Tech Tips: ಫ್ಲಿಪ್​ಕಾರ್ಟ್​ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್​​ಫೋನನ್ನು ಭರ್ಜರಿ ಬೆಲೆಗೆ ಮಾರಾಟ ಮಾಡಿ: ಹೇಗೆ ಗೊತ್ತೇ?

Flipkart Sell Back: ಫ್ಲಿಪ್​ಕಾರ್ಟ್​ ಸಂಸ್ಥೆ ಸೆಲ್- ಬ್ಯಾಕ್ ಎಂಬ ವಿಶೇಷ ಆಯ್ಕೆಯನ್ನು ನೀಡಿದೆ. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಬಹುದು.

Tech Tips: ಫ್ಲಿಪ್​ಕಾರ್ಟ್​ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್​​ಫೋನನ್ನು ಭರ್ಜರಿ ಬೆಲೆಗೆ ಮಾರಾಟ ಮಾಡಿ: ಹೇಗೆ ಗೊತ್ತೇ?
Flipkart Sell Back

Updated on: Feb 19, 2023 | 8:30 PM

ಮಾರುಕಟ್ಟೆಯಲ್ಲಿಂದು ವಾರಕ್ಕೆ ಕಡಿಮೆ ಎಂದರೂ ಮೂರರಿಂದ ನಾಲ್ಕು ಹೊಸ ಸ್ಮಾರ್ಟ್​ಫೋನ್​ಗಳು (Smartphones) ಬಿಡುಗಡೆ ಆಗುತ್ತವೆ. ಇದರಲ್ಲಿ ಬಹುತೇಕ ಮೊಬೈಲ್​ಗಳು ಬಜೆಟ್ ಅಥವಾ ಮಧ್ಯಮ ಬೆಲೆಗೆ ಲಭ್ಯವಿರುವುದರಿಂದ ಬೇಗನೆ ಸೇಲ್ ಆಗಿ ಬಿಡುತ್ತದೆ. ಈಗ ಉಪಯೋಗಿಸುತ್ತಿರುವ ಮೊಬೈಲ್ ಬೋರ್ ಆಯಿತು ಎಂದಾಗ ಜನರು ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ನೂತನ ಮೊಬೈಲ್ ಖರೀದಿಸುವಾಗ ಕೆಲವರು ತಮ್ಮ ಹಳೆಯ ಫೋನನ್ನು ಎಷ್ಟು ಬೆಲೆ ಸಿಗುತ್ತೊ ಅಷ್ಟಕ್ಕೆ ಹೊರಗಿನ ರಿಟೈಲ್ ಸ್ಟೋರ್​ಗೆ ಮಾರಾಟ ಮಾಡಿ ಬಿಡುತ್ತಾರೆ. ಆ ಮೊಬೈಲ್​ಗೆ (Mobile) ಅರ್ಹವಾದ ಬೆಲೆ ಸಿಗುವುದಿಲ್ಲ. ಆದರೆ, ನಿಮ್ಮ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಮೂಲಕ ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ಇದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್.

ಫ್ಲಿಪ್​ಕಾರ್ಟ್​ ಸಂಸ್ಥೆ ಸೆಲ್- ಬ್ಯಾಕ್ ಎಂಬ ವಿಶೇಷ ಆಯ್ಕೆಯನ್ನು ನೀಡಿದೆ. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಬಹುದು. ಇಲ್ಲಿ ನಿಮ್ಮ ಮೊಬೈಲ್​ಗೆ ಅರ್ಹವಾಗಿ ಖಚಿತ ಬೆಲೆ ಕೂಡ ಸಿಗುತ್ತದೆ. ಕೆಲವೇ ಸಮಯದಲ್ಲಿ ಹಣ ನಿಮ್ಮ ಬ್ಯಾಂಕ್ ಅಕೌಂಟ್​ಗೆ ಬಂದಿರುತ್ತದೆ. ಫ್ಲಿಪ್​ಕಾರ್ಟ್​ ಮೂಲಕ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.

Best Smartphone: ಕೇವಲ 10,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್​ ಬೇಕೇ?: ಇಲ್ಲಿದೆ ನೋಡಿ ಟಾಪ್ 5 ಮೊಬೈಲ್

ಇದನ್ನೂ ಓದಿ
Google Pixel 6 Pro 5G: 1 ಲಕ್ಷದ ಈ ಫೋನನ್ನು ಕೇವಲ 49,999 ರೂ. ಗೆ ಖರೀದಿಸಿ: ಅಮೆಜಾನ್​​ನಿಂದ ಹಿಂದೆಂದೂ ನೀಡದ ಆಫರ್
Tech Tips: ನಿಮ್ಮ ಫೋನ್​ನಲ್ಲಿರುವ ಡಿಸ್ ಪ್ಲೇಯನ್ನು ಹೀಗೂ ಉಪಯೋಗಿಸಬಹುದು: ಒಮ್ಮೆ ಟ್ರೈ ಮಾಡಿ ನೋಡಿ
World’s First Mobile Phone: ಇದುವೇ ನೋಡಿ ವಿಶ್ವದ ಮೊಟ್ಟ ಮೊದಲ ಮೊಬೈಲ್ ಫೋನ್: ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇತ್ತು?
Vivo Y56 5G: ವಿವೋದಿಂದ ಮತ್ತೊಂದು ಆಕರ್ಷಕ ವಿವೋ Y56 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ಫ್ಲಿಪ್​ಕಾರ್ಟ್​ನಲ್ಲಿ ಹಳೆಯ ​​ಫೋನ್​ ಸೇಲ್ ಮಾಡುವುದು ಹೇಗೆ?:

