AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ

ಕೆಲವರಿಗೆ ಒಗಟುಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಸಮಯ ಸಿಕ್ಕಾಗಲೆಲ್ಲಾ ಇಂತಹ ಒಗಟುಗಳನ್ನು ಬಿಡಿಸುವುದರಲ್ಲಿ ಸಮಯ ಕಳೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್‌ನತಹ ಒಗಟಿನ ಚಿತ್ರಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಟ್ರಿಕ್ಕಿ ಒಗಟಿನ ಚಿತ್ರವೊಂದಿದೆ. ಈ ಇಲ್ಯೂಷನ್ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ.

Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: elle.hu
ಸಾಯಿನಂದಾ
|

Updated on: Jun 05, 2026 | 10:44 AM

Share

ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಆಗಾಗ ಹರಿದಾಡುವುದಿದೆ. ಕೆಲವು ಚಿತ್ರಗಳು ನಿಮ್ಮ ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿರುತ್ತವೆ. ನಿಮ್ಮ ಕಣ್ಣಿಗೆ ನಿಜವೆಂದು ಕಾಣುವ ಚಿತ್ರದಲ್ಲಿ ಏನೋ ಒಂದು ಅಡಗಿರುತ್ತವೆ. ಹೀಗಾಗಿ ಈ ಟ್ರಿಕ್ಕಿ ಒಗಟನ್ನು ಬಿಡಿಸಲು ಕೆಲವರು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಹೂದಾನಿಯ ಮುಂಭಾಗದಲ್ಲಿ ಮಹಿಳೆಯೊಬ್ಬಳು ನಿಂತು ಕೊಂಡಿದ್ದಾಳೆ. ಇಲ್ಲಿ ಎಷ್ಟು ಮುಖಗಳಿವೆ ಎಂದು ಪತ್ತೆ ಹಚ್ಚುವುದೇ ನಿಮ್ಮ ಮುಂದಿರುವ ಸವಾಲು. 30 ಸೆಕೆಂಡುಗಳಲ್ಲಿ ಸರಿಯಾದ ಉತ್ತರ ಹೇಳಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರ ನೋಡಿದಾಗ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಮೊದಲು ನೋಡಿದಾಗ ನಿಮಗೆ ಮೊದಲು ಕಾಣಿಸುವುದೇ ಮಹಿಳೆ. ಇಲ್ಲಿ ಒಬ್ಬ ಮಹಿಳೆ ಹೂದಾನಿಗೆ ಹೂವುಗಳನ್ನು ಹಾಕುತ್ತಿದ್ದಾಳೆ. ಇಲ್ಲಿ ಇನ್ನಷ್ಟು ಮುಖಗಳಿವೆ. ನೀವು ಬುದ್ಧಿವಂತಾಗಿದ್ದರೆ ಮಾತ್ರ ಮರೆಮಾಡಲಾಗಿರುವ ಮುಖಗಳನ್ನು ಕಂಡು ಹಿಡಿಯಲು ಸಾಧ್ಯ. 30 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಪ್ರಯತ್ನಿಸಿ. ನೀವು ಈ ಟ್ರಿಕ್ಕಿ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ ಎಂದು ಭಾವಿಸುತ್ತೇವೆ.

ಇದನ್ನೂ ಓದಿ: ಹಚ್ಚ ಹಸಿರಿನ ಗಿಡಗಳ ನಡುವೆ ಅಡಗಿರುವ ಹಸಿರು ಹಾವನ್ನು ಗುರುತಿಸಬಲ್ಲಿರಾ?

ಈ ಟ್ರಿಕ್ಕಿ ಒಗಟಿಗೆ ಉತ್ತರ ಸಿಕ್ಕಿತೇ?

ಎಷ್ಟೇ ಪ್ರಯತ್ನಿಸಿದರೂ ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ಮುಖಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೇ. ಈ ಚಿತ್ರವನ್ನು ಸರಿಯಾಗಿ ಗಮನಿಸಿದರೆ ನಿಮಗೆ ಉತ್ತರ ಸಿಗುತ್ತದೆ. ಆದರೆ ಈ ಒಗಟನ್ನು ನಾವೇ ಬಿಡಿಸಿ ಉತ್ತರ ಹೇಳುತ್ತೇವೆ.ಈ ಚಿತ್ರದಲ್ಲಿ ಒಟ್ಟು ಮೂರು ಮುಖಗಳಿವೆ. ಒಂದು ಮಹಿಳೆಯ ಮುಖ. ಈ ಹೂದಾನಿಯ ಎರಡೂ ಬದಿಗಳಲ್ಲಿ ಎರಡು ಮುಖಗಳಿವೆ. ಈ ಚಿತ್ರವನ್ನು ತಿರುಗಿಸಿದರೆ ಆ ಎರಡು ಮುಖಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು