ಬಹುಭಾಷಾ ಬುದ್ಧಿವಂತಿಕೆ ಹೊಂದಿರುವ ಅನುಷ್ಕಾ; ಇದು ಭಾರತದ ಬಜೆಟ್ ಸ್ನೇಹಿ ಹುಮನಾಯ್ಡ್ ರೋಬೋಟ್

ರೋಬೊಟಿಕ್ಸ್ ಅಥವಾ ಮೆಕಾಟ್ರಾನಿಕ್ಸ್ ಕೋರ್ಸ್‌ಗಳ ಕುರಿತು ಮಾಹಿತಿಗಾಗಿ ನೀವು ಉತ್ತರ ಪ್ರದೇಶದ ಕೃಷ್ಣಾ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಕೆಐಇಟಿ) ಕ್ಯಾಂಪಸ್‌ಗೆ ಭೇಟಿ ನೀಡಿದರೆ, ನೀವು ಕೃತಕ ಬುದ್ಧಿಮತ್ತೆ (AI)-ಚಾಲಿತ ಹುಮನಾಯ್ಡ್ ರೋಬೋಟ್ ರಿಸೆಪ್ಷನಿಸ್ಟ್ ಅನುಷ್ಕಾ ಅವರೊಂದಿಗೆ ಸಂವಹನ ನಡೆಸಬಹುದು.ದವಡೆ ಮತ್ತು ಕತ್ತಿನ ಚಲನೆಗಳ ಜೊತೆಗೆ 50 ಕ್ಕೂ ಹೆಚ್ಚು ಕೈ ಸನ್ನೆಗಳು, 30 ಕಣ್ಣಿನ ಸನ್ನೆಗಳನ್ನು ಪ್ರದರ್ಶಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾದ ಅನುಷ್ಕಾ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ

ಬಹುಭಾಷಾ ಬುದ್ಧಿವಂತಿಕೆ ಹೊಂದಿರುವ ಅನುಷ್ಕಾ; ಇದು ಭಾರತದ ಬಜೆಟ್ ಸ್ನೇಹಿ ಹುಮನಾಯ್ಡ್ ರೋಬೋಟ್
ಅನುಷ್ಕಾ ಹುಮನಾಯ್ಡ್
Follow us
|

Updated on: Sep 09, 2024 | 2:29 PM

2010ರಲ್ಲಿ ರಜನಿಕಾಂತ್ ನಟನೆಯ ಎಂದಿರನ್ (ತಮಿಳು) ರೋಬೋಟ್ ಬಗ್ಗೆ ಇರುವ ಚಿತ್ರವಾಗಿತ್ತು. ಆನಂತರ ಮಲಯಾಳಂನಲ್ಲಿ ಆ್ಯಂಡ್ರಾಯ್ಡ್ ಕುಂಞಪ್ಪನ್ ಎಂಬ ಸಿನಿಮಾದಲ್ಲಿ ರೋಬೋಟ್ ಎಲ್ಲರ ಮನೆಸೂರೆಗೊಂಡಿತ್ತು. ಹೆಚ್ಚಿನ ಜನರು ಹುಮನಾಯ್ಡ್ ರೋಬಟ್‌ಗಳು ಎಂದು ಹೇಳುವಾಗ ಕತೆಗಳಲ್ಲಿನ ರೋಬೋಟ್ ಬಗ್ಗೆ ಅಥವಾ ಸಿನಿಮಾ, ಸೀರಿಸ್ ನಲ್ಲಿ ಬರುವ ರೋಬೊಟ್ ಗಳ ಬಗ್ಗೆ ಯೋಚಿಸುತ್ತಾರೆ. ಇತ್ತೀಚೆಗೆ ಬಾಲಿವುಡ್ ನಲ್ಲಿ ‘ತೇರಿ ಬಾತೋಂ ಮೇ ಐಸಾ ಉಲ್ಜಾ ಜೀಯಾ’ ಎಂಬ ಚಿತ್ರ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಹುಮನಾಯ್ಡ್ ರೋಬೋಟ್ ಯಂತ್ರದಂತೆ ಅಲ್ಲ ಥೇಟ್ ಮನುಷ್ಯರಂತೆಯೇ ಇತ್ತು. ಅದೊಂದು ರೋಬೋಟ್ ಎಂದು ನೋಡಿದ ಕೂಡಲೇ ಗೊತ್ತಾಗಲ್ಲ, ಆದರೆ ಚಾರ್ಜ್  ಮಾಡಬೇಕು. ಇದೆಲ್ಲ ಸಿನಿಮಾ ಕತೆಯಾದರೂ  ಥೇಟ್ ಮನುಷ್ಯರನ್ನೇ ಹೋಲುವ ರೋಬೋಟ್‌ಗಳು ಬರುವ ದಿನ ದೂರವಿಲ್ಲ.

