ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿ ವಿವಾದ: ತನಿಖೆ ನಡೆಸಿ, 60 ದಿನಗಳಲ್ಲಿ ವರದಿ ಸಲ್ಲಿಸಲು ಆ್ಯಪ್​ನ ನಿರ್ದೇಶಕರಿಗೆ ಸೂಚನೆ

Whatsapp New Privacy Policy: ಹೊಸ ಖಾಸಗಿತನದ ನೀತಿಯು, ಮೇಲ್ನೋಟಕ್ಕೆ ಭಾರತದ ಸ್ಪರ್ಧಾ ಕಾಯ್ದೆ 2000ರ ಉಲಂಘನೆಗೆ ಪುಷ್ಟಿ ನೀಡಿರುವುದು ಕಂಡುಬಂದಿರುವ ಹಿನ್ನೆಲೆ ತನಿಖೆ ನಡೆಸಿ 60 ದಿನಗಳಲ್ಲಿ ವರದಿ ಸಲ್ಲಿಸಲು ಡೈರೆಕ್ಟರ್ ಜನರಲ್​ಗೆ ಸಿಸಿಐ ಸೂಚನೆ ನೀಡಿದೆ.

  • TV9 Web Team
  • Published On - 22:36 PM, 24 Mar 2021
ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿ ವಿವಾದ: ತನಿಖೆ ನಡೆಸಿ, 60 ದಿನಗಳಲ್ಲಿ ವರದಿ ಸಲ್ಲಿಸಲು ಆ್ಯಪ್​ನ ನಿರ್ದೇಶಕರಿಗೆ ಸೂಚನೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಾಟ್ಸಾಪ್​ನಲ್ಲಿ ಹೊಸ ಪ್ರೈವಸಿ ಪಾಲಿಸಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಭಾರತದ ಸ್ಪರ್ಧಾತ್ಮಕ ಆಯೋಗ (Competition Commission of India- CCI) ಆದೇಶಿಸಿದೆ. ವಾಟ್ಸಾಪ್ ಹೊಸ ಪ್ರೈವಸಿ ಪಾಲಿಸಿಯಲ್ಲಿ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿದೆ. ಹಾಗಾಗಿ, ವಿವಾದಾತ್ಮಕ ಅಂಶಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಸಿಐ ಆದೇಶ ನೀಡಿದೆ.

ಹೊಸ ಖಾಸಗಿತನದ ನೀತಿಯು, ಮೇಲ್ನೋಟಕ್ಕೆ ಭಾರತದ ಸ್ಪರ್ಧಾ ಕಾಯ್ದೆ 2000ರ ಉಲಂಘನೆಗೆ ಪುಷ್ಟಿ ನೀಡಿರುವುದು ಕಂಡುಬಂದಿರುವ ಹಿನ್ನೆಲೆ ತನಿಖೆ ನಡೆಸಿ 60 ದಿನಗಳಲ್ಲಿ ವರದಿ ಸಲ್ಲಿಸಲು ಡೈರೆಕ್ಟರ್ ಜನರಲ್​ಗೆ ಸೂಚನೆ ನೀಡಿದೆ. ವಾಟ್ಸಾಪ್ ಹೊಸ ಖಾಸಗಿತನದ ನೀತಿಯು ಪಾರದರ್ಶಕವಾಗಿಲ್ಲ, ಬಳಕೆದಾರರ ಒಪ್ಪಿಗೆಯನ್ನು ಪಡೆದಿಲ್ಲ. ವಾಟ್ಸಾಪ್ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ ಕಂಪನಿಗಳ‌ ಜೊತೆಗೆ ಹಂಚಿಕೊಳ್ಳುತ್ತದೆ. ಇದು ಕಾಯ್ದೆಯ ಉಲಂಘನೆ ಎಂದು ಸಿಸಿಐ ತಿಳಿಸಿದೆ.

ವಾಟ್ಸಾಪ್​​ನಿಂದ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್ ಮಾಡುವುದಕ್ಕೆ ತಡೆ ನೀಡಬೇಕು. ಅವುಗಳು ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಕ್ಕಂತೆ ಇಲ್ಲ ಎಂದು ಕೇಂದ್ರ ಸರ್ಕಾರವು ಶುಕ್ರವಾರ ದೆಹಲಿ ಹೈಕೋರ್ಟ್​​ನಲ್ಲಿ ಕೇಳಿಕೊಂಡಿತ್ತು. ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ ಸರ್ಕಾರ, ಪ್ರಸ್ತಾವಿತ ದತ್ತಾಂಶ ಸುರಕ್ಷತಾ ಮಸೂದೆ, 2019ಕ್ಕೆ ಇನ್ನೂ ಸಂಸತ್​​ನಲ್ಲಿ ಅನುಮೋದನೆ ಪಡೆಯಬೇಕಿದೆ. ಈ ಮಸೂದೆಯು ವಾಟ್ಸಾಪ್​ನಂಥ ಸೇವಾ ಪೂರೈಕೆದಾರರು ಖಾಸಗಿತನ ನಿಯಮವನ್ನು ನೀಡುವ ಸಾಮರ್ಥ್ಯ ಮಿತಿಗೊಳಿಸುತ್ತದೆ. ಅವುಗಳು ಸೂಕ್ತ ಗುಣಮಟ್ಟದ ಭದ್ರತೆ ಹಾಗೂ ದತ್ತಾಂಶ ರಕ್ಷಣಾ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ

Tv9 Facebook Live | ವಾಟ್ಸಾಪ್​ ಹೊಸ ಪ್ರೈವೆಸಿ ಪಾಲಿಸಿ; ಸಾಧಕ-ಬಾಧಕ