Identity theft: ಇ-ಕಾಮರ್ಸ್, ಒಟಿಟಿಗಳಲ್ಲಿ ಗುರುತು ಕಳುವು ಪ್ರಕರಣಗಳ ಸಿಕ್ಕಾಪಟ್ಟೆ ಏರಿಕೆ ಬಗ್ಗೆ ತಿಳಿಸಿದ ಅಧ್ಯಯನ

|

Updated on: May 26, 2021 | 1:44 PM

ಇ-ಕಾಮರ್ಸ್ ಹಾಗೂ ಒಟಿಟಿಯಲ್ಲಿ ಗುರುತು ಕಳುವು ಪ್ರಕರಣಗಳ ಸಂಖ್ಯೆ ತುಂಬ ಜಾಸ್ತಿ ಆಗಿದೆ ಎಂದು ಟೆಕ್ನಿಸ್ಯಾಂಕ್ಟ್ ಎಂಬ ಸಂಸ್ಥೆಯೊಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.

Identity theft: ಇ-ಕಾಮರ್ಸ್, ಒಟಿಟಿಗಳಲ್ಲಿ ಗುರುತು ಕಳುವು ಪ್ರಕರಣಗಳ ಸಿಕ್ಕಾಪಟ್ಟೆ ಏರಿಕೆ ಬಗ್ಗೆ ತಿಳಿಸಿದ ಅಧ್ಯಯನ
ಸೈಬರ್ ಕ್ರೈಂ
Follow us on

ಭಾರತದಲ್ಲಿ ನಿರಂತರವಾಗಿ ಮಾಹಿತಿ ಸೋರಿಕೆ, ಹಣಕಾಸು ವಂಚನೆ ಮತ್ತು ಮಾಧ್ಯಮಗಳಿಂದ, ಎಡ್​ಟೆಕ್ ಮತ್ತು ಇ-ರೀಟೇಲ್ ಪ್ಲಾಟ್​ಫಾರ್ಮ್​ಗಳಲ್ಲಿ ಗುರುತು ಕಳುವು ಆಗುತ್ತಿರುವ ಬಗ್ಗೆ ಕೊಚ್ಚಿ ಮೂಲದ ಸೈಬರ್ ಭದ್ರತಾ ಸಂಸ್ಥೆ ಟೆಕ್ನಿಸ್ಯಾಂಕ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅಧ್ಯಯನದಲ್ಲಿ ತಿಳಿದುಬಂದಿದೆ. ಈ ಅಧ್ಯಯನದಲ್ಲಿ 12 ಸಾವಿರಕ್ಕೂ ಹೆಚ್ಚು ಓವರ್-ದ-ಟಾಪ್ (ಒಟಿಟಿ), 7,500 ಇ-ರೀಟೇಲ್ ಮತ್ತು ಇ-ಕಾಮರ್ಸ್ ಹಾಗೂ 4,500 ಎಡ್​ಟೆಕ್ ಖಾತೆಗಳನ್ನು 2021ರ ಜನವರಿಯಿಂದ ಮೇ ಮಧ್ಯೆ ಅಧ್ಯಯನ ಮಾಡಲಾಗಿದೆ. ಡಾರ್ಕ್ ವೆಬ್​ನಲ್ಲಿ ಅಕೌಂಟ್​ ಟೇಕ್​ಓವರ್ (ATO) ಶೇ 90ರಿಂದ 100ರಷ್ಟು ಜಾಸ್ತಿ ಆಗಿದೆ. ATO ಅಂದರೆ ಆನ್​ಲೈನ್ ಗುರುತು ಕಳುವು. ಈ ಮೂಲಕ ಸೈಬರ್ ಕ್ರಿಮಿನಲ್​ಗಳು ಸಂತ್ರಸ್ತರ ಬ್ಯಾಂಕ್ ಖಾತೆಗೆ, ಇ-ಕಾಮರ್ಸ್ ಅಥವಾ ಒಟಿಟಿ ಖಾತೆಗೆ ಸಂಪರ್ಕ ಪಡೆಯುತ್ತಾರೆ. ಹಣವನ್ನು ವಂಚಿಸುವ ಉದ್ದೇಶದಿಂದ ಕ್ರೆಡಿಟ್ ಅಥವಾ ಡೆಬಿಟ್ ಮಾಹಿತಿ ಅಥವಾ ಲಾಯಲ್ಟಿ ಪಾಯಿಂಟ್ಸ್ ಅನ್ನು ಕಳವು ಮಾಡಿ, ಇನ್ನೊಂದು ಸೈಬರ್​ಕ್ರೈಮ್ ಅಥವಾ ವಂಚನೆಗೆ ಸಿದ್ಧವಾಗುತ್ತಾರೆ.

