ನೀವು ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರಾಗಿದ್ದರೆ ನೀವು ಗಮನಹರಿಸಬೇಕಾದ ವಿಚಾರವೊಂದು ಇಲ್ಲಿದೆ. ಆಂಡ್ರಾಯ್ಡ್ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗಿರುವ 2 ಡಜನ್ಗೂ ಹೆಚ್ಚು ಅಪ್ಲಿಕೇಷನ್ಗಳು ಬಳಕೆದಾರರ ಮಾಹಿತಿಯನ್ನು (ಡಾಟಾ) ಸೋರಿಕೆ ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸುಮಾರು 100 ಮಿಲಿಯನ್ ಬಳಕೆದಾರರ ಡಾಟಾ ಹೀಗೆ ಲೀಕ್ ಆಗಿರುವ ಸಾಧ್ಯತೆ ಅಂದಾಜಿಸಲಾಗಿದೆ. ಸಂಶೋಧಕರು ಇಂತಹ ಅಪ್ಲಿಕೇಷನ್ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಕೆಲವು ಅಪ್ಲಿಕೇಷನ್ಗಳು ಬಹಳ ಖ್ಯಾತವಾಗಿದ್ದು, ಇನ್ಸ್ಟಾಲ್ ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ.
ಆ ಪಟ್ಟಿಯಲ್ಲಿರುವ ಅಪ್ಲಿಕೇಷನ್ಗಳನ್ನು ಹೊಂದಿರುವ ಮೊಬೈಲ್ ಫೋನ್ಗಳಿಂದ ಖಾಸಗಿ ಮಾಹಿತಿಯನ್ನು ಕೂಡ ಕದ್ದಿರುವ ಶಂಕೆ ಇದೆ. ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಎರಡರಲ್ಲೂ ಹೀಗಾಗಿರುವ ಸಾಧ್ಯತೆ ಇದೆ. ಜ್ಯೋತಿಷ್ಯ, ಫ್ಯಾಕ್ಸ್, ಟ್ಯಾಕ್ಸಿ ಸರ್ವೀಸಸ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಸಂಬಂಧಪಟ್ಟ ಅಪ್ಲಿಕೇಷನ್ಗಳಲ್ಲಿ ಹೀಗೆ ಖಾಸಗಿ ಮಾಹಿತಿ ಲೀಕ್ ಆಗಿರುವ ಸಾಧ್ಯತೆ ಇದೆ. ಇದರಲ್ಲಿ ಆಸ್ಟ್ರೋ ಗುರು (ಖ್ಯಾತ ಜ್ಯೋತಿಷ್ಯ ಅಪ್ಲಿಕೇಷಷನ್), ಟಿಲೆವಾ (ಟ್ಯಾಕ್ಸಿ ಅಪ್ಲಿಕೇಷನ್) ಹಾಗೂ ಲೋಗೊ ಡಿಸೈನ್ ಆಪ್ ಆದ ಲೋಗೊ ಮೇಕರ್. ಈ ಅಪ್ಲಿಕೇಷನ್ಗಳು ಬಳಕೆದಾರರ ಖಾಸಗಿ ಮಾಹಿತಿ ಪಡೆದಿರುವ ಸಾಧ್ಯತೆ ಇದೆ. ಬಳಕೆದಾರರ ಇಮೈಲ್, ಪಾಸ್ವರ್ಡ್, ಹೆಸರು, ಹುಟ್ಟಿದ ದಿನಾಂಕ, ಲಿಂಗ, ಖಾಸಗಿ ಚಾಟ್, ಲೊಕೇಷನ್ ಮಾಹಿತಿ ಇತ್ಯಾದಿಗಳನ್ನು ಅಪ್ಲಿಕೇಷನ್ಗಳು ಪಡೆದುಕೊಂಡಿರುತ್ತವೆ.
ಈ ಅಪ್ಲಿಕೇಷನ್ಗಳು ರಿಯಲ್ ಟೈಮ್ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಅಂದರೆ ಆಯಾ ಅಪ್ಲಿಕೇಷನ್ಗಳು ತಮ್ಮ ಕ್ಲೈಂಟ್ಗಳಿಗೆ ರಿಯಲ್ ಟೈಮ್ನಲ್ಲಿ ಬಳಕೆದಾರರ ಮಾಹಿತಿ ಒದಗಿಸುತ್ತದೆ. ಹಲವು ಬಾರಿ ಅಪ್ಲಿಕೇಷನ್ ಡೆವೆಲಪರ್ಸ್ ಮಾಹಿತಿಯ ಸುರಕ್ಷತೆಯ ಬಗ್ಗೆ ಗಮನ ಹರಿಸಿರುವುದಿಲ್ಲ. ಅಂತಹ ಸಂದರ್ಭ ಸೇವೆಯಲ್ಲಿ ವ್ಯತ್ಯಾಸ, ವೈರಸ್ ಅಟ್ಯಾಕ್ ಆಗುವ ಸಾಧ್ಯತೆಯೂ ಇರುತ್ತದೆ.
ಒಂದು ಕ್ಲಿಕ್ನಿಂದ ಹಲವು ಮಾಹಿತಿ ಸೋರಿಕೆಯಾಗಬಹುದು
ಮಾಹಿತಿಯನ್ನು ಸಂಗ್ರಹಿಸಿ ನೀಡುವುದು ಒಂದು ವಿಧ. ಆದರೆ ಕೆಲವೆಡೆ ರಿಯಲ್ ಟೈಮ್ ಮಾಹಿತಿ ಸೋರಿಕೆಯೂ ಆಗುತ್ತಿದೆ. ಅಂದರೆ, ಚಾಟ್ ಸಂದೇಶಗಳು, ಹ್ಯಾಕಿಂಗ್ ಅವಕಾಶವೂ ಇರುತ್ತದೆ. ಟಿಲೆವಾ ಅಪ್ಲಿಕೇಷನ್ನಿಂದ ಬಳಕೆದಾರರ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಲೊಕೇಷನ್ ಮಾಹಿತಿ ಪಡೆಯಲು ಸಂಶೋಧಕರಿಗೆ ಸಾಧ್ಯವಾಗಿದೆ. ಅಂದರೆ, ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಈ ಅಪ್ಲಿಕೇಷನ್ಗಳು ಎಷ್ಟು ವೀಕ್ ಆಗಿವೆ ಎಂದು ನಾವು ಅಂದಾಜಿಸಬಹುದು. ನಾವು ಇಂತಹ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು, ಅವಕಾಶ ಅಥವಾ ಅವುಗಳು ಕೇಳುವ ಎಲ್ಲಾ ವಿಚಾರಕ್ಕೂ ಒಂದು ಕ್ಲಿಕ್ ಮೂಲಕ ಪರ್ಮಿಷನ್ ನೀಡಿದರೆ ಸಾಕು, ಡಾಟಾ ಸೋರಿಕೆ ಸುಲಭವಾಗಲಿದೆ.
ಅಂತಹ ಅಪ್ಲಿಕೇಷನ್ಗಳನ್ನು ಡಿಲೀಟ್ ಮಾಡಿ
ಈ ಅಪ್ಲಿಕೇಷನ್ಗಳ ಮತ್ತೊಂದು ಸಮಸ್ಯೆ ಏನೆಂದರೆ, ಇವುಗಳು ಹ್ಯಾಕರ್ಗಳಿಗೆ ಪುಶ್ ನೋಟಿಫಿಕೇಷನ್ ಕೊಡಲು ಅನುವು ಮಾಡಿಕೊಡುತ್ತವೆ. ಅಂದರೆ, ಬಳಕೆದಾರರು ಈ ಆ್ಯಪ್ಗಳ ಮೂಲಕ ನೋಟಿಫಿಕೇಷನ್ ಪಡೆಯುತ್ತಾರೆ. ಆದರೆ, ಅವುಗಳನ್ನು ಆ ಆ್ಯಪ್ಗಳು ಕಳಿಸಿರುವುದಿಲ್ಲ. ಬದಲಾಗಿ, ಹ್ಯಾಕರ್ಗಳು ಕಳಿಸಿರುತ್ತಾರೆ. ಬಳಕೆದಾರರು ತಿಳಿಯದೆ ಅವುಗಳನ್ನು ತೆರೆಯುತ್ತಾರೆ. ಅದನ್ನು ಬಳಕೆದಾರರು ತಿಳಿಯದೆ ಮತ್ತಷ್ಟು ಜನರಿಗೆ ಹಂಚಿಕೆ ಮಾಡುವ ಸಾಧ್ಯತೆ ಇರುತ್ತದೆ. ಅದರಿಂದ ಅವರ ಮೊಬೈಲ್ಗೆ ಹಾನಿ ಉಂಟಾಗಬಹುದು. ಹಾಗಾಗಿ, ಈ ರೀತಿಯ ಅಪ್ಲಿಕೇಷನ್ಗಳು ನಿಮ್ಮ ಫೋನ್ನಲ್ಲಿ ಇದ್ದರೆ ಅವುಗಳನ್ನು ಡಿಲೀಟ್ ಮಾಡುವುದು ಸೂಕ್ತ.
ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು
Mobile data plan: 100 ರೂಪಾಯಿಯೊಳಗೆ ಅನ್ಲಿಮಿಟೆಡ್ ಮೊಬೈಲ್ ಇಂಟರ್ನೆಟ್ ಸಿಗುವ ಪ್ಲಾನ್ಗಳಿವು
Published On - 3:40 pm, Tue, 25 May 21