Power Bank: 5 ಸಾವಿರ ಮೊಬೈಲ್ ಚಾರ್ಜ್ ಮಾಡಿ: ಇದು ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಬೆಲೆ ಎಷ್ಟು?

|

Updated on: Feb 27, 2023 | 7:34 PM

27,000,000mAh Capacity Power Bank: ಚೀನಾದಲ್ಲಿ ಓರ್ವ ವ್ಯಕ್ತಿ ವಿಶ್ವದ ಅತ್ಯಂತ ದೊಡ್ಡ ಸಾಮರ್ಥ್ಯವಿರುವ ಪವರ್ ಬ್ಯಾಂಕ್ ಒಂದನ್ನು ನಿರ್ಮಿಸಿದ್ದಾರೆ. ಶಾಕಿಂಗ್ ವಿಚಾರ ಎಂದರೆ ಇದರಿಂದ ಏಕಕಾಲದಲ್ಲಿ ಬರೋಬ್ಬರಿ 5 ಸಾವಿರಕ್ಕಿಂತಲೂ ಅಧಿಕ ಸ್ಮಾರ್ಟ್​ಫೋನ್​ಗಳನ್ನು ಚಾರ್ಜ್​ ಮಾಡಬಹುದಾಗಿದೆ.

Power Bank: 5 ಸಾವಿರ ಮೊಬೈಲ್ ಚಾರ್ಜ್ ಮಾಡಿ: ಇದು ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಬೆಲೆ ಎಷ್ಟು?
Power bank
Follow us on

ಮಾರುಕಟ್ಟೆಯಲ್ಲೀಗ ಬಿಡುಗಡೆ ಆಗುತ್ತಿರುವ ಬಹುತೇಕ ಸ್ಮಾರ್ಟ್​ಫೋನ್​ಗಳು (Smartphone) 5000mAh ನಿಂದ ಹಿಡಿದು 7000mAh ವರೆಗಿನ ಬ್ಯಾಟರಿ ಪವರ್ ಹೊಂದಿರುತ್ತದೆ. ಆದರೆ, ಬಳಕೆದಾರರಿಗೆ ಇದು ಸಾಕಾಗುವುದಿಲ್ಲ. ಅತ್ಯಂತ ವೇಗವಾಗಿ ಚಾರ್ಜ್ ಆಗುವ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿದರೂ ಅನೇಕರಿಗೆ ತೃಪ್ತಿಯಿಲ್ಲ. ಇದಕ್ಕಾಗಿ ಪವರ್ ಬ್ಯಾಂಕ್ (Power Bank) ಬಳಕೆ ಮಾಡುತ್ತಾರೆ. ಪಕ್ಕದಲ್ಲೆ ಇಟ್ಟುಕೊಂಡು ಚಾರ್ಜ್ ಮಾಡಬಹುದಾದ ಅಥವಾ ಪ್ರಯಾಣದ ವೇಳೆ ಚಾರ್ಜ್ ಮಾಡಬಹುದಾದ ಪವರ್ ಬ್ಯಾಂಕ್ ಅನ್ನು ಅನೇಕ ಜನರು ಉಪಯೋಗಿಸುತ್ತಾರೆ. ಇದೀಗ ಪವರ್ ಬ್ಯಾಂಕ್ ಸುದ್ದಿ ಯಾಕೆಂದರೆ, ಚೀನಾದಲ್ಲಿ (China) ಓರ್ವ ವ್ಯಕ್ತಿ ವಿಶ್ವದ ಅತ್ಯಂತ ದೊಡ್ಡ ಸಾಮರ್ಥ್ಯವಿರುವ ಪವರ್ ಬ್ಯಾಂಕ್ ಒಂದನ್ನು ನಿರ್ಮಿಸಿದ್ದಾರೆ.

ಶಾಕಿಂಗ್ ವಿಚಾರ ಎಂದರೆ ಇದರಿಂದ ಏಕಕಾಲದಲ್ಲಿ ಬರೋಬ್ಬರಿ 5 ಸಾವಿರಕ್ಕಿಂತಲೂ ಅಧಿಕ ಸ್ಮಾರ್ಟ್​ಫೋನ್​ಗಳನ್ನು ಚಾರ್ಜ್​ ಮಾಡಬಹುದಾಗಿದೆ. ಚೀನಾ ಮೂಲಕ ಎಲೆಕ್ಟ್ರಾನಿಕ್ಸ್ ಹ್ಯಾಂಡಿ ಗೆಂಗ್ ಎಂಬವರು ಇದನ್ನು ತಯಾರು ಮಾಡಿದ್ದು, ಇದು 27,000,000mAh ಸಾಮರ್ಥ್ಯ ಹೊಂದಿದೆ. ಹ್ಯಾಂಡಿ ಗೆಂಗ್ ಯೂಟ್ಯೂಬ್‌ನಲ್ಲಿ ತಾನು ತಯಾರಿಸಿದ್ದ ಪವರ್​ ಬ್ಯಾಂಕ್​ನ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಅಲ್ಲಿ ಅವರು ಪವರ್ ಬ್ಯಾಂಕ್ ಅನ್ನು ತಯಾರಿಸುವ ಪ್ರಕ್ರಿಯೆಯನ್ನು ಕೂಡ ವಿವರಿಸಿದ್ದಾರೆ.

Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಹೈಡ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ನೋಡಿ ಟ್ರಿಕ್

ಇದನ್ನೂ ಓದಿ
Tech Tips: ನಿಮ್ಮ ಫೇಸ್​ಬುಕ್​ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್​ಗೆ ವರ್ಗಾಹಿಸಬೇಕೇ?: ಇಲ್ಲಿದೆ ಟ್ರಿಕ್
Xiaomi 13: ಬಹುನಿರೀಕ್ಷಿತ ಶವೋಮಿ 13 ಸರಣಿ ಬಿಡುಗಡೆ: ಫೀಚರ್ಸ್ ಕಂಡು ದಂಗಾದ ಟೆಕ್ ಪ್ರಿಯರು
Nokia Logo: ನೂತನ ಬದಲಾವಣೆಗೆ ಮುಂದಾದ ನೋಕಿಯಾ: 60 ವರ್ಷಗಳ ಬಳಿಕ ಮೊದಲ ಬಾರಿ ಲೋಗೋ ಬದಲಾವಣೆ
Infinix Smart 7: 6000mAh ಬ್ಯಾಟರಿ, 7,299 ರೂ.: ಇಂದಿನಿಂದ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ

”ಪ್ರತಿಯೊಬ್ಬರು ನನಗಿಂತ ದೊಡ್ಡ ಪವರ್ ಬ್ಯಾಂಕ್ ಅನ್ನು ಹೊಂದಿದ್ದಾರೆ. ಈ ಕಾರಣಕ್ಕೆ ನಾನು ಸಂತೋಷವಾಗಿಲ್ಲ. ಹಾಗಾಗಿ ನಾನು 27,000,000mAh ಪೋರ್ಟಬಲ್ ಚಾರ್ಜರ್ ಪವರ್ ಬ್ಯಾಂಕ್ ಅನ್ನು ತಯಾರಿಸಿದ್ದೇನೆ,” ಎಂದು ಹ್ಯಾಂಡಿ ಗೆಂಗ್ ಹೇಳಿದ್ದಾರೆ. MySmartPrice ಮಾಡಿರುವ ವರದಿಯ ಪ್ರಕಾರ, ಗೆಂಗ್ ತನ್ನ ಪವರ್ ಬ್ಯಾಂಕ್ 3,000mAh ಬ್ಯಾಟರಿಗಳೊಂದಿಗೆ 5,000 ಫೋನ್‌ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ. ಆದರೆ, ಇದರ ಬೆಲೆ ಬಗ್ಗೆ ಅವರು ಹಂಚಿಕೊಂಡಿಲ್ಲ. ಯಾಕೆಂದರೆ ಇದು ಮಾರಾಟಕ್ಕೆ ಲಭ್ಯವಿಲ್ಲ.

ಈ ಪವರ್​ಫುಲ್ ಪವರ್ ಬ್ಯಾಂಕ್ 5.9×3.9 ಅಡಿ ಉದ್ದವಾಗಿದೆ. ಬೃಹತ್ ಸಾಧನವು ರಕ್ಷಣಾತ್ಮಕ ಚೌಕಟ್ಟನ್ನು ಹೊಂದಿದೆ ಮತ್ತು ಸುಮಾರು 60 ಪೋರ್ಟ್‌ಗಳನ್ನು ಒಳಗೊಂಡಿದೆ. ಇದು ಅದರ ಔಟ್‌ಪುಟ್ ಚಾರ್ಜಿಂಗ್ ಕನೆಕ್ಟರ್‌ಗಳ ಮೂಲಕ 220V ವಿದ್ಯುತ್ ವೋಲ್ಟೇಜ್ ಅನ್ನು ಬೆಂಬಲಿಸುತ್ತದೆ. ಅಷ್ಟು ಮಾತ್ರವಲ್ಲದೆ ಟಿವಿ, ವಾಷಿಂಗ್ ಮೆಷಿನ್‌ಗಳಂತಹ ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಲಾಯಿಸಬಹುದು ಮತ್ತು ಈ ಪವರ್ ಬ್ಯಾಂಕ್‌ನೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಾರ್ಜ್ ಮಾಡಬಹುದು. ಈ ಪವರ್​ ಬ್ಯಾಂಕ್​ ಅನ್ನು ಒಂದು ಕಡೆಯಿಂದ ಮತ್ತೊಂದೆಡೆ ಸಾಗಿಸಲು ಚಕ್ರಗಳನ್ನು ಕೂಡ ಜೋಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