ಏನಿದು ಹುಮನಾಯ್ಡ್ ರೋಬೋಟ್?

ಹುಮನಾಯ್ಡ್ ರೋಬೋಟ್ ಎನ್ನುವುದು ನೋಟ ಮತ್ತು ನಡವಳಿಕೆ ಎರಡರಲ್ಲೂ ಮಾನವ ದೇಹವನ್ನು ಹೋಲುವ ರೋಬೋಟ್ ಆಗಿದೆ. ಇದು ಸಾಮಾನ್ಯವಾಗಿ ತಲೆ, ಕತ್ತು, ತೋಳುಗಳು ಮತ್ತು ಕಾಲುಗಳನ್ನು ಹೊಂದಿರುತ್ತದೆ. ಇವು  ಮಾನವ ಚಲನೆ ಮತ್ತು ಪರಸ್ಪರ ಕ್ರಿಯೆಯನ್ನು ಅನುಕರಿಸುತ್ತದೆ. ಸುಧಾರಿತ ಸಂವೇದಕಗಳು, AI ಮತ್ತು ಯಂತ್ರ ಕಲಿಕೆಯೊಂದಿಗೆ ಸುಸಜ್ಜಿತವಾಗಿರುವ ಹುಮನಾಯ್ಡ್ ರೋಬೋಟ್‌ಗಳು ವಾಕಿಂಗ್, ಮಾತನಾಡುವುದು ಮತ್ತು ಪ್ರಚೋದಕಗಳಿಗೆ ಪ್ರತಿಕ್ರಿಯಿಸುವಂತಹ ಕಾರ್ಯಗಳನ್ನು ಮಾಡಲು ಸಮರ್ಥವಾಗಿವೆ

ಹುಮನಾಯ್ಡ್ ರೋಬೋಟ್ ಅನುಷ್ಕಾ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಕೃಷ್ಣಾ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಕೆಐಇಟಿ) ಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ತಂಡವು ಅನುಷ್ಕಾ ಎಂಬ ಹೆಸರಿನ ಹುಮನಾಯ್ಡ್ ರೋಬೋಟ್ ನಿರ್ಮಿಸಿದೆ. ಅನುಷ್ಕಾದ ಪ್ರಸ್ತುತ ಆವೃತ್ತಿಯು ಪ್ರಾಥಮಿಕವಾಗಿ ಸಂದರ್ಶಕರನ್ನು ಸ್ವಾಗತಿಸಲು ಮತ್ತು ಅವರು ಕೇಳಿದ್ದಕ್ಕೆ ಸಂಬಂಧಿತ ಮಾಹಿತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಆಕೆಯ ಸೃಷ್ಟಿಕರ್ತರು ಅನುಷ್ಕಾ ರೋಬೋಟ್ ರಿಸೆಪ್ಷನಿಸ್ಟ್‌ಗಿಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳುತ್ತಾರೆ.

ಮಾರ್ಚ್ 2024 ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡ ಅನುಷ್ಕಾ ಉತ್ತರ ಭಾರತದಲ್ಲಿ ಅಭಿವೃದ್ಧಿಪಡಿಸಿದ ಸ್ವಾಯತ್ತ ಚಲನೆಯನ್ನು ಹೊಂದಿರುವ ಮೊದಲ ಹುಮನಾಯ್ಡ್ ರೋಬೋಟ್ ಆಗಿದೆ. ವೈದಿಕ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಆಕೆಯನ್ನು ವಿನ್ಯಾಸಗೊಳಿಸಲಾಗಿದೆ ಎಂಬ ಹೇಳಿಕೆಯು ಸಹಜವಾಗಿ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತ್ತು.

