Kannada Cinema
1934ರಲ್ಲಿ ಮೊದಲ ಕನ್ನಡ ಸಿನಿಮಾ ‘ಸತಿ ಸುಲೋಚನಾ’ ಬಿಡುಗಡೆ ಆಗುವ ಮೂಲಕ ಉದಯವಾದ ಕನ್ನಡ ಚಿತ್ರರಂಗಕ್ಕೆ 89 ವರ್ಷದ ಸುದೀರ್ಘ ಇತಿಹಾಸವಿದೆ.
ಮನರಂಜನೆಯ ಜೊತೆಗೆ ಜನ ಜಾಗೃತಿ ಮೂಡಿಸುವ, ಅಭಿರುಚಿ ಬೆಳೆಸುವ ಸಿನಿಮಾಗಳನ್ನು ಕನ್ನಡ ಚಿತ್ರರಂಗ ನೀಡುತ್ತಲೇ ಬಂದಿದೆ. ಸಿನಿಮಾಗಳ ಮೂಲಕ ಕನ್ನಡತನವನ್ನು ಪಸರಿಸುತ್ತಾ ಬಂದಿದೆ. ಸುಬ್ಬಯ್ಯ ನಾಯ್ಡು, ಭಾಗವತರ್, ಪಂಡರೀಬಾಯಿ ಅವರುಗಳು ಬಿತ್ತಿದ ಕನ್ನಡ ಚಿತ್ರರಂಗದ ಬೀಜಕ್ಕೆ ರಾಜ್ಕುಮಾರ್, ಕಲ್ಯಾಣ್ ಕುಮಾರ್, ಲೋಕೇಶ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ನಾಗ್, ಅಂಬರೀಶ್ ಅಂಥಹಾ ಇನ್ನೂ ಅನೇಕ ಮಹನೀಯರು ನೀರೆರೆದು ಹೆಮ್ಮರವಾಗಿ ಬಳೆಸಿದ್ದಾರೆ.
ಕನ್ನಡ ಚಿತ್ರರಂಗ ಇಂದು ವಾರ್ಷಿಕವಾಗಿ ಸಾವಿರಾರು ಕೋಟಿ ವ್ಯವಹಾರ ನಡೆಯುವ ತಾಣ, ವರ್ಷಕ್ಕೆ ಸರಾಸರಿ 200 ರಿಂದ 250 ಕನ್ನಡ ಸಿನಿಮಾಗಳು ಇಲ್ಲಿ ತಯಾರುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ‘ಕೆಜಿಎಫ್’, ‘ಕಾಂತಾರ’, ‘ವಿಕ್ರಾಂತ್ ರೋಣ’ ಇನ್ನೂ ಕೆಲವು ಸಿನಿಮಾಗಳು ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆ ಗೊಳಿಸಿವೆ.
ಉಜ್ಜಿನಿಯಲ್ಲಿ ನೈಜ ದೃಶ್ಯಗಳನ್ನು ಸೆರೆ ಹಿಡಿದ ‘ಊರಬ್ಬ’ ಸಿನಿಮಾ; ಟ್ರೇಲರ್ ನೋಡಿ
‘ಊರಬ್ಬ’ ಸಿನಿಮಾದಲ್ಲಿ ನರೇಶ್ ಗೌಡ, ತನಿಷಾ ಕುಪ್ಪಂಡ, ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಸಿದ್ದು ಮೂಲಿಮನಿ, ಮಿತ್ರ, ಪಾಯಲ್ ಚಂಗಪ್ಪ, ಡಾ. ನಂಜಪ್ಪ, ಅರವಿಂದ್ ರಾವ್ ಮುಂತಾದವರು ನಟಿಸಿದ್ದಾರೆ. ಅಕ್ಷಯ್ ಎಸ್. ರಿಷಭ್ ಸಂಗೀತ ನೀಡಿದ್ದಾರೆ. ಆರ್.ಡಿ. ರವಿ ಅವರು ಸಂಕಲನ ಮಾಡಿದ್ದಾರೆ.
- Madan Kumar
- Updated on: Jun 10, 2026
- 8:49 pm
‘ಬಲರಾಮನ ದಿನಗಳು’ ಚಿತ್ರದ ‘ಕ್ವಾಟರು’ ಹಾಡು ಮೆಚ್ಚಿದ ನಟಿ ತಾರಾ ಅನುರಾಧಾ
‘ಬಲರಾಮನ ದಿನಗಳು’ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರು ನಟಿಸಿದ್ದು, ಈ ಚಿತ್ರದ ಬಗ್ಗೆ ಅವರಿಗೆ ಸಖತ್ ಭರವಸೆ ಇದೆ. ‘ನನ್ನ ವೃತ್ತಿಜೀವನದ ಅತಿ ದೊಡ್ಡ ಸಿನಿಮಾ ಇದು’ ಎಂದು ಅವರು ಹೇಳಿದ್ದಾರೆ. ಸಂತೋಷ್ ನಾರಾಯಣನ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಹೊಸ ಹಾಡು ರಿಲೀಸ್ ಮಾಡಲಾಯಿತು.
