Video: ಕಣ್ಣೀರು ಹಾಕುತ್ತಿದ್ದ ಯುವಕನನ್ನು ತಬ್ಬಿಕೊಂಡು ಸಮಾಧಾನ ಪಡಿಸಿದ ಗೋಮಾತೆ

ಮನುಷ್ಯನಿಗೆ ಹೋಲಿಸಿದ್ರೆ ಈ ಪ್ರಾಣಿಗಳೇ ಭಾವನೆಗೆ ಸ್ಪಂದಿಸುತ್ತವೆ. ಸೋಶಿಯಲ್‌ ಮೀಡಿಯಾದಲ್ಲಿ ಇಂತಹ ಸಾಕಷ್ಟು ದೃಶ್ಯಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಕಣ್ಣೀರು ಹಾಕುತ್ತಿದ್ದಂತೆ ಹಸುವೊಂದು ತಬ್ಬಿಕೊಂಡು ಸಮಾಧಾನ ಪಡಿಸುವಂತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕಣ್ಣೀರು ಹಾಕುತ್ತಿದ್ದ ಯುವಕನನ್ನು ತಬ್ಬಿಕೊಂಡು ಸಮಾಧಾನ ಪಡಿಸಿದ ಗೋಮಾತೆ
ವೈರಲ್‌ ವಿಡಿಯೋ
Image Credit source: Instagram

Updated on: Jul 17, 2026 | 12:18 PM

ಮೂಕ ಪ್ರಾಣಿಗಳು (dumb animal) ತಮ್ಮ ಮೇಲೆ ಪ್ರೀತಿ ತೋರುವ, ಕಾಳಜಿ ವಹಿಸುವವರ ಮೇಲೆ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತವೆ. ತನ್ನವರ ನೋವಿನಲ್ಲಿ ಜತೆಯಾಗುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಯುವಕನೊಬ್ಬ ಹಸುವಿನ ಎದುರು ಕಣ್ಣೀರು ಹಾಕುತ್ತಾ ಕುಳಿತಿದ್ದಾನೆ. ಇದನ್ನರಿತ ಹಸುವು ಆತನನ್ನು ತಬ್ಬಿಕೊಂಡು ಸಮಾಧಾನ ಪಡಿಸುವಂತಿದೆ ಈ ದೃಶ್ಯ. ಈ ಭಾವನಾತ್ಮಕ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ತನ್ಮಯ ಪಾಂಡೆ (Tanmay Pande) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವಕನೊಬ್ಬ ಹಸುವಿನ ಮುಂದೆ ಅಳುತ್ತಾ ಕುಳಿತಿದ್ದಾನೆ. ಯುವಕನ ಮನಸ್ಸಿನ ದುಃಖವನ್ನು ಅರಿತುಕೊಂಡ ಹಸುವು ಹತ್ತಿರ ಬಂದು ಆತನ ಭುಜದ ಮೇಲೆ ತನ್ನ ಮುಖವನ್ನಿಟ್ಟು ಸಮಾಧಾನ ಪಡಿಸುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮನುಷ್ಯರಿಗಿಂತ ಗುಣದಲಿ ಪ್ರಾಣಿಗಳೇ ಮೇಲು ಎಂದಿದ್ದಾರೆ. ಇನ್ನೊಬ್ಬರು, ಮನುಷ್ಯರನ್ನು ಪ್ರೀತಿ ಮಾಡೋದಕ್ಕಿಂತ ಮಾತು ಬಾರದ ಮೂಕ ಪ್ರಾಣಿಗಳ ಪ್ರೀತಿ ತೋರಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಷ್ಕಲ್ಮಶ ಪ್ರೀತಿ ಕಾಳಜಿ ಅಂದ್ರೆ ಇದೇ ಇರ್ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:16 pm, Fri, 17 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us