2 ಲಕ್ಷ ರೂಪಾಯಿ ಬಜೆಟ್‌ನಲ್ಲಿ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೆಐಇಟಿಯ ಜಂಟಿ ನಿರ್ದೇಶಕ ಡಾ ಮನೋಜ್ ಗೋಯೆಲ್ ಹೇಳಿದ್ದಾರೆ. ಸಾಮಾನ್ಯವಾಗಿ ಹುಮನಾಯ್ಡ್ ರೋಬೋಟ್‌ಗಳನ್ನು ನಿರ್ಮಿಸಲು 7-8 ಕೋಟಿ ರೂಪಾಯಿಗಳು ಬೇಕಾಗುತ್ತದೆ. ಆದರೆ ಈ ಅನುಷ್ಕಾ ಎಂಬ ಹುಮನಾಯ್ಡ್ ಕೆಲವು ಘಟಕಗಳನ್ನು ಸ್ಥಳೀಯ ಡಂಪ್ ಯಾರ್ಡ್‌ನಿಂದ ಪಡೆಯಲಾಗಿದೆ ಎಂದರೆ ನೀವು ನಂಬಲೇಬೇಕು.

ಅನುಷ್ಕಾಳ ಮುಖವು 3D-ಮುದ್ರಿತ ಅಂಶಗಳನ್ನು ಹೊಂದಿದೆ. ಇದಕ್ಕೆ ಹೊಂದಿಕೊಳ್ಳುವ ಸಿಲಿಕೋನ್ ಚರ್ಮವನ್ನು ಭಾರತದಲ್ಲಿ ಮೇಡಮ್ ಟುಸ್ಸಾಡ್ಸ್ ನಲ್ಲಿ ಮಾಡಲಾಗಿದೆ. ಗಮನಾರ್ಹವಾಗಿ, ಆಕೆಯ ಮುಖದ ವೈಶಿಷ್ಟ್ಯಗಳನ್ನು ದಿವಂಗತ ಫ್ರೆಂಚ್ ರಾಜಕುಮಾರಿಯ ಮಾದರಿಯಲ್ಲಿ ರೂಪಿಸಲಾಗಿದೆ. ಜನರೇಟಿವ್ AI ಅನ್ನು ಇಲ್ಲಿ ಬಳಸಲಾಗಿದ್ದು, ಈ ಪ್ರಾಜೆಕ್ಟ್ ಪೂರ್ಣಗೊಳ್ಳಲು ಸರಿಸುಮಾರು ಒಂದೂವರೆ ವರ್ಷಗಳನ್ನು ತೆಗೆದುಕೊಂಡಿತು.