- Madan Kumar
- Updated on: Jun 10, 2026
- 6:59 pm
‘ಬಲರಾಮನ ದಿನಗಳು ನನ್ನ ಜೀವನದ ಅತಿ ದೊಡ್ಡ ಸಿನಿಮಾ’: ವಿನೋದ್ ಪ್ರಭಾಕರ್
ನಟ ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾ ಅವರ ವೃತ್ತಿಜೀವನದ ಅತಿ ದೊಡ್ಡ ಪ್ರಾಜೆಕ್ಟ್. ಆ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆ.ಎಂ. ಚೈತನ್ಯ ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ.
- Madan Kumar
- Updated on: Jun 9, 2026
- 10:37 pm
ಕಾಡ ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ‘ಅಮೆಜಾನ್ ಪ್ರೈಮ್’ ಒಟಿಟಿಯಲ್ಲಿ ಪ್ರಸಾರ
ಕಾಡ ನಟರಾಜ್ ಅವರು ಅಭಿನಯಿಸಿದ ‘ಕರಿಕಾಡ’ ಸಿನಿಮಾ ‘ಅಮೆಜಾನ್ ಪ್ರೈಮ್’ ಒಟಿಟಿಯಲ್ಲಿ ಲಭ್ಯವಿದೆ. ಬಲರಾಜ್ ವಾಡಿ, ಯಶ್ ಶೆಟ್ಟಿ, ವಿಜಯ್ ಚೆಂಡೂರ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿರುವುದಕ್ಕೆ ಕಾಡ ನಟರಾಜ್ ಖುಷಿ ಆಗಿದ್ದಾರೆ.
- Madan Kumar
- Updated on: Jun 9, 2026
- 6:10 pm
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
‘ಕೆರೆಬೇಟೆ’ ಖ್ಯಾತಿಯ ನಟ ಗೌರಿಶಂಕರ್ ಅವರು ‘ಕಾಮನ್ ಮ್ಯಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೀರ್ಷಿಕೆಯೇ ಸೂಚಿಸುವಂತೆ ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ಆದರೆ ಏನಾಗುತ್ತದೆ ಎಂಬುದು ಈ ಚಿತ್ರದ ಕಥೆ. ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
- Madan Kumar
- Updated on: Jun 8, 2026
- 8:30 pm
‘ನಮ್ಮೂರು ನಮ್ಮವರು’ ಆಲ್ಬಂ ಸಾಂಗ್ ಮೂಲಕ ಜನಜಾಗೃತಿ ಮೂಡಿಸುವ ಕೆಲಸ
‘ನಮ್ಮೂರು ನಮ್ಮವರು’ ಹಾಡಿಗೆ ತೇಜಸ್ ಕಿರಣ್ ಹಾಗೂ ಮಯೂರ್ ಅಂಬೆಕಲ್ಲು ಒಟ್ಟಾಗಿ ತಮ್ಮ ಪರಿಕಲ್ಪನೆಯ ದೃಶ್ಯರೂಪ ಕೊಟ್ಟು ನಿರ್ದೇಶನ ಮಾಡಿದ್ದಾರೆ. ಹಾನಗಲ್ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಟೀಲ್ ಈ ಸಾಮಾಜಿಕ ಸಂಘಟನೆಯ ಗೀತೆಗೆ ಬೆಂಬಲವಾಗಿ ನಿಂತಿದ್ದಾರೆ. ‘ಆರೋಹ ಫಿಲಂಸ್’ ಮತ್ತು ‘ಆರಾ ಫಿಲಂಸ್’ ಸಹಯೋಗದಲ್ಲಿ ಈ ಹಾಡು ನಿರ್ಮಾಣವಾಗಿದೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಆಗಿದೆ.
- Madan Kumar
- Updated on: Jun 8, 2026
- 8:21 pm
Mango Pachcha Review: ಆ ಕಾಲದ ಮೈಸೂರಿನ ಮಾಫಿಯಾ ತೋರಿಸುವ ‘ಮ್ಯಾಂಗೋ ಪಚ್ಚ’
Mango Pachcha Kannada Movie: ಹೊಸ ನಿರ್ದೇಶಕ ವಿವೇಕ ಮತ್ತು ಹೊಸ ಹೀರೋ ಸಂಚಿತ್ ಸಂಜೀವ್ ಅವರ ಕಾಂಬಿನೇಷನ್ನಲ್ಲಿ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಡಿಬಂದಿದೆ. ಪ್ರಿಯಾ ಸುದೀಪ್, ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮೈಸೂರಿನಲ್ಲಿ ನಡೆದ ಕೆಲವು ನೈಜ ಘಟನೆಗಳಿಂದ ಪ್ರೇರಿತವಾಗಿ ಈ ಸಿನಿಮಾ ಮೂಡಿಬಂದಿದೆ.
