Video: ಸಣ್ಣ ವಿಷ್ಯಗಳನ್ನು ಸಂಭ್ರಮಿಸುವ ಭಾರತೀಯರ ಗುಣವನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆ

ಭಾರತೀಯರೇ ಹಾಗೆ, ಸಣ್ಣ ಸಣ್ಣ ವಿಷ್ಯಗಳನ್ನು ಸಂಭ್ರಮಿಸುತ್ತಾರೆ. ಇದೀಗ ಭಾರತೀಯರ ಖರೀದಿಗಳನ್ನು ಸಂಭ್ರಮಿಸುವ ಅಭ್ಯಾಸವು ಸಕಾರಾತ್ಮಕವಾಗಿದೆ ಎಂದು ಯುರೋಪಿಯನ್ ಮಹಿಳೆ ಹೇಳಿದ್ದಾರೆ. ಸಣ್ಣ ಪುಟ್ಟ ವೈಯುಕ್ತಿಕ ಮೈಲಿಗಲ್ಲುಗಳನ್ನು ಹೇಗೆ ಸಂಭ್ರಮಿಸುತ್ತಾರೆ ಎನ್ನುವುದನ್ನು ವಿಡಿಯೋ ಮಾಡಿ ಹೇಳಿದ್ದಾರೆ. ಈ ಕ್ಲಿಪಿಂಗ್‌ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸಣ್ಣ ವಿಷ್ಯಗಳನ್ನು ಸಂಭ್ರಮಿಸುವ ಭಾರತೀಯರ ಗುಣವನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Jul 01, 2026 | 11:39 AM

ಭಾರತಕ್ಕೆ ಬಂದ ವಿದೇಶಿಗರು (foreigner) ಇಲ್ಲಿನ ಆಚಾರ ವಿಚಾರ, ಆಹಾರ ಪದ್ಧತಿಯನ್ನು ಮನಸಾರೆ ಇಷ್ಟ ಪಡ್ತಾರೆ. ಭಾರತೀಯರ ಒಳ್ಳೆತನಕ್ಕೆ, ಗುಣಕ್ಕೆ ಫಿದಾ ಆಗುತ್ತಾರೆ. ಭಾರತೀಯರು ಸಣ್ಣ ಸಣ್ಣ ವಿಷ್ಯಗಳನ್ನು ಸಂಭ್ರಮಿಸುವುದನ್ನು ಕಂಡು ವಿದೇಶಿ ಮಹಿಳೆಯೊಬ್ಬರು ಫುಲ್ ಫಿದಾ ಆಗಿದ್ದಾರೆ. ವಿದೇಶಿ ಮಹಿಳೆ ಈ ದೇಶದ ಜನರು ಸಣ್ಣಪುಟ್ಟ ವೈಯಕ್ತಿಕ ಮೈಲಿಗಲ್ಲುಗಳನ್ನು ಹೇಗೆ ಸಂಭ್ರಮಿಸುವ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನೆಟ್ಟಿಗರ ಹೃದಯ ಗೆದ್ದಿದೆ.

ಗಾಬಿ (gabiinindia) ಎಂಬ ಮಹಿಳೆ ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ಗೆ ಭಾರತೀಯರು ಈ ಕ್ಷಣಗಳನ್ನು ಆಚರಿಸುವ ರೀತಿ ಇಷ್ಟ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ, ಶುಭೋದಯ ಹುಡುಗರೇ. ನಾನು ಯುರೋಪಿಯನ್, ಆದರೆ ನಾನೀಗ ಭಾರತದಲ್ಲಿ ವಾಸಿಸುತ್ತಿದ್ದೇನೆ. ನೀವು ಹೊಸ ಫೋನ್ ಖರೀದಿಸಿದಾಗ ಅಥವಾ ನೀವು ಹೊಸ ಸ್ಕೂಟಿ ಅಥವಾ ಹೊಸ ಕಾರು ಖರೀದಿಸಿದಾಗ ಜನರು ಇಲ್ಲಿ ನಿಮ್ಮನ್ನು ಅಭಿನಂದಿಸುತ್ತಿದ್ದಾರೆಂದು ನಾನು ಅರಿತುಕೊಂಡೆ. ಇದು ನಿಜಕ್ಕೂ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಯುರೋಪಿನಲ್ಲಿ ಈ ರೀತಿ ಅಭಿನಂದನೆ ಹೇಳುವುದನ್ನು ನಾನು ಎಂದಿಗೂ ನೋಡಿಲ್ಲ. ಇದು ತುಂಬಾ ಆಸಕ್ತಿದಾಯಕವಾಗಿದೆ. ಆದ್ದರಿಂದ ಈ ರೀತಿಯ ನಡವಳಿಕೆ ತುಂಬಾ ಸಕಾರಾತ್ಮಕ ಹಾಗೂ ದಯೆಯಿಂದ ಕೂಡಿದೆ. ಹೌದು, ಜನರು ಇಲ್ಲಿ ಬೇರೆ ಯಾವುದಕ್ಕೆ ಅಭಿನಂದಿಸುತ್ತಿದ್ದಾರೆಂದು ನೀವು ಕಾಮೆಂಟ್‌ಗಳಲ್ಲಿ ನನಗೆ ತಿಳಿಸಬಹುದು. ಇಲ್ಲಿ ಯುರೋಪ್ ಹಾಗೂ ಭಾರತದಲ್ಲಿನ ವ್ಯತ್ಯಾಸಗಳ ಬಗ್ಗೆ ನಾನು ಅರಿತುಕೊಂಡದ್ದನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇನೆ. ಮುಂದಿನ ಬಾರಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಣ್ಣ ಪುಟ್ಟ ವಿಷ್ಯಗಳನ್ನು ಸಂಭ್ರಮಿಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಇನ್ನೊಬ್ಬರು, ದಕ್ಷಿಣ ಭಾರತದಲ್ಲಿ, ನೀವು ಹೊಸದನ್ನು ಖರೀದಿಸಿದ್ದೀರಿ ಎಂದು ಯಾರಿಗೂ ಹೇಳಬೇಡಿ, ಏಕೆಂದರೆ ಅವರು ಮೊದಲು ಕೇಳುವುದು ಪಾರ್ಟಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತೀಯರು ಸಣ್ಣ ಕ್ಷಣಗಳಲ್ಲಿಯೂ ಸಂತೋಷವನ್ನು ಹೇಗೆ ಕಂಡುಕೊಳ್ಳಬೇಕೆಂದು ತಿಳಿದಿದ್ದಾರೆ. ಇದು ಬದುಕನ್ನು ಇನ್ನಷ್ಟು ಸುಂದರಗೊಳಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us