
ಇಂದೋರ್, ಜೂನ್ 30 : ಶ್ರೀಮಂತ ವ್ಯಕ್ತಿಗೆ ಮನೆ (house) ಕಟ್ಟೋದು, ದೊಡ್ಡ ವಿಷಯವೇ ಅಲ್ಲವೇ ಅಲ್ಲ. ಅದೇ ಮಧ್ಯಮ ವರ್ಗದ ಜನರಿಗೆ ತಮ್ಮದೇ ಸ್ವಂತ ಸೂರು ಕಟ್ಟಿಕೊಳ್ಳುವುದು ತಮ್ಮ ಜೀವಮಾನದ ಕನಸು. ಸ್ವಂತ ಮನೆಗಾಗಿ ರಾತ್ರಿ ಹಗಲೆನ್ನದೇ ಕಷ್ಟ ಪಡುವವರನ್ನು ನೋಡಿರಬಹುದು. ಆದ್ರೆ ಕೈಯಲ್ಲಿ ದುಡಿದ್ರೆ ಐಷಾರಾಮಿ ಮನೆ ಕಟ್ಟೋದು ದೊಡ್ಡ ವಿಷಯವಲ್ಲ ಬಿಡಿ. ಆದರೆ ಇದೀಗ ಇಂದೋರ್‌ನಲ್ಲಿ (Indore) ಚಿನ್ನದ ಮನೆಯೊಂದಿದೆ. ಮನೆಯೊಳಗೆ ಹೊಕ್ಕರೆ ಎಲ್ಲಿ ನೋಡಿದ್ದರಲ್ಲಿ ಚಿನ್ನ ಮಾತ್ರ ನಿಮ್ಮ ಕಣ್ಣಿಗೆ ಬೀಳುತ್ತದೆ. ಈ ಚಿನ್ನದಿಂದ ಅಲಂಕರಿಸಿಲ್ಪಟ್ಟ ಮನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದ್ದು ನೆಟ್ಟಿಗರು ಈ ಮನೆ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
@FollowAkshay1 ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇಂದೋರ್‌ನಲ್ಲಿ ಚಿನ್ನದಿಂದ ಅಲಂಕರಿಸಲ್ಪಟ್ಟ ಮನೆ, ಹೊರಗಿನ ಗೋಶಾಲೆ ಸಕಾರಾತ್ಮಕತೆ ಹಾಗೂ ದೈವಿಕ ಆಶೀರ್ವಾದ ಆಶೀರ್ವಾದವನ್ನು ತರುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಅಕ್ಷಯ್ ಅವರು ಈ ಮನೆಯ ಮಾಲೀಕರೊಂದಿಗೆ ಮಾತನಾಡಿ, ಹೊಸ ದುಬಾರಿ ಬೆಲೆಯ ಐಷಾರಾಮಿ ಮನೆಯನ್ನು ಎಲ್ಲರಿಗೂ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮನೆಯ ಹೊರಗಡೆ ಗೋಶಾಲೆಯಿದ್ದು, ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಈ ಭವ್ಯ ಬಂಗಲೆಯೊಳಗೆ ಕಾಲಿಟ್ಟರೆ ಗೋಡೆಯ ತುಂಬೆಲ್ಲಾ ಚಿನ್ನವೇ ತುಂಬಿಹೋಗಿದೆ. ಚಿನ್ನವನ್ನು ಬಳಸಿ ಗೋಡೆಯ ತುಂಬೆಲ್ಲ ಆಕರ್ಷಕ ವಿನ್ಯಾಸವನ್ನು ಬರೆಯಲಾಗಿದೆ. ಇನ್ನು ಈ ಮನೆಯ ಸ್ವಿಚ್ ಬೋರ್ಡ್, ಮನೆಯ ಸಿಂಕ್ ಹಾಗೂ ವಿಗ್ರಹ ಕೂಡ ಚಿನ್ನದಿಂದಲೇ ಮಾಡಲಾಗಿರುವುದು ನೋಡಬಹುದು.
A house adorned with gold in Indore✨
The owner says the Gaushala outside brings positivity and divine blessings❤️ pic.twitter.com/T52EqUMoOi
— Akshay Akki ಅಕ್ಷಯ್🇮🇳 (@FollowAkshay1) June 29, 2025
ಜೂನ್ 29 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಚಿನ್ನದ ಮನೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ದಯವಿಟ್ಟು ಆದಾಯ ತೆರಿಗೆ ಪಾವತಿಗಳ ಬಗ್ಗೆ ವಿವರವನ್ನು ನೀಡುತ್ತೀರಾ ಎಂದಿದ್ದಾರೆ. ಮತ್ತೊಬ್ಬರು, ಕಳ್ಳ ಖದೀಮರು ಬರದಂತೆ ಯಾವ ರೀತಿ ಸೆಕ್ಯೂರಿಟಿ ವ್ಯವಸ್ಥೆಯಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ನಾವೇನಾದ್ರೂ ಇಂತಹ ಭವ್ಯ ಬಂಗಲೆಯಲ್ಲಿದ್ದರೆ ರಾತ್ರಿ ನಿದ್ದೆಯು ಬರುತ್ತಿಲ್ಲ ಕಾಣಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Mon, 30 June 25