Video: ಚೂಪಾದ ಹಲ್ಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದ ಶ್ವಾನ, ವೈರಲ್ ಆಯ್ತು ದೃಶ್ಯ

ಮನೆಯಲ್ಲಿ ಶ್ವಾನ ಸಾಕಿದ್ದರೆ ಅದು ಸಿಕ್ಕ ಸಿಕ್ಕ ವಸ್ತುಗಳನ್ನು ಜಗ್ಗುವುದು, ಹಲ್ಲಿನಿಂದ ಕಚ್ಚುವುದು ಮಾಡುತ್ತವೆ. ಆದರೆ ಇಲ್ಲೊಂದು ಶ್ವಾನವು ತನ್ನ ಕೆಲಸದಿಂದಲೇ ಗಮನ ಸೆಳೆದಿದೆ. ಹೌದು, ಶ್ವಾನವು ಚೂಪಾದ ಹಲ್ಲುಗಳಿಂದ ತೆಂಗಿನಕಾಯಿ ಸಿಪ್ಪೆ ಸುಲಿಯುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಚೂಪಾದ ಹಲ್ಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದ ಶ್ವಾನ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Sep 15, 2026 | 12:37 PM

ಶ್ವಾನಗಳ (dogs) ಬುದ್ಧಿವಂತಿಕೆ ನೋಡಿದ್ರೆ ಮನುಷ್ಯರೋ, ಪ್ರಾಣಿಗಳೋ ಎಂದು ಅನುಮಾನ ಮೂಡುವುದು ಸಹಜ. ಶ್ವಾನಗಳ ಬುದ್ಧಿವಂತಿಕೆಯ ಕ್ಯೂಟ್ ವಿಡಿಯೋಗಳು ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಮನೆಯ ಮುದ್ದಿನ ಶ್ವಾನವು ತೆಂಗಿನಕಾಯಿ ಸಿಪ್ಪೆ ಸುಲಿಯುವುದರಲ್ಲಿ ಬ್ಯುಸಿಯಾಗಿದೆ. ತನ್ನ ಚೂಪಾದ ಹಲ್ಲುಗಳಿಂದ ತೆಂಗಿನಕಾಯಿ ಕಚ್ಚಿ ಹಿಡಿದು ಸಿಪ್ಪೆ ಸುಲಿಯುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ತೆಂಗಿನಕಾಯಿ ಸಿಪ್ಪೆ ಸುಲಿದ ಶ್ವಾನ

ಬೀಯಿಂಗ್‌ ಬಬಲ್ಸ್‌ (being.bubbless) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಶ್ವಾನದ ಕ್ಯೂಟ್ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶ್ವಾನವೊಂದು ತನ್ನ ಮುಂಭಾಗದ ಎರಡು ಕಾಲುಗಳಲ್ಲಿ ತೆಂಗಿನಕಾಯಿ ಹಿಡಿದು ತನ್ನ ಚೂಪಾದ  ಹಲ್ಲುಗಳಿಂದ ಅದರ ಸಿಪ್ಪೆ ಸುಲಿಯುತ್ತಿರುವುದನ್ನು ಕಾಣಬಹುದು.


ಇದನ್ನೂ ಓದಿ: ಕಾಯುವಿಕೆ ಕೊನೆಗೂ ಅಂತ್ಯವಾಯ್ತು; ಮಾಲೀಕನನ್ನು ಕಂಡೊಡನೆ ಖುಷಿಯಲ್ಲಿ ಓಡಿ ಬಂದ ಶ್ವಾನ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬುದ್ಧಿವಂತ ಶ್ವಾನ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಶ್ವಾನ ತುಂಬಾ ಟ್ಯಾಲೆಂಟ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಿಪ್ಪೆ ಸುಲಿಯುವುದರಲ್ಲಿ ಮನುಷ್ಯರನ್ನೇ ಮೀರಿಸುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us