಕನೇ ಸೆಟ್‌ನಲ್ಲಿ ಬೆನ್ನು ನೋವು ಮತ್ತು ಕಾಲುಗಳ ಸ್ನಾಯು ಸೆಳೆತದಿಂದಾಗಿ  ಓಡಲು ಕೂಡ ಪರದಾಡಿದರು. ಐದನೇ ಸೆಟ್‌ ವೇಳೆ ಜೊಕೊವಿಚ್ ನೋವಿನಿಂದ ಕಣ್ಣೀರು ಹಾಕಿದ್ದರು.

ನನ್ನ ಕನಸು ನನಸಾಗಿದೆ!

ಈ ಪಂದ್ಯದ ನಂತರ ಮಾತನಾಡಿದ ಮಾರಿಯಾನೊ ನವೋನ್, “ಟೆನಿಸ್ ಜಗತ್ತಿನ GOAT (ಸಾರ್ವಕಾಲಿಕ ಶ್ರೇಷ್ಠ) ವಿರುದ್ಧ ಆರ್ಥರ್ ಆ್ಯಶ್ ಸ್ಟೇಡಿಯಂನ ದೊಡ್ಡ ವೇದಿಕೆಯಲ್ಲಿ 5 ಸೆಟ್‌ಗಳ ಪಂದ್ಯ ಗೆದ್ದಿರುವುದು ನನ್ನ ಪಾಲಿಗೆ ಕನಸು ನನಸಾದಂತೆ” ಎಂದು ಭಾವುಕರಾಗಿ ನುಡಿದಿದ್ದಾರೆ.

ಇದನ್ನೂ ಓದಿ: ವೈಭವ್ ಆರ್ಭಟಕ್ಕೆ 57 ವರ್ಷಗಳ ಹಳೆಯ ದಾಖಲೆ ಧೂಳೀಪಟ!

ಸೆಟ್‌ಗಳ ಪಾಯಿಂಟ್ ವಿವರ:

  • ಮೊದಲ ಸೆಟ್: 7-6 (ಟೈಬ್ರೇಕರ್‌ನಲ್ಲಿ ನವೋನ್‌ಗೆ 7-5 ರಿಂದ ಗೆಲುವು)
  • ಎರಡನೇ ಸೆಟ್: 5-7 (ಜೊಕೊವಿಚ್​ಗೆ​ ಜಯ)
  • ಮೂರನೇ ಸೆಟ್: 4-6 (ಜೊಕೊವಿಚ್​ಗೆ ಜಯ)
  • ನಾಲ್ಕನೇ ಸೆಟ್: 6-2 (ನವೋನ್ ಜಯ)
  • ಐದನೇ ಸೆಟ್: 6-1 (ನವೋನ್ ಜಯ)
Follow Us
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
‘ಬಿಗ್ ಬಾಸ್ ಕನ್ನಡ ಸೀಸನ್ 13’: ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?
‘ಬಿಗ್ ಬಾಸ್ ಕನ್ನಡ ಸೀಸನ್ 13’: ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?
ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್
ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್
ಎಫ್​ಐಆರ್ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ
ಎಫ್​ಐಆರ್ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