‘ಬಲರಾಮನ ದಿನಗಳು’ ಚಿತ್ರದ ‘ಕ್ವಾಟರು’ ಹಾಡು ಮೆಚ್ಚಿದ ನಟಿ ತಾರಾ ಅನುರಾಧಾ
‘ಬಲರಾಮನ ದಿನಗಳು’ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರು ನಟಿಸಿದ್ದು, ಈ ಚಿತ್ರದ ಬಗ್ಗೆ ಅವರಿಗೆ ಸಖತ್ ಭರವಸೆ ಇದೆ. ‘ನನ್ನ ವೃತ್ತಿಜೀವನದ ಅತಿ ದೊಡ್ಡ ಸಿನಿಮಾ ಇದು’ ಎಂದು ಅವರು ಹೇಳಿದ್ದಾರೆ. ಸಂತೋಷ್ ನಾರಾಯಣನ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಹೊಸ ಹಾಡು ರಿಲೀಸ್ ಮಾಡಲಾಯಿತು.

ಖ್ಯಾತ ನಟ ವಿನೋದ್ ಪ್ರಭಾಕರ್ ಅಭಿನಯಿಸಿದ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಒಂದಷ್ಟು ಕಾರಣಗಳಿಂದ ಕೌತುಕ ಮೂಡಿಸಿದೆ. ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾದ ಮೂರನೇ ಹಾಡನ್ನು ರಿಲೀಸ್ ಮಾಡಲಾಗಿದೆ. ‘ಆ ದಿನಗಳು ಖ್ಯಾತಿಯ’ ಕೆಎಂ ಚೈತನ್ಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ರೇಟ್ರೋ ಶೈಲಿಯ ‘ಕ್ವಾಟರ್ರು’ ಹಾಡನ್ನು ಹಿರಿಯ ನಟಿ ತಾರಾ ಅನುರಾಧಾ (Thara Anuradha) ಅವರು ಬಿಡುಗಡೆ ಮಾಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಾಡಿನ ಬಗ್ಗೆ ಮತ್ತು ಚಿತ್ರತಂಡದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
‘ಕ್ವಾಟರ್ರು’ ಹಾಡಿಗೆ ಸಂತೋಷ್ ನಾರಾಯಣನ್ ಅವರ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ನಟಿ ವಂದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಅವರಿಗೆ ಸಖತ್ ಭರವಸೆ ಇದೆ.
‘ಬಲರಾಮನ ದಿನಗಳು’ ಸಿನಿಮಾದ ‘ಕ್ವಾಟರ್ರು’ ಹಾಡು:
ಹಾಡು ಬಿಡುಗಡೆ ಬಳಿಕ ಮಾತನಾಡಿದ ತಾರಾ ಅವರು, ‘ಈ ಪೆಪ್ಪಿ ಸಾಂಗ್ ತುಂಬಾ ಚೆನ್ನಾಗಿದೆ. ಶ್ರೇಯಸ್ ತುಂಬಾ ಪ್ಯಾಷನ್ ಇರುವ ನಿರ್ಮಾಪಕ. ಆತನಿಗೆ ವಿನೋದ್ ಕಂಡರೆ ಬಹಳ ಪ್ರೀತಿ. ಅಲ್ಲದೇ, ಪದ್ಮಮ್ಮ ಕೂಡ ಒಳ್ಳೆಯ ನಿರ್ಮಾಪಕಿ. ಅವರು ಇಡೀ ತಂಡಕ್ಕೆ ತಾಯಿ ಎನ್ನಬಹುದು. ಮೂರು ಜನ ಸೇರಿ ಇಡೀ ಸಿನಿಮಾವನ್ನು ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ವೇಣು ಅವರ ಕ್ಯಾಮೆರಾ ಕೆಲಸ ಚೆನ್ನಾಗಿದೆ. ಸಿನಿಮಾ ತುಂಬಾ ಕ್ಲಾಸಿಕ್ ಆಗಿ ಮೂಡಿಬಂದಿದೆ. ಸಂತೋಷ್ ನಾರಾಯಣ್ ಅವರಂತಹ ದುಬಾರಿ ಸಂಗೀತ ನಿರ್ದೇಶಕರಿಂದ ಕೆಲಸ ಮಾಡಿಸಿದ್ದೀರಿ. ಟಿ. ಸೀರೀಸ್‌ನವರು ಅಷ್ಟು ಸುಲಭವಾಗಿ ಆಡಿಯೋ ರೈಟ್ಸ್ ತೆಗೆದುಕೊಳ್ಳುವವರಲ್ಲ. ಬಲರಾಮನ ದಿನಗಳು ಸಿನಿಮಾ ದೊಡ್ಡ ಚರಿತ್ರೆ ಸೃಷ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.

Balaramana Dinagalu Movie Team
ಈ ವೇಳೆ ನಿರ್ಮಾಪಕ ಶ್ರೇಯಸ್ ಕೂಡ ಮಾತನಾಡಿದರು. ‘ ಇವತ್ತು ನಮ್ಮ ಸಿನಿಮಾದ 3ನೇ ಹಾಡನ್ನು ರಿಲೀಸ್ ಮಾಡಿದ್ದೇವೆ. ಸದ್ಯದಲ್ಲೇ ಮತ್ತೊಂದು ಸಾಂಗ್ ಮತ್ತು ಟ್ರೇಲರ್ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎಂದು ಹೇಳಿದರು. ‘ಚಿತ್ರದ ಬಗ್ಗೆ ನನಗೆ ಯಾವುದೇ ರೀತಿಯ ಭಯವಿಲ್ಲ. ಏಕೆಂದರೆ ನಿರ್ದೇಶಕರ ಮೇಲೆ ತುಂಬಾ ವಿಶ್ವಾಸವಿದೆ’ ಎಂದು ನಿರ್ಮಾಪಕಿ ಪದ್ಮಾವತಿ ಜಯರಾಮ್ ಹೇಳಿದರು.
ಇದನ್ನೂ ಓದಿ: ‘ಬಲರಾಮನ ದಿನಗಳು ನನ್ನ ಜೀವನದ ಅತಿ ದೊಡ್ಡ ಸಿನಿಮಾ’: ವಿನೋದ್ ಪ್ರಭಾಕರ್
ಈ ಸಿನಿಮಾದಲ್ಲಿ ಒಟ್ಟು 7 ಹಾಡುಗಳು ಇವೆ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ತಿಳಿಸಿದರು. ‘ವಿನೋದ್ ಪ್ರಭಾಕರ್ ತುಂಬಾ ಟ್ಯಾಲೆಂಟ್ ಇರುವ ಕಲಾವಿದ. ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಬೇಕು. ಆಗಲೇ ಫೀಲ್ ಆಗುವುದು. ‘ಆ ದಿನಗಳು’ ಬಿಡುಗಡೆಯಾದ 19 ವರ್ಷಗಳ ನಂತರ ಈ ಸಿನಿಮಾ ಮಾಡಲು ಸಾಕಷ್ಟು ಪುಸ್ತಕಗಳನ್ನು ಓದಿ, ಭೂಗತ ಜಗತ್ತಿನ ಬಗ್ಗೆ ತಿಳಿದುಕೊಂಡು ಕಥೆ ಬರೆದೆ’ ಎಂದು ನಿರ್ದೇಶಕರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




