ನಾಯಿ ಗುಂಡಿ ತೋಡುವುದ ಕಂಡೆ; ಕಾಣಿರೇ ದಾಸರೇ ಈ ‘ಕಲಿ’ಯುಗವ

Dog : ಬೆಕ್ಕು ಭಕ್ಕರಿ ಮಾಡೂದ ಕಂಡೆ, ಇಲಿಯ ಒಲಿಯ ಊದುದ ಕಂಡೆ, ಕಪ್ಪೆ ಪಾತರ ಕುಣಿವುದ ಕಂಡೆ, ಏಡಿ ಮದ್ದಳೆ ಬಡೆವುದ ಕಂಡೆ... ಎಂದ ಪುರಂದರರು ಒಮ್ಮೆ ಇಲ್ಲಿ ಬಂದು ನೋಡಬಾರದೆ?

ನಾಯಿ ಗುಂಡಿ ತೋಡುವುದ ಕಂಡೆ; ಕಾಣಿರೇ ದಾಸರೇ ಈ ಕಲಿಯುಗವ
ಗಿಡ ನೆಡಲು ಗುಂಡಿ ತೋಡುತ್ತಿರುವ ನಾಯಿ
ಶ್ರೀದೇವಿ ಕಳಸದ

Updated on: May 12, 2023 | 4:20 PM

Viral Video : ಪೇಟೆಗೆ ಹೋಗಿ ತರಕಾರಿ ತರುವ, ದಿನಸಿ ಸಾಮಾನುಗಳನ್ನು ತರುವ ನಾಯಿಗಳ ವಿಡಿಯೋ ನೋಡಿದ್ದೀರಿ. ಹಾಗೆಯೇ ಎಳೆಕೂಸುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ನಾಯಿಬೆಕ್ಕುಗಳ ವಿಡಿಯೋಗಳನ್ನೂ ನೋಡಿದ್ದೀರಿ. ಅಷ್ಟೇ ಯಾಕೆ ಪೋಷಕರ ಅನೇಕ ಕೆಲಸಗಳಲ್ಲಿ ಭಾಗಿಯಾಗುವ ನಿಷ್ಠಾವಂತ ನಾಯಿಗಳ ವಿಡಿಯೋ ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ನಾಯಿಯ ಪೋಷಕರು ಸಸಿ ನೆಡಲು ತೊಡಗಿದಾಗ ಏನ ಸಹಾಯ ಮಾಡಿದೆ ಎಂದು!

 

Loading...

ಪುಟ್ಟಮಕ್ಕಳಂತೆ ಎಲ್ಲಿ ಹೋದರೂ ಹಿಂಬಾಲಿಸುವ ಈ ನಾಯಿಬೆಕ್ಕುಗಳನ್ನು ಸುಮ್ಮನೆ ಕೂರಿಸುವುದು ಮಹಾನ್​ ಕೆಲಸವೇ! ಆದರೆ ಸ್ವಲ್ಪ ತಾಳ್ಮೆಯಿಂದ ಅವುಗಳ ಉತ್ಸಾಹ, ಕುತೂಹಲ, ಅಚ್ಚರಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳಿಗೆ ಸೂಕ್ತ ತರಬೇತಿ ಕೊಟ್ಟರೆ ಶಿಸ್ತಿನಿಂದ ನಿಮ್ಮ ಸಹಾಯಕರಂತೆ, ಆಪ್ತರಂತೆ ಇರಬಲ್ಲವು.

ಇದನ್ನೂ ಓದಿ : ಕುಣಿಯಲು ಬರುವವರಿಗೆ ಎಲ್ಲೂ ಅಂಕುಡೊಂಕಿಲ್ಲ!

ಈ ವಿಡಿಯೋ ಅನ್ನು ಈಗಾಗಲೇ 46,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ ನಿಜ. ಆದರೆ ಅನೇಕರು ತಮ್ಮ ಅಭಿಪ್ರಾಯಗಳನ್ನು ವಿವಿಧ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಕೋತಿಗೆ ತರಕಾರಿ ಕಟ್ ಮಾಡಲು ಕಲಿಸಿ ಆಯಿತು. ಆನೆಗೆ ಪೇಂಟ್ ಮಾಡಲು ಕಲಿಸಿ ಆಯಿತು. ಈಗ ನಾಯಿಗೆ ಗಿಡ ನೆಡಲು ಕಲಿಸಿದ್ದಾಯಿತು. ಇನ್ನೂ ಏನೇನೆಲ್ಲ ಕಲಿಸಿ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೋ ಈ ಮನುಷ್ಯರು ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!

ಓಹ್​ ನನ್ನ ನಾಯಿಗೆ ಅಂತೂ ಒಂದು ಕೆಲಸ ಸಿಕ್ಕಿತು! ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಈ ನಾಯಿ ಹೀಗೆ ಮಾತು ಕೇಳಲು ಈ ಪೋಷಕ ಅದಕ್ಕೆ ಏನೆಲ್ಲ ಆಮಿಷ ತೋರಿಸಿರಬಹುದು? ಎಂದು ಮತ್ತೊಬ್ಬರು ಕೇಳಿದ್ದಾರೆ.
ಓಹ್ ನಾಯಿಯೇ ನಿನಗೆ ಒಳ್ಳೆಯದಾಗಲಿ ಎಂದು ಸಾಕಷ್ಟು ಜನ ಹರಸಿದ್ದಾರೆ. ಇದು ಸಲ್ಲದು ಎಂದು ಅನೇಕರು ತಕರಾರು ತೆಗೆದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Loading...
Unable to load recommendations.
Follow Us