  • ಫ್ಲಿಪ್​ಕಾರ್ಟ್​ ಆ್ಯಪ್ ತೆರೆಯಿರಿ ಮತ್ತು ಕೆಳ ಭಾಗದಲ್ಲಿರವ ಕ್ಯಾಟಗರಿ ಸೆಕ್ಷನ್​ನಲ್ಲಿ ಸೆಲ್​ ಬ್ಯಾಕ್ ಸೆಲೆಕ್ಟ್ ಮಾಡಿ.
  • ಈ ಆಯ್ಕೆ ಸಿಗಲಿಲ್ಲ ಎಂದಾದರೆ ಸರ್ಚ್​ ಬಾರ್​ನಲ್ಲಿ ಸೆಲ್​ ಬ್ಯಾಕ್ ಸರ್ಚ್​ ಮಾಡಿ ಓಪನ್ ಮಾಡಿರಿ.
  • ಇಲ್ಲಿ ಕ್ಯೂಆರ್ ಕೋಡ್ ಆಯ್ಕೆ ಕೂಡ ಇದ್ದು ಸ್ಕ್ಯಾನ್ ಮಾಡುವ ಮೂಲಕ ಮುಂದುವರೆಯಬಹುದು.
  • ಈಗ ನೀವು ನಿಮ್ಮ ಮೊಬೈಲ್ ಫೋನ್‌ನ ಬ್ರ್ಯಾಂಡ್, ಮಾಡೆಲ್ ಮತ್ತು IMEI ಸಂಖ್ಯೆಯಂತಹ ಮಾಹಿತಿ ನೀಡಬೇಕು.
  • ನಂತರ ನಿಮ್ಮ ನೆಟ್‌ವರ್ಕ್ ಪಾಲುದಾರರಿಂದ ಫೋನ್‌ಗೆ ಎಷ್ಟು ಬೆಲೆ ಎಂಬ ಮಾಹಿತಿ ಕಾಣಿಸುತ್ತದೆ.
  • ಅಲ್ಲಿ ನೀಡಿರುವ ಬೆಲೆ ನಿಮಗೆ ಒಪ್ಪಿಗೆ ಇದ್ದಲ್ಲಿ 1 ರೂ. ಪಾವತಿಸಿ. ಬಳಿಕ ಮನೆ ಬಾಗಿಲಿಗೆ ಬಂದು ಪಿಕ್ ಅಪ್ ಮಾಡುತ್ತಾರೆ.
  • ಈ ಆರ್ಡರ್ ಖಚಿತವಾಯಿತು ಎಂದಾದರೆ 48 ಗಂಟೆಗಳ ಒಳಗೆ ಮೊಬೈಲ್ ಪಡೆದುಕೊಳ್ಳಲು ನಿಮ್ಮ ಮನೆಗೆ ಬರುತ್ತಾರೆ.
  • ನಿಮ್ಮ ಮೊಬೈಲ್ ಕಂಪನಿಯವರು ಮನೆಗೆ ಬಂದು ಮೊಬೈಲ್ ಪರಿಶೀಲಿಸಿ ಅಂತಿಮ ಬೆಲೆಯನ್ನು ಹೇಳುತ್ತಾರೆ. ಈ ಬೆಲೆ ನಿಮಗೆ ಇಷ್ಟವಾದರೆ ಮುಂದುವರೆಸಬಹುದು.
  • ನೀವು ಮುಂದುವರೆಸಿದರೆ 24 ಗಂಟೆಗಳ ಒಳಗೆ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತದೆ. ಆರ್ಡರ್ ರದ್ದುಗೊಳಿಸಿದರೆ 1 ರೂ. ಅನ್ನು ನಿಮಗೆ ಪುನಃ ನೀಡಲಾಗುತ್ತದೆ.

ಹಳೆಯ ಫೋನ್ ಸೇಲ್ ಮಾಡುವ ಮುನ್ನ ಈ ಕೆಲಸ ಮಾಡಿ:

ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್​ನಲ್ಲಿ ದೊರೆಯುವ ಒನ್​ಡ್ರೈವ್ ಆ್ಯಪ್ ಬಳಕೆ ಮಾಡಬಹುದು. ಅಂತೆಯೇ, ಟ್ವಿಟ್ಟರ್, ಫೇಸ್​ಬುಕ್, ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ನೀವು ಲಾಗಿನ್ ಆಗಿರುವ ಆಕೌಂಟ್​ನಿಂದ ಲಾಗ್ ಜೌಟ್ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ನೀವು ಫೋನು ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಉತ್ತಮ ಆಯ್ಕೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us