ಮಾಸ್ಟರ್-ಸ್ಲೇವ್ ಕಾನ್ಫಿಗರೇಶನ್

ಮಾನವನ ಸನ್ನೆಗಳನ್ನು ಅನುಕರಿಸಲು ಅನುಷ್ಕಾಗೆ ಅನುಮತಿಸುವ ತಂತ್ರಜ್ಞಾನವು ಮಾಸ್ಟರ್-ಸ್ಲೇವ್ ಆರ್ಕಿಟೆಕ್ಚರ್ ಅನ್ನು ಬಳಸಿಕೊಳ್ಳುತ್ತದೆ. ಅಲ್ಲಿ i7 ಪ್ರೊಸೆಸರ್ ಮೆದುಳಾಗಿ ಕಾರ್ಯನಿರ್ವಹಿಸುತ್ತದೆ. ಮೈಕ್ರೊಕಂಟ್ರೋಲರ್‌ಗಳು ಮತ್ತು ಸರ್ವೋ ಮೋಟಾರ್‌ಗಳ ನೆಟ್‌ವರ್ಕ್‌ ಕೈಗಳು, ಕುತ್ತಿಗೆ, ದವಡೆಗಳು, ಕಣ್ಣುಗಳು ಇತ್ಯಾದಿಗಳ ಚಲನೆಯನ್ನು ನಿಯಂತ್ರಿಸುತ್ತದೆ. ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಲು ಅನುಷ್ಕಾ ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಂಸಿಂಗ್ (NLP) ಬಳಸುತ್ತದೆ. ಆಕೆಯ ನೆಕ್ಲೇಸ್‌ನ ಹಿಂದೆ ಇರಿಸಲಾಗಿರುವ ಮೈಕ್ರೊಫೋನ್‌ ಮೂಲಕ ವ್ಯಕ್ತಿಯಿಂದ ಧ್ವನಿ ಆಜ್ಞೆಗಳನ್ನು ಡಿಜಿಟಲ್ ಸಿಗ್ನಲ್‌ಗಳಾಗಿ ಪರಿವರ್ತಿಸಲಾಗುತ್ತದೆ. ಪೈಥಾನ್ ಭಾಷೆಯಲ್ಲಿ ಬರೆಯಲಾದ ಪ್ರೋಗ್ರಾಂ ಅವುಗಳನ್ನು ಅರ್ಥಪೂರ್ಣ ಡೇಟಾವಾಗಿ ಪರಿವರ್ತಿಸಲು NLP ಅನ್ನು ಬಳಸುತ್ತದೆ, ಅದನ್ನು ರೋಬೋಟ್ ಪ್ರಕ್ರಿಯೆಗೊಳಿಸುತ್ತದೆ. ನಂತರ AI ಚಾಟ್‌ಬಾಟ್, OpenAI ನಿಂದ ಪಡೆದುಕೊಂಡಿರುವ 500 ಟೆರಾಬೈಟ್‌ಗಳ ಮಾಹಿತಿಯನ್ನು ಹೊಂದಿರುವ ಡೇಟಾಬೇಸ್‌ನಿಂದ ಅಗತ್ಯವಿರುವ ಡೇಟಾವನ್ನು ಪಡೆಯುತ್ತದೆ.

OpenAI ನ ವಿಶಾಲವಾದ ಪೈಥಾನ್ ಲೈಬ್ರರಿಯಿಂದ ಯಾವ ಡೇಟಾವನ್ನು ಆಯ್ಕೆ ಮಾಡಬೇಕೆಂದು ಅನುಷ್ಕಾ ನಿರ್ಧರಿಸಿದಾಗ ಕೃತಕ ಬುದ್ಧಿಮತ್ತೆ ಇಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ನಿರ್ದಿಷ್ಟ ಡೇಟಾದೊಂದಿಗೆ ಪದಗಳನ್ನು ಹೊಂದಿಸುತ್ತದೆ ಮತ್ತು ಹೇಗೆ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹುಮನಾಯ್ಡ್ ಅನ್ನು “ಆಶಾವಾದಿ ರೀತಿಯಲ್ಲಿ” ಪ್ರೋಗ್ರಾಮ್ ಮಾಡಲಾಗಿದೆ ಎಂದು ತಂಡವು ಹೇಳಿದೆ.

ಹುಮನಾಯ್ಡ್ ಮುಖ ಗುರುತಿಸುವಿಕೆಗಾಗಿ ತರಬೇತಿ ಪಡೆದ ಕಂಪ್ಯೂಟರ್ ದೃಷ್ಟಿಯನ್ನು ಸಹ ಹೊಂದಿದೆ. ಇದು ಹೆಚ್ಚಿನ ರೆಸಲ್ಯೂಶನ್, 30 ಮೆಗಾಪಿಕ್ಸೆಲ್ ವೆಬ್‌ಕ್ಯಾಮ್‌ ಹೊಂದಿದೆ. ಅನುಷ್ಕಾ ತನ್ನಿಂದ 10 ಮೀಟರ್ ದೂರದಲ್ಲಿ ನಿಂತಿರುವ ವ್ಯಕ್ತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದು, ಒಬ್ಬ ವ್ಯಕ್ತಿಯನ್ನು ತಾನು ಮೊದಲು ಭೇಟಿಯಾದ ವ್ಯಕ್ತಿ ಎಂದು ನಿಖರವಾಗಿ ಗುರುತಿಸಲು ರೋಬೋಟ್ ಎರಡು ಅಥವಾ ಮೂರು ಅವಧಿಗಳನ್ನು ತೆಗೆದುಕೊಳ್ಳಬಹುದು ಎಂದು ತಂಡ ಹೇಳಿದೆ.