- Madan Kumar
- Updated on: Jun 5, 2026
- 2:28 pm
‘ಬಾಸ್’ ಸಿನಿಮಾ ನಿರ್ದೇಶಕನಿಗೆ ವಾಣಿಜ್ಯ ಮಂಡಳಿ ನೋಟಿಸ್ ನೀಡಿದ್ದು ಯಾಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲಿಕೆ ಇರುವಂತಹ ಕಥೆ ಇದೆ ಎಂಬ ಕಾರಣಕ್ಕೆ ‘ಬಾಸ್’ ಚಿತ್ರವು ವಿವಾದಕ್ಕೆ ಕಾರಣ ಆಗಿದೆ. ಈ ಚಿತ್ರದ ಮೇಲಿದ್ದ ತಡೆಯನ್ನು ನ್ಯಾಯಾಲಯ ತೆರವು ಮಾಡಿದೆ. ನಿರ್ದೇಶಕ ಲವ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ವಾಣಿಜ್ಯ ಮಂಡಳಿಯಿಂದ ತಮಗೆ ಬಂದ ನೋಟಿಸ್ ಬಗ್ಗೆಯೂ ಅವರು ಮಾತನಾಡಿದ್ದಾರೆ.
- Madan Kumar
- Updated on: Jun 4, 2026
- 10:40 pm
ಅಲಿಬಾಗ್ನಲ್ಲಿ 24 ಕೋಟಿ ರೂಪಾಯಿ ಆಸ್ತಿ ಖರೀದಿಸಿದ ಯಶ್, ರಾಧಿಕಾ ಪಂಡಿತ್
ಬಹುನಿರೀಕ್ಷಿತ ಸಿನಿಮಾಗಳಾದ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಬಿಡುಗಡೆಯ ಕೆಲಸಗಳಲ್ಲಿ ನಟ ಯಶ್ ಅವರು ಬ್ಯುಸಿಯಾಗಿದ್ದಾರೆ. ಅದರ ನಡುವೆ ಅವರು ಖರೀದಿಸಿರುವ ಹೊಸ ಆಸ್ತಿಯ ಬಗ್ಗೆ ಸುದ್ದಿ ಆಗಿದೆ. ಬಾಲಿವುಡ್ ಸೆಲೆಬ್ರಿಟಿಗಳ ರೀತಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಅಲಿಬಾಗ್ನಲ್ಲಿ ಆಸ್ತಿ ಖರೀದಿಸಿದ್ದಾರೆ.
- Madan Kumar
- Updated on: Jun 2, 2026
- 9:40 pm
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚನಿಗೆ ನೀಡಲಾಗಿದೆ ಟ್ರಿಬ್ಯೂಟ್; ಇದು ಪ್ರಿಯಾ ಸುದೀಪ್ ಸರ್ಪ್ರೈಸ್
ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಮೊದಲ ಬಾರಿಗೆ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ‘ಸುಪ್ರಿಯಾನ್ವಿ’ ಪ್ರೊಡಕ್ಷನ್ಸ್ ಮೂಲಕ ಅವರು ‘ಮ್ಯಾಂಗೋ ಪಚ್ಚ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಟಿವಿ9 ವಿಶೇಷ ಸಂದರ್ಶನದಲ್ಲಿ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾ ಸುದೀಪ್ ಸಂದರ್ಶನದ ವಿಡಿಯೋ ಇಲ್ಲಿದೆ.
- Madan Kumar
- Updated on: Jun 1, 2026
- 9:06 pm
‘ಕೊರಗಜ್ಜ’ ಸಿನಿಮಾ ಬಿಡುಗಡೆಗೂ ಮೊದಲೇ ನಿರ್ದೇಶಕರಿಗೆ ಸಿಕ್ತು ಫ್ಲ್ಯಾಟ್ ಉಡುಗೊರೆ
ಈ ಮೊದಲೇ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಝೀ ಮ್ಯೂಸಿಕ್ ಮೂಲಕ ಭರ್ಜರಿ ಆಡಿಯೋ ಲಾಂಚ್ ಕೂಡ ಆಗಿತ್ತು. ಆದರೆ ಚಿತ್ರವನ್ನು ಕೊನೇ ಗಳಿಗೆಯಲ್ಲಿ 3D ರೂಪಕ್ಕೆ ಮಾರ್ಪಡಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಹಾಗಾಗಿ ರಿಲೀಸ್ ದಿನಾಂಕ ಮುಂದೂಡಿಕೆ ಆಯಿತು. ಈ ಚಿತ್ರಕ್ಕಾಗಿ ಶ್ರಮಿಸುತ್ತಿರುವ ನಿರ್ದೇಶಕರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ.
- Madan Kumar
- Updated on: Jun 1, 2026
- 3:47 pm
ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ
ಮಗು ಹುಟ್ಟಿದರೆ ನೆಲಭೋಜನ ಮಾಡುವುದಾಗಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಗಂಡು ಮಗು ಜನಿಸಿತು. ಈಗ ಮಗನೊಂದಿಗೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದ ಅವರು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನೆಲಭೋಜನ ಪ್ರಸಾದ ಸ್ವೀಕರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
- Prajwal Amin
- Updated on: May 31, 2026
- 2:42 pm