AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending

Trending

ದೇಶದಲ್ಲಿ ನಡೆಯುವ ಅಚ್ಚರಿಯ ಘಟನೆಗಳನ್ನು ಹಾಗೂ ವೈರಲ್​​ ಆಗಿರುವ ಸುದ್ದಿಗಳನ್ನು ಇಲ್ಲಿ ಪ್ರಕಟ ಮಾಡಲಾಗುವುದು. ಜನರಿಗೆ ಆಸಕ್ತಿದಾಯಕ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್​​​ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್​​​ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್​​​ ಕ್ಯಾಟಗರಿಯಲ್ಲಿ ತಿಳಿಸಲಾಗುವುದು

ಇನ್ನೂ ಹೆಚ್ಚು ಓದಿ

Viral: ಕಾರ್ಪೊರೇಟ್ ಕೆಲಸದ ಸ್ಥಳಗಳಲ್ಲಿನ ಐದು ವಿಷಕಾರಿ ಅಂಶಗಳನ್ನು ಟೀಕಿಸಿದ ಸ್ಟಾರ್ಟ್ಅಪ್ ಸಂಸ್ಥಾಪಕಿ

ಇಂದಿನ ದಿನಗಳಲ್ಲಿ ಸೌಲಭ್ಯ ಹೆಚ್ಚಿದಷ್ಟೂ ಕಾರ್ಪೊರೇಟ್ ಕೆಲಸದಲ್ಲಿ ಒತ್ತಡವೂ ಹೆಚ್ಚುತ್ತಿದೆ. ಇಷ್ಟೇ ಹೊತ್ತಿನಲ್ಲಿ ಇಂತಿಷ್ಟು ಕೆಲಸ ಮುಗಿಸಬೇಕೆನ್ನುವ ನಿಯಮವು ಉದ್ಯೋಗಿಗಳನ್ನು ನರಳುವಂತೆ ಮಾಡಿದೆ. ಹೌದು, ಭಾರತೀಯ ಕೆಲಸದ ಸ್ಥಳಗಳಲ್ಲಿ ಸಾಮಾನ್ಯೀಕರಿಸಲಾದ ಐದು ವಿಷಕಾರಿ ಅಭ್ಯಾಸಗಳ ಬಗ್ಗೆ ಬೆಂಗಳೂರಿನ ಸ್ಟಾರ್ಟ್ಅಪ್ ಸಂಸ್ಥಾಪಕಿಯೊಬ್ಬರು ಮಾತನಾಡಿದ್ದಾರೆ. ಈ ಪೋಸ್ಟ್ ಆನ್ಲೈನ್ ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಆಟೋ ಹಿಂಬದಿ ಬರೆದ ಸಾಲಿನಲ್ಲಿ ತಂದೆ ತಾಯಿ ಮಹತ್ವ ಸಾರಿದ ಆಟೋ ಡ್ರೈವರ್

ನೀವು ಈ ಆಟೋ, ಬೈಕ್ ಗಳ ಹಿಂಬದಿಯಲ್ಲಿ ಬರೆದಿರುವುದನ್ನು ಆಕರ್ಷಕ ಹಾಗೂ ಅರ್ಥಪೂರ್ಣ ಸಾಲುಗಳನ್ನು ನೋಡಿರುತ್ತೀರಿ. ಕೆಲ ಸಾಲುಗಳು ಜೀವನಕ್ಕೆ ಪಾಠವಾಗುತ್ತದೆ. ಇದೀಗ ಆಟೋ ಹಿಂಬದಿ ಬರೆಯಲಾದ ಸಾಲು ತಂದೆಯೇ ನಿಜವಾದ ಹೀರೋ, ತಾಯಿಯೇ ದೇವರು ಎನ್ನುವುದನ್ನು ಒತ್ತಿ ಹೇಳಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Brain Teaser: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಪ್ರಶ್ನೆಯಲ್ಲೇ ಅಡಗಿರುವ ಉತ್ತರವನ್ನು ಹೇಳಬಲ್ಲಿರಾ?

ಒಗಟಿನ ಪ್ರಶ್ನೆಗಳೇ ಹಾಗೆ, ನೋಡಲು ಸುಲಭವಾಗಿ ಕಂಡರೂ ಉತ್ತರ ಹುಡುಕುವುದು ಅಷ್ಟೇ ಕಷ್ಟಕರ. ಹೀಗಾಗಿ ಹೆಚ್ಚಿನವರು ಇಂತಹ ಒಗಟನ್ನು ಬಿಡಿಸಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಇದೀಗ ಇಂತಹ ಒಗಟಿನ ಪ್ರಶ್ನೆಯೊಂದು ವೈರಲ್ ಆಗಿದ್ದು ಬುದ್ಧಿ ಉಪಯೋಗಿಸಿ ಉತ್ತರ ಹೇಳಲು ಪ್ರಯತ್ನಿಸಬೇಕು. ಈ ಕೆಳಗಿನ ಪ್ರಶ್ನೆ ಓದಿ, ಈ ಒಗಟನ್ನು ನೀವು ಬಿಡಿಸುವಿರಾ?

