Video: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ
ಈಗ ಕೈಯಲ್ಲಿ ಹಣ ಇಟ್ಟುಕೊಂಡು ಓಡಾಡುವವರು ಕಡಿಮೆ. ಆನ್ಲೈನ್ ಟ್ರಾನ್ಸಾಕ್ಷನ್‌ಗಳು ಹೆಚ್ಚಾಗಿವೆ. ಹೀಗಿರುವಾಗ ಭಾರತದ ಯುಪಿಐ ವ್ಯವಸ್ಥೆಯನ್ನು ಹೊಗಳಿದ ವಿದೇಶಿಯೊಬ್ಬಳು ಶ್ಲಾಘಿಸಿದ್ದಾರೆ. ಈ ವ್ಯವಸ್ಥೆಯು ನನ್ನ ಪ್ರವಾಸದ ಸಮಯದಲ್ಲಿ ಬಹುತೇಕ ಎಲ್ಲೆಡೆ ಪಾವತಿಗಳನ್ನು ಸುಲಭಗೊಳಿಸಿದೆ ಎಂದು ಹೇಳಿದ್ದಾರೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಹೀಗಾಗಿ ನಗದು ವ್ಯವಹಾರ ಮಾಡುವುದಕ್ಕಿಂತ ಡಿಜಿಟಲ್ ಪಾವತಿಗಳೇ (online transaction) ಹೆಚ್ಚಾಗಿದೆ. ಸಣ್ಣ ಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಗಳಲ್ಲಿಯೂ ಸ್ಕ್ಯಾನರ್ ಗಳೇ ತುಂಬಿ ಹೋಗಿವೆ. ಇದೀಗ ವಿದೇಶಿ ಮಹಿಳೆಯೊಬ್ಬರು ಭಾರತದಲ್ಲಿ ಪ್ರಯಾಣದ ಸಮಯದಲ್ಲಿ ನಗದು ಹಣವನ್ನು ಅವಲಂಬಿಸದೆ ಎಷ್ಟು ಸುಲಭವಾಗಿ ಪಾವತಿಗಳನ್ನು ಮಾಡಬಹುದೆಂದು ಅಚ್ಚರಿ ಪಟ್ಟುಕೊಂಡಿದ್ದಾರೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ಡಿಜಿಟಲ್ ಪಾವತಿ ಮಾಡುವ ಕುರಿತಾದ ತನ್ನ ಅನುಭವದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೂಲಿಜಾ (voye.travels) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಭಾರತದ ಪಾವತಿ ವ್ಯವಸ್ಥೆಯು ಉಳಿದ ದೇಶಗಳಿಗೆ ಹೋಲಿಸಿದರೆ ವರ್ಷಗಳಷ್ಟು ಮುಂದಿದೆ ಎಂದು ಕ್ಲಿಪ್‌ನಲ್ಲಿ ಬರೆಯಲಾಗಿದೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ಭಾರತದಲ್ಲಿ ನನಗೆ ತುಂಬಾ ಆಶ್ಚರ್ಯ ತಂದ ವಿಷಯವೆಂದರೆ ನನಗೆ ನಿಜವಾಗಿಯೂ ಎಷ್ಟು ಕಡಿಮೆ ನಗದು ಬೇಕಿತ್ತು. ನಾನು ಹೋದಲ್ಲೆಲ್ಲಾ, ಅದು ಸಣ್ಣ ಚಾಯ್ ಸ್ಟ್ಯಾಂಡ್ ಆಗಿರಲಿ, ಸ್ಥಳೀಯ ರೆಸ್ಟೋರೆಂಟ್ ಆಗಿರಲಿ ಅಥವಾ ರಸ್ತೆಯ ಪಕ್ಕದಲ್ಲಿರುವ ಅಂಗಡಿಯಾಗಿರಲಿ, ಜನರು ಕೇವಲ ಕ್ಯೂ ಆರ್ ಕೋಡ್ ಅನ್ನು ತೋರಿಸುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಭಾರತದ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐ ಇದಕ್ಕೆ ಕಾರಣ. ಅತ್ಯಂತ ಅನುಕೂಲಕರ ಪಾವತಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಬ್ಯಾಂಕ್ ವಿವರಗಳನ್ನು ಟೈಪ್ ಮಾಡುವ ಬದಲು, ಜನರು ಕೇವಲ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ, ಹಣವನ್ನು ಸೆಕೆಂಡುಗಳಲ್ಲಿ ವರ್ಗಾಯಿಸಲಾಗುತ್ತದೆ. ಇದು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರಯಾಣ ಮಾಡುವಾಗ ನಾನು ನೋಡಿದ ಅತ್ಯಂತ ಅನುಕೂಲಕರ ಪಾವತಿ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ವಿದೇಶಿ ಪ್ರಯಾಣಿಕರಾಗಿ, ಯುಪಿಐ ಯಾವಾಗಲೂ ಎಲ್ಲರೂ ಬಳಸಲು ಸಾಧ್ಯವಾಗುವುದಿಲ್ಲ. ಇದು ನಿಮ್ಮ ಬ್ಯಾಂಕ್, ಕಾರ್ಡ್ ಒದಗಿಸುವವರು ಮತ್ತು ನಿಮಗೆ ಯಾವ ಸೇವೆಗಳು ಲಭ್ಯವಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಮತ್ತು ಭೀಮ್‌ನಂತಹ ಅಪ್ಲಿಕೇಶನ್‌ಗಳು ಕೆಲವೊಮ್ಮೆ ಭಾರತದಲ್ಲಿ ಸಂದರ್ಶಕರಿಗೆ ಡಿಜಿಟಲ್ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಸಣ್ಣ ಪಟ್ಟಣಗಳು, ದೂರದ ಪ್ರದೇಶಗಳು ಅಥವಾ ಕಳಪೆ ಇಂಟರ್ನೆಟ್ ಸಂಪರ್ಕವಿರುವ ಸ್ಥಳಗಳಿಗೆ ಭೇಟಿ ನೀಡುವಾಗ ಪ್ರಯಾಣಿಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಜತೆಗೆ ಕೈಯಲ್ಲಿ ಸ್ವಲ್ಪ ಹಣವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರ, ಯುಪಿಐ ನಿಜವಾಗಿಯೂ ಭಾರತದ ಅತಿದೊಡ್ಡ ಡಿಜಿಟಲ್ ಸಾಧನೆಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಆರ್ ಪಾವತಿಗಳು ಬಹುತೇಕ ಕಾರ್ಯನಿರ್ವಹಿಸುವುದರಿಂದ ನಾನು ಈಗ ಹಣವನ್ನು ಕೊಂಡೊಯ್ಯುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ಭಾರತವು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿರುವ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




