ಸ್ಯಾನ್‌ಡಿಸ್ಕ್​ ವೈರ್‌ಲೆಸ್ ಚಾರ್ಜರ್ ಬಿಡುಗಡೆ: ಇದರ ವಿಶೇಷತೆಗಳೇನು ಗೊತ್ತಾ?

ವೆಸ್ಟರ್ನ್ ಡಿಜಿಟಲ್ ಹೇಳುವಂತೆ ಸ್ಯಾನ್ಡಿಸ್ಕ್ ಇಕ್ಸ್ಪ್ಯಾಂಡ್ ವೈರ್ಲೆಸ್ ಚಾರ್ಜರ್ ಸಿಂಕ್ ಫಾಸ್ಟ್ ಚಾರ್ಜರ್ ಸಮಯದಲ್ಲಿ 10W ಪವರ್ ನೀಡುತ್ತದೆ.

ಸ್ಯಾನ್‌ಡಿಸ್ಕ್​ ವೈರ್‌ಲೆಸ್ ಚಾರ್ಜರ್ ಬಿಡುಗಡೆ: ಇದರ ವಿಶೇಷತೆಗಳೇನು ಗೊತ್ತಾ?
SanDisk Ixpand Wireless Charger
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 26, 2021 | 8:06 PM

ವೆಸ್ಟರ್ನ್ ಡಿಜಿಟಲ್ ಕಂಪೆನಿ ಸ್ಮಾರ್ಟ್​ಫೋನ್ (Smartphone) ಚಾರ್ಜಿಂಗ್ ವಿಭಾಗಕ್ಕೂ ಕಾಲಿಟ್ಟಿದೆ. ಕಂಪನಿಯು ಸ್ಯಾನ್‌ಡಿಸ್ಕ್ ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜರ್ ಸಿಂಕ್ ವೈರ್​ಲೆಸ್ ಚಾರ್ಜರ್ (SanDisk Ixpand Wireless Charger)​ ಅನ್ನು ಪರಿಚಯಿಸಿದೆ. ಈ ಹೊಸ ಉತ್ಪನ್ನವು ಕೇವಲ ವೈರ್‌ಲೆಸ್ ಚಾರ್ಜರ್ ಮಾತ್ರವಲ್ಲ, ಅದು ನಿಮ್ಮ ಫೋನ್‌ನ ಡೇಟಾವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತದೆ. ಇದರ ಸಹಾಯದಿಂದ, ಬಳಕೆದಾರರು ತಮ್ಮ ಡೇಟಾವನ್ನು Qi ಹೊಂದಾಣಿಕೆಯ ಸಾಧನಗಳಲ್ಲಿ ಬ್ಯಾಕಪ್ ಮಾಡಬಹುದು.

ಕಂಪನಿಯು ಕೈಗೆಟುಕುವ ಸ್ಯಾನ್‌ಡಿಸ್ಕ್ ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜರ್ 15W ಅನ್ನು ಅಡಾಪ್ಟರ್‌ನೊಂದಿಗೆ ಬಿಡುಗಡೆ ಮಾಡಿದೆ. ಇಲ್ಲಿ ವೈರ್‌ಲೆಸ್ ಚಾರ್ಜರ್ 15W ವೇಗದ ಚಾರ್ಜಿಂಗ್ ನೀಡುತ್ತದೆ. ಇದು ಸ್ಯಾನ್‌ಡಿಸ್ಕ್ ಎಸಿ ಅಡಾಪ್ಟರ್ ಮತ್ತು ಯುಎಸ್‌ಬಿ ಟೈಪ್ ಸಿ ಕೇಬಲ್‌ನೊಂದಿಗೆ ಗ್ರಾಹಕರಿಗೆ ಲಭ್ಯವಿರಲಿದೆ. ಚಾರ್ಜರ್ ಸಹ ಮೃದುವಾದ ರಬ್ಬರ್ ರಿಂಗ್ ಅನ್ನು ಹೊಂದಿದ್ದು, ಅದು ಚಾರ್ಜ್ ಮಾಡುವಾಗ ಫೋನ್ ಜಾರಿಬೀಳುವುದನ್ನು ತಡೆಯುತ್ತದೆ.