ಹುಮನಾಯ್ಡ್ ರೋಬೋಟ್‌ಗಳಲ್ಲಿ ಸ್ವಯಂ ತಿಳುವಳಿಕೆ

ಪ್ರಸ್ತುತ ಆರ್ಟಿಫಿಷಲ್ ಜನರಲ್ ಇಂಟೆಲಿಜೆನ್ಸ್ (AGI) ಅನ್ನು ಇನ್ನೂ ಸಾಧಿಸದ ಕಾರಣ ಅನುಷ್ಕಾದಂತಹ ಹುಮನಾಯ್ಡ್ ರೋಬೋಟ್‌ಗಳು ಸ್ವಯಂ ತಿಳುವಳಿಕೆ ಉಳ್ಳವು ಎಂದು ನಿಖರವಾಗಿ ವಿವರಿಸಲಾಗುವುದಿಲ್ಲ. ಆದರೆ, ಆಕೆಗೆ ಯಾವುದೇ ಬುದ್ಧಿವಂತಿಕೆಯ ಕೊರತೆಯಿದೆ ಎಂದಲ್ಲ. “ಕೃತಕ ಬುದ್ಧಿಮತ್ತೆಯ ನಾಲ್ಕು ಹಂತಗಳು ಇಲ್ಲಿ ಕಾರ್ಯನಿರ್ವಹಿಸುತ್ತವೆ. ಒಂದು ಅವಳು ನಿಮ್ಮ ಮಾತನ್ನು ಕೇಳಿದಾಗ, ಇನ್ನೊಂದು ಕಂಪ್ಯೂಟರ್ ದೃಷ್ಟಿಯ ಮೂಲಕ ನಿಮ್ಮ ಚಿತ್ರವನ್ನು ವೀಕ್ಷಿಸಿದಾಗ ಮತ್ತು ಅರ್ಥಮಾಡಿಕೊಳ್ಳುವಾಗ, ಮೂರನೆಯದು ಅವಳು ನಿಮ್ಮೊಂದಿಗೆ ಸಂವಹನ ನಡೆಸಲು ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸಿಂಗ್ ಬಳಸಿದಾಗ ಮತ್ತು ಅಂತಿಮ ಹಂತವು ಸರ್ವೋ ಮೋಟಾರ್‌ಗಳನ್ನು ಸಿಂಕ್‌ನಲ್ಲಿ ಕೆಲಸ ಮಾಡಲು ಆದೇಶಿಸುತ್ತದೆ. ಆದಾಗ್ಯೂ, ಅನುಷ್ಕಾಳ ಸಂಭಾಷಣೆಯು ತೀಕ್ಷ್ಣವಾದ, ಸ್ಪಷ್ಟ ಮತ್ತು ತಿಳಿವಳಿಕೆಯಿಂದ ಕೂಡಿದೆ. ಇಲ್ಲಿ ಯಾವುದೇ ಗೊಂದಲಗಳು ಇಲ್ಲ.

