JioPhone Next: ಅತೀ ಕಡಿಮೆ ಬೆಲೆಗೆ ಸೂಪರ್ ಸ್ಮಾರ್ಟ್​ಫೋನ್: ಜಿಯೋ ನೆಕ್ಸ್ಟ್​ ಬಿಡುಗಡೆಗೆ ರೆಡಿ

JioPhone Next: ಗೂಗಲ್ ಸಹಯೋಗದಲ್ಲಿ ತಯಾರಿಸಿದ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 11 (ಗೋ ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸಲಿದೆ. ಜಿಯೋ ಈ ಸ್ಮಾರ್ಟ್‌ಫೋನ್‌ನ ಯಾವುದೇ ವಿಶೇಷತೆಗಳನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ.

JioPhone Next: ಅತೀ ಕಡಿಮೆ ಬೆಲೆಗೆ ಸೂಪರ್ ಸ್ಮಾರ್ಟ್​ಫೋನ್: ಜಿಯೋ ನೆಕ್ಸ್ಟ್​ ಬಿಡುಗಡೆಗೆ ರೆಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 26, 2021 | 7:29 PM

ಈ ಹಿಂದೆ ರಿಲಯನ್ಸ್ (Reliance) ತಿಳಿಸಿದಂತೆ ಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್​ಫೋನ್ (Smartphone) ಬಿಡುಗಡೆ ಮಾಡಲು ಜಿಯೋ (Jio) ಕಂಪೆನಿ ಮುಂದಾಗಿದೆ. ಅದರಂತೆ ಇದೀಗ ಅದರ ಮೊದಲ ಆವೃತ್ತಿ ಜಿಯೋ ಫೋನ್ ನೆಕ್ಸ್ಟ್ (JioPhone Next)​​ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅದರಂತೆ ಮುಂದಿನ ತಿಂಗಳಲು ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ಜಿಯೋ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ET ಟೆಲಿಕಾಂ ವರದಿಯ ಪ್ರಕಾರ, ರಿಲಯನ್ಸ್ ಜಿಯೋ (Reliance Jio) ಮೊಬೈಲ್ ಫೋನ್ ಬಿಡಿಭಾಗಗಳ ತಯಾರಿಕಾ ಕಂಪೆನಿ UTL Neolync 5 ಮಿಲಿಯನ್ ಯೂನಿಟ್​ಗಾಗಿ ಆರ್ಡರ್ ನೀಡಿದೆ ಎಂದು ತಿಳಿಸಿದೆ. ಪ್ರಸ್ತುತ ಮಾಹಿತಿಯಂತೆ ಜನಪ್ರಿಯ ಜಿಯೋಫೋನ್ ನೆಕ್ಸ್ಟ್ ಸೆಪ್ಟೆಂಬರ್ 10 ರಂದು ಬಿಡುಗಡೆ ಆಗಲಿದ್ದು, ಪ್ರೀ ಬುಕ್ಕಿಂಗ್ ಅವಕಾಶ ನೀಡುವ ಸಾಧ್ಯತೆಯಿದೆ.

ಗೂಗಲ್ ಸಹಯೋಗದಲ್ಲಿ ತಯಾರಿಸಿದ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 11 (ಗೋ ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸಲಿದೆ. ಜಿಯೋ ಈ ಸ್ಮಾರ್ಟ್‌ಫೋನ್‌ನ ಯಾವುದೇ ವಿಶೇಷತೆಗಳನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಇದಾಗ್ಯೂ ಒಂದಷ್ಟು ಮಾಹಿತಿಗಳು ಲೀಕ್ ಆಗಿದೆ. ಸೋರಿಕೆಯಾದ ಮಾಹಿತಿ ಪ್ರಕಾರ ಜಿಯೋಫೋನ್ ನೆಕ್ಸ್ಟ್ 2 ಜಿಬಿ ಮತ್ತು 3 ಜಿಬಿ RAM ರೂಪಾಂತರಗಳಲ್ಲಿ ಲಭ್ಯವಿರಲಿದೆ. ಹಾಗೆಯೇ ಇದರಲ್ಲಿ ಇದರಲ್ಲಿ 16 ಜಿಬಿ ಮತ್ತು 32 ಜಿಬಿ ಇನ್​ಬಿಲ್ಟ್ ಸ್ಟೊರೇಜ್ ಆಯ್ಕೆಗಳಿರಲಿದೆ ಎಂದು ತಿಳಿದು ಬಂದಿದೆ. ಇದಲ್ಲದೇ, ಜಿಯೋಫೋನ್ ನೆಕ್ಸ್ಟ್ 5.5-ಇಂಚಿನ ಡಿಸ್ಪ್ಲೇ ಮತ್ತು 2500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನು ಇದರಲ್ಲಿ 13 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್​ನ ಎರಡು ಕ್ಯಾಮೆರಾಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಜಿಯೋಫೋನ್ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು: ಟೆಲಿಕಾಂ ದೈತ್ಯ ಜಿಯೋದ ಮುಂಬರುವ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ “ಜಿಯೋಫೋನ್ ನೆಕ್ಸ್ಟ್” ಬಿಡುಗಡೆಗೆ ಕೆಲವು ವಾರಗಳ ಮಾತ್ರ ಬಾಕಿ ಉಳಿದಿದೆ. ಬಿಡುಗಡೆಗೆ ಮುನ್ನ ಲೀಕ್ ಆಗಿರುವ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ನಾಪ್‌ಡ್ರಾಗನ್ 215 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ . ಹಾಗೆಯೇ 2 ಜಿಬಿ/3 ಜಿಬಿ RAM ಮತ್ತು 16 ಜಿಬಿ/32 ಜಿಬಿ ಸ್ಟೊರೇಜ್ ಇರಲಿದೆ. ಅದೇ ರೀತಿ ಕ್ಯಾಮೆರಾ ಮಾಡ್ಯೂಲ್ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಹೊಂದಿರಲಿದೆ. ಇದಲ್ಲದೇ, ಸ್ಮಾರ್ಟ್​ಫೋನ್ 3.5 ಎಂಎಂ ಆಡಿಯೋ ಜಾಕ್ ಅನ್ನು ಸಹ ಇದರಲ್ಲಿರಲಿದೆ.

ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 11 (ಗೋ ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ, 720 × 1,440 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಎಚ್‌ಡಿ+ ಡಿಸ್‌ಪ್ಲೇಯನ್ನು ಸ್ಮಾರ್ಟ್ ಫೋನ್ ಒಳಗೊಂಡಿರುತ್ತದೆ. ಕ್ವಾಡ್-ಕೋರ್ ಸ್ನಾಪ್‌ಡ್ರಾಗನ್ 215 SoC 1.3GHz ಪ್ರೊಸೆಸರ್ ಇದರಲ್ಲಿರಲಿದೆ ಎಂದು ಸೋರಿಕೆಯಾದ ಮಾಹಿತಿಗಳು ಸೂಚಿಸಿವೆ. ಇನ್ನು ಈ ಸ್ಮಾರ್ಟ್​ಫೋನ್ ಕೇವಲ 3,499 ರೂ.ಗೆ ಜಿಯೋ ಕಂಪೆನಿ ಮಾರಾಟ ಮಾಡಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(Reliance Jio Might Place 5 Million Units of JioPhone Next)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