Viral: ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ್ರೂ ಜಾಬ್‌ನಿಂದ ತೆಗೆದು ಹಾಕಿದ ಕಂಪನಿ

ಸ್ವಂತ ಬ್ಯುಸಿನೆಸ್ ಇದ್ರೆ ಮಾತ್ರ ಕೆಲಸ ಹೋಗುತ್ತೆ ಎನ್ನುವ ಭಯ ಇರಲ್ಲ. ಆದರೆ ಖಾಸಗಿ ಕಂಪನಿಗಳಲ್ಲಿ ವರ್ಷಾನುಗಟ್ಟಲೆ ಕೆಲಸ ಮಾಡಿದ್ರೂ ಜಾಬ್ ಸೇಫ್ಟಿ ಇರಲ್ಲ. ಇದೀಗ ಒಂದು ದಶಕಕ್ಕೂ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲಸದಿಂದ ವಜಾಗೊಂಡಿರುವ ಬಗ್ಗೆ ಆನ್ಲೈನ್ ನಲ್ಲಿ ಪೋಸ್ಟ್ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ

Viral: ತಿಂಗಳಿಗೆ ಲಕ್ಷ ಸಂಪಾದನೆಯಿದ್ರೂ ವೀಕೆಂಡ್‌ನಲ್ಲಿ ರ‍್ಯಾಪಿಡೋ ಬೈಕ್ ಓಡಿಸುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಕೈತುಂಬಾ ಸಂಬಳ ಇದ್ರೂ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದು ಬೆಂಗಳೂರಿನಂತಹ ನಗರದಲ್ಲಿ ಸುಲಭವಲ್ಲ. ಹೌದು, ಆರಂಕಿ ಸಂಬಳ ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ವಾರಾಂತ್ಯದಲ್ಲಿ ರ‍್ಯಾಪಿಡೋ ಬೈಕ್ ಓಡಿಸುತ್ತಿದ್ದಾರೆ. ಇಂಜಿನಿಯರ್‌ರೊಬ್ಬರು ಎರಡು ಕೆಲಸವನ್ನು ಅವಲಂಬಿಸಿಕೊಂಡಿದ್ದಾರೆ. ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಸಂಬಳ 1.7 ಲಕ್ಷ ರೂ ಇದ್ರೂ, ಉಳಿತಾಯ 2,520 ರೂ; ನೆಟ್ಟಿಗರಲ್ಲಿ ಸಲಹೆ ಕೋರಿದ ದಂಪತಿ

ಪ್ರೀತಿಯೊಂದಿದ್ದ ಮಾತ್ರ ಸಂಸಾರ ಸುಲಭವಾಗಿ ಸಾಗಲು ಸಾಧ್ಯವಿಲ್ಲ. ಹಣಕಾಸಿನ ಸ್ಥಿತಿಯೂ ಅಷ್ಟೇ ಉತ್ತಮವಾಗಿರಬೇಕು. ಆದರೆ ಈಗಿನ ಕಾಲದಲ್ಲಿ ದಂಪತಿಗಳಿಬ್ಬರೂ ದುಡಿದ್ರೂ ಖರ್ಚು ವೆಚ್ಚ ತೂಗಿಸಿಕೊಂಡು ಉಳಿತಾಯ ಮಾಡೋದು ಕಷ್ಟ. ಇದೇ ಅನುಭವ ಈ ದಂಪತಿಗೂ ಆಗಿದೆ ಸಾಲ ಮರುಪಾವತಿ, ಮನೆಯ ವೆಚ್ಚಗಳು ಹಾಗೂ ಭವಿಷ್ಯದ ಗುರಿಗಳನ್ನು ನಿಭಾಯಿಸುವಾಗ ಅವರು ಎದುರಿಸುತ್ತಿರುವ ಆರ್ಥಿಕ ಒತ್ತಡಗಳನ್ನು ವಿವರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Optical Illusion: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ಜಿರಾಫೆಯನ್ನು ಕಂಡುಹಿಡಿಯಿರಿ

ಮೆದುಳಿಗೆ ಕೆಲಸ ನೀಡುವ ಪಝಲ್‌ ಗೇಮ್‌ಗಳು, ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಸೇರಿದಂತೆ ಇನ್ನಿತ್ತರ ಒಗಟುಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ಕಂಡು ಹಿಡಿಯಬೇಕು. ಕೆಲವೇ 5 ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ನೋಡಿ.

