AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಾಪ್ ಹೋದ್ರೆ ಬೇರೆ ಆ್ಯಪ್​ಗಳು ಯಾವ್ಯಾವಿವೆ? ಈ ಪರ್ಯಾಯ ಮೆಸೇಜಿಂಗ್ ಅಪ್ಲಿಕೇಶನ್​ಗಳ ಬಗ್ಗೆ ಒಂದು ಪರಿಚಯ

Five messaging apps other than Whatsapp: ಐಟಿ ನಿಯಮಗಳನ್ನು ಹೇರಲು ಬಂದರೆ ಭಾರತದಿಂದಲೇ ಹೊರ ಹೋಗುವುದಾಗಿ ವಾಟ್ಸಾಪ್ ಎಚ್ಚರಿಕೆ ನೀಡಿದೆ. ತನಗೆ ಬಳಕೆದಾರರ ಪ್ರೈವೆಸಿ ಕಾಪಾಡುವುದು ಹೆಚ್ಚು ಮುಖ್ಯ ಎಂದು ವಾಟ್ಸಾಪ್ ಹೇಳಿದೆ. ಒಂದು ವೇಳೆ ವಾಟ್ಸಾಪ್ ನಿರ್ಗಮಿಸಿದರೆ ಭಾರತೀಯರಿಗೆ ಬೇರೆ ಯಾವ ಮೆಸೇಜಿಂಗ್ ಆ್ಯಪ್​ಗಳ ಅವಕಾಶ ಇದೆ? ಈ ಬಗ್ಗೆ ಒಂದು ವರದಿ ಇಲ್ಲಿದೆ.

ವಾಟ್ಸಾಪ್ ಹೋದ್ರೆ ಬೇರೆ ಆ್ಯಪ್​ಗಳು ಯಾವ್ಯಾವಿವೆ? ಈ ಪರ್ಯಾಯ ಮೆಸೇಜಿಂಗ್ ಅಪ್ಲಿಕೇಶನ್​ಗಳ ಬಗ್ಗೆ ಒಂದು ಪರಿಚಯ
ಟೆಲಿಗ್ರಾಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2024 | 10:10 AM

ವಾಟ್ಸಾಪ್ ಭಾರತದಿಂದ ನಿರ್ಗಮಿಸುವುದಾಗಿ ಹೇಳಿದೆ. ನಾಡಿನ ಕಾನೂನು ಕಟ್ಟಳೆಗಿಂತ ತನ್ನ ಬಳಕೆದಾರರ ಗೌಪ್ಯತೆ ಕಾಪಾಡುವುದು ಮುಖ್ಯ ಎನ್ನುವುದು ವಾಟ್ಸಾಪ್​ನ ಮಾಲಕ ಸಂಸ್ಥೆ ಮೆಟಾದ (Meta) ಧೋರಣೆ. ಅಂತೆಯೇ ಭಾರತದ ಇತ್ತೀಚಿನ ಐಟಿ ನಿಯಮಗಳ ವಿರುದ್ಧ ವಾಟ್ಸಾಪ್ ನ್ಯಾಯಾಲಯದ ಮೊರೆ ಹೋಗಿದೆ. ಸಂದೇಶಗಳನ್ನು ಎನ್​ಕ್ರಿಪ್ಟ್ ಮಾಡಲಾಗುತ್ತದೆಯಾದ್ದರಿಂದ ಅದರ ಮೂಲ ಶೋಧಿಸಲು ಆಗುವುದಿಲ್ಲ. ಎನ್​ಕ್ರಿಪ್ಷನ್ ವ್ಯವಸ್ಥೆ ತೆಗೆದುಹಾಕುವುದಿಲ್ಲ ಎಂದು ವಾಟ್ಸಾಪ್ ಹೇಳಿದ್ದು, ಒಂದು ವೇಳೆ ಬಲವಂತ ಮಾಡಿದರೆ ಭಾರತದಿಂದಲೇ ನಿರ್ಗಮಿಸುವುದಾಗಿ ಹೇಳಿದೆ. ಒಂದು ವೇಳೆ ವಾಟ್ಸಾಪ್ ಭಾರತದಲ್ಲಿ ಅಲಭ್ಯವಾದರೆ ಪರ್ಯಾಯವಾಗಿರುವ ಮೆಸೇಜಿಂಗ್ ಆ್ಯಪ್​ಗಳು ಯಾವುವಿವೆ? ಲಭ್ಯ ಇರುವ ವಾಟ್ಸಪೇತರ ಐದು ಆ್ಯಪ್​ಗಳ ಪರಿಚಯ ಇಲ್ಲಿದೆ:

ಟೆಲಿಗ್ರಾಂ ಮೆಸೆಂಜರ್

ಬಳಕೆದಾರರ ಪ್ರೈವಸಿ ವಿಚಾರದಲ್ಲಿ ವಾಟ್ಸಾಪ್​ಗಿಂತ ಟೆಲಿಗ್ರಾಂ ಹೆಚ್ಚು ಬದ್ಧವಾಗಿದೆ. ಇದೇ ಕಾರಣಕ್ಕೆ ಟೆಲಿಗ್ರಾಂಗೆ ನಿಷ್ಠಾವಂತರ ಬಳಕೆದಾರರ ಬಳಗ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಜನಪ್ರಿಯತೆ ಹೆಚ್ಚುತ್ತಿದೆ. ಎರಡು ಲಕ್ಷ ಸದಸ್ಯರನ್ನು ಒಳಗೊಳ್ಳಬಹುದಾದ ಗ್ರೂಪ್ ಕ್ರಿಯೇಟ್ ಮಾಡಬಹುದು. ದೊಡ್ಡ ಗಾತ್ರ ಫೈಲ್​ಗಳನ್ನು ಕಳುಹಿಸಬಹುದು. ಇನ್ನೂ ಹಲವು ವಿಶೇಷ ಫೀಚರ್ಸ್ ಟೆಲಿಗ್ರಾಂನಲ್ಲಿವೆ.

ಇದನ್ನೂ ಓದಿ: ದೇಶ ಬಿಟ್ಟು ಹೋಗುತ್ತೇವೆ ಹೊರತು ಗೌಪ್ಯತೆ ಮಾತ್ರ ಬಿಡಲ್ಲ: ವಾಟ್ಸಾಪ್ ಹಠಕ್ಕೇನು ಕಾರಣ?

ಹೈಕ್ ಸ್ಟಿಕರ್ ಚ್ಯಾಟ್

ಹೈಕ್ ಭಾರತದ್ದೇ ಆದ ಮೆಸೇಜಿಂಗ್ ಆ್ಯಪ್. ರಸವತ್ತಾಗಿ ಸಂವಾದ ನಡೆಸಲು ನಾನಾ ರೀತಿಯ ಸ್ಟಿಕ್ ಪ್ಯಾಕ್​ಗಳನ್ನು ಹೊಂದಿದೆ. ಮೆಸೇಜಿಂಗ್ ಅಲ್ಲದೇ ಕ್ರಿಕೆಟ್ ಸ್ಕೋರ್, ಡಿಜಿಟಲ್ ವ್ಯಾಲಟ್ ಇತ್ಯಾದಿ ಸೇವೆಗಗಳು ಹೈಕ್​ನಲ್ಲಿವೆ.

ಜಿಯೋ ಚ್ಯಾಟ್

ಜಿಯೋಚ್ಯಾಟ್ ಮತ್ತೊಂದು ಉತ್ತಮ ಪರ್ಯಾಯ ಮೆಸೇಜಿಂಗ್ ಆ್ಯಪ್. ವಿಡಿಯೋ ಕಾನ್ಫರೆನ್ಸಿಂಗ್, ವಾಯ್ಸ್ ಕಾಲ್, ಫೈಲ್ ಶೇರಿಂಗ್ ಇತ್ಯಾದಿ ಫೀಚರ್ಸ್ ಹೊಂದಿದೆ.

ಇದನ್ನೂ ಓದಿ: ಸೋನು ಸೂದ್ ವಾಟ್ಸಾಪ್ ಖಾತೆ ಬ್ಲಾಕ್; ಈ ತಪ್ಪು ಮಾಡಿದರೆ ನಿಮಗೂ ಇದೇ ಗತಿ

ಸಿಗ್ನಲ್

ಸಿಗ್ನಲ್ ಆ್ಯಪ್ ತನ್ನ ಬಳಕೆದಾರರ ಪ್ರೈವೆಸಿ ರಕ್ಷಣೆಯಲ್ಲಿ ಟೆಲಿಗ್ರಾಂಗಿಂತ ಒಂದು ಹೆಜ್ಜೆ ಮುಂದು. ಇದು ಪರಿಣಾಮಕಾರಿ ಹಾಗೂ ಸರಳ ಎನಿಸುವ ಆ್ಯಪ್ ಆಗಿದೆ. ಜಾಗತಿಕವಾಗಿ ಇದು ಮನ್ನಣೆ ಪಡೆಯುತ್ತಿದೆ.

ಸ್ಕೈಪ್

ಮೂಲತಃ ವಿಡಿಯೋ ಕಾಲಿಂಗ್​ಗೆಂದು ರೂಪಿಸಲಾಗಿದ್ದ ಸ್ಕೈಪ್ ಈಗ ಮೆಸೇಜಿಂಗ್ ಸರ್ವಿಸ್ ಕೂಡ ನೀಡುತ್ತದೆ. ಕಾರ್ಪೊರೇಟ್ ವಲಯದಲ್ಲೂ ಸ್ಕೈಪ್​ಗೆ ಪ್ರಾಧಾನ್ಯತೆ ಇದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