AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಸ್ತು ಪ್ರಕಾರ ಮನೆಯಲ್ಲಿ ಈ 4 ವಸ್ತುಗಳಿದ್ದರೆ ಒಲಿಯಲಿದೆ ಲಕ್ಷ್ಮಿ ಕೃಪೆ: ಹೆಚ್ಚಲಿದೆ ಆರ್ಥಿಕ ಸಮೃದ್ಧಿ!

ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ವಾಸ್ತು ಶಾಸ್ತ್ರವು ಕೆಲವು ವಸ್ತುಗಳನ್ನು ಶಿಫಾರಸು ಮಾಡುತ್ತದೆ. ಲಫಿಂಗ್ ಬುದ್ಧ, ನೀರಿನ ಕಾರಂಜಿ, ಮನಿ ಫ್ರಾಗ್ ಮತ್ತು ಮನಿ ಪ್ಲಾಂಟ್ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಮುಗ್ಗಟ್ಟು ದೂರವಾಗಿ ಸಂಪತ್ತು ಹೆಚ್ಚುತ್ತದೆ. ಈ ಅದೃಷ್ಟದ ವಸ್ತುಗಳು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ.

ವಾಸ್ತು ಪ್ರಕಾರ ಮನೆಯಲ್ಲಿ ಈ 4 ವಸ್ತುಗಳಿದ್ದರೆ ಒಲಿಯಲಿದೆ ಲಕ್ಷ್ಮಿ ಕೃಪೆ: ಹೆಚ್ಚಲಿದೆ ಆರ್ಥಿಕ ಸಮೃದ್ಧಿ!
ವಾಸ್ತು ಶಾಸ್ತ್ರImage Credit source: Getty Images
ಅಕ್ಷತಾ ವರ್ಕಾಡಿ
|

Updated on:Sep 22, 2026 | 11:15 AM

Share

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಮನೆಯ ವಾತಾವರಣ ಹಾಗೂ ಅಲ್ಲಿಡುವ ವಸ್ತುಗಳಿಗೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿದರೆ ಆರ್ಥಿಕ ಮುಗ್ಗಟ್ಟು ದೂರವಾಗಿ ಸದಾ ಸಮೃದ್ಧಿ ಇರುತ್ತದೆ ಎಂಬುದು ನಂಬಿಕೆ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಸೂಕ್ತ ದಿಕ್ಕಿನಲ್ಲಿ ಇಡುವುದರಿಂದ ಹಣದ ಕೊರತೆ ನೀಗಿ, ಅದೃಷ್ಟ ಹೆಚ್ಚಾಗುತ್ತದೆ. ಆ ನಾಲ್ಕು ಅದೃಷ್ಟದ ವಸ್ತುಗಳು ಯಾವುವು ಎಂಬ ಪೂರ್ಣ ವಿವರ ಇಲ್ಲಿದೆ.

ಲಫಿಂಗ್ ಬುದ್ಧ:

ವಾಸ್ತು ಶಾಸ್ತ್ರ ಹಾಗೂ ಫೆಂಗ್‌ಶೂಯಿ ಎರಡರಲ್ಲೂ ನಗುವ ಬುದ್ಧನಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯಿದೆ. ಮನೆಯಲ್ಲಿ ನಗುವ ಬುದ್ಧನ ಮೂರ್ತಿಯನ್ನಿಡುವುದರಿಂದ ವಾಸ್ತುದೋಷಗಳು ನಿವಾರಣೆಯಾಗಿ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಇದನ್ನು ಮನೆಯ ಮುಖ್ಯ ದ್ವಾರಕ್ಕೆ ಅಭಿಮುಖವಾಗಿ ಅಥವಾ ಸಿಟೌಟ್‌ನಲ್ಲಿ ಇಡುವುದು ಅತ್ಯಂತ ಶುಭ. ಇದು ಮನೆಯಲ್ಲಿ ಸದಾ ಸಂತೋಷ ಮತ್ತು ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತದೆ.

ನೀರಿನ ಕಾರಂಜಿ (ವಾಟರ್ ಫೌಂಟೇನ್):

ಶಾಸ್ತ್ರಗಳ ಪ್ರಕಾರ ನಿರಂತರವಾಗಿ ಹರಿಯುವ ನೀರು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಮನೆಯಲ್ಲಿ ಸಣ್ಣ ನೀರಿನ ಕಾರಂಜಿಯನ್ನು ಇಡುವುದರಿಂದ ಆರ್ಥಿಕ ಹರಿವು ನಿರಂತರವಾಗಿರುತ್ತದೆ ಮತ್ತು ಹಣದ ಅಭಾವ ಎದುರಾಗುವುದಿಲ್ಲ. ಇದನ್ನು ಮನೆಯ ಈಶಾನ್ಯ (ಉತ್ತರ-ಪೂರ್ವ) ಅಥವಾ ಉತ್ತರ ದಿಕ್ಕಿನಲ್ಲಿಡುವುದು ಉತ್ತಮ. ಇದು ಮನೆಯಲ್ಲಿರುವ ನಕಾರಾತ್ಮಕತೆಯನ್ನು ಓಡಿಸಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ತರುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಮನಿ ಫ್ರಾಗ್ (ಮೂರು ಕಾಲಿನ ಕಪ್ಪೆ):

ಬಾಯಿಯಲ್ಲಿ ನಾಣ್ಯವನ್ನು ಹಿಡಿದುಕೊಂಡಿರುವ ಮೂರು ಕಾಲಿನ ‘ಮನಿ ಫ್ರಾಗ್’ ಮನೆಯಲ್ಲಿದ್ದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿದೆ. ಇದನ್ನು ಮನೆಯ ಮುಖ್ಯ ದ್ವಾರದ ಒಳಭಾಗದಲ್ಲಿ, ಅಂದರೆ ಮನೆಗೆ ಪ್ರವೇಶಿಸುವಾಗ ಕಣ್ಣಿಗೆ ಕಾಣುವಂತೆ ಅಥವಾ ಮನೆಯ ಒಳಗಿನ ಕಡೆಗೆ ಮುಖ ಮಾಡಿರುವಂತೆ ಇಡಬೇಕು. ಇದು ಮನೆಯಲ್ಲಿ ಸಿರಿವಂತಿಕೆಯನ್ನು ಹೆಚ್ಚಿಸಿ, ಸಾಲದ ಬಾಧೆಯಿಂದ ಮುಕ್ತಿ ನೀಡುತ್ತದೆ.

ಮನಿ ಪ್ಲಾಂಟ್:

ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್‌ಗೆ ವಿಶೇಷ ಸ್ಥಾನವಿದೆ. ಈ ಗಿಡವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಆಮ್ಲಜನಕ ಹಾಗೂ ಸಕಾರಾತ್ಮಕ ವಾತಾವರಣವನ್ನು ಹೆಚ್ಚಿಸುತ್ತದೆ. ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯ ಆಗ್ನೇಯ (ದಕ್ಷಿಣ-ಪೂರ್ವ) ದಿಕ್ಕಿನಲ್ಲಿಡುವುದು ಶ್ರೇಷ್ಠ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಸಂಪೂರ್ಣವಾಗಿ ದೂರವಾಗಿ, ಸದಾ ಸಿರಿತನ ನೆಲೆಸುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:31 am, Tue, 22 September 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More