Viral: ಬೆಂಗಳೂರಲ್ಲಿ 1.4 ಲಕ್ಷ ರೂ ಸಂಬಳ ಇದ್ರೂ , ಊರಲ್ಲಿ ಸಿಗುವ 40 ಸಾವಿರದಲ್ಲೇ ನಾನು ಶ್ರೀಮಂತ; ಯುವಕ ಹೀಗೆಂದಿದ್ದೇಕೆ?

ಯುವಕ ಯುವತಿಯರಿಗೆ ಬೆಂಗಳೂರು ಅಂದ್ರೆ ಅದೇನೋ ಸೆಳೆತ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ ಮುಖ ಮಾಡುವವರೇ ಹೆಚ್ಚು. ಆದರೆ ಹುಟ್ಟೂರು ಬಿಟ್ಟು ಮಾಯನಗರಿಗೆ ಬಂದ ಬಳಿಕ ವಾಸ್ತವ ಬದುಕಿನ ಅರಿವಾಗುತ್ತದೆ. ಇದೀಗ ಯುವಕನೊಬ್ಬನಿಗೆ ಬೆಂಗಳೂರಿಗಿಂತ ತನ್ನ ಊರೇ ವಾಸಿ ಎಂದೆನಿಸಿದೆ. ಈ ಯುವಕನಿಗೆ ಹೀಗೆ ಅನಿಸಲು ಅದರ ಹಿಂದಿನ ಕಾರಣವನ್ನು ಪೋಸ್ಟ್‌ನಲ್ಲಿ ವಿವರಿಸಿದ್ದಾನೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ಸಾಗಿಸುವುದೇ ಕಷ್ಟಕರ. ಬಾಡಿಗೆ ದರಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ಮೂಲದ ಉದ್ಯೋಗಿಯೊಬ್ಬರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿ ಉಳಿದುಕೊಂಡಿದ್ದಾರೆ. 1BHK ಮನೆಗೆ 45,000 ರೂ ಬಾಡಿಗೆಯಂತೆ. ಅವರಿಗೆ ಈ ಮೊತ್ತವು ಹೊರೆಯಾಗುತ್ತಿರುವ ಕಾರಣ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ

ಕೆಲವರಿಗೆ ಒಗಟುಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಸಮಯ ಸಿಕ್ಕಾಗಲೆಲ್ಲಾ ಇಂತಹ ಒಗಟುಗಳನ್ನು ಬಿಡಿಸುವುದರಲ್ಲಿ ಸಮಯ ಕಳೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್‌ನತಹ ಒಗಟಿನ ಚಿತ್ರಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಟ್ರಿಕ್ಕಿ ಒಗಟಿನ ಚಿತ್ರವೊಂದಿದೆ. ಈ ಇಲ್ಯೂಷನ್ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ.

Video: ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರ; ಹೊಸ ಬಾಡಿಗೆ ಮನೆಯ ಬಗ್ಗೆ ಮಹಿಳೆ ಹೇಳಿದ್ದೇನು ಗೊತ್ತಾ?

ಉದ್ಯೋಗದ ನಿಮಿತ್ತ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುವುದು ಅನಿವಾರ್ಯ. ಆದರೆ ಇದೀಗ ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಮಹಿಳೆಯೊಬ್ಬರು ತಮ್ಮ ಹೊಸ ಬಾಡಿಗೆ ಅಪಾರ್ಟ್‌ಮೆಂಟ್‌ನ್ನು ತೋರಿಸಿದ್ದಾರೆ. ಹದಿಮೂರು ವರ್ಷಗಳ ಕಾಲ ಇದ್ದ ಮನೆಯನ್ನು ಬಿಟ್ಟು ಬಂದಿದ್ದು, ಈ ಭಾವನಾತ್ಮಕ ಪರಿವರ್ತನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Optical Illusion: ಹಚ್ಚ ಹಸಿರಿನ ಗಿಡಗಳ ನಡುವೆ ಅಡಗಿರುವ ಹಸಿರು ಹಾವನ್ನು ಗುರುತಿಸಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲ, ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಕಾರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಗಟಿನ ಚಿತ್ರಗಳು ಸಾಕಷ್ಟು ಚಿತ್ರಗಳು ವೈರಲ್ ಆಗುತ್ತಿದ್ದು, ಇದೀಗ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಲು ಒಳ್ಳೆಯ ಸಮಯ. ಹಚ್ಚಹಸಿರಿನ ಗಿಡಗಳ ನಡುವೆ ಇರುವ ಹಸಿರು ಹಾವನ್ನು ಪತ್ತೆ ಹಚ್ಚುವ ಸವಾಲು ಇಲ್ಲಿದೆ.