ಅಧ್ಯಯನ ವರದಿ ಪ್ರಕಾರ, ಎಡ್​ಟೆಕ್, ಒಟಿಟಿ ಪ್ಲಾಟ್​ಫಾರ್ಮ್​ಗಳು ಮತ್ತು ಇ-ಕಾಮರ್ಸ್ ಹಾಗೂ ಇ-ರೀಟೇಲ್​ ಅಪ್ಲಿಕೇಷನ್​ಗಳಲ್ಲಿ ಬಹುತೇಕ ಅಪರಾಧಗಳು ನಡೆಯುತ್ತವೆ. ಈ ಅಪರಾಧಗಳು ಸಂಭವಿಸುವುದಕ್ಕೆ ಮುಖ್ಯವಾದ ಕಾರಣ ಏನೆಂದರೆ, ಈ ಬ್ರ್ಯಾಂಡ್​ಗಳಲ್ಲಿ ಮಾಹಿತಿ ಸೋರಿಕೆ ಆಗಿದ್ದ 2014ರ ಪಾಸ್​ವರ್ಡ್ ಭಾರತೀಯರು ಈಗಲೂ ಬಳಸುತ್ತಿದ್ದಾರೆ. ಇದರ ಜತೆಗೆ ಅಧ್ಯಯನದಿಂದ ಗೊತ್ತಾಗಿರುವ ಸಂಗತಿ ಏನೆಂದರೆ, ಒಟಿಟಿ ಯೂಸರ್​ನೇಮ್ ಮತ್ತು ಪಾಸ್​ವರ್ಡ್​ಗೆ ಲಾಕ್​ಡೌನ್ ಶುರುವಾದಾಗಿನಿಂದ ಬೇಡಿಕೆ ಹೆಚ್ಚಾಗಿದೆ. ಇನ್ನು ವಿವಿಧ ಬ್ರ್ಯಾಂಡ್​ಗಳ ಕ್ರೆಡೆನ್ಷಿಯಲ್​ಗಳನ್ನು ಟೆಲಿಗ್ರಾಮ್​ನಲ್ಲಿ ಮತ್ತು ಡಾರ್ಕ್ ವೆಬ್​ನಲ್ಲಿ ನಿರಂತರವಾಗಿ ಮಾರಾಟಕ್ಕೆ ಇಡಲಾಗುತ್ತಿದೆ.

