
ಏಜ್ ಇಸ್ ಎ ಜಸ್ಟ್ ನಂಬರಷ್ಟೇ, ದೇಹಕ್ಕಷ್ಟೇ ವಯಸ್ಸಾಗುವುದು ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ. ಇಳಿ ವಯಸ್ಸಿನಲ್ಲಿಯೂ ಜೀವನೋತ್ಸಾಹದಿಂದ ನಮ್ಮೆಲ್ಲರ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ 80 ಹರೆಯದ ವಯಸ್ಸಿನಲ್ಲಿ ಅಜ್ಜಿಯೊಬ್ಬರು ಈಜುಕೊಳದಲ್ಲಿ ಸಮ್ಮರ್ ಸಾಲ್ಟ್ ಮಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಮೂಲಕ ಮೆಚ್ಚುಗೆಗಳಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಲುಸಿನಿಯಾ ಬ್ರಿಡ್ಜ್ ಎಂಬುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ, ‘ನನಗೆ ತುಂಬಾ ಅಸೂಯೆಯಾಗುತ್ತಿದೆ, ಅವಳನ್ನು ನೋಡಿ , 84 ವರ್ಷ ಮತ್ತು ಜೀವನ ಸಂಪೂರ್ಣ ತುಂಬಿದೆ. ಅವಳಿಗೆ ಒಳ್ಳೆಯದಾಗಲಿ. ಅವಳು ಕೊಳದಲ್ಲಿ ಜಿಗಿಯಲು ಬಯಸಲಿಲ್ಲ, ಅವಳು ಪಲ್ಟಿ ಹೊಡೆಯಲು ಬಯಸಿದ್ದಳು. ಆದರೆ ಆಕೆಗೆ ನೀನು ಜಿಗಿಯಬಹುದು, ಆದರೆ ಪಲ್ಟಿ ಹೊಡೆಯಲಾಗದು ಎಂದಿದ್ದರು ಆದರೆ ಆಕೆ ಪಲ್ಟಿ ಹೊಡೆದು ತೋರಿಸಿದಳು’ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೋದಲ್ಲಿ , ವಯಸ್ಸಾದ ಮಹಿಳೆ ಈಜುಕೊಳದ ಅಂಚಿನಲ್ಲಿ ಆತ್ಮವಿಶ್ವಾಸದಿಂದ ನಿಂತಿರುವುದನ್ನು ನೋಡಬಹುದು. ಈ ವಿಡಿಯೋ ಮಾಡುತ್ತಿರುವ ವ್ಯಕ್ತಿಯೂ ಬೇಡ ಎಂದು ಹೇಳಿದ್ರು ಅಜ್ಜಿಯೂ ಪಲ್ಟಿ ಹೊಡೆದು ನೀರಿಗೆ ಧುಮುಕುತ್ತಾರೆ. ಆ ವ್ಯಕ್ತಿಯೂ ಸುತ್ತಲಿನವರೊಂದಿಗೆ ಸೇರಿ ಸೇರಿ ಅಜ್ಜಿಯ ಅದ್ಭುತವಾದ ಡೈವ್ ಅನ್ನು ನೋಡಿ ಜೋರಾಗಿ ಹುರಿದುಂಬಿಸುತ್ತಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಪೊಲೀಸರು ಹಿಂಗೂ ಸಲಹೆ ಕೊಡ್ತಾರಾ, ಲೈಫ್ನ್ನು ಬ್ಯಾಚುರಲ್ ಇದ್ದಾಗಲೇ ಎಂಜಾಯ್ ಮಾಡಿ ಎಂದ ಪೊಲೀಸ್
ಬಳಕೆದಾರರೊಬ್ಬರು, ‘ಆಕೆಯ ಕಾಲುಗಳೇ ಹೇಳುತ್ತಿವೆ ಆಕೆ ಎಷ್ಟು ಸಧೃಡವಾಗಿದ್ದಾಳೆ ಎಂದಿದ್ದಾರೆ. ಮತ್ತೊಬ್ಬರು, ‘ ನನಗೀಗ ಕೇವಲ 2 ವರ್ಷ ಈಗಲೇ ಕಾಲು ಗಂಟು ನೋಯಲು ಶುರುವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ನನಗೀಗ 39 ವರ್ಷ ಅಷ್ಟೇ, ಈಗಲೇ ನನಗೆ ನನ್ನ ಬೆನ್ನು ಮುರಿದಿದೆ ಎಂದೆನಿಸುತ್ತಿದೆ’ ಎಂದು ಹೇಳಿದ್ದಾರೆ. ಹೀಗೆ ಅನೇಕರು ಅಜ್ಜಿಯ ಆರೋಗ್ಯ ಹಾಗೂ ಜೀವನೋತ್ಸಾಹವನ್ನು ಹಾಡಿ ಹೊಗಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Tue, 4 March 25