5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ ಎಂದು ದೂರಸಂಪರ್ಕ ಇಲಾಖೆಯ 5ಜಿ ತಂತ್ರಜ್ಞಾನ ವಿಭಾಗವು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ. ಇಂತಹ ಆಧಾರರಹಿತ ಮತ್ತು ನಕಲಿ ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಹರಡಿ, ಜನರನ್ನು ದಾರಿ ತಪ್ಪಿಸಬಾರದು ಎಂದು ಇಲಾಖೆ ಮನವಿ ಮಾಡಿದೆ. ಈ ವಾದ ‘ಸುಳ್ಳು’ ಮತ್ತು ದೇಶದಲ್ಲಿ 5ಜಿ ಪ್ರಯೋಗ ಅಥವಾ ನೆಟ್ವರ್ಕ್ ಮೂಲಕ ಕೋವಿಡ್ -19 ರೋಗ ಹರಡುತ್ತಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಸೋಮವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಗೆ 5ಜಿ ಮೊಬೈಲ್ ಟವರ್ಗಳ ಪ್ರಯೋಗಗಳು ಕಾರಣ ಎಂದು ಹೇಳುವ ಮೂಲಕ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಾರಿತಪ್ಪಿಸುವ ಸಂದೇಶಗಳನ್ನು ಪ್ರಸಾರ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈಗ ಹೇಳಿರುವ ಪ್ರಕಾರ, ಈ ಸಂದೇಶಗಳು ತಪ್ಪು ಮತ್ತು ಸಂಪೂರ್ಣವಾಗಿ ಆಧಾರರಹಿತವಾಗಿವೆ. 5ಜಿ ತಂತ್ರಜ್ಞಾನ ಮತ್ತು ಕೋವಿಡ್ -19 ರ ಹರಡುವಿಕೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ. ತಪ್ಪು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ವದಂತಿಗಳಿಂದ ತಪ್ಪುದಾರಿಗೆ ಎಳೆಯಬಾರದು ಎಂದು ಮನವಿ ಮಾಡಲಾಗಿದೆ. 5ಜಿ ತಂತ್ರಜ್ಞಾನ ಪರೀಕ್ಷೆಗೂ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದಕ್ಕೂ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ತಿಳಿಸಲಾಗಿದೆ.
PIB_INDIA ಸಂವಹನ ಸಚಿವಾಲಯವು ಟ್ವೀಟ್ ಮಾಡಿದ ಪತ್ರಿಕಾ ಪ್ರಕಟಣೆಯನ್ನು ಟ್ವೀಟ್ ಮಾಡುವ ಮೂಲಕ ಟೆಲಿಕಾಂ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಬಿಡುಗಡೆಯಲ್ಲಿ, ಮೊಬೈಲ್ ಟವರ್ಗಳು ನಾನ್ ಅಯೋನೈಸಿಂಗ್ ರೇಡಿಯೊ ಫ್ರಿಕ್ವೆನ್ಸಿಗಳನ್ನು ಬಿಡುತ್ತವೆ. ಅದು ಮಾನವ ಸೇರಿದಂತೆ ಯಾವುದೇ ಜೀವಕೋಶಗಳಿಗೆ ಹಾನಿ ಉಂಟುಮಾಡುವುದಿಲ್ಲ. ದೂರಸಂಪರ್ಕ ಇಲಾಖೆಯು ರೇಡಿಯೊ ಫ್ರೀಕ್ವೆನ್ಸಿ ಫೀಲ್ಡ್ ಸೀಮಿತಗೊಳಿಸಿದೆ ಮತ್ತು ಟವರ್ ಅದಕ್ಕಿಂತ ಹೆಚ್ಚಿನ ರೇಡಿಯೊ ತರಂಗವನ್ನು ಬಿಡುತ್ತಿದೆ ಎಂದು ಯಾರಾದರೂ ಭಾವಿಸಿದರೆ, ಅದು ತರಂಗ್ ಸಂಚಾರ್ ಪೋರ್ಟಲ್ (https://tarangsanchar.gov.in/emfportal) ನಲ್ಲಿ ದೂರು ನೀಡಬಹುದು. ಆ ನಂತರ ತನಿಖೆ ಮಾಡಲಾಗುತ್ತದೆ.
5ಜಿ ಪರೀಕ್ಷೆಯಿಂದಾಗಿ ಕೋವಿಡ್ -19 ಸಾಂಕ್ರಾಮಿಕ ರೋಗ ಬಂದಿದೆ ಎಂದು ಹೇಳುತ್ತಾ ಈಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶವು ತುಂಬಾ ವೈರಲ್ ಆಗುತ್ತಿದೆ. ಇದರೊಂದಿಗೆ ಆಡಿಯೋವನ್ನು ಸಹ ಪ್ರಸಾರ ಮಾಡಲಾಗುತ್ತಿದೆ. 5ಜಿ ಪರೀಕ್ಷೆಯಿಂದ ಜನರು ಸಾಯುತ್ತಿದ್ದಾರೆ ಎಂದು ಆ ಆಡಿಯೋದಲ್ಲಿ ಹೇಳಲಾಗಿದೆ. ದೂರಸಂಪರ್ಕ ಇಲಾಖೆ ಮೊದಲು ಸಿಒಎಐ ಮತ್ತು ಪಿಐಬಿಗೆ ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ಆರೋಪವು ಸಂಪೂರ್ಣವಾಗಿ ಸುಳ್ಳು. ನೀವು ಅಂತಹ ವೈರಲ್ ಸಂದೇಶವನ್ನು ಸ್ವೀಕರಿಸಿದ್ದರೆ ಅದನ್ನು ನಂಬಬೇಡಿ ಮತ್ತು ಅದನ್ನು ಫಾರ್ವರ್ಡ್ ಮಾಡಬೇಡಿ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕೋವಿಡ್ 19 ಚಿಕಿತ್ಸೆಗೆ 2 ಲಕ್ಷ ರೂಪಾಯಿ ಮೇಲ್ಪಟ್ಟ ನಗದು ಪಾವತಿಸಲು ಸರ್ಕಾರದಿಂದ ಅವಕಾಶ
(PIB gave statement that, corona second wave not linked with 5G technology trial)
Published On - 6:09 pm, Tue, 11 May 21