‘ಅನ್‌ಕ್ಯಾನಿ ವ್ಯಾಲಿ’ ಪರಿಣಾಮ

ವಾಸ್ತವಿಕವಾಗಿ ಕಾಣುವ ಹುಮನಾಯ್ಡ್ ರೋಬೋಟ್‌ಗಳನ್ನು ತಯಾರಿಸುವಾಗ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ನಿಸ್ಸಂದೇಹವಾಗಿ ಹಲವಾರು ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಾರೆ. ಅದೇ ಅನ್‌ಕ್ಯಾನಿ ವ್ಯಾಲಿ ಎಫೆಕ್ಟ್. “ಅನ್‌ಕ್ಯಾನಿ ವ್ಯಾಲಿ” ಎಫೆಕ್ಟ್ ಹುಮನಾಯ್ಡ್ ಆಕೃತಿಯು ಬಹುತೇಕ ಮಾನವನಂತೆ ಕಾಣಿಸಿಕೊಂಡಾಗ ಸಂಭವಿಸುತ್ತದೆ. ಆದರೆ ಸ್ವಲ್ಪ ಅಪೂರ್ಣತೆಗಳನ್ನು ಹೊಂದಿದೆ. ಇದು ವೀಕ್ಷಕರಲ್ಲಿ ಅಸ್ವಸ್ಥತೆ ಅಥವಾ ವಿಲಕ್ಷಣತೆಯ ಭಾವನೆಗಳನ್ನು ಉಂಟುಮಾಡುತ್ತದೆ. ಸರಳವಾಗಿ ಹೇಳುವುದಾದರೆ, ‘ಅನ್‌ಕ್ಯಾನಿ ವ್ಯಾಲಿ’ ಎಂಬುದು ನಿಜವಾದ ಮನುಷ್ಯನಂತೆ ಕಾಣಲು ತುಂಬಾ ಹತ್ತಿರವಿರುವ ರೋಬೋಟ್ ಅನ್ನು ನೋಡಿದಾಗ ನಮ್ಮಲ್ಲುಂಟಾಗುವ ಒಂದು ರೀತಿಯ ಗೊಂದಲದ ಭಾವನೆಯನ್ನು ವಿವರಿಸುವ ಪದವಾಗಿದೆ. Gizmodo ವರದಿಯ ಪ್ರಕಾರ, ವೀಕ್ಷಕರು ಪರದೆಯ ಮೇಲೆ ಮಾನವ-ರೀತಿಯ ರೋಬೋಟ್ ಅಥವಾ CGI ಪಾತ್ರವನ್ನು ನೋಡಿದಾಗಲೆಲ್ಲಾ ಆಗುವ ಗೊಂದಲವನ್ನು ಉಲ್ಲೇಖಿಸಲು ಇದನ್ನು ಮೊದಲು ಬಳಸಲಾಯಿತು. ಸೋಫಿಯಾದಂತಹ ಸುಧಾರಿತ ಹುಮನಾಯ್ಡ್‌ಗಳಲ್ಲಿನ ಅಭಿವ್ಯಕ್ತಿಯ ಮಟ್ಟವು ವಿಲಕ್ಷಣ ಕಣಿವೆಯ ಪರಿಸ್ಥಿತಿಗೆ ಕಾರಣವಾಗಬಹುದು. ಏಕೆಂದರೆ ಅವಳು ಬಹುತೇಕ ಮನುಷ್ಯನಂತೆ ಕಾಣುತ್ತಾಳೆ. ಇದು ನಿಜವಾದ ಮಾನವರಲ್ಲಿ ಅಪನಂಬಿಕೆಯನ್ನು ಉಂಟುಮಾಡಬಹುದು ಮತ್ತು ಸಾಮಾಜಿಕ ರೋಬೋಟ್‌ಗಳ ಉದ್ದೇಶಕ್ಕೆ ಅಡ್ಡಿಯಾಗಬಹುದು. ಸೈದ್ಧಾಂತಿಕವಾಗಿ, AI- ರಚಿತವಾದ ವಿ ಡಿಯೊಗಳು ಅಥವಾ ಜನರ ಚಿತ್ರಗಳು ಸಹ ಇದೇ ರೀತಿಯ ವಿಲಕ್ಷಣವಾದ, ಗೊಂದಲದ ಭಾವನೆಯನ್ನು ಉಂಟುಮಾಡಬಹುದು.

ಇದನ್ನೂ ಓದಿ: Meta AI: ಫಟಾಫಟ್ ಮಾಹಿತಿ ಕೊಡುವ ಮೆಟಾ ಎಐ ಚಾಟ್‌ಬಾಟ್ ಬಳಕೆ ಹೇಗೆ?