ಬಳಸುವುದಕ್ಕೆ ಸುಲಭವಾಗಲಿ ಎಂಬ ಕಾರಣಕ್ಕೆ ಒಂದೇ ಪಾಸ್​ವರ್ಡ್ ಇಟ್ಟುಕೊಂಡಿರುತ್ತಾರೆ ಮತ್ತು ಡಿಜಿಟಲ್ ಬಿಜಿನೆಸ್ ಕಂಪೆನಿಗಳು ಟೂ ಫ್ಯಾಕ್ಟರ್ ಅಥೆಂಟಿಕೇಷನ್ ಬಳಸುವುದಿಲ್ಲ. ಇದರ ಜತೆಗೆ ಆಗಾಗ ಪಾಸ್​ವರ್ಡ್ ಬದಲಾಯಿಸಬೇಕು ಎಂಬ ಬಗ್ಗೆ ಸೂಚನೆಯೂ ಬರುವುದಿಲ್ಲ. ಹೀಗೆ ಮಾಡುವುದರಿಂದ ಗ್ರಾಹಕರು ಎಲ್ಲಿ ರೇಜಿಗೆ ಮಾಡಿಕೊಳ್ಳುತ್ತಾರೋ ಎಂಬ ಅಳುಕಿಗೆ ಹಾಗೆ ಮಾಡಲಾಗುತ್ತದೆ. ಇದರಿಂದಾಗಿ ATO, ಕ್ರೆಡೆನ್ಷಿಯಲ್​ಗಳನ್ನು ಭೇದಿಸುವ ಅವಕಾಶಗಳು ಹೆಚ್ಚು ಎಂದು ಟೆಕ್ನಿಸ್ಯಾಂಕ್ಟ್ ಸ್ಥಾಪಕ ಹಾಗೂ ಸಿಇಒ ನಂದಕಿಶೋರ್ ಹರಿಕುಮಾರ್ ಹೇಳಿದ್ದಾರೆ.

ಕ್ರೆಡೆನ್ಷಿಯಲ್ ಕಳುವು ಪ್ರಕರಣದಲ್ಲಿ ಹ್ಯಾಕರ್​ಗಳು ಅದನ್ನು ಬಳಸಿಕೊಂಡು, ಸಂತ್ರಸ್ತರ ಇತರ ಖಾತೆಗಳಿಗೂ ಸಂಪರ್ಕ ಪಡೆಯುವುದುಂಟು. ಒಂದೇ ಕ್ರೆಡೆನ್ಷಿಯಲ್​ ಅನ್ನು ಇತರ ಪ್ಲಾಟ್​ಫಾರ್ಮ್​ಗಳಿಗೂ ಸಂತ್ರಸ್ತರು ಬಳಸುತ್ತಾರೆ ಎಂಬುದು ಹ್ಯಾಕರ್​ಗಳ ಲೆಕ್ಕಾಚಾರ. ಇನ್ನು ಅಧ್ಯಯನ ವರದಿ ಹೇಳುವಂತೆ, ಒಟಿಟಿ ಪ್ಲಾಟ್​ಫಾರ್ಮ್​ ಅದರಲ್ಲೂ ಪ್ರೀಮಿಯಂ ಖಾತೆಗಳು ಮುಖ್ಯವಾಗಿ ಇಂಥ ಹ್ಯಾಕರ್​ಗಳ ಗುರಿ ಆಗುತ್ತವೆ. ಎಡ್​ಟೆಕ್ ವಲಯದ ಕ್ರೆಡೆನ್ಷಿಯಲ್​ಗಳು ಟೆಲಿಗ್ರಾಮ್ ಪ್ಲಾಟ್​ಫಾರ್ಮ್​ನಲ್ಲಿ ಜನಪ್ರಿಯ. ಆದ್ದರಿಂದ ಪ್ರಬಲವಾದ ಪಾಸ್​ವರ್ಡ್ ಬಳಸುವಂತೆ, ಅದರಲ್ಲೂ ಎಡ್​ಟೆಕ್ ಬ್ರ್ಯಾಂಡ್​ಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ: ನೀವು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಸುತ್ತೀರಾ? ಈ 8 ಅಪ್ಲಿಕೇಷನ್‌ಗಳನ್ನು ತಕ್ಷಣ ಅನ್​ ಇನ್​ಸ್ಟಾಲ್​ ಮಾಡಿ

ಇದನ್ನೂ ಓದಿ: ಲಕ್ಷಾಂತರ Airtel​ ಮೊಬೈಲ್​ ಗ್ರಾಹಕರ ಮಾಹಿತಿ ಸೋರಿಕೆ.. ಖಾಸಗಿ ಡೇಟಾ ಮಾರಾಟಕ್ಕೆ ಇಟ್ಟ ಹ್ಯಾಕರ್ಸ್​

(Identity theft and ATO increased by 90 to 100% according to study by Kochi based technology company)