ವೆಸ್ಟರ್ನ್ ಡಿಜಿಟಲ್ ಹೇಳುವಂತೆ ಸ್ಯಾನ್ಡಿಸ್ಕ್ ಇಕ್ಸ್ಪ್ಯಾಂಡ್ ವೈರ್ಲೆಸ್ ಚಾರ್ಜರ್ ಸಿಂಕ್ ಫಾಸ್ಟ್ ಚಾರ್ಜರ್ ಸಮಯದಲ್ಲಿ 10W ಪವರ್ ನೀಡುತ್ತದೆ. ಇನ್ನು ಈ ಚಾರ್ಜ್ ಸಿಂಕ್ ಸ್ವಯಂಚಾಲಿತವಾಗಿ ಪೂರ್ಣ ರೆಸಲ್ಯೂಶನ್ ನಲ್ಲಿ ಫೋಟೋಗಳು ಮತ್ತು ವೀಡಿಯೋಗಳನ್ನು ಬ್ಯಾಕಪ್ ಮಾಡುತ್ತದೆ. ಬಳಕೆದಾರರು ತಮ್ಮ ಫೋನ್ ಅನ್ನು ವೈರ್‌ಲೆಸ್ ಚಾರ್ಜರ್‌ನಲ್ಲಿಇಡಬೇಕು. ಅದು ನೇರವಾಗಿ ಡೇಟಾವನ್ನು ಬ್ಯಾಕಪ್ ಮಾಡಲು ಪ್ರಾರಂಭಿಸುತ್ತದೆ. ಈ ಚಾರ್ಜರ್ 256 GB ಸ್ಟೊರೇಜ್ ಹೊಂದಿರುವುದರಿಂದ ಹೆಚ್ಚಿನ ಡೇಟಾವನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜ್ ಸಿಂಕ್ ಮತ್ತು ಇಕ್ಸ್ಪ್ಯಾಂಡ್ ವೈರ್‌ಲೆಸ್ ಚಾರ್ಜರ್ 15W ಎರಡೂ ಐಫೋನ್ 8 ಮತ್ತು ಮೇಲಿನ ಮಾಡೆಲ್​ಗಳಿಗೆ ಹೊಂದಿಕೊಳ್ಳುತ್ತವೆ. ಇಕ್ಸ್ಪ್ಯಾಂಡ್ ಚಾರ್ಜರ್ ಸಿಂಕ್ 9,999 ರೂ. ಲಭ್ಯವಿದೆ. Ixpand Wireless 15W ಫಾಸ್ಟ್ ಚಾರ್ಜರ್ QC 3.0 ಅಡಾಪ್ಟರ್ ಬೆಲೆ 2999 ರೂ. ಆದರೆ Ixpand ವೈರ್ ಲೆಸ್​ ಚಾರ್ಜರ್ 15W ಬೆಲೆ 1,999 ರೂ.

ಸ್ಯಾನ್‌ಡಿಸ್ಕ್ ಇಕ್ಸ್‌ಪ್ಯಾಂಡ್ ವೈರ್‌ಲೆಸ್ ಚಾರ್ಜರ್‌ಗಳಿಗೆ ಎರಡು ವರ್ಷಗಳ ಸೀಮಿತ ವಾರೆಂಟಿ ನೀಡಲಾಗುತ್ತದೆ. ನೀವು ಈ ಹೊಸ ಮಾದರಿಯ ಚಾರ್ಜರ್ ಅನ್ನು ಅಮೆಜಾನ್‌.ಇನ್, ಕ್ರೋಮಾ, ಪೂರ್ವಿಕಾ ಮತ್ತು ಇತರ ಆನ್​ಲೈನ್ ಶಾಂಪಿಂಗ್ ಸೈಟ್​ಗಳಲ್ಲಿ ಖರೀದಿಸಬಹುದು.

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(SanDisk Ixpand Wireless Charger With Data Backup Feature Launched)

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್