ಅನುಷ್ಕಾಳ ವೈಶಿಷ್ಟ್ಯ ಮತ್ತು ವಿನ್ಯಾಸ ಹೀಗಿದೆ

ಸಾಂಸ್ಕೃತಿಕ ನಂಟು : ಅನುಷ್ಕಾ ವೈದಿಕ ತತ್ವಗಳ ಮೇಲೆ ವಿನ್ಯಾಸಗೊಳಿಸಿದ ಮೊದಲ ಭಾರತೀಯ ರೋಬೋಟ್ ಆಗಿದ್ದು, ಚಿತ್ತ, ಮಾನಸ್, ಅಹಂಕಾರಂ ಮತ್ತು ಬುದ್ಧಿಯೊಂದಿಗೆ ಮನಸ್ಸಿನ ರಚನೆಯನ್ನು ಸಂಯೋಜಿಸಿ, ಪೈಥಾನ್ ಅನ್ನು ಬಳಸಿಕೊಂಡು ಪ್ರೋಗ್ರಾಮ್ ಮಾಡಲಾಗಿದೆ. ಇದು  ಸಂಪ್ರದಾಯ ಮತ್ತು ನಾವೀನ್ಯತೆಯನ್ನು ಸಂಯೋಜಿಸುತ್ತದೆ.

ಬಹುಭಾಷಾ ಬುದ್ಧಿವಂತಿಕೆ: ಅನುಷ್ಕಾ ಎಲ್ಲಾ ಭಾರತೀಯ ಭಾಷೆಗಳನ್ನು ಗುರುತಿಸಬಹುದು ಮತ್ತು ಗ್ರಹಿಸಬಹುದು, ವೈವಿಧ್ಯಮಯ ಪ್ರೇಕ್ಷಕರೊಂದಿಗೆ ತಡೆರಹಿತ ಸಂವಹನವನ್ನು ಖಾತ್ರಿಪಡಿಸಿಕೊಳ್ಳಬಹುದು.

ಕಸ್ಟಮ್ ಸ್ಯೂಡೋ-ಆಪರೇಟಿಂಗ್ ಸಿಸ್ಟಮ್: ಅನುಷ್ಕಾ BOSS (ಬಾಟ್ ಆಪರೇಷನ್ ಶೆಡ್ಯೂಲಿಂಗ್ ಸಿಸ್ಟಮ್) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನೈಜ-ಸಮಯದ ಡೇಟಾ ಪ್ರಕ್ರಿಯೆಯ ಆಧಾರದ ಮೇಲೆ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ವಿಷುಯಲ್ ಗ್ರಹಿಕೆ ಸಾಮರ್ಥ್ಯ: ಅನುಷ್ಕಾ ಕಂಪ್ಯೂಟರ್ ದೃಷ್ಟಿ ಸಾಮರ್ಥ್ಯಗಳು ಹೊಸ ಏಕ-ಕ್ಯಾಮೆರಾ ವಿಧಾನವನ್ನು ಬಳಸಿಕೊಂಡು ಮುಖ ಗುರುತಿಸುವಿಕೆ, ವಸ್ತು ಗುರುತಿಸುವಿಕೆ ಮತ್ತು ದೂರದ ಅಂದಾಜುಗಳನ್ನು ಸಕ್ರಿಯಗೊಳಿಸುತ್ತದೆ.

ಬಹುಮುಖತೆಗಾಗಿ IoT ಇಂಟಿಗ್ರೇಷನ್: ಅನುಷ್ಕಾ  ಯಾಂತ್ರೀಕೃತಗೊಂಡ ವ್ಯವಸ್ಥೆಯಾಗಿದ್ದು, ಸಾಂಪ್ರದಾಯಿಕ ಸ್ವಾಗತಕಾರ ಪಾತ್ರವನ್ನು ಮೀರಿ ಬಹುಮುಖತೆಯನ್ನು ಪ್ರದರ್ಶಿಸುತ್ತದೆ.

ಮತ್ತಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