Video: ದುಡಿಮೆಯಲ್ಲಿ ಖುಷಿ ಕಾಣುವ ಹಿರಿಜೀವಕ್ಕೆ ಹೆಗಲಾದ ಶ್ವಾನ

ಮನುಷ್ಯರಿಗಿಂತ ಪ್ರಾಣಿಗಳೇ ಲೇಸು ಎನ್ನುವ ಮಾತಿದೆ. ಆದರೆ ಈ ಶ್ವಾನವು ನಿಷ್ಠೆಯಲ್ಲಿ ಒಂದು ಹೆಜ್ಜೆ ಮುಂದಿರುತ್ತದೆ. ಒಂದು ತುತ್ತು ಅನ್ನ ಹಾಕಿದರೆ ಜೀವನ ಪರ್ಯಂತ ಋಣಿಯಾಗಿರುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ದುಡಿಮೆಯಲ್ಲಿ ಖುಷಿ ಕಾಣುತ್ತಿರುವ ಹಿರಿ ಜೀವಕ್ಕೆ ಶ್ವಾನವೊಂದು ಹೆಗಲಾಗಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದುಡಿಮೆಯಲ್ಲಿ ಖುಷಿ ಕಾಣುವ ಹಿರಿಜೀವಕ್ಕೆ ಹೆಗಲಾದ ಶ್ವಾನ
ವೈರಲ್‌ ವಿಡಿಯೋ
Image Credit source: Facebook

Updated on: Mar 12, 2026 | 10:52 AM

ನಿಯತ್ತು ಎಂದರೆ ಮೊದಲು ನೆನಪಾಗುವುದೇ ಈ ಶ್ವಾನ (dog). ಮನುಷ್ಯರಿಗೆ ನಾಯಿಗಿಂತ ಹೆಚ್ಚು ಆಪ್ತರು ಬೇರಾರೂ ಇರಲಿಕ್ಕೆ ಸಾಧ್ಯವಿಲ್ಲ. ಶ್ವಾನಗಳು ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿ. ಮನೆಯ ಸದಸ್ಯರಂತೆ ಇರುವ ಈ ಶ್ವಾನವು ಒಂದು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಮಾಲೀಕನಿಗೆ ಋಣಿಯಾಗಿರುತ್ತದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ತನ್ನ ಮೇಲೆ ಕಾಳಜಿ ತೋರುವ ವ್ಯಕ್ತಿ ಹೂವಿನ ಮಾಲೆ ಮಾರುತ್ತಿದ್ದರೆ, ಶ್ವಾನವು ಆ ಹಿರಿಜೀವಕ್ಕೆ ಸಹಾಯ ಮಾಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣಂಚಲಿ ನೀರು ತರಿಸಿದೆ.

Somanath kanrar ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಶ್ವಾನ ಹಾಗೂ ವ್ಯಕ್ತಿಯ ನಡುವಿನ ಬಾಂಧವ್ಯವನ್ನು ನೋಡಬಹುದು. ಹಿರಿಯ ವ್ಯಕ್ತಿಯೊಬ್ಬರು ಹೂವಿನ ಮಾಲೆಯನ್ನು ಮಾರಾಟ ಮಾಡುತ್ತಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗೆ ಕೈಯಲ್ಲಿದ್ದ ಮಾಲೆಯನ್ನು ಕೊಡುತ್ತಿದ್ದರೆ, ಇತ್ತ ಶ್ವಾನವು ತನ್ನ ಬಾಯಲ್ಲಿ ಹೂವಿನ ಮಾಲೆಯೊಂದನ್ನು ಹಿಡಿದು ಪಕ್ಕದಲ್ಲಿ ನಿಂತುಕೊಂಡಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಮಗುವಿನಂತೆ ಮನೆಮಾಲೀಕನನ್ನು ಹಿಂಬಾಲಿಸಿದ ಬಾತುಕೋಳಿ

ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಪ್ರಾಣಿಗಳಿಗೆ ಅನ್ನ ಹಾಕಿ, ಅವುಗಳು ನಿಮ್ಮ ಕಷ್ಟ ಸುಖಕ್ಕೆ ಹೆಗಲಾಗುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಂತಹ ದೃಶ್ಯಗಳನ್ನು ನೋಡಲು ಖುಷಿಯೆನಿಸುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:51 am, Thu, 12 March 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us